ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಒಂದು ವಾರ ಮುನ್ನ ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

ಶ್ರೀನಗರ: ಸೇನೆಯ ವಿಶೇಷ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಕಥುವಾ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಸೇನೆಯ 1 ಪ್ಯಾರಾ, 22 ಗರ್ವಾಲ್ ರೈಫಲ್ಸ್ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಪಾಲ್ಗೊಂಡಿವೆ ಎಂದು ಹೇಳಲಾಗಿದೆ. ಮೂಲಗಳ … Continued

ಮುಂಬೈ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ

ಮುಂಬೈ: ಬಾಲಿವುಡ್ ನಟಿಯರಾದ ಮಲೈಕಾ ಅರೋರಾ ಹಾಗೂ ಅಮೃತಾ ಆರೋರಾ ಅವರ ತಂದೆ ಇಂದು, ಬುಧವಾರ ಬೆಳಗ್ಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 70 ವರ್ಷದ ಅನಿಲ ಅರೋರಾ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಸಾವಿಗೀಡಾಗಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. … Continued

ವೀಡಿಯೊ | ತಿಂದ ಆಹಾರದ ಬಿಲ್‌ ಹಣ ಕೇಳಿದ ಹೊಟೇಲ್‌ ಮಾಣಿ ; ಆತನನ್ನು ಕಾರಿನಲ್ಲಿ 1 ಕಿಮೀ ಎಳೆದೊಯ್ದ ದುಷ್ಕರ್ಮಿಗಳು…!

ಮಂಗಳವಾರ ಮಹಾರಾಷ್ಟ್ರದ ಬೀಡ್‌ನಲ್ಲಿ ತಿಂದ ಆಹಾರದ ಬಿಲ್ ಪಾವತಿಸಲು ಹೇಳಿದ ಹೊಟೇಲ್‌ ಮಾಣಿ(waiter)ಯನ್ನು ಕಾರಿನಲ್ಲಿ ಒಂದು ಕಿಮೀ ಎಳೆದೊಯ್ದ ಘಟನೆ ನಡೆದಿರುವುದು ವರದಿಯಾಗಿದೆ. ನಂತರ ಮಾಣಿಯನ್ನು ಒತ್ತೆಯಾಳಾಗಿಟ್ಟುಕೊಂಡು ಇಡೀ ರಾತ್ರಿ ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಮೂವರು ಊಟ ಮಾಡಿದ್ದಾರೆ. ನಂತರ ಬಿಲ್‌ ತರುವಂತೆ ಮಾಣಿಗೆ ಸೂಚಿಸಿ ಈ ಯುವಕರು ಕಾರು … Continued

5,000 ‘ಸೈಬರ್ ಕಮಾಂಡೋಸ್’, ಆನ್‌ಲೈನ್ ನೋಂದಣಿ : ಸೈಬರ್ ಅಪರಾಧ ತಡೆಗೆ ಕೇಂದ್ರದಿಂದ ನೂತನ ಕ್ರಮಗಳು

ನವದೆಹಲಿ: ಸೈಬರ್ ಭದ್ರತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ 5,000 ‘ಸೈಬರ್ ಕಮಾಂಡೋ’ಗಳಿಗೆ ತರಬೇತಿ, ವೆಬ್ ಆಧಾರಿತ ಡೇಟಾ ರಿಜಿಸ್ಟ್ರಿ ಮತ್ತು ಸೈಬರ್ ಅಪರಾಧ ಮಾಹಿತಿ ಹಂಚಿಕೊಳ್ಳಲು ಪೋರ್ಟಲ್ ಮತ್ತು ರಾಷ್ಟ್ರೀಯ ನೋಂದಣಿ ಸೇರಿದಂತೆ ಹಲವಾರು ನೂತನ ಉಪಕ್ರಮಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ … Continued

ಹಿರಿಯ ಅಧಿಕಾರಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ ಐಎಎಫ್ ಅಧಿಕಾರಿ

ಶ್ರೀನಗರ: ಭಾರತೀಯ ವಾಯುಪಡೆಯ ಮಹಿಳಾ ಫ್ಲೈಯಿಂಗ್ ಅಧಿಕಾರಿಯೊಬ್ಬರು ವಿಂಗ್ ಕಮಾಂಡರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಂಗ್ ಕಮಾಂಡರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2) ರ ಅಡಿಯಲ್ಲಿ ಪೊಲೀಸ್ ಸ್ಟೇಷನ್ ಬದ್ಗಾಮ್‌ನಲ್ಲಿ … Continued

ವೀಡಿಯೊ..| ಇಬ್ಬರ ಮೇಲೆ ನರಿ ದಾಳಿ ; ತಪ್ಪಿಸಿಕೊಳ್ಳಲು ನರಿಯನ್ನು 15 ಅಡಿ ದೂರ ಎಸೆದ ವ್ಯಕ್ತಿ…!

ಭೋಪಾಲ್ : ಮಧ್ಯಪ್ರದೇಶದಲ್ಲಿ ಜನರಿಗೆ ನರಿಗಳ ಭಯ ಕಾಡುತ್ತಿದೆ. ಸೆಹೋರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಇಬ್ಬರ ಮೇಲೆ ನರಿ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಈ ಭಯಾನಕ ಕ್ಷಣವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೆಹ್ತಿ ತಹಸಿಲ್‌ನ ಸಗೋನಿಯಾ ಪಂಚಾಯತದ ರಸ್ತೆಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿದ್ದಾಗ ನರಿ ಅವರ ಮೇಲೆ ದಾಳಿ ಮಾಡುವುದನ್ನು ವೀಡಿಯೊ ತೋರಿಸಿದೆ. ಅವರು ಕಲ್ಲುಗಳನ್ನು … Continued

ಸಿಪಿಐ(ಎಂ) ಮುಖಂಡ ಸೀತಾರಾಮ ಯೆಚೂರಿ ಸ್ಥಿತಿ ʼಚಿಂತಾನಜಕʼ

ನವದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಪ್ರಸ್ತುತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನವದೆಹಲಿಯಲ್ಲಿ ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಪಕ್ಷವು ಮಂಗಳವಾರ ತಿಳಿಸಿದೆ. 72 ವರ್ಷದ ರಾಜಕಾರಣಿ ಯೆಚೂರಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಮತ್ತು ತೀವ್ರ ಉಸಿರಾಟದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ … Continued

ಕ್ಯಾನ್ಸರ್ ಔಷಧಗಳ ಮೇಲಿನ ಜಿಎಸ್‌ಟಿ ಇಳಿಕೆ

ನವದೆಹಲಿ: ಕ್ಯಾನ್ಸರ್ ಔಷಧಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) 12% ರಿಂದ 5% ಕ್ಕೆ ಇಳಿಸಲು ಜಿಎಸ್‌ಟಿ (GST) ಕೌನ್ಸಿಲ್ ನಿರ್ಧರಿಸಿದೆ. ಸೋಮವಾರ ದೆಹಲಿಯಲ್ಲಿ ನಡೆದ 54ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ … Continued

15 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಜಯಂ ರವಿ-ಆರತಿ

ಚೆನ್ನೈ: ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ಪರಸ್ಪರ ಭೇರ್ಪಡುವ ನಿರ್ಧಾರಕ್ಕೆ ಬಂದಿದ್ದಾರೆ. ಸೆಪ್ಟೆಂಬರ್ 9 ರಂದು ನಟ ಜಯಂ ರವಿ ಸ್ವತಃ ಸಾಮಾಜಿಕ ಮಾಧ್ಯಮದ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅವರು ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ‘ಆರತಿ ಅವರೊಂದಿಗಿನ ಅವರ ವಿವಾಹ ಸಂಬಂಧ’ ಅಂತ್ಯಗೊಳಿಸುವ ನಿರ್ಧಾರವನ್ನು ಎಚ್ಚರಿಕೆಯಿಂದ ಪರಿಗಣಿಸಿದ … Continued

ಕಾನ್ಪುರ | ರೈಲ್ವೆ ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್ ಇರಿಸಿ ರೈಲು ಸ್ಫೋಟಕ್ಕೆ ಯತ್ನ : ತಪ್ಪಿದ ಅನಾಹುತ

ಕಾನ್ಪುರ: ರೈಲು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ರೈಲು ಸ್ಫೋಟಿಸುವ ಯತ್ನ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಹಳಿ ಮೇಲೆ ಇಟ್ಟ ಸಿಲಿಂಡರ್‌ಗೆ ರೈಲು ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಸಿಲಿಂಡರ್ ಹಳಿಯಿಂದ ದೂರ ಎಸೆಯಲ್ಪಟ್ಟಿದೆ ಹಾಗಾಗಿ ಸಂಭವನೀಯ ಅವಘಡ ತಪ್ಪಿದೆ. ಎಲ್‌ಪಿಜಿ ಸಿಲಿಂಡರ್ ಹಳಿಗಳ ಮೇಲೆ ಇಟ್ಟಿರುವುದನ್ನು ಕಂಡ … Continued