ತಮಿಳುನಾಡು ಚುನಾವಣೆ | ವಿದೇಶಿ ಪ್ರಜೆಗಳಿಂದ ಅಕ್ರಮ ಮತದಾನದ ಆರೋಪ; 10 ಜನರ ಬಂಧನ: ತನಿಖೆಗೆ ಚುನಾವಣಾ ಆಯೋಗ ಆದೇಶ

ಚೆನ್ನೈ: ಕಳೆದ ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿದೇಶಿ ಪ್ರಜೆಗಳು “ಮೋಸದಿಂದ” ಮತದಾನ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗ (EC) ಆದೇಶಿಸಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನ ಹತ್ತಲು ಯತ್ನಿಸುತ್ತಿದ್ದ ಹತ್ತು ಮಂದಿ ವಿದೇಶಿ ಪ್ರಜೆಗಳನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. … Continued

ವಾಡಿಕೆಗಿಂತ 4 ದಿನ ಮೊದಲೇ ಮುಂಗಾರು ಮಳೆ ಆಗಮನ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಈ ವರ್ಷದ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ತುಸು ಮುಂಚಿತವಾಗಿ ಕೇರಳಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಅಂದರೆ ನೈಋತ್ಯ ಮುಂಗಾರು ಮೇ 26 ರಂದು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇಲಾಖೆ ತಿಳಿಸಿದೆ. ಈ ಮುನ್ಸೂಚನೆಯಂತೆ ನಾಲ್ಕು ದಿನಗಳ ಮುಂಚಿತವಾಗಿ ಅಥವಾ ತಡವಾಗಿ (ಪ್ಲಸ್ … Continued

ಉಕ್ರೇನ್‌ ಯುದ್ಧದಲ್ಲಿ ಮಡಿದ ರಷ್ಯಾ ಸೈನಿಕ ; ಮುಕ್ತಿಗಾಗಿ ಗಯಾಕ್ಕೆ ಬಂದು ಪಿತೃಕಾರ್ಯ ನೆರವೇರಿಸಿದ ಕುಟುಂಬಸ್ಥರು !

ರಷ್ಯಾ ಮೂಲದ ಕುಟುಂಬಸ್ಥರು ಗಯಾದ ಪ್ರಸಿದ್ಧ ಫಾಲ್ಗು ನದಿ ತೀರದಲ್ಲಿ ಈ ಪಿಂಡ್ ದಾನ ಕಾರ್ಯ(ಪಿತೃ ಕಾರ್ಯ)ವನ್ನು ನೆರವೇರಿಸಿದ್ದಾರೆ. ಉಕ್ರೇನ್‌ ಯುದ್ಧದಲ್ಲಿ ಮಡಿದ ತಮ್ಮ ಸಹೋದರನ ನೆನಪಿನಲ್ಲಿ, ಲಲಿತಾ ರಾಧಾ ರಾಣಿ ಫೇಸ್, ಅವರ ಪತಿ ಸುಂದರ ಫೇಸ್ ಮತ್ತು ಅವರ ಹಿಂದೂ ಧರ್ಮದ ಎಲ್ಲಾ ಸಾಂಪ್ರದಾಯಿಕ ವಿಧಿವಿಧಾನಗಳು ಹಾಗೂ ನಿಯಮಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿ … Continued

ನೀಟ್‌ ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ‘ಕಿಂಗ್‌ಪಿನ್’ ಬಂಧಿಸಿದ ಸಿಬಿಐ

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್‌ ಯುಜಿ (NEET UG) 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸೂತ್ರಧಾರಿಯನ್ನು (Kingpin) ಕೇಂದ್ರ ತನಿಖಾ ದಳ (CBI) ಬಂಧಿಸಿದೆ. ಹಲವು ವರ್ಷಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ರಸಾಯನಶಾಸ್ತ್ರ ಉಪನ್ಯಾಸಕ ಪಿ. ವಿ. ಕುಲಕರ್ಣಿ ಈ ಹಗರಣದ ಮುಖ್ಯ ಆರೋಪಿ … Continued

ಭೋಜಶಾಲಾ ‘ವಾಗ್ದೇವಿ ಸರಸ್ವತಿ ಮಂದಿರ’ : ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಭೋಪಾಲ : ದಶಕಗಳಿಂದ ವಿವಾದದ ಕೇಂದ್ರವಾಗಿದ್ದ ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸಂಕೀರ್ಣವು ‘ವಾಗ್ದೇವಿ’ (ಸರಸ್ವತಿ ದೇವಿಯ) ಮಂದಿರ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಭೋಜಶಾಲಾ ಸಂಕೀರ್ಣದ ನಿರ್ವಹಣೆಯು ಎಎಸ್‌ಐ (ASI) ವಶದಲ್ಲಿದ್ದರೂ, ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಹಕ್ಕು ಕೇವಲ ಹಿಂದೂಗಳಿಗೆ ಮಾತ್ರ ಇರುತ್ತದೆ … Continued

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ : ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಗಳು ಇಂದಿನಿಂದಲೇ ಜಾರಿಯಾಗಿವೆ. ನಾಲ್ಕು ವರ್ಷಗಳ ಬಳಿಕ ಸರ್ಕಾರಿ ತೈಲ … Continued

ಸೋನಾ ಪಪ್ಪು ಸುಲಿಗೆ ಪ್ರಕರಣ: ಕೋಲ್ಕತ್ತಾ ಡಿಸಿಪಿ ಶಾಂತನು ಸಿನ್ಹಾ ಬಿಸ್ವಾಸ್ ಬಂಧಿಸಿದ ಇ.ಡಿ.

ನವದೆಹಲಿ: ಸುಲಿಗೆ, ಹಣ ವರ್ಗಾವಣೆ ಮತ್ತು ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವ ಹೈಪ್ರೊಫೈಲ್ ಸೋನಾ ಪಪ್ಪು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಗುರುವಾರ ಕೋಲ್ಕತ್ತಾ ಉಪ ಪೊಲೀಸ್ ಆಯುಕ್ತ (DCP) ಶಾಂತನು ಸಿನ್ಹಾ ಬಿಸ್ವಾಸ್ ಅವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಈ ಹಿಂದೆ ಹಲವು ಬಾರಿ ಸಮನ್ಸ್ ಜಾರಿ … Continued

ಅರವಿಂದ ಕೇಜ್ರಿವಾಲ್, ಇತರ ಎಎಪಿ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭ

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ (AAP) ನಾಯಕರುಗಳಾದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರ ವಿರುದ್ಧ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಗುರುವಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು … Continued

ಇಂಧನ ಉಳಿತಾಯಕ್ಕೆ ದೆಹಲಿ ಸರ್ಕಾರದ ಪ್ಲಾನ್: ವಾರದಲ್ಲಿ 2 ದಿನ ‘ವರ್ಕ್ ಫ್ರಂ ಹೋಮ್’, 1 ದಿನ ಮೆಟ್ರೋ ಪ್ರಯಾಣ ಕಡ್ಡಾಯ

ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಹೆಚ್ಚುತ್ತಿರುವ ಇಂಧನ ದರಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಓಗೊಟ್ಟಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ದೆಹಲಿಯಲ್ಲಿ ಕಠಿಣ ಇಂಧನ ಸಂರಕ್ಷಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ವಾರದಲ್ಲಿ ಎರಡು ದಿನ ‘ವರ್ಕ್ ಫ್ರಮ್ ಹೋಮ್’ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳು ಶುಕ್ರವಾರದಿಂದ (ಮೇ 15) … Continued

ವಕೀಲರ ಉಡುಪಿನಲ್ಲಿ ಕೋರ್ಟ್‌ಗೆ ಮಮತಾ ಬ್ಯಾನರ್ಜಿ ಹಾಜರು : ವಕೀಲ ವೃತ್ತಿಯ ವಿವರ ಕೇಳಿದ ಬಾರ್ ಕೌನ್ಸಿಲ್

ನವದೆಹಲಿ : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕಲ್ಕತ್ತಾ ಹೈಕೋರ್ಟ್‌ಗೆ ವಕೀಲರ ಗೌನ್ ಮತ್ತು ಬಿಳಿ ಬ್ಯಾಂಡ್ ಧರಿಸಿ ಹಾಜರಾದ ಬೆನ್ನಲ್ಲೇ, ಭಾರತೀಯ ವಕೀಲರ ಪರಿಷತ್ತು (Bar Council of India) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಬ್ಯಾನರ್ಜಿ ಅವರ ದಾಖಲಾತಿ ಮತ್ತು ವಕೀಲ ವೃತ್ತಿಯ ಸ್ಥಿತಿಗತಿಯ ಬಗ್ಗೆ ವಿವರವಾದ ಮಾಹಿತಿಯನ್ನು … Continued