ಖ್ಯಾತ ನಟ ಅಜಿತ್ ನೋಡಲು ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು ; ನಟನ ಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು..

ಚೆನ್ನೈ: ಪದ್ಮಭೂಷಣ ಪುರಸ್ಕೃತ ಖ್ಯಾತ ನಟ ಅಜಿತಕುಮಾರ ಅವರಿಗೆ ಬುಧವಾರ ವಿಮಾನ ನಿಲ್ದಾಣದಲ್ಲಿ ಕಾಲಿಗೆ ಗಾಯವಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ನಂತರ ಮಂಗಳವಾರ ನವದೆಹಲಿಯಿಂದ ಚೆನ್ನೈಗೆ ವಿಮಾನದಲ್ಲಿ ಬಂದಿದ್ದ ನಟನನ್ನು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದು, ಇದರಿಂದಾಗಿ ಅವರು ಗಾಯಗೊಂಡರು. … Continued

ವೀಡಿಯೊ..| ಎರಡು ಕುಟುಂಬಗಳ ನಡುವೆ ಜಗಳ ನಡೆಯುವಾಗ ಕುಸಿದ ಛಾವಣಿ ; ಕೆಲವರಿಗೆ ಗಾಯ

ಮಹಾರಾಷ್ಟ್ರದ (Maharashtra) ಥಾಣೆಯ ಭಿವಾಂಡಿಯ ದೇನೆನಗರದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಹಿಂಸಾತ್ಮಕ ಜಗಳದ ವೇಳೆ ಮನೆಯ ಛಾವಣಿ ಕುಸಿದು ಬಿದ್ದಿದೆ. ಈ ವೇಳೆ ಮೇಲಿನ ಮಹಡಿಯಿಂದ ಕೆಳಗಿನ ಮಹಡಿಗೆ ಕೆಲವರು ಉರುಳಿಬಿದ್ದಿದ್ದು, ಅವರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.. ಸಣ್ಣ ಕಾರಣಕ್ಕೆ ದೊಡ್ಡ ಜಗಳ ನಡೆದ ನಂತರ ಈ ಆಘಾತಕಾರಿ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ … Continued

ಮೈಸೂರು | ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆ ಆರೋಪಿ ಕಾಲಿಗೆ ಗುಂಡು

ಮೈಸೂರು : ದರೋಡೆ ಪ್ರಕರಣದಲ್ಲಿ ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೇರಳ ಮೂಲದ ಆರೋಪಿ ಆದರ್ಶ ಎಂಬಾತ ಗುಂಡೇಟಿನಿಂದ ಗಾಯಗೊಂಡ ದರೋಡೆಕೋರ. ಈತನನ್ನು ಮೇಟಗಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಸಬ್‌ಇನ್‌ಸ್ಪೆಕ್ಟರ್‌ ಪ್ರಕಾಶ ಹಾಗೂ ಸಿಬ್ಬಂದಿ ಹರೀಶ ಅವರು … Continued

ಆಘಾತಕಾರಿ ವೀಡಿಯೊ..| ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ, ಮಗುವಿನ ಮೇಲೆ ಬೀದಿ ಹಸುವಿನ ದಾಳಿ; ಮಹಿಳೆ ಆಸ್ಪತ್ರೆಗೆ ದಾಖಲು

ಚೆನ್ನೈನ ಕೊಳತ್ತೂರಿನ ಬಾಲಾಜಿ ನಗರದಲ್ಲಿ ಬೀದಿ ಹಸುವೊಂದು ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ದಾಳಿ ಮಾಡಿದ ವೀಡಿಯೊ ವೈರಲ್ ಆಗಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ಹಸು ಮೊದಲು ಮಗುವಿನ ಮೇಲೆ ದಾಳಿ ಮಾಡಲು ಯತ್ನಿಸಿದೆ. ತಾಯಿ ಮಗುವನ್ನು ರಕ್ಷಿಸಲು ಮುಂದಾದಾಗ ಅದು ತಾಯಿ ಮೇಲೆ ದಾಳಿ ನಡೆಸಿವೆ. ಆದರೆ, ನೆರೆಹೊರೆಯವರು ಆಕೆಯ ರಕ್ಷಣೆಗೆ … Continued

ಬೆಳಗಾವಿ | ಕಾರಿನ ಮೇಲೆ ಮಗುಚಿ ಬಿದ್ದ ಲಾರಿ ; ಇಬ್ಬರಿಗೆ ಗಾಯ

ಬೆಳಗಾವಿ: ಬೆಳಗಾವಿ ಕೆಎಲ್‌ಇ ಆಸ್ಪತ್ರೆ ಸನಿಹದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ಲಾರಿಯೊಂದು ಕಾರಿನ ಮೇಲೆ ಬಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಷದ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಕಾಂಕ್ರೀಟ್ ಮಿಕ್ಸರ್ ಲಾರಿ ವೇಗವಾಗಿ ಚಲಿಸುತ್ತಿದ್ದ ವೇಳೆ ಪಕ್ಕದ ಕಾರಿನ ಮೇಲೆ ಉರುಳಿಬಿದ್ದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ರಕ್ಷಿಸಿದ್ದಾರೆ. … Continued

ಬೆಂಗಳೂರಿನಲ್ಲಿ ಸ್ಥಳೀಯ ಕ್ರಿಕೆಟ್‌ ಆಡುವಾಗ ರಾಹುಲ್‌ ದ್ರಾವಿಡಗೆ ಗಾಯ….!

ಫೆಬ್ರವರಿಯಲ್ಲಿ ನಸ್ಸೂರ್ ಸ್ಮಾರಕ ಶೀಲ್ಡ್‌ಗಾಗಿ ಮೂರನೇ ಡಿವಿಷನ್ (ಗುಂಪು I) ಪಂದ್ಯದಲ್ಲಿ ವಿಜಯಾ ಕ್ರಿಕೆಟ್ ಕ್ಲಬ್(ಮಾಲೂರು)ಗಾಗಿ ಸ್ಥಳೀಯ ಕ್ರಿಕೆಟ್ ಪಂದ್ಯ ಆಡುವಾಗ ರಾಜಸ್ಥಾನ ರಾಯಲ್ಸ್ (RR) ಕೋಚ್ ರಾಹುಲ್ ದ್ರಾವಿಡ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಫ್ರಾಂಚೈಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನೊಂದಿಗೆ ಸುದ್ದಿಯನ್ನು ಬಹಿರಂಗಪಡಿಸಿದೆ. ಅಲ್ಲಿ ಅವರು ಬುಧವಾರ ಜೈಪುರದಲ್ಲಿ ತಮ್ಮ ಪೂರ್ವ ಐಪಿಎಲ್ 2025ರ ಸೀಸನ್ … Continued

ಪಟಿಯಾಲ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ ಬೆಂಗಳೂರಿಗೆ ಏರ್‌ಲಿಫ್ಟ್‌

ಬೆಂಗಳೂರು : ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ ಅವರನ್ನು ಭಾನುವಾರ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ.‌ ಚಿಕಿತ್ಸೆಗಾಗಿ ಶಾಂತಕುಮಾರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಕುರುಬೂರು ಶಾಂತಕುಮಾರ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. … Continued

ಯಲ್ಲಾಪುರ : ಕಣ್ಣಿಗೇರಿ ಬಳಿ ಬಸ್ ಪಲ್ಟಿಯಾಗಿ 17 ಪ್ರಯಾಣಿಕರಿಗೆ ಗಾಯ

ಯಲ್ಲಾಪುರ : ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಸಾರಿಗೆ ಸಂಸ್ಥೆ (KSRTC) ಬಸ್ ಪಲ್ಟಿಯಾಗಿ 17 ಕ್ಕೂ ಹೆಚ್ಚು ಜನ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಶಿರಸಿಯಿಂದ ಬೆಳಗಾವಿಗೆ ಹೋಗುತ್ತಿದ್ದ ಈ ಬಸ್ ಯಲ್ಲಾಪುರದಿಂದ ಬೆಳಿಗ್ಗೆ 8ರ ಸುಮಾರಿಗೆ ಹೊರಟಿತ್ತು … Continued

ಸಿದ್ದಾಪುರ | ಮಾವಿನಗುಂಡಿ ಬಳಿ ಸಾರಿಗೆ ಬಸ್‌-ಟಿಪ್ಪರ್‌ ಡಿಕ್ಕಿ : 20ಕ್ಕೂ ಹೆಚ್ಚು ಜನರಿಗೆ ಗಾಯ

ಕಾರವಾರ : ಸಾರಿಗೆ ಸಂಸ್ಥೆ ಬಸ್ಸಿಗೆ ಟಿಪ್ಪರ್ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಬಳಿ ಬಳಿ ನಡೆದಿದೆ ಎಂದು ವರದಿಯಾಗಿದೆ. ಭಟ್ಕಳದಿಂದ ಹಿರೇಕೆರೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಲಾರಿ ಓವರ್‌ ಟೇಕ್‌ … Continued

ಮಹಾಕುಂಭ ಕಾಲ್ತುಳಿತದಲ್ಲಿ 30 ಸಾವು, 60 ಮಂದಿಗೆ ಗಾಯ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದಾರೆ ಎಂದು ಮಹಾಕುಂಭದ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಅವರು, 25 ಶವಗಳನ್ನು ಗುರುತಿಸಲಾಗಿದೆ, ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು … Continued