ಬ್ಯಾಂಕಾಕ್‌ ನಿಂದ ಗಡಿಪಾರಾದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹರ್‌ಸಿಮ್ರನ್ ಬಂಧನ

ನವದೆಹಲಿ: ಕೇಂದ್ರ ತನಿಖಾ ಏಜೆನ್ಸಿಗಳ ಸಹಕಾರದೊಂದಿಗೆ ದೆಹಲಿ ಪೊಲೀಸ್‌ನ ಸ್ಪೆಷಲ್ ಸೆಲ್, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹರ್‌ಸಿಮ್ರನ್ ಅನ್ನು ಬಂಧಿಸಿದೆ. ಈತನನ್ನು ಈ ವಾರ ಆರಂಭದಲ್ಲಿ ಬ್ಯಾಂಕಾಕ್‌ನಿಂದ ಗಡಿಪಾರು ಮಾಡಲಾಗಿತ್ತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈತನನ್ನು ಅಲಿಯಾಸ್ ‘ಬಾದಲ್’ ಮತ್ತು ‘ಸಿಮ್ರನ್’ ಎಂದೂ ಕರೆಯುತ್ತಾರೆ. ನವೆಂಬರ್ 26 ರಂದು ದೆಹಲಿಗೆ ಆಗಮಿಸಿದ ತಕ್ಷಣವೇ ಆತನನ್ನು … Continued

1100 ಕಿಮೀ. ದೂರದಲ್ಲಿದ್ದ ಕೊಲೆ ಆರೋಪಿ ಬಂಧನಕ್ಕೆ ಕಾರಣವಾದ ಕೊಲೆಯಾದ ಮಹಿಳೆ ಕೈ ಮೇಲಿದ್ದ ಹಚ್ಚೆ…!

ದೆಹಲಿಯಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರ ಮೃತದೇಹ ಕೈಯಲ್ಲಿ ಪುರುಷನ ಹೆಸರಿನ ಹಚ್ಚೆಯೊಂದಿಗೆ ಪತ್ತೆಯಾಗಿದ್ದು, ಇದು 1,100 ಕಿಲೋಮೀಟರ್ ದೂರದಲ್ಲಿದ್ದ ಕೊಲೆ ಆರೋಪಿ ಪತ್ತೆಯಾಗಲು ಕಾರಣವಾಯಿತು. ಮಹಿಳೆಯೊಬ್ಬರ ಮೃತದೇಹ ಕೈಯಲ್ಲಿ ಪುರುಷನ ಹೆಸರಿನ ಹಚ್ಚೆ ಪತ್ತೆಯಾದ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಬಳಿಕ ಕೊಲೆಗಾರನನ್ನು ವರೆಗೆ ಹುಡುಕುತ್ತ 1,100 ಕಿಲೋಮೀಟರ್ ದೂರದ ಪ್ರಯಾಣಿಸಿದ್ದಾರೆ. ನವೆಂಬರ್ 16 ರಂದು, … Continued

ಸಹೋದರನ ಕೊಲೆ ಮಾಡಿ ಧರ್ಮ, ಹೆಸರು ಬದಲಿಸಿಕೊಂಡು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಕೊನೆಗೂ ಅಂದರ್…!

ಬರೇಲಿ (ಉತ್ತರ ಪ್ರದೇಶ): ಕಾಲ ಮತ್ತು ದಾಖಲೆಗಳಿಗೆ ಒಂದು ಸಾಮ್ಯತೆ ಇದೆ – ಅವು ಏನನ್ನೂ ಮರೆಯುವುದಿಲ್ಲ. ಉತ್ತರ ಪ್ರದೇಶದ ಬರೇಲಿಯ ಪ್ರದೀಪ ಸಕ್ಸೇನಾ ಎಂಬಾತ ತನ್ನ ಸಹೋದರನ ಕೊಲೆಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 36 ವರ್ಷಗಳ ಹಿಂದೆ ಪೊಲೀಸ್ ಬಲೆಯಿಂದ ತಪ್ಪಿಸಿಕೊಂಡಿದ್ದ. ಪೊಲೀಸರಿಂದ ಪಾರಾಗಲು ತನ್ನ ಧರ್ಮ, ಹೆಸರು ಮತ್ತು ರೂಪವನ್ನು ಬದಲಾಯಿಸಿಕೊಂಡರೂ, 36 … Continued

ಇಂಡಿಯಾ ಗೇಟ್ ಪ್ರತಿಭಟನೆ: ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ ಆರೋಪ ; ಬಂಧಿತ 17 ಮಂದಿಗೆ 3 ದಿನ ನ್ಯಾಯಾಂಗ ಬಂಧನ

ನವದೆಹಲಿ: ಇಂಡಿಯಾ ಗೇಟ್‌ನಲ್ಲಿ ವಾಯು ಮಾಲಿನ್ಯದ ಕುರಿತ ಪ್ರತಿಭಟನೆಗಳ ವೇಳೆ ‘ಪೆಪ್ಪರ್ ಸ್ಪ್ರೇ’ (Pepper Spray) ಬಳಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿದ್ದ 11 ಮಹಿಳೆಯರು ಸೇರಿದಂತೆ 17 ಆರೋಪಿಗಳಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಸೋಮವಾರ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯವು ಇತರ ಐದು ಆರೋಪಿಗಳನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. … Continued

ಬೆಂಗಳೂರು ಹಣದ ವಾಹನ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : 5.76 ಕೋಟಿ ರೂ. ವಶ, 3 ಪ್ರಮುಖ ಆರೋಪಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಹೈ-ಪ್ರೊಫೈಲ್ ಎಟಿಎಂ ನಗದು ವಾಹನ ದರೋಡೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದು, ಘಟನೆ ಸಂಭವಿಸಿದ 60 ಗಂಟೆಗಳ ಒಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ 5.76 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ನಡೆದಿದ್ದ ಈ ದರೋಡೆ, ಸಿಎಂಎಸ್ (CMS) ಸಂಸ್ಥೆಯು ನಿರ್ವಹಿಸುವ 7.11 ಕೋಟಿ ರೂ. ನಗದನ್ನು ಹೊತ್ತೊಯ್ಯುತ್ತಿದ್ದ ವಾಹನದಲ್ಲಿ … Continued

ಉಡುಪಿ : ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ ರಹಸ್ಯ ರವಾನೆ ; ಇಬ್ಬರ ಬಂಧನ

ಉಡುಪಿ : ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಇಬ್ಬರನ್ನು ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಘಟಕದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಂಧಿತರನ್ನು ಉತ್ತರ ಪ್ರದೇಶದವರಾದ ರೋಹಿತ್(26) ಮತ್ತು ಸಂತ್ರಿ(37) ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆರೋಪಿಗಳನ್ನು ಸುಷ್ಮಾ ಮೆರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ … Continued

ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ : ಮತ್ತೊಬ್ಬನ ಬಂಧಿಸಿದ ಎನ್‌ ಐಎ

ನವದೆಹಲಿ: ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ 13 ಜನರ ಸಾವಿಗೆ ಕಾರಣವಾದ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶ್ರೀನಗರದಲ್ಲಿ ಮತ್ತೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆರೋಪಿಯನ್ನು ಜಸೀರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯಾ ಬಾಂಬರ್ ಡಾ ಉಮರ್ … Continued

ದೆಹಲಿ ಕೆಂಪು ಕೋಟೆ ಬಾಂಬ್‌ ಸ್ಫೋಟದ ರೂವಾರಿ ಉಮರ್‌ ಸಹಾಯಕನ ಬಂಧಿಸಿದ ಎನ್‌ ಐಎ

ನವದೆಹಲಿ: ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮಹತ್ವದ ಯಶಸ್ಸು ಸಾಧಿಸಿದೆ. ಈ ಭಯಾನಕ ದಾಳಿಯ ಸೂತ್ರಧಾರನೊಂದಿಗೆ ಸಂಚು ರೂಪಿಸಿದ ಕಾಶ್ಮೀರಿ ನಿವಾಸಿಯೊಬ್ಬನನ್ನು ಎನ್‌ಐಎ (NIA) ಬಂಧಿಸಿದೆ. ಬಂಧಿತ ಆರೋಪಿ ಅಮೀರ್ ರಶೀದ್ ಅಲಿ ಯನ್ನು, ಬಹು-ರಾಜ್ಯಗಳ ಬೃಹತ್ ಶೋಧ ಕಾರ್ಯಾಚರಣೆಯ ನಂತರ ದೆಹಲಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ … Continued

ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; ₹1.5 ಲಕ್ಷ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ

ಬೆಂಗಳೂರು : ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಹಾರ ಮೂಲದ ವಿಕಾಸಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಬೆಂಗಳೂರಿನ ಸದಾಶಿವನಗರ ಪೊಲೀಸರು ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ. ಆರೋಪಿ ವಿಕಾಸಕುಮಾರ ಮತ್ತು ಆತನ ಸಹಚರರು ದೊಡ್ಡ ಮಟ್ಟದ … Continued

ವೈದ್ಯ ಸೇರಿ ಮೂವರು ಐಸಿಸ್ ಉಗ್ರರ ಬಂಧನ: ರಿಸಿನ್’ ವಿಷ ತಯಾರಿಕೆ ಸಿದ್ಧತೆ ಸಂಚು ಬಯಲು

 ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ATS)ವು ಮೂವರು ಐಸಿಸ್ (ISIS) ಉಗ್ರರನ್ನು ಬಂಧಿಸಿದ್ದು, ಅವರಲ್ಲಿ ಓರ್ವ ವೈದ್ಯ ಅತಿ ಹೆಚ್ಚು ವಿಷಕಾರಿಯಾದ ‘ರಿಸಿನ್’ (Ricin) ರಾಸಾಯನಿಕ ತಯಾರಿಕೆಗೆ ಸಿದ್ಧತೆ ನಡೆಸಿದ್ದ ಎಂಬ ಸಂಗತಿ ಸೋಮವಾರ ಬಹಿರಂಗವಾಗಿದೆ. ಈ ವೈದ್ಯ ದೇಶದ ಮೂರು ಪ್ರಮುಖ ನಗರಗಳಲ್ಲಿ ಹೆಚ್ಚು ಜನಸಂದಣಿಯಿರುವ ಆಹಾರ ಮಾರುಕಟ್ಟೆಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ … Continued