ವಿಶ್ವದಾದ್ಯಂತ ಸಮಸ್ಯೆ ಎದುರಿಸಿದ ನಂತರ ಸರಿಯಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಜಾಗತಿಕಕವಾಗಿ ಸ್ಥಗಿತಗೊಂಡ ಸಮಸ್ಯೆ ಎದುರಿಸಿದ ನಂತರ ತನ್ನ ಸೇವೆಗಳ ಮರುಸ್ಥಾಪಿಸಿದೆ ಎಂದು ಮೂಲ ಕಂಪನಿಯಾದ ಮೆಟಾ ದೃಢಪಡಿಸಿದೆ. ಮಂಗಳವಾರ ಸಂಭವಿಸಿದ ಅಡಚಣೆಯು ಎರಡೂ ಪ್ಲಾಟ್‌ಫಾರ್ಮ್‌ಗಳಿಗೆ ಲಾಗ್‌ ಇನ್‌ ಆಗಲು ಬಳಕೆದಾರರಿಗೆ ಸಾಧ್ಯವಾಗಲಿಲ್ಲ. ಈ ಅನಾನುಕೂಲತೆಗಾಗಿ ಮೆಟಾ ಸಂವಹನ ನಿರ್ದೇಶಕ ಆಂಡಿ ಸ್ಟೋನ್ ಕ್ಷಮೆಯಾಚಿಸಿದ್ದಾರೆ. ಅವರು ತಾಂತ್ರಿಕ ಸಮಸ್ಯೆಯನ್ನು ಒಪ್ಪಿಕೊಂಡರು ಮತ್ತು ಸಾಧ್ಯವಾದಷ್ಟು … Continued

ರಣದೀಪ ಹೂಡಾ ನಿರ್ದೇಶನದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನೆಮಾಕ್ಕೆ ನೇತಾಜಿ ಸುಭಾಷಚಂದ್ರ ಬೋಸ್ ಮೊಮ್ಮಗ ಟೀಕೆ

ನವದೆಹಲಿ : ರಣದೀಪ್ ಹೂಡಾ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ಸ್ವಾತಂತ್ರ್ಯ ವೀರ ಸಾವರ್ಕರ ಚಿತ್ರದ ಟ್ರೈಲರ್ ಬಿಡುಗಡೆಯಾದ ಒಂದು ದಿನದ ನಂತರ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ ಬೋಸ್ ಚಲನಚಿತ್ರದ ಬಗ್ಗೆ ಕೆಲವೊಂದು ವಿಷಯಗಳ ಬಗ್ಗೆ ಆಕ್ಷೇಪ ಮಾಡಿದ್ದಾರೆ. ಚಿತ್ರದ ಮೂರು ನಿಮಿಷಗಳ ಟ್ರೇಲರ್‌ನಲ್ಲಿ ಸಾವರ್ಕರ್ ಅವರು … Continued

ಈಗ ಚುನಾವಣೆ ನಡೆದರೆ ಎನ್‌ಡಿಎ ಎಷ್ಟು ಗೆಲ್ಲಲಿದೆ..? ಇಂಡಿಯಾ ಮೈತ್ರಿಕೂಟ ಗೆಲ್ಲುವುದೆಷ್ಟು..? : ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್‌ ಪೋಲ್ ಹೇಳಿದ್ದೇನೆಂದರೆ…

ನವದೆಹಲಿ: ಈಗಲೇ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 543 ಲೋಕಸಭಾ ಸ್ಥಾನಗಳಲ್ಲಿ 378 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್‌ ಪೋಲ್‌ ಮಂಗಳವಾರ (ಮಾರ್ಚ್ 5) ಹೇಳಿದೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ. ಬ್ಲಾಕ್ (ತೃಣಮೂಲ ಕಾಂಗ್ರೆಸ್ ಇಲ್ಲದೆ) 98 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಮಮತಾ … Continued

ಸಂದೇಶಖಾಲಿ ಪ್ರಕರಣ : 12 ಕೋಟಿ ರೂ. ಮೌಲ್ಯದ ಷಹಜಹಾನ್ ಶೇಖ್ ಆಸ್ತಿ ಜಪ್ತಿ ಮಾಡಿದ ಇ.ಡಿ.

ಕೋಲ್ಕತ್ತಾ : ಈಗ ಅಮಾನತಾಗಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಗೆ ಸೇರಿದ 12.78 ಕೋಟಿ ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮಂಗಳವಾರ ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಈ ಆಸ್ತಿಯಲ್ಲಿ ಅಪಾರ್ಟ್‌ಮೆಂಟ್, ಕೃಷಿ ಭೂಮಿ, ಮೀನುಗಾರಿಕೆಗೆ ಭೂಮಿ ಮತ್ತು ಕಟ್ಟಡದಂತಹ 14 ಸ್ಥಿರ ಆಸ್ತಿಗಳು … Continued

ಸಂದೇಶಖಾಲಿ ಪ್ರಕರಣ : ಷಹಜಹಾನ್ ಶೇಖ್ ನನ್ನು ಸಿಬಿಐಗೆ ಹಸ್ತಾಂತರಿಸಿ ; ಬಂಗಾಳ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ಆದೇಶ

ಕೋಲ್ಕತ್ತಾ : ಜನವರಿ 5 ರಂದು ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ, ರಾಜ್ಯ ಪೊಲೀಸರು “ಸಂಪೂರ್ಣವಾಗಿ ಪಕ್ಷಪಾತಿ” ಎಂದು ಹೇಳಿದೆ. ದಾಳಿಗೆ ಸಂಬಂಧಿಸಿದಂತೆ ಫೆಬ್ರವರಿ 29 ರಂದು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದ ಟಿಎಂಸಿ … Continued

ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ : ಬಿಜೆಪಿ ಸೇರುವೆ ಎಂದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ ಗಂಗೋಪಾಧ್ಯಾಯ

ನವದೆಹಲಿ: ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ ಗಂಗೋಪಾಧ್ಯಾಯ ಅವರು ಕೆಲವೇ ಗಂಟೆಗಳ ಹಿಂದೆ ರಾಜೀನಾಮೆ ನೀಡಿರುವುದನ್ನು ದೃಢಪಡಿಸಿದ್ದು, ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದಾರೆ. ಮಾರ್ಚ್ 7 ರಂದು ಮಧ್ಯಾಹ್ನದ ವೇಳೆಗೆ ಬಹುಶಃ ನಾನು ಬಿಜೆಪಿಗೆ ಸೇರುವ ಕಾರ್ಯಕ್ರಮವಿದೆ ಎಂದು ಅವರು ಹೇಳಿದರು. ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು … Continued

ವೀಡಿಯೊ…| ಹಳ್ಳಿಗೆ ಬಂದು ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡು 5 ಗಂಟೆಗಳ ಕಾಲ ಒದ್ದಾಡಿದ ಚಿರತೆ…! ಕೊನೆಗೂ ಬಚಾವಾಯ್ತು

ಧುಲೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ಗಂಟೆಗಳ ಕಾಲ ಲೋಹದ ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡಿದ್ದ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿತು. ಆದರೆ, ಅದಕ್ಕೆ ಪಾರಾಗಲು ಸಾಧ್ಯವಾಗಲಿಲ್ಲ. ಅರಣ್ಯಾಧಿಕಾರಿಗಳು ಆಗಮಿಸಿ ಕಂಗಾಲಾಗಿದ್ದ ಚಿರತೆಯನ್ನು ಶಾಂತಗೊಳಿಸಿ, ನಂತರ ಎಚ್ಚರಿಕೆಯಿಂದ ಲೋಹದ ಪಾತ್ರೆಯನ್ನು ಕಟ್‌ ಮಾಡಿ ಚಿರತೆಯ … Continued

ಡಿಕೆ ಶಿವಕುಮಾರಗೆ ಬಹುದೊಡ್ಡ ರಿಲೀಫ್‌..: ಡಿಕೆಶಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧದ 2018 ರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು, ಮಂಗಳವಾರ ವಜಾಗೊಳಿಸಿದೆ. ಈ ಪ್ರಕರಣವು ತೆರಿಗೆ ವಂಚನೆ ಮತ್ತು ಕೋಟ್ಯಂತರ ಮೌಲ್ಯದ ಹವಾಲಾ ವ್ಯವಹಾರದ ಆರೋಪಗಳಿಗೆ ಸಂಬಂಧಿಸಿದೆ. ಈ ಪ್ರಕರಣಕ್ಕೆ … Continued

ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆ ಉಡಾವಣೆ ದಿನವೇ ನನಗೆ ಕ್ಯಾನ್ಸರ್​ ಇರುವುದು ಪತ್ತೆಯಾಯ್ತು : ಇಸ್ರೋ ಅಧ್ಯಕ್ಷ ಸೋಮನಾಥ​

ನವದೆಹಲಿ/ತಿರುವನಂತಪುರಂ: ಇಸ್ರೋದ ಮಹಾತ್ವಾಕಾಂಕ್ಷೆಯ ಆದಿತ್ಯ ಎಲ್‌1 ಸೋಲಾರ್‌ ಮಿಷನ್‌ ಉಡಾವಣೆಯಾದ ದಿನವೇ ತಮಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ ಬಹಿರಂಗಪಡಿಸಿದ್ದಾರೆ ಆದರೆ ಈಗ ಅವರು ಸಂಪೂರ್ಣ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ತರ್ಮಾಕ್ ಮೀಡಿಯಾ ಹೌಸ್‌ಗೆ ನೀಡಿದ ಸಂದರ್ಶನದಲ್ಲಿ, ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಅವರು, ತಮ್ಮ ಹೊಟ್ಟೆಯಲ್ಲಿನ ಕ್ಯಾನ್ಸರ್‌ ಬೆಳವಣಿಗೆಯನ್ನು ತೆಗೆದುಹಾಕಲು … Continued

ವೀಡಿಯೊ…| ಕೆಫೆಯಲ್ಲಿ ‘ಮೌತ್ ಫ್ರೆಶ್ನರ್’ ಉಪಯೋಗಿಸಿದ ಬಳಿಕ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಐವರು…!

ನವದೆಹಲಿ: ಮಾರ್ಚ್ 2 ರಂದು ಗುರುಗ್ರಾಮದ ಕೆಫೆಯಲ್ಲಿ ಊಟದ ನಂತರ ಮೌತ್ ಫ್ರೆಶ್ನರ್ ಉಪಯೋಗಿಸಿದ ನಂತರ ಐದು ಜನರಿಗೆ ಬಾಯಲ್ಲಿ ರಕ್ತ ಬರಲು ಶುರುವಾಯಿತು ಮತ್ತು ಬಾಯಿಯಲ್ಲಿ ಉರಿಯ ತೊಡಗಿತು ಎಂದು ವರದಿಯಾಗಿದೆ. ಅಂಕಿತಕುಮಾರ ಅವರು ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ಗುರುಗ್ರಾಮದ ಸೆಕ್ಟರ್ 90 ನಲ್ಲಿರುವ ಲಾಫೊರೆಸ್ಟಾ ಕೆಫೆಗೆ ಹೋಗಿದ್ದರು. ರೆಸ್ಟಾರೆಂಟ್‌ನೊಳಗೆ ಅಂಕಿತಕುಮಾರ ಅವರು … Continued