ಸ್ಟಾಫ್‌ ಸೆಲೆಕ್ಷನ್‌ ಕಮಿಶನ್‌ ನಿಂದ 26146 ಜಿಡಿ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನ : 10ನೇ ತರಗತಿ ಪಾಸ್‌ ಆದವರು ಅರ್ಜಿ ಸಲ್ಲಿಸಬಹುದು…

ಕೇಂದ್ರ ಸರ್ಕಾರ ಅಧೀನದ ವಿವಿಧ ಭದ್ರತಾ ಪಡೆಗಳಿಗೆ ಜೆನೆರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಲು, ಸಿಬ್ಬಂದಿ ನೇಮಕಾತಿ ಆಯೋಗ (SSC) ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 26,146 ಜಿಡಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗ (SSC) ಕಾನ್ಸ್‌ಟೇಬಲ್‌ (ಜೆನೆರಲ್ ಡ್ಯೂಟಿ ) ಹುದ್ದೆಗಳನ್ನು ಸಿಎಪಿಎಫ್‌, ಎನ್‌ಐಎ, ಎಸ್‌ಎಸ್ಎಫ್ ಮತ್ತು ರೈಫಲ್‌ಮೆನ್ … Continued

ಪ್ರಧಾನಿ ಮೋದಿಗೆ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್‌ ಅಧಿಕಾರಿಗಳು ಅಮಾನತು

ನವದೆಹಲಿ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಫಿರೋಜ್‌ಪುರ ಜಿಲ್ಲೆಯ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇಬ್ಬರು ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ. ಕಳೆದ ವರ್ಷ ಜನವರಿ 5ರಂದು ಪ್ರಧಾನಿ ಮೋದಿ ಅವರು ಪಂಜಾಬ್‌ನಲ್ಲಿ … Continued

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತೀಯರ ಮನಗೆದ್ದಿದ್ದ ವೇಗಿ ಮೊಹಮ್ಮದ್ ಶಮಿ ನೈನಿತಾಲ್‌ನಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ಕಾಪಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಶಮಿ ಶನಿವಾರ ತಡರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವೀಡಿಯೊ ಹಂಚಿಕೊಂಡಿದ್ದಾರೆ. ತಾನು ಮತ್ತು ತನ್ನ ಜೊತೆಗಿದ್ದ ಕೆಲವರು ಜೊತೆಗೂಡಿ ಬೆಟ್ಟದಲ್ಲಿ ಕೆಳಗಿಳಿದು ಅಪಘಾತದಲ್ಲಿ ಬೆಟ್ಟದಿಂದ ಕೆಳಗೆ ಬಿದ್ದಿದ್ದ ಕಾರಿನ … Continued

‘ದುಷ್ಟಶಕ್ತಿ ಓಡಿಸಲು’ ಇಸ್ಲಾಂಗೆ ಮತಾಂತರವಾಗುವಂತೆ ಮಹಿಳೆಗೆ ಒತ್ತಡ : ಮೌಲ್ವಿಯ ಬಂಧನ

ಗಾಜಿಯಾಬಾದ್: ಇಸ್ಲಾಂಗೆ ಮತಾಂತರವಾದರೆ ಮಾತ್ರ ‘ದುಷ್ಟ ಶಕ್ತಿಯಿಂದ ಬಿಡುಗಡೆ ಸಾಧ್ಯ’ ಎಂದು ಮಹಿಳೆಯನ್ನು ಹೆದರಿಸಿ ನಂಬಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದಲ್ಲಿ ಮೌಲ್ವಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಮಗ ಅಕ್ಷಯ ಶ್ರೀವಾಸ್ತವ (35) ಎಂಬವರು ನಂದಗ್ರಾಮ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಮೌಲ್ವಿ ಸರ್ಫರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ … Continued

ವೀಡಿಯೊ…| ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಪ್ರಕರಣ ; ಪ್ರಮುಖ ಆರೋಪಿಯನ್ನು ಸುತ್ತುವರೆದು ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು, ವೀಡಿಯೊ ವೈರಲ್

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಮಾಹೆವಾಘಾಟ್ ಪ್ರದೇಶದ ಹಳ್ಳಿಯೊಂದರಲ್ಲಿ 19 ವರ್ಷದ ಅತ್ಯಾಚಾರ ಸಂತ್ರಸ್ತೆಯ ಕೊಲೆಯ ಪ್ರಮುಖ ಆರೋಪಿಯನ್ನು ಶನಿವಾರ ಎನ್‌ಕೌಂಟರ್ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಎಸಗಿದಾಗ ಜಾಮೀನಿನ ಮೇಲೆ ಹೊರಗಿದ್ದ ಪವನ್ ನಿಶಾದ್ ಎಂಬ ಆರೋಪಿ ತನ್ನನ್ನು ಸುತ್ತುವರಿದಿದ್ದ ಪೊಲೀಸರ ಮೇಲೆ ಗುಂಡು ಹಾರಿಸಿದ ನಂತರ ಪ್ರತಿಯಾಗಿ ಗುಂಡು ಹಾರಿಸಿದ … Continued

ಪರ್ತಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ : 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೆಹಲಿಯಲ್ಲಿ ಅಪರಾಧ ನಡೆದ ಸುಮಾರು 15 ವರ್ಷಗಳ ನಂತರ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ, ಐದನೇ ಅಪರಾಧಿ ಈಗಾಗಲೇ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾನೆ. ಎಲ್ಲ ನಾಲ್ವರು ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಬೀರ್ ಮಲಿಕ್, ಅಜಯಕುಮಾರ ಅವರಿಗೆ ಜೀವಾವಧಿ … Continued

ಕೊಚ್ಚಿ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಕಾಲ್ತುಳಿತ : 4 ವಿದ್ಯಾರ್ಥಿಗಳು ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಕೊಚ್ಚಿ : ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ (CUSAT) ಶನಿವಾರ ಸಂಜೆ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 64 ಮಂದಿ ಗಾಯಗೊಂಡಿದ್ದಾರೆ. ಹಾಗೂ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು, … Continued

ವಿವಿಎಸ್ ಲಕ್ಷ್ಮಣ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆ ; ದ್ರಾವಿಡ್ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಾರ್ಗದರ್ಶಕ ಆಗುವ ಸಾಧ್ಯತೆ : ವರದಿ

ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ತೆರವು ಮಾಡಲು ಸಜ್ಜಾಗಿದ್ದಾರೆ. ಏಕದಿನ (ODI) ವಿಶ್ವಕಪ್ 2023 ರ ಮುಕ್ತಾಯದೊಂದಿಗೆ ದ್ರಾವಿಡ್ ಅವರ ಅಧಿಕಾರಾವಧಿ ಮುಗಿದಿದ್ದು, ಅವರು ತಮ್ಮ ಒಪ್ಪಂದವನ್ನು ನವೀಕರಿಸಲು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಸ್ಪೋರ್ಟ್ಸ್ ಟಾಕ್‌ಗೆ ವರದಿ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024 ರ … Continued

ಪ್ರಶ್ನೆಗಾಗಿ ನಗದು ಪ್ರಕರಣ :ಲೋಕಪಾಲ ನಿರ್ದೇಶನದ ಮೇರೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ ; ವರದಿ

ನವದೆಹಲಿ : ಸಂಸತ್ತಿನಲ್ಲಿ ಪ್ರಶ್ನೆಗಾಗಿ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಪಾಲ ನಿರ್ದೇಶನದ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಪ್ರಾಥಮಿಕ ವಿಚಾರಣೆಯನ್ನು ದಾಖಲಿಸಿದೆ ಎಂದು ವರದಿಯಾಗಿದೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ “ಪ್ರಶ್ನೆಗಾಗಿ ಲಂಚ” ಆರೋಪದ ತನಿಖೆಗಾಗಿ ಕೇಂದ್ರ ತನಿಖಾ ಸಂಸ್ಥೆ ಮಹುವಾ ಮೊಯಿತ್ರಾ … Continued

ಚೀನಾದಲ್ಲಿ ಎಚ್‌9ಎನ್‌2 ಸೋಂಕು ಮಕ್ಕಳಲ್ಲಿ ಉಲ್ಬಣ : ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ : ಕೋವಿಡ್‌-19 ಬಳಿಕ ಚೀನಾದಲ್ಲಿ ಉಲ್ಬಣಕ್ಕೆ ಕಾರಣವಾಗಿರುವ ‘ಎಚ್‌9ಎನ್‌2’ (ಏವಿಯನ್‌ ಇನ್‌ಫ್ಲುಯೆಂಜಾ ವೈರಸ್‌) ಸೋಂಕು ಈಗ ವಿಶ್ವದಾದ್ಯಂತ ಆತಂಕ ಮೂಡಿಸಿದೆ. ಉತ್ತರ ಚೀನಾದಲ್ಲಿ ಕಾಣಿಸಿಕೊಂಡಿರುವ ‘ಎಚ್‌9ಎನ್‌2’ ಸೋಂಕು ಪ್ರಕರಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ”ಚೀನಾದ ಬೀಜಿಂಗ್‌ ಹಾಗೂ ಲಿಯಾನಿಂಗ್‌ ನಗರಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚಿನ … Continued