ಟಿ20 ವಿಶ್ವಕಪ್ | ಟೀಮ್ ಇಂಡಿಯಾಕ್ಕೆ ಆಘಾತ: ಸ್ಟಾರ್ ಬ್ಯಾಟರ್ ಅಭಿಷೇಕ ಶರ್ಮಾ ಆಸ್ಪತ್ರೆಗೆ ದಾಖಲು

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಅಭಿಷೇಕ ಶರ್ಮಾ ಅವರು ತೀವ್ರವಾದ ಹೊಟ್ಟೆ ನೋವಿನ ಸೋಂಕಿನಿಂದಾಗಿ (Stomach Infection) ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಗುರುವಾರ ನಡೆಯಲಿರುವ ನಮೀಬಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೆ ಅವರು ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಮೆರಿಕ ವಿರುದ್ಧದ ಪಂದ್ಯಕ್ಕೂ ಮುನ್ನವೇ ಅಭಿಷೇಕ ಅವರು ಅಸ್ವಸ್ಥರಾಗಿದ್ದರು. ಪಂದ್ಯದ … Continued

ಟಿ20 ವಿಶ್ವಕಪ್ : ಯು-ಟರ್ನ್ ಹೊಡೆದ ಪಾಕಿಸ್ತಾನ ; ಭಾರತದ ವಿರುದ್ಧದ ಪಂದ್ಯ ಆಡಲು ನಿರ್ಧಾರ…!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)  ಯೂ ಟರ್ನ್‌ ಹೊಡೆದಿದೆ. ಐಸಿಸಿ (ICC) ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ, ಅದು ತಾನು ಈ ಹಿಂದೆ  ಘೋಷಿಸಿದ್ದ ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಮೂಲಕ 2026ರ ಟಿ20 ವಿಶ್ವಕಪ್‌ನಲ್ಲಿ ನಿಗದಿಯಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಖಚಿತವಾಗಿದೆ. ಪಾಕಿಸ್ತಾನ … Continued

ಟಿ20 ವಿಶ್ವಕಪ್ : ಭಾರತದ ವಿರುದ್ಧದ ಪಂದ್ಯ ಬಹಿಷ್ಕಾರ ; ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂರು ಪ್ರಮುಖ ಬೇಡಿಕೆಗಳನ್ನು ತಿರಸ್ಕರಿಸಿದ ಐಸಿಸಿ

ಕೊಲಂಬೊ/ಲಾಹೋರ್: ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಆಡಲು ನಿರಾಕರಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಹಠಮಾರಿ ಧೋರಣೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಸಿ ಮುಟ್ಟಿಸಿದೆ. ಬಿಕ್ಕಟ್ಟು ಶಮನಗೊಳಿಸಲು ಪಿಸಿಬಿ ಮಂಡಿಸಿದ್ದ ಮೂರು ಪ್ರಮುಖ ಬೇಡಿಕೆಗಳನ್ನು ಐಸಿಸಿ ನೇರವಾಗಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಭಾನುವಾರ ಲಾಹೋರ್‌ನಲ್ಲಿ ನಡೆದ … Continued

ಬಾಹ್ಯಾಕಾಶದಲ್ಲಿ ಬೇಹುಗಾರಿಕೆ ಸಾಮರ್ಥ್ಯ ಪಡೆದ ಭಾರತ ; ಈಗ ಶತ್ರು ದೇಶಗಳ ಉಪಗ್ರಹಗಳ ಮೇಲೆ ಕಣ್ಣಿಡಬಹುದು…

ಬೆಂಗಳೂರು/ಅಹಮದಾಬಾದ್: ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಇಂದು ಐತಿಹಾಸಿಕ ಸಾಧನೆಯೊಂದು ದಾಖಲಾಗಿದೆ. ಅಹಮದಾಬಾದ್ ಮೂಲದ ಅಜಿಸ್ಟಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (Azista Industries) ತನ್ನ ʼಎಎಫ್‌ಆರ್‌ʼ (AFR)ಉಪಗ್ರಹದ ಮೂಲಕ ಬಾಹ್ಯಾಕಾಶದಲ್ಲಿ ಚಲಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ. ಈ ಮೂಲಕ ಕಕ್ಷೆಯಲ್ಲಿರುವ ಇತರ ವಸ್ತುಗಳ ಮೇಲೆ ನಿಗಾ ಇಡುವ (Non-Earth Imaging … Continued

ಸಂಪೂರ್ಣ ಕಾಶ್ಮೀರವೂ ಭಾರತದ್ದೇ ಅವಿಭಾಜ್ಯ ಅಂಗ; ವ್ಯಾಪಾರ ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ‘ಶಾಕ್’ ನೀಡಿದ ಅಮೆರಿಕ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಅಮೆರಿಕ ಈಗ ಅಧಿಕೃತವಾಗಿ ಎತ್ತಿಹಿಡಿದಿದೆ. ಪಾಕಿಸ್ತಾನದ ವಾದಗಳಿಗೆ ವಿರುದ್ಧವಾಗಿ, ಜಗತ್ತಿನ ದೊಡ್ಡಣ್ಣ ಅಮೆರಿಕ ಭಾರತದ ರಾಜಕೀಯ ಭೂಪಟವನ್ನು ಅಂಗೀಕರಿಸುವ ಮೂಲಕ ಪಾಕಿಸ್ತಾನಕ್ಕೆ ಪ್ರಬಲ ರಾಜತಾಂತ್ರಿಕ ಏಟು ನೀಡಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) ಬಿಡುಗಡೆ ಮಾಡಿರುವ ಭಾರತದ ನೂತನ ಭೂಪಟದಲ್ಲಿ, ಜಮ್ಮು … Continued

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಸುಂಕ ಕಡಿತ, ಆಮದು ಸರಳೀಕರಣಕ್ಕೆ ಸಮ್ಮತಿ, $500 ಬಿಲಿಯನ್ ವ್ಯಾಪಾರ ಗುರಿ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಉಭಯ ದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು (Interim Trade Agreement) ಅಂತಿಮಗೊಳಿಸಿದ್ದು, ಇದರ ಅನ್ವಯ ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸುತ್ತಿದ್ದ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಲಾಗಿದೆ. ಮುಖ್ಯವಾಗಿ, ಈ ಹಿಂದೆ ಭಾರತೀಯ ಆಮದುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ಅಮೆರಿಕ … Continued

ಅಂಡರ್-19 ವಿಶ್ವಕಪ್ ; ವೈಭವ್ ಸೂರ್ಯವಂಶಿ ಅಬ್ಬರ : ಭಾರತಕ್ಕೆ 6ನೇ ಬಾರಿ ಚಾಂಪಿಯನ್‌ ಕಿರೀಟ

ಹರಾರೆ: ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಂದ ಸೋಲಿಸಿದ ಭಾರತದ 19 ವರ್ಷದೊಳಗಿನವರ (U19) ತಂಡ, ಆರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡವು ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದು ಫೈನಲ್ ತಲುಪಿತ್ತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಬಂದಿದ್ದ ಬಲಿಷ್ಠ ಇಂಗ್ಲೆಂಡ್ … Continued

ಟಿ20 ವಿಶ್ವಕಪ್ 2026: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಬೇಡಿ : ಪಾಕಿಸ್ತಾನಕ್ಕೆ ‘2009ರ ಲಾಹೋರ್ ದಾಳಿ’ ನೆನಪಿಸಿದ ಶ್ರೀಲಂಕಾ

ಕೊಲಂಬೊ: 2026ರ ಟಿ20 ವಿಶ್ವಕಪ್‌ನ ಸಹ-ಆತಿಥೇಯ ರಾಷ್ಟ್ರವಾಗಿರುವ ಶ್ರೀಲಂಕಾ, ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಲೀಗ್ ಹಂತದ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನಕ್ಕೆ ಅಧಿಕೃತವಾಗಿ ವಿನಂತಿಸಿದೆ. ಪಾಕಿಸ್ತಾನ ಸರ್ಕಾರವು ತನ್ನ ರಾಷ್ಟ್ರೀಯ ತಂಡವು ಟೂರ್ನಿಯಲ್ಲಿ ಭಾಗವಹಿಸಲಿದೆ, ಆದರೆ ಭಾರತದ ವಿರುದ್ಧದ ಪಂದ್ಯವನ್ನು ಮಾತ್ರ ಆಡುವುದಿಲ್ಲ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ … Continued

ಷೇರು ಮಾರುಕಟ್ಟೆಯಲ್ಲಿ ಎಂಟು ತಿಂಗಳಲ್ಲೇ ದಾಖಲೆ ಜಿಗಿತ ; ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ರೂ. ಹೆಚ್ಚಳ…!

ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳಲ್ಲಿ ಮಂಗಳವಾರ ಸತತ ಎರಡನೇ ದಿನವೂ ಭರ್ಜರಿ ಲಾಭದ ಓಟ ಮುಂದುವರಿದಿದೆ. ಬಹುನಿರೀಕ್ಷಿತ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ಜಾರಿಯಾದ ಬೆನ್ನಲ್ಲೇ ಹೂಡಿಕೆದಾರರಲ್ಲಿ ಉತ್ಸಾಹ ಮನೆಮಾಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಎಂಟು ತಿಂಗಳಲ್ಲೇ (ಮೇ 12, 2025ರ ನಂತರ) ಗರಿಷ್ಠ ಏರಿಕೆ ದಾಖಲಿಸಿವೆ. ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಅಮೆರಿಕವು … Continued

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಭಾರತಕ್ಕೆ ಹೇಗೆ ಅನುಕೂಲ..?

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಇದರ ಅಡಿಯಲ್ಲಿ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಪರಸ್ಪರ ಸುಂಕವನ್ನು ಪ್ರಸ್ತುತ ಶೇಕಡಾ 25 ರಿಂದ ಶೇಕಡಾ 18 ಕ್ಕೆ ಇಳಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಕರೆಯ ನಂತರ ಅಮೆರಿಕದ ಅಧ್ಯಕ್ಷರು ಸಾಮಾಜಿಕ … Continued