300 ಕೋಟಿ ಆಸ್ತಿಗಾಗಿ ತನ್ನ ಮಾವನನ್ನೇ ʼಹಿಟ್ ಅಂಡ್ ರನ್‌ʼ ಮೂಲಕ ಕೊಲ್ಲಿಸಿದ ಸೊಸೆ ; ಇದಕ್ಕಾಗಿ 1 ಕೋಟಿ ರೂ.ಹಣ ಪಾವತಿ..?!

ನಾಗ್ಪುರ: ನಾಗ್ಪುರದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಹಿಟ್ ಅಂಡ್ ರನ್‌ ಸಾವಿನ ಪ್ರಕರಣದ ತನಿಖೆ ವೇಳೆ ಕುಟುಂಬದ ₹ 300 ಕೋಟಿ ಮೌಲ್ಯದ ಆಸ್ತಿಗಾಗಿ ಮೃತ ವ್ಯಕ್ತಿಯ ಸೊಸೆಯೇ ರೂಪಿಸಿದ್ದ ಭೀಕರ ಕೊಲೆ ಸಂಚು ಬಯಲಾಗಿದೆ…! ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕಿ ಅರ್ಚನಾ ಮನೀಷ ಪುಟ್ಟೇವಾರ ಎಂಬವರನ್ನು ಘಟನೆ ನಡೆದ ಹದಿನೈದು ದಿನಗಳ ನಂತರ … Continued

ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಹೆಚ್ಚಳ ; ಆದರೆ ದೇಶದ ಜಿಡಿಪಿ ಬೆಳವಣಿಗೆ ಕುಂಠಿತ : ಆರ್ಥಿಕ ಸಮೀಕ್ಷೆ

ಇತ್ತೀಚಿನ 2023-24ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು ದೇಶದ ಕತ್ತೆಗಳ ಸಂಖ್ಯೆಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಬಹಿರಂಗಪಡಿಸಿದೆ, ಅದು ಈಗ 59 ಲಕ್ಷ ತಲುಪಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 1.72 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಕತ್ತೆಗಳ ಸಂಖ್ಯೆ ಹೆಚ್ಚಾದರೂ ಪಾಕಿಸ್ತಾನದ ಒಟ್ಟಾರೆ ಆರ್ಥಿಕ ಸಾಧನೆ ನಿರೀಕ್ಷೆಗೂ ಮೀರಿ ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು … Continued

ಕುವೈತ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವಿಗೀಡಾದ 49 ಜನರಲ್ಲಿ 40 ಮಂದಿ ಭಾರತದವರು

ನವದೆಹಲಿ: ಕುವೈತ್‌ನ ಮಂಗಾಫ್ ನಗರದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಕಾಣಿಸಿಕೊಂಡು 40 ಮಂದಿ ಭಾರತೀಯರು ಸೇರಿದಂತೆ 49 ಮಂದಿ ಮೃತಪಟ್ಟಿದ್ದಾರೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ (9 am IST) ಈ ಘಟನೆ ನಡೆದಿದೆ. 40 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ. ಆರು ಅಂತಸ್ತಿನ … Continued

ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನಚರಣ ಮಾಝಿ ಪ್ರಮಾಣ ವಚನ : ಸಚಿವರ ಪಟ್ಟಿ

ಭುವನೇಶ್ವರ : ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಮೋಹನ ಚರಣ ಮಾಝಿ ಅವರು ಬುಧವಾರ ಸಂಜೆ ಜನತಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಒಡಿಶಾ ರಾಜ್ಯಪಾಲ ರಘುಬರದಾಸ ಅವರು ಅಧಿಕಾರಿಯಾಗಿ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ, ಬಿಜೆಪಿ ಪಕ್ಷದಿಂದ … Continued

ತಮ್ಮ ಮಗಳಿಗೆ ‘ಮಹಾಲಕ್ಷ್ಮಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ…: ಇದಕ್ಕೆ ಕಾರಣವೇನೆಂದರೆ…

ಮುಂಬೈ: ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 6ರಂದು ಬೆಳಗ್ಗೆ ಕೊಲ್ಲಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಫಾತಿಮಾ ಖಾತೂನ್ (31) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲು ಲೋನಾವಾಲಾ ನಿಲ್ದಾಣವನ್ನು ದಾಟಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಪತಿ ತಯ್ಯಬ್, ರೈಲಿನ ಗೌರವಾರ್ಥವಾಗಿ ನವಜಾತ ಶಿಶುವಿಗೆ … Continued

ಲೋಕಸಭೆ ಚುನಾವಣೆ ನಂತರದ ಮೊದಲ ಸಂಸತ್ ಅಧಿವೇಶನ ಜೂನ್ 24ರಿಂದ ಆರಂಭ

ನವದೆಹಲಿ : 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಆರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಬುಧವಾರ ತಿಳಿಸಿದ್ದಾರೆ. ಅಧಿವೇಶನದ ಮೊದಲ ಮೂರು ದಿನಗಳಲ್ಲಿ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಮತ್ತು ಸದನದ ಸ್ಪೀಕರ್ ಅನ್ನು ಆಯ್ಕೆ ಮಾಡುತ್ತಾರೆ. ಜುಲೈ 3ರಂದು ಅಧಿವೇಶನ ಮುಕ್ತಾಯವಾಗಲಿದೆ. ರಾಷ್ಟ್ರಪತಿ ದ್ರೌಪದಿ … Continued

ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಇಂದು ಪ್ರಮಾಣ ; ಪವನ ಕಲ್ಯಾಣ ಡಿಸಿಎಂ

ವಿಜಯವಾಡ: ಆಂಧ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ 25 ಸದಸ್ಯರ ಸಚಿವ ಸಂಪುಟ ಇಂದು ಬುಧವಾರ (ಜೂನ್‌ 12) ಪ್ರಮಾಣ ವಚನ ಸ್ವೀಕರಿಸಲಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ಸರ್ಕಾರದಲ್ಲಿ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಏಕೈಕ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಬುಧವಾರ ಮುಂಜಾನೆ ಬಿಡುಗಡೆಯಾದ 24 ಸಚಿವರ ಪಟ್ಟಿಯಲ್ಲಿ ಜನಸೇನಾ ಪಕ್ಷದ ಮೂವರು … Continued

ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

ನವದೆಹಲಿ: ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಮಂಗಳವಾರ ನೇಮಕ ಮಾಡಿದೆ. ಮೇ 31 ರಂದು ನಿವೃತ್ತರಾಗಲಿರುವ ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರ ಅಧಿಕಾರಾವಧಿಯನ್ನು ಅಸಾಮಾನ್ಯ ಕ್ರಮದಲ್ಲಿ ಸರ್ಕಾರವು ಒಂದು ತಿಂಗಳವರೆಗೆ ವಿಸ್ತರಿಸಿದ ನಂತರ ಕೇವಲ ಎರಡು ವಾರಗಳಲ್ಲಿ ಸರ್ಕಾರ … Continued

ಒಡಿಶಾದಲ್ಲಿ ಸಿಎಂ ಸ್ಥಾನಕ್ಕೆ ಬಿಜೆಪಿಯಿಂದ ಅಚ್ಚರಿ ಆಯ್ಕೆ ; ಬುಡಕಟ್ಟು ನಾಯಕ ಮೋಹನ್ ಮಾಝಿ ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿ

ಭುವನೇಶ್ವರ (ಒಡಿಶಾ): ಅಚ್ಚರಿಯ ಆಯ್ಕೆಯಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಶಾಸಕ ಮತ್ತು ಪಕ್ಷದ ಬುಡಕಟ್ಟು ಮುಖವಾದ 52 ವರ್ಷದ ಮೋಹನ ಚರಣ ಮಾಂಝಿ ಅವರನ್ನು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಪಕ್ಷವು ಕೆ.ವಿ. ಸಿಂಗ್ ದೇವ್‌ ಮತ್ತು ಪ್ರವತಿ ಪರಿದಾ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ … Continued

ಮುಯ್ಯಿಗೆ ಮುಯ್ಯಿ..: ಅರುಣಾಚಲದ ಕೆಲಸ್ಥಳಗಳಿಗೆ ಹೆಸರಿಟ್ಟ ಚೀನಾ ಕ್ರಮಕ್ಕೆ ಪ್ರತಿಯಾಗಿ ಟಿಬೆಟಿನ 30 ಸ್ಥಳಗಳಿಗೆ ಹೆಸರಿಡಲು ಭಾರತದ ನಿರ್ಧಾರ..

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸದಾಗಿ ಚುನಾಯಿತ ಎನ್‌ಡಿಎ ಸರ್ಕಾರವು ಟಿಬೆಟ್‌ನ 30 ಸ್ಥಳಗಳಿಗೆ ಮರುನಾಮಕರಣ ಮಾಡುವುದನ್ನು ಅನುಮೋದಿಸಿದೆ. ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ಚೀನಾದ ಹೆಸರಿಟ್ಟಿದ್ದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಟಿಬೆಟ್‌ನ ಕೆಲ ಸ್ಥಳಗಳಿಗೆ ಹೆಸರಿಡಲು ನಿರ್ಧರಿಸಿದೆ. ಐತಿಹಾಸಿಕ ಸಂಶೋಧನೆ ಮತ್ತು ಟಿಬೆಟ್ ಪ್ರದೇಶದ ಸಂಬಂಧವನ್ನು ಆಧರಿಸಿ ದೆಹಲಿಯಿಂದ ಅನುಮೋದಿಸಲ್ಪಟ್ಟ … Continued