ಚುನಾವಣಾ ಬಾಂಡ್, ಉತ್ತರ ಭಾರತ-ದಕ್ಷಿಣ ಭಾರತ ಚರ್ಚೆ, ಸಿಬಿಐ – ಇ.ಡಿ. ದುರ್ಬಳಕೆ ಆರೋಪ, ಬಿಜೆಪಿ ಮಾಡೆಲ್-ಕಾಂಗ್ರೆಸ್‌ ಮಾಡೆಲ್‌ ಬಗ್ಗೆ ಮೋದಿ ಹೇಳಿದ್ದೇನು..?

2047ರ ವೇಳೆಗೆ ವಿಕಸಿತ ಭಾರತದ ಬಗೆಗಿನ ತಮ್ಮ ವಿಶಾಲವಾದ ದೃಷ್ಟಿಕೋನದಿಂದ ಹಿಡಿದು ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ತಮ್ಮ ಮಧ್ಯಸ್ಥಿಕೆಯವರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ನೀಡಿದ ಸಂದರ್ಶನದಲ್ಲಿ ಎಲ್ಲಾ ಪ್ರಮುಖ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ದಶಕದಲ್ಲಿ ರಾಷ್ಟ್ರದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಭಾಯಿಸುವಲ್ಲಿ ಜಾರಿ … Continued

ಇದು ಸಮಾಧಾನಕರ ಸುದ್ದಿ..: ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 2024ರಲ್ಲಿ ಮುಂಗಾರು ಸರಾಸರಿ 106 ಪ್ರತಿಶತದಷ್ಟು ( 87 ಸೆಂಟಿಮೀಟರ್‌ ) ಮಳೆ​ ಬರಲಿದೆ ಎಂದು ಹೇಳಿದೆ. ಎಲ್ ನಿನೋ ದುರ್ಬಲಗೊಳ್ಳುತ್ತಿದೆ. ಮಾನ್ಸೂನ್ ಪ್ರಾರಂಭವಾಗುವ ಜೂನ್‌ ವೇಳೆಗೆ ಇದು ತಟಸ್ಥವಾಗಲಿದೆ ಎಂದು ಐಎಂಡಿಯ … Continued

ಸಂಪತ್ತಿನಿಂದ ತ್ಯಾಗ ಜೀವನಕ್ಕೆ : ಸನ್ಯಾಸಿಗಳಾಗಲು 200 ಕೋಟಿ ರೂಪಾಯಿ ಸಂಪತ್ತು ದಾನ ಮಾಡಿದ ದಂಪತಿ…!

ಗುಜರಾತ್‌ನ ಪ್ರಮುಖ ಉದ್ಯಮಿ ಕುಟುಂಬವು ತಮ್ಮ ಸಂಪೂರ್ಣ ಜೀವಮಾನದ ಗಳಿಕೆಯ 200 ಕೋಟಿ ರೂಪಾಯಿಗಳನ್ನು ದಾನ ಮಾಡುವ ಮೂಲಕ ಅನೇಕರನ್ನು ಬೆರಗುಗೊಳಿಸಿದೆ. ಗುಜರಾತಿನ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿ ಭವೇಶ ಭಾಯ್ ಭಂಡಾರಿ ಅವರು ತಮ್ಮ ಪತ್ನಿಯೊಂದಿಗೆ ಸನ್ಯಾಸಿ ಜೀವನವನ್ನು ಸ್ವೀಕರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಭೌತಿಕ ಸಂಪತ್ತಿನ ಐಷಾರಾಮಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರ … Continued

ಪೊಂಪೈನಲ್ಲಿ ಉತ್ಖನನದ ವೇಳೆ ಗ್ರೀಕ್ ದೇವತೆಗಳನ್ನು ಬಿಂಬಿಸುವ 2000 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರಗಳು ಪತ್ತೆ…!

ಇತ್ತೀಚಿನ ವರದಿಗಳ ಪ್ರಕಾರ, ಪುರಾತತ್ತ್ವಜ್ಞರು ಇಟಲಿಯ ಪೊಂಪೈನಲ್ಲಿ 2000 ವರ್ಷಗಳಷ್ಟು ಹಳೆಯದಾದ ವರ್ಣಚಿತ್ರಗಳನ್ನು ಪತ್ತೆಹಚ್ಚಿದ್ದಾರೆ. ಡೈಲಿ ಸ್ಟಾರ್ ವರದಿಗಳ ಪ್ರಕಾರ, ಪುರಾತತ್ವಶಾಸ್ತ್ರಜ್ಞರು ಸೈಟಿನ ಉತ್ಖನನದ ಸಮಯದಲ್ಲಿ ವರ್ಣಚಿತ್ರಗಳನ್ನು ಪತ್ತೆ ಮಾಡಿದ್ದಾರೆ ಇದು 79 AD ನಲ್ಲಿ ಸಂಭವಿಸಿದ ಮೌಂಟ್ ವೆಸುವಿಯಸ್ ಸ್ಫೋಟದ ಜ್ವಾಲಾಮುಖಿ ಬೂದಿ ಅಡಿಯಲ್ಲಿ ಸಮಾಧಿಯಾಗಿತ್ತು. ಇವುಗಳು ಅವಶೇಷಗಳಲ್ಲಿ ಕಂಡುಬರುವ ಕೆಲವು “ಉತ್ತಮ” ವರ್ಣಚಿತ್ರಗಳಾಗಿವೆ … Continued

ವಿಶ್ವದ ಅತ್ಯಂತ ಹಿರಿಯ ಸಂಯೋಜಿತ ಅವಳಿಗಳು 62ನೇ ವಯಸ್ಸಿನಲ್ಲಿ ನಿಧನ

ಪ್ರಪಂಚದ ಅತ್ಯಂತ ಹಿರಿಯ ಸಂಯೋಜಿತ ಅವಳಿಗಳು ತಮ್ಮ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಲೋರಿ ಮತ್ತು ಜಾರ್ಜ್ ಶಾಪೆಲ್ ಏಪ್ರಿಲ್ 7 ರಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಲೈಬೆನ್ಸ್‌ಪರ್ಗರ್ ಫ್ಯೂನರಲ್ ಹೋಮ್ಸ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಸಂತಾಪ ಸೂಚಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಹ ಪ್ರಕಟಣೆಯಲ್ಲಿ ಅವರ ಮರಣವನ್ನು ದೃಢಪಡಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ … Continued

ಬಿಜೆಪಿ ಪ್ರಣಾಳಿಕೆ ಬಿಡುಗಡೆ : ವೃದ್ಧರಿಗೆ ಉಚಿತ ಚಿಕಿತ್ಸೆ, ಬಡವರಿಗೆ ಉಚಿತ ಪಡಿತರ, ಏಕರೂಪ ನಾಗರಿಕ ಸಂಹಿತೆ ಜಾರಿ, ಮುದ್ರಾ ಸಾಲ ಯೋಜನೆ ಮೊತ್ತ ಹೆಚ್ಚಳ, ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ …

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿಯಂದು ಸಂಕಲ್ಪ ಪತ್ರದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಮೋದಿ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್ ಹಾಗೂ ರಾಜನಾಥ್‌ ಸಿಂಗ್‌ … Continued

ಸಾರ್ವಜನಿಕರ ಖರೀದಿಗಾಗಿ ಅಯೋಧ್ಯಾ ರಾಮಲಲ್ಲಾ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಮೋದಿ ಸರ್ಕಾರ

ಈ ವರ್ಷದ ಆರಂಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಭಗವಾನ್‌ ರಾಮ ಲಲ್ಲಾ ಮೂರ್ತಿಯ ಐತಿಹಾಸಿಕ ಪ್ರಾಣ ಪ್ರತಿಷ್ಠಾ ಸಮಾರಂಭದ ಗೌರವಾರ್ಥವಾಗಿ, ಭಾರತ ಸರ್ಕಾರವು ಸೀಮಿತ ಆವೃತ್ತಿಯ 50 ಗ್ರಾಂ ತೂಕದ ಸ್ಮರಣಿಕೆ ಬೆಳ್ಳಿಯ ನಾಣ್ಯವನ್ನು ಸಾರ್ವಜನಿಕ ಮಾರಾಟಕ್ಕೆ ಪರಿಚಯಿಸಿದೆ ಎಂದು ವರದಿಯಾಗಿದೆ. ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ಸ್ಮರಣಾರ್ಥ ನಾಣ್ಯಗಳನ್ನು ಅನಾವರಣಗೊಳಿಸಿದ ನಂತರ … Continued

‘ಹೆಲ್ತ್ ಡ್ರಿಂಕ್ಸ್‌’ ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಇ-ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಬೋರ್ನ್‌ವಿಟಾ ಸೇರಿದಂತೆ ಹಲವು ಪಾನೀಯಗಳನ್ನು ‘ಆರೋಗ್ಯ ಪಾನೀಯʼಗಳ (healthy drinks) ವರ್ಗದಿಂದ ತೆಗೆದುಹಾಕುವಂತೆ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಏಪ್ರಿಲ್ 10 ರಂದು ಸೂಚನೆ ನೀಡಿದೆ. ಇದು ಯಾವುದೇ ‘ಆರೋಗ್ಯ ಪಾನೀಯ’ ವರ್ಗಕ್ಕೆ ಸೇರುವುದಿಲ್ಲ ಎಂದು ತಿಳಿಸಿದೆ. ಬೋರ್ನ್‌ವೀಟಾ ಸೇರಿದಂತೆ ಇತರ ಕೆಲ ಪಾನೀಯಗಳ ಕುರಿತು ಅಧ್ಯಯನ ನಡೆಸಿರುವ ಮಕ್ಕಳ … Continued

‘ಇಂಡಿಯಾ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು, ಆದರೆ…’: ಲೋಕಸಭೆ ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ

ಬೆಂಗಳೂರು : 2024ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು ಎಂದು ಹೇಳಿದ್ದಾರೆ. ಆದರೆ  ಇದೇ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೂಡ ಸಂಪೂರ್ಣ ಬಹುಮತ  ಪಡೆಯುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆದ್ದರಿಂದ, ಇಂಡಿಯಾ ಮೈತ್ರಿಕೂಟವು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, … Continued

ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೊಲೀಸರಿಗೆ ನೂತನ ವಸ್ತ್ರಸಂಹಿತೆ : ಅರ್ಚಕರ ತರಹದ ಸಮವಸ್ತ್ರ…! ಅಖಿಲೇಶ ಯಾದವ್ ಆಕ್ಷೇಪ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಇನ್ನು ಮುಂದೆ ಧೋತಿ-ಕುರ್ತಾ ಧರಿಸಿ ʼಭಕ್ತ ಸ್ನೇಹಿʼ ವಾತಾವರಣ ಮೂಡಿಸಲಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ತಿಲಕ ಅಥವಾ ವಿಭೂತಿ ಹಚ್ಚಿಕೊಂಡು, ಕಿತ್ತಳೆ ಬಣ್ಣದ ವಸ್ತ ಧರಿಸಿಕೊಂಡು ಥೇಟ್‌ ಅರ್ಚಕರಂತೆ ಇವರು ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಉತ್ತರಪ್ರದೇಶದ ಪೊಲೀಸ್‌ … Continued