ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; ₹1.5 ಲಕ್ಷ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ

ಬೆಂಗಳೂರು : ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಹಾರ ಮೂಲದ ವಿಕಾಸಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಬೆಂಗಳೂರಿನ ಸದಾಶಿವನಗರ ಪೊಲೀಸರು ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ. ಆರೋಪಿ ವಿಕಾಸಕುಮಾರ ಮತ್ತು ಆತನ ಸಹಚರರು ದೊಡ್ಡ ಮಟ್ಟದ … Continued

ಬಾಲಿವುಡ್ ಹಿರಿಯ ನಟ ಸತೀಶ ಶಾ ನಿಧನ

ಮುಂಬೈ : ಬಾಲಿವುಡ್‌ ಹಿರಿಯ ನಟ ಸತೀಶ ಶಾ ಶನಿವಾರ ನಿಧನರಾರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. “ಜಾನೆ ಭಿ ದೋ ಯಾರೋ”, “ಮೈ ಹೂ ನಾ” ಮತ್ತು ಯಶಸ್ವಿ ಟಿವಿ ಶೋ “ಸಾರಾಭಾಯಿ ವರ್ಸಸ್ ಸಾರಾಭಾಯಿ” ಅಭಿನಯಕ್ಕೆ ಹೆಸರುವಾಸಿಯಾದ ಹಿರಿಯ ಬಾಲಿವುಡ್ ನಟ ಸತೀಶ್ ಶಾ ಅವರು ಶನಿವಾರ (ಅಕ್ಟೋಬರ್ 25, 2025) ನಿಧನರಾದರು … Continued

ಹಿಂದಿ ಸಿನೆಮಾದ ಖ್ಯಾತ ಹಾಸ್ಯನಟ ಅಸ್ರಾನಿ ನಿಧನ

ಮುಂಬೈ: ಅಸ್ರಾನಿ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಬಾಲಿವುಡ್‌ ಹಿರಿಯ ನಟ ಗೋವರ್ಧನ್ ಅಸ್ರಾನಿ ಸೋಮವಾರ ಸಂಜೆ (ಅಕ್ಟೋಬರ್‌ 20) ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದಾಗಿ ಐದು ದಿನಗಳ ಕಾಲ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ತಮ್ಮ ಅಭಿಮಾನಿಗಳಿಗೆ ಇನ್​ಸ್ಟಾಗ್ರಾಂನಲ್ಲಿ ದೀಪಾವಳಿಯ (Deepavali) ಶುಭಾಶಯಗಳನ್ನು ಕೋರಿದ್ದರು. ಅದಾದ … Continued

ಹಿರಿಯ ನಟ, ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರಧಾರಿ ಪಂಕಜ ಧೀರ್ ನಿಧನ

ಮುಂಬೈ: ಬಿ.ಆರ್. ಚೋಪ್ರಾ ಅವರ 1988 ರ ಟಿವಿ ಸರಣಿ ‘ಮಹಾಭಾರತ’ದಲ್ಲಿ ‘ಕರ್ಣ’ನ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟ ಪಂಕಜ ಧೀರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಂಕಜ ಧೀರ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಪಂಕಜ ಧೀರ್ ಅವರು ‘ಚಂದ್ರಕಾಂತಾ’, … Continued

“ಸಚಿವನಾದ ನಂತ್ರ ನನ್ನ ಆದಾಯ ನಿಂತುಹೋಗಿದೆ” : ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ನಟ ಸುರೇಶ ಗೋಪಿ…!

ಕಣ್ಣೂರು : ಕೇಂದ್ರ ಸಚಿವ ಸುರೇಶ ಗೋಪಿ ಮತ್ತೆ ನಟನಾ ವೃತ್ತಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರು ಲೋಕಸಭಾ ಸಂಸದ ಹಾಗೂ ನಟರೂ ಆಗಿರುವ ಕೇಂದ್ರ ಸಚಿವ ಸುರೇಶ ಗೋಪಿ, ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದಿಂದ ತಮ್ಮ ಆದಾಯ ಗಣನೀಯವಾಗಿ … Continued

ಗುಟ್ಟಾಗಿ ನಡೆಯಿತೇ ನಟಿ ರಶ್ಮಿಕಾ ಮಂದಣ್ಣ-ನಟ ವಿಜಯ ದೇವರಕೊಂಡ ನಿಶ್ಚಿತಾರ್ಥ ; ಫೆಬ್ರವರಿಯಲ್ಲಿ ಮದುವೆ..?

ಹೈದರಾಬಾದ್: ಖ್ಯಾತ ನಟ ವಿಜಯ ದೇವರಕೊಂಡ ಮತ್ತು ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಗಾಸಿಪ್ ನಿಜವಾಗುವ ಲಕ್ಷಣ ಕಾಣುತ್ತಿದೆ. ಶುಕ್ರವಾರ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮುಂದಿನ ವರ್ಷ ಫೆಬ್ರವರಿಯಲ್ಲಿ ಇವರಿಬ್ಬರ ವಿವಾಹ ನಿಗದಿಯಾಗಿದೆ. … Continued

ಆನ್‌ ಲೈನ್‌ ಗೇಮ್‌ ಆಡುವಾಗ ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ…’ ಆನ್‌ಲೈನ್‌ ಗೇಮ್‌ ಭಯಾನಕತೆ ಬಿಚ್ಚಿಟ್ಟ ನಟ ಅಕ್ಷಯಕುಮಾರ

ಮುಂಬೈ: ಮಕ್ಕಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧದ ಪ್ರವೃತ್ತಿಯ ಬಗ್ಗೆ ಎತ್ತಿ ತೋರಿಸಲು ಬಾಲಿವುಡ್‌ ನಟ ಅಕ್ಷಯಕುಮಾರ ತಮ್ಮ 13 ವರ್ಷದ ಮಗಳು ವೀಡಿಯೊ ಗೇಮ್ ಆಡುತ್ತಿದ್ದಾಗಿನ ಘಟನೆಯನ್ನು ಶುಕ್ರವಾರ ನೆನಪಿಸಿಕೊಂಡಿದ್ದಾರೆ. ಕೆಲತಿಂಗಳ ಹಿಂದೆ ತಮ್ಮ ಮಗಳು ಆನ್‌ಲೈನ್‌ ವೀಡಿಯೊ ಗೇಮ್‌ ಆಡುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್‌ಗೆ ಬಂದು ಆಕೆಯ ಚಿತ್ರವನ್ನು ಕಳಿಸುವಂತೆ ಹೇಳಿದ್ದ ಎಂದು ಅಕ್ಷಯಕುಮಾರ … Continued

ಟೆಕ್ಕಿ ಅಪಹರಿಸಿ ಹಲ್ಲೆ ನಡೆಸಿದ ಆರೋಪ ; ಖ್ಯಾತ ನಟಿ ಲಕ್ಷ್ಮಿ ಮೆನನ್, ಇತರ ಮೂವರ ವಿರುದ್ಧ ಪ್ರಕರಣ ದಾಖಲು

ಕೊಚ್ಚಿಯಲ್ಲಿ ಯುವ ಐಟಿ ಉದ್ಯೋಗಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ನಟಿ ಲಕ್ಷ್ಮಿ ಮೆನನ್ ಮತ್ತು ಅವರ ಮೂವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ಈಗ ದೊಡ್ಡ ವಿವಾದದ ಕೇಂದ್ರಬಿಂದುವಾಗಿದ್ದಾರೆ. ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರ ಪ್ರಕಾರ, ಲಕ್ಷ್ಮಿ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಆದಾಗ್ಯೂ, ನಾಲ್ವರು ಆರೋಪಿಗಳಲ್ಲಿ ಮೂವರು ಈಗಾಗಲೇ ಪೊಲೀಸರ … Continued

ಕನ್ನಡದ ಖ್ಯಾತ ಪೋಷಕ ನಟ ದಿನೇಶ ಮಂಗಳೂರು ನಿಧನ

ಉಡುಪಿ : ಕೆಜಿಎಫ್‌ ಸೇರಿದಂತೆ ಅನೇಕ‌ ಸಿನಿಮಾಗಳಲ್ಲಿ ನಟಿಸಿದ್ದ ಪ್ರತಿಭಾನ್ವಿತ ನಟ, ಕಲಾನಿರ್ದೇಶಕ ದಿನೇಶ ಮಂಗಳೂರು ಇಂದು ಭಾನುವಾರ (ಆಗಸ್ಟ್‌ 25) ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ದಿನೇಶ ಮಂಗಳೂರು ಅವರು ಕಳೆದ ಐದು ದಿನಗಳಿಂದ ಪಾರ್ಶ್ವವಾಯುವಿಗೆ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು … Continued

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ನಟ ದರ್ಶನ್, ಪವಿತ್ರಾ ಗೌಡ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಹಾಗೂ ಇತರ ಐವರಿಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು … Continued