ಬೆಂಗಳೂರು | ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿದ ಚಿರತೆ ಕೂಡಿ ಹಾಕಿದ ದಂಪತಿ ; 5 ತಾಸು ಕಾರ್ಯಾಚರಣೆ ನಂತರ ಸೆರೆ

 ಬೆಂಗಳೂರು: ತಮ್ಮ ಮನೆಯೊಳಗೆ ನುಗ್ಗಿದ ಚಿರತೆಯನ್ನು ದಂಪತಿ ಮನೆಯೊಳಗೆ ಕೂಡಿ ಹಾಕಿದ ನಂತರ ತಕ್ಷಣವೇ ಕಟ್ಟಡದಿಂದ ಹೊರಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು. ಬೆಂಗಲೂರು ನಗರದ ಹೊರವಲಯದ ಜಿಗಣಿಯಲ್ಲಿರುವ ಕುಂಟ್ಲು ರೆಡ್ಡಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮಂಜುನಾಥ … Continued

ವೀಡಿಯೊ…| ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಮಹಿಳೆ ಸಾವು ; ಕಿಂಚಿತ್ತೂ ಪಶ್ಚಾತ್ತಾಪ ಪಡದೆ ʼಇನ್ನೊಂದು ರೌಂಡ್‌ʼ ಎಂದು ಅರಚಾಡಿದ ವಿದ್ಯಾರ್ಥಿ…!

ವಡೋದರಾ: ಗುಜರಾತಿನ ವಡೋದರಾದ ಕರೇಲಿಬಾಗ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕುಡಿದ ಅಮಲಿನಲ್ಲಿದ್ದ ಯುವಕ ಕಾರು ಗುದ್ದಿಸಿ ಮಹಿಳೆ ಜೀವ ತೆಗೆದಿದ್ದರೂ ಕೂಡ ಪಶ್ಚಾತಾಪವಿಲ್ಲದೆ ದರ್ಪದಿಂದ ವರ್ತಿಸಿರುವ ವೀಡಿಯೊ ವೈರಲ್ ಆಗಿದೆ. ಪಾನಮತ್ತ ಚಾಲಕ ತನ್ನ ಕಾರನ್ನು ಬಹು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. … Continued

ವೀಡಿಯೊ…| ನಟ ಸೈಫ್ ಅಲಿ ಖಾನಗೆ ಚಾಕು ಇರಿತ ; ಪರಾರಿಯಾಗಿರುವ ದಾಳಿಕೋರ ಹೆಡ್‌ಫೋನ್‌ ಖರೀದಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮನೆಗೆ ಕಳ್ಳತನಕ್ಕೆ ನುಗ್ಗಿ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದ ವ್ಯಕ್ತಿಯ ಹೊಸ ದೃಶ್ಯಗಳು ಹೊರಬಿದ್ದಿದೆ, ಘಟನೆ ನಡೆದ ಸುಮಾರು ಆರು ಗಂಟೆಗಳ ನಂತರ ಬೆಳಗ್ಗೆ 9 ಗಂಟೆ ಸುಮಾರಿಗೆ ದಾದರಿನ ಅಂಗಡಿಯೊಂದರಿಂದ ಹೆಡ್‌ಫೋನ್ ಖರೀದಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಂದ್ರಾದಲ್ಲಿನ 12 ಅಂತಸ್ತಿನ ಕಟ್ಟಡದ … Continued

ವೀಡಿಯೊ…| ಸೈಫ್ ಅಲಿ ಖಾನಗೆ ಇರಿತದ ಘಟನೆ : ಹೊರಬಿದ್ದ ಆರೋಪಿಯ ಮೊದಲ ವೀಡಿಯೊ ; ವೀಕ್ಷಿಸಿ

ಮುಂಬೈ: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರು ತಮ್ಮ ಮುಂಬೈ ನಿವಾಸದಲ್ಲಿ ದರೋಡೆಕೋರನಿಂದ ಇರಿಯಲ್ಪಟ್ಟ ಕೆಲವೇ ಗಂಟೆಗಳ ನಂತರ, ಆರೋಪಿಯ ಮೊದಲ ಫೋಟೋ ಹೊರಬಿದ್ದಿದೆ. ಬುಧವಾರ ರಾತ್ರಿ ಬಾಲಿವುಡ್ ಸೂಪರ್‌ಸ್ಟಾರ್ ಮೇಲೆ ದಾಳಿ ಮಾಡಿದ ಆರೋಪಿಯ ಸಿಸಿಟಿವಿ ವೀಡಿಯೊದಲ್ಲಿ ಆರೋಪಿಯ ಮುಖ ಸ್ಪಷ್ಟವಾಗಿ ಕಾಣುತ್ತದೆ. ವಿಡಿಯೋದಲ್ಲಿ ಆತ ಜನವರಿ 16ರ ಮುಂಜಾನೆ 2:33ಕ್ಕೆ ಕಟ್ಟಡದ … Continued

ವೀಡಿಯೊ..| ಬೆಂಗಳೂರು ; ಕಾರಿನ ಮೇಲೆ ಕಂಟೈನರ್‌ ಪಲ್ಟಿಯಾಗಿ 6 ಮಂದಿ ಸಾವು ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕಂಟೈನರ್‌ ಲಾರಿ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ದುರ್ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್​ ಲಾರಿ ಬಿದ್ದಿತ್ತು. ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ … Continued

ವೀಡಿಯೊ..| ವೃದ್ಧ ದಂಪತಿಯನ್ನು ಬಹಳ ಹೊತ್ತು ಕಾಯಿಸಿದ ನೋಯ್ಡಾ ಪ್ರಾಧಿಕಾರದ ಸಿಬ್ಬಂದಿ ; ಅವರಿಗೆ 20 ನಿಮಿಷ ನಿಲ್ಲುವ ಶಿಕ್ಷೆ ನೀಡಿದ ಸಿಇಒ…!

ನವದೆಹಲಿ : ಕೆಲಸಕ್ಕಾಗಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ್ದ ವೃದ್ಧ ದಂಪತಿಯನ್ನು ಬಹಳ ಹೊತ್ತಿನವರೆಗೆ ಕಾಯುವಂತೆ ಮಾಡಿದ್ದಕ್ಕಾಗಿ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳಿಗೆ ಸುಮಾರು 20 ನಿಮಿಷಗಳ ಕಾಲ ನಿಂತುಕೊಂಡೇ ಕೆಲಸ ಮಾಡುವ ಶಿಕ್ಷೆ ವಿಧಿಸಲಾಗಿತ್ತು ಎಂದು ವರದಿಯಾಗಿದೆ. ಕಚೇರಿಗೆ ಬಂದ ವೃದ್ಧ ದಂಪತಿಯನ್ನು ನಿರ್ಲಕ್ಷಿಸಿ 50 ನಿಮಿಷಗಳ ಕಾಲ ಅನಗತ್ಯವಾಗಿ ಕಾಯುವಂತೆ ಮಾಡಿದ್ದನ್ನು ಗಮನಿಸಿದ ನೋಯ್ಡಾ … Continued

ವೀಡಿಯೊ : ಮಗಳ ತಲೆಗೆ ಸಿಸಿಟಿವಿ ಅಳವಡಿಸಿದ ತಂದೆ : ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ….!

ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲವನ್ನೂ ಹುಡುಕಲು ಇಂಟರ್ನೆಟ್ ಒಂದು ಕೇಂದ್ರವಾಗಿದೆ. ಇತ್ತೀಚೆಗೆ, ಅಂತರ್ಜಾಲದಲ್ಲಿ ವಿಭಿನ್ನ ವೀಡಿಯೊ ಕಾಣಿಸಿಕೊಂಡಿದೆ. ಈ ವೀಡಿಯೊ ಹುಡುಗಿಯ ತಲೆಯ ಮೇಲೆ ಸಿಸಿಟಿವಿ ಅಳವಡಿಸಿರುವುದನ್ನು ತೋರಿಸುತ್ತದೆ. ಸಂದರ್ಶಕರ ಪ್ರಶ್ನೆಗಳಿಗೆ ಹುಡುಗಿ ಸಾಂದರ್ಭಿಕವಾಗಿ ಉತ್ತರಿಸಿದ್ದಾಳೆ ಮತ್ತು ತನ್ನ ತಂದೆ ತನ್ನ ತಲೆಯ ಮೇಲೆ ಸಿಸಿಟಿವಿ ಅಳವಡಿಸಿದ್ದನ್ನು ಆಕೆ ಬಹಿರಂಗಪಡಿಸಿದ್ದಾಳೆ. ಈಕೆಯ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು … Continued

ಕೋಲ್ಕತ್ತಾ ಟ್ರೇನಿ ವೈದ್ಯೆಯ ಅತ್ಯಾಚಾರ-ಕೊಲೆ ಆರೋಪಿ ಇಯರ್‌ಫೋನ್‌ ಜೊತೆ ಆಸ್ಪತ್ರೆ ಪ್ರವೇಶಿಸಿದ್ದು ಸಿಸಿಟಿವಿಯಲ್ಲಿ ಪತ್ತೆ

ಕೋಲ್ಕತ್ತಾ : ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾಧಿಕಾರಿಗಳು ಮಧ್ಯರಾತ್ರಿಯ ನಂತರ ಒಂದು ಗಂಟೆಯ ನಂತರ ಆರೋಪಿ ಆಸ್ಪತ್ರೆಗೆ ಪ್ರವೇಶಿಸಿದ ಸಿಸಿಟಿವಿ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿಯ ಕುತ್ತಿಗೆಗೆ ಬ್ಲೂಟೂತ್ ಇಯರ್‌ಫೋನ್ ಸುತ್ತಿಕೊಂಡಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ … Continued

ಲೈಂಗಿಕ ದೌರ್ಜನ್ಯ ಆರೋಪ: ಜನಸಾಮಾನ್ಯರಿಗೆ ರಾಜಭವನದ ಸಿಸಿಟಿವಿ ದೃಶ್ಯಾವಳಿ ತೋರಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ

ಕೋಲ್ಕತ್ತಾ: ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಗುರುವಾರ ಮೇ 2ರ ರಾಜಭವನದ ಸಿಸಿಟಿವಿ ದೃಶ್ಯಾವಳಿಗಳನ್ನು ಜನಸಾಮಾನ್ಯರಿಗೆ ತೋರಿಸಿದ್ದಾರೆ. ಮೇ 2ರ ಸಂಜೆ 5:30ರ ಸಮಯದ ಮುಖ್ಯ (ಉತ್ತರ) ಗೇಟ್‌ನಲ್ಲಿರುವ ಎರಡು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ರಾಜಭವನದ ನೆಲ ಮಹಡಿಯಲ್ಲಿರುವ … Continued

ಮೊರ್ಬಿ ತೂಗು ಸೇತುವೆ ದುರಂತದಲ್ಲಿ 141 ಜನರು ಸಾವು : ಸೇತುವೆ ಕುಸಿದು ಬೀಳುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುಜರಾತ್‌ನ ಮೊರ್ಬಿ ತೂಗು ಸೇತುವೆ ಭಾನುವಾರ ಕುಸಿದು 141 ಜನರ ಸಾವಿಗೆ ಕಾರಣವಾಯಿತು ಮತ್ತು ಅನೇಕರು ಗಾಯಗೊಂಡರು. ಮೋರ್ಬಿ ಸೇತುವೆ ಕುಸಿದುಬಿದ್ದ ಕ್ಷಣದ ವೀಡಿಯೊವೊಂದು ವೈರಲ್‌ ಆಗಿದ್ದು, ಸೇತುವೆ ಕುಸಿಯುವ ಮುನ್ನ ಜನರು ಅಲುಗಾಡುತ್ತಿರುವುದನ್ನು ಕಾಣಬಹುದು. ಸೆಕ್ಷನ್ 304, 308 ಮತ್ತು 114 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸೇತುವೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ “ಏಜೆನ್ಸಿ” … Continued