ಮೊಹಾಲಿ: ಕಬಡ್ಡಿ ಆಟಗಾರ ರಾಣಾ ಹತ್ಯೆ ಆರೋಪಿ ಪೊಲೀಸ್ ಎನ್‌ಕೌಂಟರಿನಲ್ಲಿ ಸಾವು

ಮೊಹಾಲಿ: ಖ್ಯಾತ ಕಬಡ್ಡಿ ಆಟಗಾರ ರಾಣಾ ಬಾಲಚೌರಿಯಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹರ್ಪಿಂದರ್ ಅಲಿಯಾಸ್ ಮಿಡ್ಡು, ಬುಧವಾರ ಪಂಜಾಬ್‌ನ ಮೊಹಾಲಿಯಲ್ಲಿ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ. ತರನ್‌ ತಾರನ್ ಜಿಲ್ಲೆಯ ನೌಶೆಹ್ರಾ ಪನ್ನುವಾನ್ ನಿವಾಸಿಯಾದ ಹರ್ಪಿಂದರ್‌ನನ್ನು ಬಂಧಿಸಲು ಹೋದಾಗ ಪೊಲೀಸರು ಮತ್ತು ಆರೋಪಿಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಹರ್ಪಿಂದರ್ … Continued

ಆಘಾತಕಾರಿ…: ಪತ್ನಿಯನ್ನು ಕೊಂದು, ಶವದ ಜೊತೆ ಸೆಲ್ಫಿ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ ವ್ಯಕ್ತಿ

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆಯಲ್ಲಿ, ಕೋಯಮತ್ತೂರಿನ ಮಹಿಳಾ ವಸತಿ ನಿಲಯದೊಳಗೆ ತಿರುನೆಲ್ವೇಲಿ ಮೂಲದ ಮಹಿಳೆಯೊಬ್ಬರನ್ನು ಅವರಿಂದ ಬೇರೆಯಾಗಿರುವ ಪತಿ ಅತ್ಯಂತ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಕೋಯಮತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಪ್ರಿಯಾ ಅವರು ತಮ್ಮ ಪತಿ … Continued

ರಾತ್ರಿ ಪಾಳಿಯಿಂದ ಬೇಸತ್ತು 10 ರೋಗಿಗಳನ್ನು ಹತ್ಯೆ ಮಾಡಿದ ನರ್ಸ್…!

ಆಖೆನ್ (ಜರ್ಮನಿ): ರೋಗಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಮಾಡಲು ಇಷ್ಟವಿಲ್ಲದ ಕಾರಣಕ್ಕೆ ವೃದ್ಧ ರೋಗಿಗಳನ್ನು ಹತ್ಯೆ ಮಾಡಿದ ಜರ್ಮನ್ ನರ್ಸ್ ಒಬ್ಬರಿಗೆ ಪಶ್ಚಿಮ ಜರ್ಮನಿಯ ಆಖೆನ್ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 44 ವರ್ಷ ವಯಸ್ಸಿನ ಈ ಆರೋಪಿಯು ತಾನು ನೋಡಿಕೊಳ್ಳಬೇಕಿದ್ದ ರೋಗಿಗಳಿಗೆ ಮಾರಕ ಇಂಜೆಕ್ಷನ್‌ಗಳನ್ನು ನೀಡುವ ಮೂಲಕ 10 ಮಂದಿಯನ್ನು ಕೊಲೆಗೈದಿದ್ದಾನೆ ಹಾಗೂ ಇನ್ನುಳಿದ … Continued

ಸವದತ್ತಿ: ವಿಚ್ಛೇದಿತ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಮಾಜಿ ಪತಿ

ಬೆಳಗಾವಿ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನಂತರ ವಿಚ್ಛೇದನ ಪಡೆದ ನಂತರವೂ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಮಾಜಿ ಪತಿ ಆಕೆಯನ್ನು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಜಿಲ್ಲೆಯ ಸವದತ್ತಿಯ ರಾಮಸೈಟಿನಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಕೊಲೆಯಾಗಿದ್ದ ಬಸ್ ನಿರ್ವಾಹಕಿ ಕಾಶವ್ವ ಕರೀಕಟ್ಟಿ (34) ತನ್ನ ಮಾಜಿ ಪತಿಯಿಂದಲೇ ಕೊಲೆಯಾದವರು ಎಂದು … Continued

ಸುಳಿವು ಸಿಗದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಬೀಡಿ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ…!

  ರಾಯಪುರದ ಅಭನ್‌ಪುರದ ಅಮನೇರ್ ಗ್ರಾಮದಲ್ಲಿ ನಡೆದಿದ್ದ ‘ಬ್ಲೈಂಡ್ ಮರ್ಡರ್’ (ಸುಳಿವು ಇಲ್ಲದ ಕೊಲೆ) ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವಾರದ ಆರಂಭದಲ್ಲಿ ಗೋದಾ ಸೇತುವೆ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದ್ದ 26 ವರ್ಷದ ಸೋನು ಪಾಲ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಸುಮಂತ ಬಾಂದೇ (26), ಅಜಯ … Continued

ಪತ್ನಿಯನ್ನು ಕೊಂದು ಮಂಚದ ಕೆಳಗಿಟ್ಟು ನಾಪತ್ತೆಯಾದ ಪತಿ

ಬೆಳಗಾವಿ: ತವರಿನಿಂದ ಕೇಳಿದಾಗಲೆಲ್ಲಾ ವರದಕ್ಷಿಣೆ ತಂದು ಕೊಡುವುದಕ್ಕೆ ವಿರೋಧಿಸಿದ ಪತ್ನಿಯನ್ನು ಕೊಂದು ಮಂಚದ ಕೆಳಗೆ ಬಚ್ಚಿಟ್ಟು ಪತಿ ನಾಪತ್ತೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿಯಲ್ಲಿ ಈ ಘಟನೆ ನಡೆದಿದ್ದು ,ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂರು ದಿನದ ಹಿಂದೆ ಈ ಘಟನೆ ನಡೆದಿದ್ದು, ಆರೋಪಿ ಆಕಾಶ ಕುಂಬಾರ … Continued

ಗಂಗಾವತಿ | ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಹತ್ಯೆ

ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಸಿನಿಮಿಯ ರೀತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಮಧ್ಯರಾತ್ರಿಯ ನಂತರ ನಡೆದಿದೆ ಎಂದು ವರದಿಯಾಗಿದೆ. ಗಘಾವತಿ ನಗರದ ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂದುಗಡೆ ಈ ಘಟನೆ ನಡೆದಿದ್ದು, ನಸುಕಿನ ಜಾವ 2 ಗಂಟೆ ಸುಮಾರಿಗೆ ಕಾರಿನಲ್ಲಿ ಆಗಮಿಸಿದ್ದ ಗ್ಯಾಂಗ್ ಕೊಲೆ ಮಾಡಿದೆ ಎನ್ನಲಾಗಿದೆ. … Continued

ಕೊಡಲಿಯಿಂದ ಕೊಚ್ಚಿ ಮಕ್ಕಳನ್ನು ಕೊಂದ ತಂದೆ

ಯಾದಗಿರಿ: ಸಂಶಯದ ಹುಳ ತಲೆಹೊಕ್ಕು ತಂದೆಯೊಬ್ಬ ತನ್ನಿಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪತ್ನಿಯ ಶೀಲದ ಬಗ್ಗೆ ಶಂಕೆ ಉಂಟಾದ ಕಾರಣ ಈ ಘೋರ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಈತನ ಸಂಶಯ ಪಿಶಾಚಿಗೆ ಏನೂ ಅರಿಯದ ಪುಟ್ಟ ಮಕ್ಕಳು ಬಲಿಯಾಗಿದ್ದಾರೆ. … Continued

ಬೆಂಗಳೂರು : ಬಸ್ ನಿಲ್ದಾಣದಲ್ಲಿ ಮಗಳ ಮುಂದೆಯೇ ಪತ್ನಿಗೆ 11 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ…!

ಬೆಂಗಳೂರು: ಬಸ್ ನಿಲ್ದಾಣದಲ್ಲಿ 32 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಪತಿ ತನ್ನ ಹದಿಹರೆಯದ ಮಗಳ ಮುಂದೆಯೇ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ದಂಪತಿ ಕೇವಲ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು ಮತ್ತು ಇದು ಅವರಿಬ್ಬರಿಗೂ ಎರಡನೇ ವಿವಾಹವಾಗಿದೆ ಎಂದು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಬೆಂಗಳೂರಿನ ಸುಂಕದಕಟ್ಟೆ … Continued

ತನ್ನ ಮದುವೆಯಾಗುವಂತೆ ಪ್ರಿಯಕರನ ಮನವೊಲಿಸಲು 600 ಕಿಮೀ ಕಾರು ಚಲಾಯಿಸಿದ ಮಹಿಳೆ, ಆದ್ರೆ ಕಾರಿನಲ್ಲೇ ಶವವಾಗಿ ಪತ್ತೆ ; ನಡೆದಿದ್ದೇನು..?

ಬಾರ್ಮರ್ (ರಾಜಸ್ಥಾನ): ತನ್ನ ಪ್ರಿಯಕರನನ್ನು ಭೇಟಿಯಾಗಲು 600 ಕಿ.ಮೀ. ಕಾರು ಚಲಾಯಿಸಿಕೊಂಡ ಹೋಗಿದ್ದ 37 ವರ್ಷದ ಮಹಿಳೆಯೊಬ್ಬರುಮರುದಿನ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ. ಕಬ್ಬಿಣದ ರಾಡ್‌ನಿಂದ ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಪ್ರಿಯಕರ, ಶಾಲಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜುನ್ಜುನುವಿನ ಅಂಗನವಾಡಿ ಮೇಲ್ವಿಚಾರಕಿ ಮುಖೇಶಕುಮಾರಿ ಸುಮಾರು ಒಂದು ದಶಕದ ಹಿಂದೆ … Continued