ಹಾವು ಹಿಡಿಯುವವನನ್ನು ಕಚ್ಚಿದ ನಂತರ ಸತ್ತು ಹೋದ ಕಾಳಿಂಗ ಸರ್ಪ…! ಹಾವು ಸತ್ತಿದ್ದು ನಿಜ, ಆದ್ರೆ ಅಸಲಿಯತ್ತೇನು..?

ಹಾವುಗಳು ವಿಶ್ವದ ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದಾಗಿದೆ. ಅನೇಕ ವಿಷಪೂರಿತ ಹಾವುಗಳು ಯಾವುದೇ ಜೀವಿಗಳನ್ನು ಒಂದೇ ಕಡಿತದಿಂದ ಸಾಯಿಸುವಷ್ಟು ಸಾಂರ್ಥ್ಯ ಹೊಂದಿವೆ. ಅತ್ಯಂತ ವಿಷಪೂರಿತ ಹಾವುಗಳಲ್ಲಿ ಕಾಳಿಂಗ ಸರ್ಪ ಸಹ ಒಂದಾಗಿದೆ. ಅದರ ವಿಷದ ಒಂದು ಅಥವಾ ಎರಡು ಹನಿಗಳು ವಯಸ್ಕ ಮನುಷ್ಯನನ್ನು ಕೆಲವೇ ಕ್ಷಣಗಳಲ್ಲಿ ಸಾಯಿಸಬಹುದಾಗಿದೆ. ಆದರೆ ಕಾಳಿಂಗ ಸರ್ಪ ಯಾರನ್ನಾದರೂ ಕಚ್ಚಿದ ನಂತರ … Continued

ಭರತನಾಟ್ಯ-ಕೂಚಿಪುಡಿಯ ಅಭಿಜಾತ ನೃತ್ಯಪಟು, ಪದ್ಮವಿಭೂಷಣ ಯಾಮಿನಿ ಕೃಷ್ಣಮೂರ್ತಿ ನಿಧನ

ನವದೆಹಲಿ: ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಾರ್ತಿ ಯಾಮಿನಿ ಕೃಷ್ಣಮೂರ್ತಿ (84) ಅವರು ಶನಿವಾರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಅವರು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು ಮತ್ತು ಕಳೆದ ಏಳು ತಿಂಗಳಿಂದ ಐಸಿಯುನಲ್ಲಿದ್ದರು ಎಂದು ಯಾಮಿನಿ ಕೃಷ್ಣಮೂರ್ತಿ ಅವರ ಮ್ಯಾನೇಜರ್ ಮತ್ತು ಕಾರ್ಯದರ್ಶಿ ಗಣೇಶ ತಿಳಿಸಿದ್ದಾರೆ. ಅಂತಿಮ ಶ್ರದ್ಧಾಂಜಲಿಗಾಗಿ ಕೃಷ್ಣಮೂರ್ತಿ ಅವರ ಪಾರ್ಥಿವ … Continued

ಪ್ರೀತಿಯ ಭಾರತೀಯ ಸೇನೆ…: ವಯನಾಡಿನ ಭೂಕುಸಿತದಲ್ಲಿ ಸಂತ್ರಸ್ತರ ರಕ್ಷಣೆಗೆ ನಿಂತ ಯೋಧರಿಗೆ ಹೃದಯಸ್ಪರ್ಶಿ ಪತ್ರ ಬರೆದ 3ನೇ ತರಗತಿ ಬಾಲಕ

ತಿರುವನಂತಪುರಂ : ವಿನಾಶಕಾರಿ ಭೂಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ಅವಶೇಷಗಳಡಿ ಸಿಲುಕಿದವರು ಹಾಗೂ ಸಂತ್ರಸ್ತರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಭಾರತೀಯ ಯೋಧರಿಗೆ 3ನೇ ತರಗತಿ ಬಾಲಕನೊಬ್ಬ ಹೃದಯಸ್ಪರ್ಶಿ ಪತ್ರ ಬರೆದಿದ್ದಾನೆ ಹಾಗೂ ಮುಂದೊಂದು ದಿನ ತಾನೂ ಭಾರತೀಯ ಸೇನೆ ಸೇರಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾನೆ. ಮಂಗಳವಾರ ಬೆಳಗಾಗುವ ಮುನ್ನ ವಯನಾಡು ಜಿಲ್ಲೆಯಲ್ಲಿ ಅವಳಿ ಭೂಕುಸಿತಗಳು ಸಂಭವಿಸಿ … Continued

ಕಾರವಾರ : ಬೈತಖೋಲ-ಬಿಣಗಾ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಸಂಚಾರ ಬಂದ್‌

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರದಿಂದ ಬೈತಖೋಲ ಮಾರ್ಗವಾಗಿ ಬಿಣಗಾದ ಕಡೆ ಸಾಗುವ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರ ಆದೇಶ ಹೊರಡಿಸಿದ್ದಾರೆ. ಸುರಂಗಮಾರ್ಗದ ನಿರ್ಮಾಣದ ಬಳಿಕ ನಗರದಿಂದ ಬಿಣಗಾ ಸಂಪರ್ಕಿಸುತ್ತಿದ್ದ ಈ ಹಿಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ … Continued

ತಾಜ್‌ ಮಹಲ್‌ನಲ್ಲಿ ಗಂಗಾಜಲ ಸುರಿದ ಇಬ್ಬರ ಬಂಧನ

ಆಗ್ರಾ:  ಘಟನೆಯೊಂದರಲ್ಲಿ  ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್‌ನಲ್ಲಿ ಗಂಗಾಜಲ ಪ್ರೋಕ್ಷಣೆ ಮಾಡಿದ್ದಕ್ಕಾಗಿ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಸಮಾಧಿಯಲ್ಲಿ ಪವಿತ್ರ ಗಂಗಾಜಲವನ್ನು ಸಿಂಪಡಿಸಿದ ಆರೋಪದ ಮೇಲೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯು ವಿನೇಶ ಮತ್ತು ಶ್ಯಾಮ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ತಾಜ್‌ಮಹಲ್‌ನ ಭದ್ರತೆಯ ಹೊಣೆಯನ್ನು ಸಿಐಎಸ್‌ಎಫ್‌ ಹೊಂದಿದೆ. … Continued

ನ್ಯಾಯಾಲಯದ ಆವರಣದೊಳಗೆ ಅಳಿಯನನ್ನು ಗುಂಡಿಕ್ಕಿ ಕೊಂದ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ…!

ಚಂಡೀಗಢ : ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯನ್ನು ಅವರ ಮಾವ ಹಾಗೂ ಪಂಜಾಬ್ ಪೊಲೀಸ್‌ನ ನಿವೃತ್ತ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಶನಿವಾರ ಗುಂಡಿಕ್ಕಿ ಕೊಂದ ಘಟನೆ ಶನಿವಾರ ಚಂಡೀಗಢ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೌಟುಂಬಿಕ ವಿವಾದದ ಪ್ರಕರಣದ ವಿಚಾರಣೆಗಾಗಿ ಹರಪ್ರೀತ್ ಸಿಂಗ್ ಹಾಗೂ ಅವರ ಕುಟುಂಬ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿದ್ದಾಗ ಮಾಜಿ ಪೊಲೀಸ್ … Continued

ಶಾಲೆಗೆ ಬಾಂಬ್‌ ಬೆದರಿಕೆ | ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣ ಬಾಂಬ್‌ ಬೆದರಿಕೆ ಇ-ಮೇಲ್ ಕಳುಹಿಸಿದ 14 ವರ್ಷದ ವಿದ್ಯಾರ್ಥಿ..!

 ನವದೆಹಲಿ: ದಕ್ಷಿಣ ದೆಹಲಿಯ ಕೈಲಾಶ ಕಾಲೋನಿಯಲ್ಲಿರುವ ಸಮ್ಮರ್ ಫೀಲ್ಡ್ ಶಾಲೆಗೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆದರೆ, ತನಿಖೆಯ ನಂತರ ಅದು ಸುಳ್ಳು ಎಂಬುದು ಎಂದು ಕಂಡುಬಂದಿದೆ. ಈ ಪ್ರಕರಣದಲ್ಲಿ 14 ವರ್ಷದ ವಿದ್ಯಾರ್ಥಿಯನ್ನು ಶಂಕಿತ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 14 ವರ್ಷದ ಬಾಲಕ ಶಾಲೆಗೆ ಹೋಗಲು … Continued

‘ಅನ್ಯಲೋಕ’ದ ದೇವರಿಗೆ ದೇವಾಲಯ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

ಸೇಲಂ (ತಮಿಳುನಾಡು): ತಮಿಳುನಾಡಿನ ಸೇಲಂನಲ್ಲಿ ವ್ಯಕ್ತಿಯೊಬ್ಬರು ಅನ್ಯಲೋಕದ ದೇವರಿಗಾಗಿ(alien ‘god’) ದೇವಾಲಯವೊಂದನ್ನು ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೂ ಈ ಅನ್ಯಲೋಕದ ದೇವರಿಗೆ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ. ಸೇಲಂನ ಮಲ್ಲಮೂಪಂಬಟ್ಟಿಯ ಲೋಗನಾಥನ್ ಎಂಬವರು ಸುಮಾರು ಮುಕ್ಕಾಲು ಎಕರೆ ಹರಡಿರುವ ಜಾಗದಲ್ಲಿ ಅನ್ಯಗ್ರಹದ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. “ನಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ … Continued

ವಯನಾಡು ಭೂಕುಸಿತ| ಸಾವಿನ ಸಂಖ್ಯೆ 344ಕ್ಕೆ ಏರಿಕೆ ; ಬದುಕುಳಿದವರನ್ನು ಹುಡುಕಲು ಆಳದ ವರೆಗೆ ಶೋಧ ಮಾಡುವ ರಾಡಾರ್‌ ಬಳಕೆ

ವಯನಾಡು: ಕೇರಳದ ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 344 ಕ್ಕೆ ಏರಿದೆ. ರಕ್ಷಣಾ ತಂಡಗಳು ಸಮಯಕ್ಕೆ ವಿರುದ್ಧವಾಗಿ ಓಡುತ್ತಿದ್ದು, ರಾಜ್ಯ ಸರ್ಕಾರದ ಇತ್ತೀಚಿನ ನವೀಕರಣದ ಪ್ರಕಾರ ಅವಶೇಷಗಳ ಅಡಿಯಲ್ಲಿ ಮತ್ತು ಕುಸಿದ ಮನೆಗಳಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕುವ ಪ್ರಯತ್ನದಲ್ಲಿ ರಾಡಾರ್‌ಗಳನ್ನು ಬಳಸುತ್ತಿದ್ದಾರೆ. . ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೀಪ್ ಸರ್ಚ್ ರಾಡಾರ್‌ಗಳನ್ನು ಕಳುಹಿಸುವಂತೆ ಕೇರಳ ಸರ್ಕಾರ … Continued

ಒಲಿಂಪಿಕ್‌ ಪದಕ ಗೆದ್ದ ನಂತರ ಮನು ಭಾಕರ್ ಸಂಪರ್ಕಿಸಿದ 40ಕ್ಕೂ ಹೆಚ್ಚು ಬ್ರಾಂಡ್‌ಗಳು ; 20 ಲಕ್ಷ ರೂ. ಇದ್ದ ಶುಲ್ಕ 6-7 ಪಟ್ಟು ಹೆಚ್ಚಳ

ನವದೆಹಲಿ: ಮನು ಭಾಕರ್ ಈಗಾಗಲೇ ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ನಡೆದ ಶೂಟಿಂಗ್‌ ಸ್ಪರ್ಧೆಯಲ್ಲಿ 10m ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ನಂತರ ಕೆಲವು ವರ್ಷಗಳಿಂದ ಭಾರತದ ಶೂಟಿಂಗ್ ತಂಡದ ಮುಖವಾದ ಮನು ಭಾಕರ್ ಅವರ ಜನಪ್ರಿಯತೆಯು ಬಹು-ಹಂತದಲ್ಲಿ ಮೇಲೇರಿದೆ. ಈಗ ಅವರು 25m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ … Continued