ಚಿನ್ನ-ಬೆಳ್ಳಿ ದರದಲ್ಲಿ ದಾಖಲೆ ಏರಿಕೆ : ಇದೇ ಮೊದಲ ಬಾರಿಗೆ 10 ಗ್ರಾಂಗೆ ₹1.5 ಲಕ್ಷ ದಾಟಿದ ಚಿನ್ನ, ಬೆಳ್ಳಿಯೂ ಸಾರ್ವಕಾಲಿಕ ಏರಿಕೆ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿನ ಭಾರಿ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಪ್ರವೃತ್ತಿಯಿಂದಾಗಿ ಮಂಗಳವಾರ ದೆಹಲಿಯಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ 1.5 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದೆ. ಅಖಿಲ ಭಾರತ ಸರಾಫಾ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ₹5,100 … Continued

ಲಾಟರಿಯಲ್ಲಿ 10 ಕೋಟಿ ರೂಪಾಯಿ ಗೆದ್ದ ಚಾಲಕ…!

ಸಿರ್ಸಾ (ಹರಿಯಾಣ): ಅದೃಷ್ಟ ಎಂಬುದು ಯಾವಾಗ, ಯಾರನ್ನು, ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗದು. ಹರಿಯಾಣದ ಸಿರ್ಸಾ ಜಿಲ್ಲೆಯ ರಾನಿಯಾ ಮೂಲದ ಸಾಮಾನ್ಯ ಚಾಲಕನೊಬ್ಬನಿಗೆ ಈಗ ಅಕ್ಷರಶಃ ಅದೃಷ್ಟ ಒಲಿದು ಬಂದಿದೆ. ಲಾಟರಿ ಟಿಕೆಟ್ ಖರೀದಿ ಈತ ಈಗ ಬರೋಬ್ಬರಿ 10 ಕೋಟಿ ರೂಪಾಯಿ ಶ್ರೀಮಂತನಾಗಿದ್ದಾನೆ. ಮುಹಮ್ಮದಪುರಿಯಾ ಗ್ರಾಮದ ನಿವಾಸಿ ಪೃಥ್ವಿ ಸಿಂಗ್ (35) ಎಂಬುವವರೇ … Continued

ಭಾರತದ ಆರ್ಥಿಕ ʼಬೆಳವಣಿಗೆ ಮುನ್ಸೂಚನೆʼ ಏರಿಕೆ ಮಾಡಿದ ಐಎಂಎಫ್‌

ನವದೆಹಲಿ: ಅಂತರಾಷ್ಟ್ರೀಯ ಹಣಕಾಸು ನಿಧಿ (IMF) 2026ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 7.3ಕ್ಕೆ ಏರಿಸಿದೆ. ಭಾರತದ ಬಲಿಷ್ಠ ಆರ್ಥಿಕ ವೇಗವನ್ನು ಗಮನದಲ್ಲಿಟ್ಟುಕೊಂಡು ಈ ಹಿಂದಿನ ಅಂದಾಜಿಗಿಂತ ಶೇ. 0.7 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಐಎಂಎಫ್ ತಿಳಿಸಿದೆ. 2026ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಶೇ. 7.3 ರಷ್ಟು … Continued

ಸುಂಕದ ಮೂಲಕ ಜಗತ್ತನ್ನು ಹೆದರಿಸುತ್ತಿರುವ ಟ್ರಂಪ್ ; ಆದ್ರೆ ಈಗ ಭಾರತದ ಸುಂಕಕ್ಕೆ ಹೆದರಿದ ಅಮೆರಿಕ ಸೆನೆಟರ್‌ಗಳು…!

ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಅಮೆರಿಕದ ಇಬ್ಬರು ಪ್ರಭಾವಿ ಸೆನೆಟರ್‌ಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಹತ್ವದ ಮನವಿ ಮಾಡಿದ್ದಾರೆ. ಭಾರತವು ಅಮೆರಿಕದ ಬೇಳೆಕಾಳುಗಳ (Pulse crops) ಆಮದಿನ ಮೇಲೆ ವಿಧಿಸಿರುವ ಹೆಚ್ಚಿನ ಸುಂಕವನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಅವರು … Continued

‘ಆಪರೇಷನ್ ಸಿಂಧೂರ’ ವೇಳೆ ‘ಉಗ್ರರ’ ಪ್ರಧಾನ ಕಚೇರಿ ಸಂಪೂರ್ಣ ಧ್ವಂಸ : ಪಾಕಿಸ್ತಾನ ಕಂಗಾಲಾಗಿತ್ತು ; ಸತ್ಯ ಒಪ್ಪಿಕೊಂಡ ಎಲ್‌ಇಟಿ ಕಮಾಂಡರ್‌…!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoor) ಸೇನಾ ಕಾರ್ಯಾಚರಣೆಯು ಪಾಕಿಸ್ತಾನದ ಬೆನ್ನೆಲುಬು ಮುರಿದಿದೆ. ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್, ಭಾರತದ ಈ ದಾಳಿಯಿಂದ ಪಾಕಿಸ್ತಾನದ ಮುರುದ್ಕೆಯಲ್ಲಿರುವ ಮರ್ಕಜ್ -ಎ- ತೊಯ್ಬಾ ಪ್ರಧಾನ ಕಚೇರಿ ನಾಶವಾಗಿರುವುದಾಗಿ … Continued

ಇರಾನಿನಲ್ಲಿ ಅಸ್ಥಿರತೆ ಆತಂಕ : ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಸಜ್ಜು

ನವದೆಹಲಿ: ಇರಾನ್‌ನಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಯ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ, ಜನವರಿ 16ರೊಳಗೆ ಮೊದಲ ತಂಡವನ್ನು ಭಾರತಕ್ಕೆ ಕರೆತರುವ ಸಾಧ್ಯತೆಯಿದೆ. “ಇರಾನ್‌ನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತಕ್ಕೆ ಮರಳಲು ಇಚ್ಛಿಸುವ ನಾಗರಿಕರಿಗೆ ಅಗತ್ಯ ವ್ಯವಸ್ಥೆಗಳನ್ನು ವಿದೇಶಾಂಗ ವ್ಯವಹಾರಗಳ … Continued

ವೀಡಿಯೊ..| ಸೇನಾ ದಿನಾಚರಣೆ : ʼಆಪರೇಷನ್ ಸಿಂಧೂರʼ ಕಾರ್ಯಾಚರಣೆಯ ಹೊಸ ವೀಡಿಯೊ ಬಿಡುಗಡೆ ಮಾಡಿದ ಸೇನೆ

ನವದೆಹಲಿ: ಕಳೆದ ವರ್ಷ ಪಾಕಿಸ್ತಾನದ ಗಡಿ ದಾಟಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ರೋಚಕ ದೃಶ್ಯಗಳನ್ನು ಸೇನಾ ದಿನಾಚರಣೆಯ (Army Day) ಸಂದರ್ಭದಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ. ಶತ್ರು ರಾಷ್ಟ್ರದ ರಾಡಾರ್ ವ್ಯವಸ್ಥೆ ಹಾಗೂ ವಾಯುನೆಲೆಗಳನ್ನು ಧ್ವಂಸಗೊಳಿಸಿದ ದೃಶ್ಯಗಳು ಈ ವೀಡಿಯೊದಲ್ಲಿವೆ. ಸುಮಾರು ಮೂರು ನಿಮಿಷಗಳ ಕಾಲ ಇರುವ … Continued

ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯಲು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಇರಾನ್‌ನಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಬುಧವಾರ (ಜನವರಿ 14, 2026) ತುರ್ತು ಸಲಹೆ (Advisory) ನೀಡಿದೆ. ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಲಭ್ಯವಿರುವ ವಿಮಾನಗಳು ಅಥವಾ ಇತರೆ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು … Continued

ರಕ್ಷಣಾ ಕ್ಷೇತ್ರದಲ್ಲಿ ಭಾರತದ ಬೃಹತ್ ಹೆಜ್ಜೆ : 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ

ನವದೆಹಲಿ: ಭಾರತೀಯ ವಾಯುಪಡೆಯ ಬಲವರ್ಧನೆಗಾಗಿ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬೃಹತ್ ಪ್ರಸ್ತಾವನೆಯ ಕುರಿತು ಚರ್ಚಿಸಲು ರಕ್ಷಣಾ ಸಚಿವಾಲಯವು ಈ ವಾರ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದೆ. ಸುಮಾರು 3.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಒಪ್ಪಂದವು ಭಾರತದ ರಕ್ಷಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಖರೀದಿ ಪ್ರಕ್ರಿಯೆಯಾಗಲಿದೆ. ಒಟ್ಟು 114 ವಿಮಾನಗಳ … Continued

ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ಹೆಚ್ಚುವರಿ ಸುಂಕ ಹೇರಿದ ಟ್ರಂಪ್ ; ಭಾರತದ ಮೇಲೆ ಪರಿಣಾಮವೇನು ?

ವಾಷಿಂಗ್ಟನ್ /ನವದೆಹಲಿ : ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ಕಠಿಣ ನಿಲುವು ತಳೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ (Tariff) ಹೇರುವುದಾಗಿ ಘೋಷಿಸಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಜನವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಹಿಂಸಾಚಾರ ನಡೆಸುತ್ತಿರುವುದನ್ನು ವಿರೋಧಿಸಿ ಟ್ರಂಪ್ … Continued