ವೀಡಿಯೊಗಳು..| ಚೀನಾದ ರೋಬೋ ಲೀಗ್‌ನಲ್ಲಿ ಫುಟ್‌ಬಾಲ್ ಆಡುವ ರೋಬೋಟ್‌ಗಳು; ವೀಡಿಯೊ ಭಾರಿ ವೈರಲ್‌

ಅಸಾಮಾನ್ಯ ಘಟನೆಯೊಂದರಲ್ಲಿ, ಚೀನಾ ತನ್ನ ಮೊದಲ 3v3 ಆರ್ಟಿಫಿಶಿಯಲ್‌ (AI) ರೋಬೋಟ್ ಫುಟ್ಬಾಲ್‌ ಪಂದ್ಯವನ್ನು ಆಯೋಜಿಸಿದೆ. ಇದರಲ್ಲಿ ನಾಲ್ಕು ತಂಡಗಳ ಹುಮನಾಯ್ಡ್ ರೋಬೋಟ್‌ಗಳು ಬೀಜಿಂಗ್‌ನಲ್ಲಿ ಪರಸ್ಪರ ಸೆಣಸಾಡಿವೆ. ಪಂದ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದು ರೋಬೋ (ROBO) ಲೀಗ್ ರೋಬೋಟ್ ಫುಟ್ಬಾಲ್‌ ಪಂದ್ಯಾವಳಿಯ ದೃಶ್ಯಗಳನ್ನು ತೋರಿಸುತ್ತದೆ. ವರದಿಗಳ ಪ್ರಕಾರ, ಮುಂಬರುವ 2025 ರ … Continued

ವೀಡಿಯೊ..| ಭಾರತದ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಚೀನಾ ಗುಪ್ತಚರ ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ

ಇಸ್ಲಾಮಾಬಾದ್: ಭಾರತದೊಂದಿಗಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಚೀನಾವು ಪಾಕಿಸ್ತಾನಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ನೀಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ಒಳಗೊಂಡಿತ್ತು ಎಂದು ವರದಿಯಾಗಿದೆ. ಸಂದರ್ಶನವೊಂದರಲ್ಲಿ, ಪಾಕಿಸ್ತಾನದ ಖವಾಜಾ ಆಸಿಫ್, ಭಾರತದ ಜೊತೆ ಸಂಘರ್ಷದ ನಂತರ ಪಾಕಿಸ್ತಾನವು ಹೆಚ್ಚಿನ ಎಚ್ಚರಿಕೆಯಲ್ಲಿದೆ … Continued

ಅಮೆರಿಕಕ್ಕೆ ʼಜೈವಿಕ ರೋಗಕಾರಕʼ ಕಳ್ಳಸಾಗಣೆ ಮಾಡಿದ ಆರೋಪ ; ಚೀನಾದ ಇಬ್ಬರ ಸಂಶೋಧಕರ ಬಂಧನ

ಅಮೆರಿಕಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಸಂಶೋಧಕರೊಬ್ಬರನ್ನು ಬಂಧಿಸಲಾಗಿದೆ. ಅಪಾಯಕಾರಿ ಜೈವಿಕ ರೋಗಕಾರಕ ಕಳ್ಳಸಾಗಣೆ ಮಾಡಿದ ಕೃತ್ಯವನ್ನು ಅಮೆರಿಕ ಅಧಿಕಾರಿಗಳು ಗಂಭೀರ ಕೃಷಿ ಭಯೋತ್ಪಾದನಾ ಬೆದರಿಕೆ ಎಂದು ಕರೆದಿದ್ದಾರೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ ಬಂಧನವನ್ನು ದೃಢಪಡಿಸಿದ್ದಾರೆ. ಯುನ್‌ಕಿಂಗ್ ಜಿಯಾನ್ ಎಂಬ … Continued

ಪಾಕಿಸ್ತಾನ ‘ಭಿಕ್ಷಾ ಪಾತ್ರೆ’ ಹಿಡಿದು ಜಗತ್ತಿನಾದ್ಯಂತ ಸುತ್ತುತ್ತಿದೆ ಎಂದು ಒಪ್ಪಿಕೊಂಡ ಪಾಕ್‌ ಪ್ರಧಾನಿ : ಆದರೆ….

ಕ್ವೆಟ್ಟಾ: ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನವು ತಮ್ಮ ಮುಂದೆ ‘ಭಿಕ್ಷಾ ಪಾತ್ರೆ’ಯೊಂದಿಗೆ ಬರುವುದನ್ನು ನಿರೀಕ್ಷೆ ಮಾಡುವುದಿಲ್ಲ. ಬದಲಿಗೆ ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆಯಲ್ಲಿ ಸಮಾನ ಪಾಲುದಾರಿಕೆಯ ಆಧಾರದ ಮೇಲೆ ಸಂಬಂಧಗಳನ್ನು ಮುಂದುವರಿಸಲು ಪ್ರಯತ್ನಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಹೇಳಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಪಾಕಿಸ್ತಾನ ಭಿಕ್ಷಾ ಪಾತ್ರೆ ಹಿಡಿದು ವಿವಿಧ ದೇಶಗಳನ್ನು … Continued

ಚೀನಾ ಹಿಂದಿಕ್ಕಿ ಅಮೆರಿಕಕ್ಕೆ ಅತಿ ಹೆಚ್ಚು ಐಫೋನ್ ರಫ್ತು ಮಾಡುವ ದೇಶವಾದ ಭಾರತ

ನವದೆಹಲಿ: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿಯ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಐಫೋನ್‌ಗಳ ಅತಿದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಭಾರತದಲ್ಲಿ ತಯಾರಾದ ಸುಮಾರು 30 ಲಕ್ಷ ಐಫೋನ್‌ಗಳನ್ನು ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ರವಾನಿಸಲಾಗಿದೆ. ಚೀನಾದಿಂದ ಫೋನ್ ಅಮೆರಿಕಕ್ಕೆ ಐಫೋನ್‌ ರಫ್ತು 76% ರಷ್ಟು ಕುಸಿದಿದ್ದು, ಕೇವಲ 9,00,000 ಯೂನಿಟ್‌ಗಳು ಮಾತ್ರ … Continued

ಪಾಕಿಸ್ತಾನಕ್ಕೆ ಭಾರತದ ಹೆದರಿಕೆ ; ಚೀನಾ ಜೊತೆ ಸೇರಿ ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣ : ಅಮೆರಿಕ ಗುಪ್ತಚರ ವರದಿ

ನವದೆಹಲಿ: ಪಾಕಿಸ್ತಾನವು ಭಾರತವನ್ನು “ಅಸ್ತಿತ್ವಕ್ಕೆ ಬೆದರಿಕೆ” ಎಂದು ಪರಿಗಣಿಸುತ್ತದೆ, ಆದರೆ ಭಾರತವು ಚೀನಾವನ್ನು ತನ್ನ “ಪ್ರಾಥಮಿಕ ಎದುರಾಳಿ” ಪರಿಗಣಿಸುತ್ತದೆ ಹಾಗೂ ಪಾಕಿಸ್ತಾನವನ್ನು ನಿರ್ವಹಿಸಬೇಕಾದ “ಭದ್ರತಾ ಸಮಸ್ಯೆ” ಎಂದು ಪರಿಗಣಿಸುತ್ತದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ 2025 ರ ತನ್ನ ವಿಶ್ವಾದ್ಯಂತ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. 2025ರ ಮೇ 25ರಂದು ಬಿಡುಗಡೆಯಾದ ಅಮೆರಿಕ ಡಿಫೆನ್ಸ್ … Continued

ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

ನವದೆಹಲಿ: ಕೋವಿಡ್-19 ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಏಷ್ಯಾದ ಕೆಲವು ಭಾಗಗಳಲ್ಲಿ ಕೋವಿಡ್‌-19 (COVID-19) ಸಾಂಕ್ರಾಮಿಕದ ಹೊಸ ಅಲೆ ಕಾಣಿಸಿಕೊಂಡಿದ್ದು, ಇದು ವಿಶ್ವದಾದ್ಯಂತ ಎಚ್ಚರಿಕೆ ನೀಡಿದೆ. ಹಾಂಗ್ ಕಾಂಗ್‌ನಲ್ಲಿ, 10 ವಾರಗಳಲ್ಲಿ ಸಾಪ್ತಾಹಿಕ ಪ್ರಕರಣಗಳು 30 ಪಟ್ಟು ಹೆಚ್ಚಾಗಿದೆ. ಸಿಂಗಾಪುರದಲ್ಲಿ ಒಂದು ವಾರದಲ್ಲಿ ಪ್ರಕರಣಗಳು ಸುಮಾರು ಶೇ. 30 ರಷ್ಟು ಹೆಚ್ಚಾಗಿದೆ. ಚೀನಾ ಮತ್ತು ಥೈಲ್ಯಾಂಡ್‌ನಲ್ಲಿಯೂ ಗಮನಾರ್ಹ ಏರಿಕೆಯ … Continued

ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು…

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತೀಯ ವಾಯುದಾಳಿಗಳನ್ನು ಒಳಗೊಂಡ ಆಪರೇಷನ್ ಸಿಂಧೂರದ ನಂತರ ವಿವಿಧ ವರದಿಗಳು ಚೀನಾ ಸರಬರಾಜು ಮಾಡಿದ PL-15 ಕ್ಷಿಪಣಿಗಳು ಮತ್ತು ಟರ್ಕಿಶ್ UAV ಗಳ ಬಳಕೆ ಸೇರಿದಂತೆ ಪಾಕಿಸ್ತಾನಕ್ಕೆ ಚೀನಾದ ಮಿಲಿಟರಿ ಬೆಂಬಲದ ವ್ಯಾಪ್ತಿಯನ್ನು ಎತ್ತಿ ತೋರಿಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತದ … Continued

ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ…!

ನವದೆಹಲಿ: ನವದೆಹಲಿ: ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದ ನಂತರ, PL-15 ಕ್ಷಿಪಣಿಯನ್ನು ತಯಾರಿಸುವ ಚೀನಾದ ರಕ್ಷಣಾ ಕಂಪನಿಯಾದ ಝುಝೌ ಹಾಂಗ್ಡಾ ಎಲೆಕ್ಟ್ರಾನಿಕ್ಸ್ ಕಾರ್ಪ್ ಲಿಮಿಟೆಡ್‌ನ ಷೇರುಗಳು ಮಂಗಳವಾರ ಶೇ. 6.42 ರಷ್ಟು ಕುಸಿದು 37.33 ಯುವಾನ್‌ಗೆ ತಲುಪಿದೆ. ಟರ್ಕಿಯ ಕಂಪನಿಗಳ ಷೇರುಗಳಲ್ಲಿ ಕುಸಿತ ಕಂಡಿದೆ ಎಂದು … Continued

ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ…?

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಲವಾರು ವಾಯುನೆಲೆಗಳು ಮತ್ತು ಇತರ ಮಿಲಿಟಿರಿ ನೆಲೆಗಳು ಹಾನಿಗೊಳಗಾದವು. ಅದರ ನಂತರ ಪಾಕಿಸ್ತಾನ ಅಮೆರಿಕಕ್ಕೆ ಮಧ್ಯಪ್ರವೇಶಿಸುವಂತೆ ದುಂಬಾಲು ಬಿದ್ದ ನಂತರ ಕದನ ವಿರಾಮ ಘೋಷಣೆಯಾಯಿತು. ಅಮೆರಿಕ ಈ ಕದನ ವಿರಾಮದ ಕ್ರೆಡಿಟ್‌ … Continued