ಹಾಸನದಲ್ಲಿ ಹಾಡಹಗಲೇ ಗುಂಡಿನ ಸದ್ದು; ಇಬ್ಬರು ಸಾವು, ಒಬ್ಬನ ಹತ್ಯೆಗೈದು ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡ ಶಂಕೆ

ಹಾಸನ : ಹಾಸನದಲ್ಲಿ (Hassan) ಹಾಡಹಗಲೇ ಗುಂಡಿನ (Shooting) ದಾಳಿ ನಡೆದಿದ್ದು ಗುಂಡೇಟಿಗೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬನ ಹತ್ಯೆ ಮಾಡಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಗುರುವಾರ ಗುಂಡಿನ ಸದ್ದು ಕೇಳಿಬಂದ … Continued

ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟ ದರ್ಶನ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇಂದು, ಮಂಗಳವಾರ ಬೆಳಗ್ಗೆ ಮೈಸೂರಿನ ತೋಟದ ಮನೆಯಲ್ಲಿ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದಲ್ಲಿ ನಡೆದ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ನಟ ದರ್ಶನ್‌ … Continued

ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮೇಲೆ ಕೊಲ್ಲಾಪುರ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ

ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಕೊಲ್ಲಾಪುರದ ಕಲಾಂಬಾ ಸೆಂಟ್ರಲ್ ಜೈಲಿನಲ್ಲಿ ಭಾನುವಾರ ಐವರು ಕೈದಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ, ಜೈಲಿನ ಸ್ನಾನಗೃಹದಲ್ಲಿ ಸ್ನಾನ ಮಾಡುವಾಗ ಇತರ ಕೈದಿಗಳೊಂದಿಗೆ ವಾದ ವಿವಾದ ವಿಕೋಪಕ್ಕೆ ಹೋಗಿ 59 ವರ್ಷದ ಮುನ್ನಾ ಅಲಿಯಾಸ್ ಮೊಹಮ್ಮದ್ … Continued

ಮನೆಯ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ : ನಂತರ ತಾನೂ ಆತ್ಮಹತ್ಯೆ…

ಛಿಂದವಾರಾ :  ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛಿಂದವಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಚಿಂದ್ವಾರಾ ಜಿಲ್ಲಾ ಕೇಂದ್ರದಿಂದ 145 ಕಿಮೀ ದೂರದಲ್ಲಿರುವ ಬೋಡಾಲ್ ಕಚ್ಚರ್ ಎಂಬ ಬುಡಕಟ್ಟು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಹತ್ಯೆ ನಡೆದಿದೆ. … Continued

ಕೋಲ್ಕತ್ತಾ | ಬಾಂಗ್ಲಾದೇಶ ಸಂಸದನ ಹತ್ಯೆಗೆ ಸ್ನೇಹಿತನಿಂದಲೇ 5 ಕೋಟಿ ರೂ. ಸುಪಾರಿ ; ಚರ್ಮ ಸುಲಿದು, ದೇಹ ಕತ್ತರಿಸಿ ವಿವಿಧೆಡೆ ಎಸೆದರು : ಮೂಲಗಳು

ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರ ಅಪರಾಧ ತನಿಖಾ ಇಲಾಖೆ (ಸಿಐಡಿ) ಒಬ್ಬ ಶಂಕಿತನನ್ನು ಬಂಧಿಸಿದೆ. ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರು ಬುಧವಾರ ಕೋಲ್ಕತ್ತಾ ಬಳಿಯ ನ್ಯೂ ಟೌನ್‌ನಲ್ಲಿ ಬಾಡಿಗೆ ವಸತಿಗೃಹದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಗೌಪ್ಯ ಮೂಲಗಳ ಪ್ರಕಾರ, ಬಂಧಿತ ಶಂಕಿತನನ್ನು … Continued

ಕನ್ನಡ ಸಿನಿಮಾ ನಟಿ, ಕಾಂಗ್ರೆಸ್ ನಾಯಕಿಯ ಭೀಕರ ಹತ್ಯೆ ; ಪತಿಯೇ ಕೊಲೆ ಆರೋಪಿ

ಮೈಸೂರು: ಕೌಟುಂಬಿಕ ಕಲಹದಿಂದ ಸ್ಯಾಂಡಲ್‌ ವುಡ್‌ ಸಿನಿಮಾ ನಟಿ, ಕಾಂಗ್ರೆಸ್‌ ನಾಯಕಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆಕೆಯ ಪತಿಯೇ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ. ಕೊಲೆಯಾದ ನಟಿಯನ್ನು ವಿದ್ಯಾ ನಂದೀಶ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ವಿದ್ಯಾ ಬನ್ನೂರಿನ … Continued

ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

ಹುಬ್ಬಳ್ಳಿ : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹುಬ್ಬಳ್ಳಿಯ ಅಂಜಲಿ ಅಂಬಿಗೇರ (20) ಎಂಬ ಯುವತಿ ಹತ್ಯೆ ಆರೋಪಿಯನ್ನು ಗುರುವಾರ ತಡರಾತ್ರಿ ಪೊಲೀಸರು ದಾವಣಗೆರೆ ಬಳಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಕೊಲೆ ಆರೋಪಿ ಆಟೋ ಚಾಲಕ ಗಿರೀಶ (ವಿಶ್ವ) ಸಾವಂತ (21) ಎಂಬಾತನನ್ನು ದಾವಣಗೆರೆ ಬಳಿ ರೈಲ್ವೇ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ. ರೈಲಿನಿಂದ ಜಿಗಿದು ಗಾಯಗೊಂಡಿದ್ದ ಆರೋಪಿಯನ್ನು … Continued

ಹುಬ್ಬಳ್ಳಿ: ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌, ಮುಖ್ಯ ಪೇದೆ ಅಮಾನತು

ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ಅಂಜಲಿ ಯುವತಿಯ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ತಲೆದಂಡವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬೆಂಡಿಗೇರಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಚಂದ್ರಶೇಖರ ಚಿಕ್ಕೋಡಿ ಹಾಗೂ ಠಾಣೆಯ ಮುಖ್ಯಪೇದೆ ರೇಖಾ ಅವರನ್ನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಅಮಾನತುಗೊಳಿಸಿದ್ದಾರೆ. ಮೃತ ಯುವತಿ ಅಂಜಲಿ ಹತ್ಯೆಗೂ ಮುನ್ನ ಆರೋಪಿ ವಿಶ್ವ ಎಂಬಾತನಿಂದ ಜೀವ … Continued

ಪ್ರೀತಿಸಲು ನಿರಾಕರಣೆ ; ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಮಾದರಿಯಲ್ಲೇ ಮತ್ತೊಂದು ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ನೇಹಾ ಹಿರೇಮಠ ಕೊಲೆಯ ಕಹಿ ನೆನಪಿನಿಂದ ಹೊರಬರುವ ಮೊದಲೇ ಹುಬ್ಬಳ್ಳಿ(Hubballi)ಯಲ್ಲಿ ಅಂತಹದ್ದೇ ಮತ್ತೊಂದು ಘಟನೆ ಬಧುವಾರ (ಮೇ 15) ಬೆಳ್ಳಂಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ತನ್ನ ಪ್ರೀತಿ ನಿರಾಕರಿದ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯ ಬೆಳಂಬೆಳಿಗ್ಗೆ ಯುವತಿಯ ಮನೆಗೆ ನುಗ್ಗಿ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ವೀರಾಪುರ ಓಣಿ … Continued

ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…

ಲಕ್ನೋ :   ಕೊಲೆ-ಆತ್ಮಹತ್ಯೆಯ ಆಘಾತಕಾರಿ ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿ, ತಾಯಿ ಮತ್ತು ಮೂವರು ಮಕ್ಕಳನ್ನು ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಲಕ್ನೋದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಸೀತಾಪುರ ಸಮೀಪದ ರಾಮಪುರ ಮಥುರಾದ ಪಲ್ಹಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 42 … Continued