2023ರಿಂದ ಪರಾರಿಯಾಗಿದ್ದ ಪಾಕಿಸ್ತಾನದ ಮಾದಕ ದ್ರವ್ಯ-ಭಯೋತ್ಪಾದನಾ ಕಿಂಗ್‌ಪಿನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಮುಖ ನಾರ್ಕೋ-ಭಯೋತ್ಪಾದನಾ ಕಿಂಗ್‌ಪಿನ್‌ನನ್ನು ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸುವ ಮೂಲಕ ಮಹತ್ವದ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. ತನಿಖಾ ಸಂಸ್ಥೆ ವಕ್ತಾರರ ಪ್ರಕಾರ, ಪೂಂಚ್‌ನ ಹವೇಲಿ ತಹಸಿಲ್‌ನ ದೇಗ್ವಾರ್-ತೆರ್ವಾನ್ ಗ್ರಾಮದ ನಿವಾಸಿಯಾದ ಮೊಹಮ್ಮದ್ ಅರ್ಷದ್ ಅಲಿಯಾಸ್ ಆಸಿಫ್ … Continued

ಮಾಜಿ ಪ್ರಿಯಕರನ ಸಿಲುಕಿಸಲು ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಕಳುಹಿಸಿದ್ದ ಮಹಿಳಾ ಟೆಕ್ಕಿ ಬಂಧನ

ಬೆಂಗಳೂರು: ನಗರದ ಹಲವು ಶಾಲೆಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಶೈಕ್ಷಣಿಕ ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಇ ಮೇಲ್‌ಗಳನ್ನು ಕಳುಹಿಸಿದ ಆರೋಪದ ಮೇಲೆ 30 ವರ್ಷದ ಮಹಿಳಾ ರೋಬೋಟಿಕ್ ಇಂಜಿನಿಯರ್‌ ಅನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಗುರುವಾರ (ನವೆಂಬರ್ 6) ಬಂಧಿಸಿದ್ದಾರೆ. ಖ್ಯಾತ ಸಂಸ್ಥೆಯೊಂದರಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಆರೋಪಿಯನ್ನು ಗುಜರಾತ್ … Continued

ಬಾರ್ಕ್‌ ವಿಜ್ಞಾನಿ ಸೋಗಿನಲ್ಲಿ ಇರಾನ್‌ ಗೆ ನ್ಯೂಕ್ಲಿಯರ್ ವಿನ್ಯಾಸ ಮಾರಾಟಕ್ಕೆ ಯತ್ನ: ಬಂಧನ

ಮುಂಬೈ: ಬಾಬಾ ಅಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿ ಎಂದು ನಟಿಸಿ ಇರಾನ್‌ನಲ್ಲಿರುವ ಕಂಪನಿಗಳಿಗೆ ಪರಮಾಣು ಸಂಬಂಧಿತ ವಿನ್ಯಾಸವನ್ನು “ವೈಜ್ಞಾನಿಕ ಸಹಯೋಗ” ಮತ್ತು “ಸಂಶೋಧನಾ ಸಹಭಾಗಿತ್ವ”ದ ನೆಪದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತನ ಸಹೋದರನನ್ನೂ ಸಹ ಬಂಧಿಸಲಾಗಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಅಖ್ತರ್ ಹುಸೇನಿ ಕುತ್ಬುದ್ದೀನ್ … Continued

ಕನ್ನಡ ಕಿರುತೆರೆ ನಟಿಗೆ ಅಶ್ಲೀಲ ವೀಡಿಯೊ ಕಳುಹಿಸಿ ಕಿರುಕುಳ ; ಆರೋಪಿ ಬಂಧನ

ಬೆಂಗಳೂರು: ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ಕೆಲಸ ಮಾಡುವ 41 ವರ್ಷದ ನಟಿಯೊಬ್ಬರು ತಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪದೇ ಪದೇ ಅಶ್ಲೀಲ ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ಕಿರುಕುಳ ಮುಂದುವರೆಸಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ತೆಲುಗು ಮತ್ತು ಕನ್ನಡ … Continued

ಬೆಂಗಳೂರು : ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ನೆಲಕ್ಕೆ ಬಡಿದು ಕೊಂದ ಮನೆಕೆಲಸದವಳು…!

ಬೆಂಗಳೂರು: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯೊಬ್ಬರು ಸಾಕು ನಾಯಿಯನ್ನು ಅಪಾರ್ಟ್‌ಮೆಂಟ್ ಲಿಫ್ಟ್‌ನ ನೆಲಕ್ಕೆ ಬಡಿದು ಭೀಕರ ಕೊಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪುಟ್ಟ ನಾಯಿಮರಿಯನ್ನು ನೋಡಿಕೊಳ್ಳುವುದಕ್ಕೆಂದೇ ಕೆಲಸಕ್ಕಿದ್ದ ಮಹಿಳೆ ಅಮಾನವೀಯ ಕೃತ್ಯ ಎಸಗಿದ್ದು, ಆಕೆಯ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನವೆಂಬರ್ 1 … Continued

ಬಿಹಾರ ಚುನಾವಣೆ | ಜನ್ ಸುರಾಜ್ ಪಕ್ಷದ ಬೆಂಬಲಿಗನ ಕೊಲೆ ಪ್ರಕರಣ ; ಜೆಡಿಯು ಅಭ್ಯರ್ಥಿ ಅನಂತ ಸಿಂಗ್ ಬಂಧನ

 ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜೆಡಿಯು (JD(U)) ಪಕ್ಷದಿಂದ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಶಾಸಕ ಅನಂತ ಸಿಂಗ್ ಅವರನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಜನ ಸುರಾಜ್ ಪಕ್ಷದ ಬೆಂಬಲಿಗ ದುಲಾರ್ ಚಂದ ಯಾದವ್ ಅವರ ಕೊಲೆಗೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ಯಾದವ್ ಅವರು ಈ ಹಿಂದೆ ಆರ್‌ಜೆಡಿ (RJD) … Continued

ಬೆಂಗಳೂರು : ಕಾರಿನ ಕನ್ನಡಿಗೆ ಬೈಕ್‌ ತಾಗಿದ್ದಕ್ಕೆ 2 ಕಿಮೀ ಹಿಂಬಾಲಿಸಿ ಬೈಕಿಗೆ ಗುದ್ದಿ ಸವಾರನನ್ನು ಸಾಯಿಸಿದ ದಂಪತಿ…!

ಬೆಂಗಳೂರು: ಕಾರಿನ ಕನ್ನಡಿಗೆ ಬೈಕ್‌ ಸ್ವಲ್ಪ ತಾಗಿದ್ದಕ್ಕೆ ಕಾರಿನವರು ಬೆನ್ನಟ್ಟಿ ಬೈಕ್ ಗೆ ಗುದ್ದಿ ಸವಾರನನ್ನು ಸಾಯಿಸಿರುವ ಘಟನೆ ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮ ಲೇಔಟ್‌ನಲ್ಲಿ ಅಕ್ಟೋಬರ್ 25ರಂದು ರಾತ್ರಿ ಈ ಘಟನೆ ನಡೆದಿದೆ. ದರ್ಶನ ಮತ್ತು ವರುಣ ಎಂಬುವರು ಬೈಕ್ … Continued

ವ್ಯಕ್ತಿ ಬಳಿ 250 ಮತದಾರರ ಗುರುತಿನ ಚೀಟಿಗಳು ಪತ್ತೆ ; ಬಂಧನ

ಕೋಲ್ಕತಾ : ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಪ್ರಾರಂಭಿಸುವ ಕೆಲವು ದಿನಗಳ ಮೊದಲು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸುಮಾರು 250 ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ದೇಶಾದ್ಯಂತ ಹಂತ ಹಂತವಾಗಿ ಮತದಾರರ ಪಟ್ಟಿಗಳ ಪರಿಷ್ಕರಣೆ (SIR) ಕಾರ್ಯವನ್ನು ಕೈಗೊಳ್ಳಲು ಚುನಾವಣಾ ಸಂಸ್ಥೆ ಸಿದ್ಧತೆ … Continued

ಅಕ್ರಮ ಜಾನುವಾರು ಸಾಗಾಟ; ಆರೋಪಿ ಕಾಲಿಗೆ ಗುಂಡು

ಮಂಗಳೂರು : ಅಕ್ರಮ ಗೋವು ಸಾಗಣೆಯಲ್ಲಿ ಭಾಗಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟಿ, ಕಾಲಿಗೆ ಗುಂಡು ಹಾರಿಸಿ (Police Firing) ಬಂಧಿಸಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ (40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು … Continued

ವೀಡಿಯೊ..| ಬೆಂಗಳೂರಲ್ಲಿ ಕ್ರೂರ ಸರಗಳ್ಳತನ ; ಕತ್ತಿ ಹಿಡಿದು ಮಹಿಳೆಯರಿಗೆ ಹೆದರಿಸಿ, ಓರ್ವ ಮಹಿಳೆ ಬೆರಳು ಕತ್ತರಿಸಿ ಸರ ದೋಚಿದ ಕಳ್ಳರು

ಬೆಂಗಳೂರು: ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ಕತ್ತಿ ಹಿಡಿದು ಬೆದರಿಸಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳರು ಕಸಿದುಕೊಂಡ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ಮಹಿಳೆ ವಿರೋಧಿಸಿದಾಗ, ಸರಗಳ್ಳ ಆಕೆಯ ಎರಡು ಬೆರಳುಗಳನ್ನು ಕತ್ತರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ಇಬ್ಬರು ಸರಗಳ್ಳರಾದ ಪ್ರವೀಣ ಮತ್ತು ಯೋಗಾನಂದ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. … Continued