ಕೊನೆಗೂ ಹೈಬ್ರಿಡ್‌ ಮಾದರಿಯಲ್ಲೇ ಚಾಂಪಿಯನ್ಸ್ ಟ್ರೋಫಿ-2025 ; ದೃಢಪಡಿಸಿದ ಐಸಿಸಿ, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟ

ನವದೆಹಲಿ: ಐಸಿಸಿ (ICC) ಚಾಂಪಿಯನ್ಸ್ ಟ್ರೋಫಿ 2025 ರ ಆಟದ ಸ್ಥಳದ ಸುತ್ತಲಿನ ಗೊಂದಲ ಕೊನೆಗೊಂಡಿದೆ. ತಿಂಗಳ ವಿಳಂಬದ ನಂತರ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ಅಂತಿಮವಾಗಿ ಕಾರ್ಯಕ್ರಮದ ಸ್ಥಳಗಳನ್ನು ಅಧಿಕೃತವಾಗಿ ಘೋಷಿಸಿದೆ. “ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯನ್ನು ಪಾಕಿಸ್ತಾನ ಮತ್ತು ತಟಸ್ಥ ಸ್ಥಳದಲ್ಲಿ ಆಡಲಾಗುವುದು” ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದು ಪ್ರಮುಖ … Continued

2024ರಲ್ಲಿ ಪಾಕಿಸ್ತಾನಿಗಳು ಭಾರತದ ಬಗ್ಗೆ ಗೂಗಲ್​ನಲ್ಲಿ ಏನೇನು ಸರ್ಚ್​ ಮಾಡಿದ್ದಾರೆ ಗೊತ್ತೆ ?

ನವದೆಹಲಿ: ಗೂಗಲ್ ಸರ್ಚ್‌ಗಳ ವಿಷಯಕ್ಕೆ ಬಂದಾಗಲೂ ಪಾಕಿಸ್ತಾನದಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. 2024 ರಲ್ಲಿ ಪಾಕಿಸ್ತಾನಿಗಳು ಅತಿ ಹೆಚ್ಚು ಹುಡುಕಾಡಿದ ವ್ಯಕ್ತಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಸಹ ಸೇರಿದ್ದಾರೆ. ಗೂಗಲ್‌ನ ‘ಇಯರ್ ಇನ್ ಸರ್ಚ್ 2024’ ಪಾಕಿಸ್ತಾನಿಗಳ ಆಸಕ್ತಿ ನಿಜವಾಗಿಯೂ ಎಲ್ಲಿತ್ತು ಎಂಬುದನ್ನು ಗೂಗಲ್‌ ಸರ್ಚ್‌ ಒಳನೋಟವನ್ನು ನೀಡಿದೆ. ಅವರು ಬಿಗ್ ಬಾಸ್ … Continued

ಉತ್ತರ ಪ್ರದೇಶದ ಒಂದು ಮಸೀದಿ-4 ಅಂಗಡಿಗಳುಳ್ಳ ಜಾಗದ ವಿವಾದ : ಇದಕ್ಕೂ ಪಾಕಿಸ್ತಾನಕ್ಕೂ ಇದೆ ಸಂಬಂಧ…! ಏನದು ಗೊತ್ತಾ..?

ಮುಜಾಫರ್‌ ನಗರ: ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಆಸ್ತಿಯೊಂದು ಈಗ ವಿವಾದದ ಕೇಂದ್ರಬಿಂದುವಾಗಿದ್ದು, ಇದು ಪಾಕಿಸ್ತಾನದ ಪ್ರಥಮ ಪ್ರಧಾನಿಯ ಕುಟುಂಬಕ್ಕೂ ಕನೆಕ್ಷನ್‌ ಹೊಂದಿದೆ….! ಮುಜಾಫರ್‌ನಗರ ರೈಲು ನಿಲ್ದಾಣದ ಬಳಿ ಇರುವ ಮಸೀದಿ ಮತ್ತು ನಾಲ್ಕು ಅಂಗಡಿಗಳನ್ನು ಹೊಂದಿರುವ ಈ ಪ್ರಶ್ನಾರ್ಹ ಆಸ್ತಿಯನ್ನು ಇತ್ತೀಚೆಗೆ ತನಿಖೆ ನಡೆಸಿದ ನಂತರ “ಶತ್ರು ಆಸ್ತಿ” ಎಂದು ಘೋಷಿಸಲಾಗಿದೆ. … Continued

ಚಾಂಪಿಯನ್ಸ್ ಟ್ರೋಫಿ | “ಹೈಬ್ರಿಡ್ ಮಾದರಿ ಒಪ್ಪಿಕೊಳ್ಳಿ ಅಥವಾ…” : ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂತಿಮ ಅವಕಾಶ ನೀಡಿದ ಐಸಿಸಿ…!

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಪಾಕಿಸ್ತಾನಕ್ಕೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ನಡೆಸಲು ಗಡುವು ನೀಡಿದೆ ಎಂದು ವರದಿಯಾಗಿದೆ. ಭಾರತದ ಆಟಗಳನ್ನು ಬೇರೆಡೆ ನಡೆಸಲಾಗುವುದು ಅಥವಾ ಇದಕ್ಕೆ ಒಪ್ಪದಿದ್ದರೆ ನೀವು ಮುಂಬರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವಿರಿ ಎಂದು ಐಸಿಸಿ ಎಚ್ಚರಿಸಿದೆ ಎಂದು ವರದಿ ಹೇಳಿದೆ. ಭಾರತದ ತಂಡವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ … Continued

ವೀಡಿಯೊ..| ಪಾಕಿಸ್ತಾನ | ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು 25 ಅಡಿ ಎತ್ತರದ ಕಂಟೈನರ್‌ ನಿಂದ ಕೆಳಕ್ಕೆ ದೂಡಿದ ಸೇನೆ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆತಂಕಕಾರಿ ಘಟನೆಯೊಂದರಲ್ಲಿ ಭದ್ರತಾ ಪಡೆಗಳು ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು 25 ಅಡಿ ಎತ್ತರದ ಸರಕು ಸಾಗಣೆ ಕಂಟೈನರ್‌ ನಿಂದ ವ್ಯಕ್ತಿಯೊಬ್ಬನನ್ನು ಕೆಳಕ್ಕೆ ತಳ್ಳಿವೆ. ತನ್ನ ಅಧಿಕಾರಾವಧಿಯಲ್ಲಿ 140 ಮಿಲಿಯನ್ ರೂಪಾಯಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ 2023 ರ ಆಗಸ್ಟ್‌ನಿಂದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು … Continued

ಪಾಕಿಸ್ತಾನದಲ್ಲಿ ಹತ್ಯಾಕಾಂಡ | ಬಂದೂಕುಧಾರಿಗಳಿಂದ ಪ್ರಯಾಣಿಕರ ವಾಹನದ ಮೇಲೆ ಗುಂಡಿನ ದಾಳಿ ; ಕನಿಷ್ಠ 50 ಮಂದಿ ಸಾವು

ಕುರ್ರಂ (ಪಾಕಿಸ್ತಾನ) : ವಾಯವ್ಯ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ವಾಹನಗಳ ಮೇಲೆ ಬಂದೂಕುಧಾರಿಗಳು ಗುರುವಾರ ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ … Continued

ವೀಡಿಯೊ | ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ ಹಡಗನ್ನು 2 ತಾಸುಗಳ ಕಾಲ ಬೆನ್ನಟ್ಟಿ ಭಾರತದ 7 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಹಡಗು

ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್‌ಎ)ಯ ಹಡಗಿನಿಂದ ಬಂಧಿಸಲ್ಪಟ್ಟಿದ್ದ ಏಳು ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ರಕ್ಷಿಸಿದೆ. ನವೆಂಬರ್ 17 ರ ಭಾನುವಾರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮಧ್ಯಾಹ್ನ ಮೀನುಗಾರಿಕೆ ರಹಿತ ವಲಯ (ಎನ್‌ಎಫ್‌ಜೆಡ್) ಬಳಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೀನುಗಾರಿಕಾ ದೋಣಿ (ಐಎಫ್‌ಬಿ)ಯಿಂದ ಕಳುಹಿಸಲಾದ ತೊಂದರೆಯಲ್ಲಿದ್ದೇವೆ ಎಂಬ … Continued

ಭಾರತದ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಅದು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದಕ್ಕೆ ಸರಿಯಬಹುದು ; ವರದಿ

ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಪ್ರಕಾರ, 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ಪಾಕಿಸ್ತಾನ ಹಿಂದಕ್ಕೆ ಸರಿಯಬಹುದು. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಅದರ ಆತಿಥೇಯ ಹಕ್ಕುಗಳನ್ನು ಐಸಿಸಿ ಕಸಿದುಕೊಂಡರೆ ಮುಂದಾಗುವ ಸಮಸ್ಯೆ ಬಗೆಹರಿಯುವ ವರೆಗೆ ಯಾವುದೇ ಐಸಿಸಿ ಅಥವಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಾವಳಿಗಳಲ್ಲಿ … Continued

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್‌ ಭಗತ್‌ ಸಿಂಗ್‌ ಭಯೋತ್ಪಾದಕ ಎಂದ ಪಾಕಿಸ್ತಾನ…!

ಪಾಕಿಸ್ತಾನದ ಲಾಹೋರಿನ ಶಾದ್ಮನ್ ಚೌಕಕ್ಕೆ ಮರುನಾಮಕರಣ ಮಾಡಿ ಅಲ್ಲಿ ಭಗತ್ ಸಿಂಗ್ ಪ್ರತಿಮೆ ನಿರ್ಮಿಸುವ ಪಾಕಿಸ್ತಾನದ ಯೋಜನೆಯನ್ನು ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಅಭಿಪ್ರಾಯದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯ ಜಿಲ್ಲಾಡಳಿತವು ಲಾಹೋರ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಸಹಾಯಕ ಅಡ್ವೊಕೇಟ್ ಜನರಲ್ ಅಸ್ಗರ್ ಲೆಘರಿ ಅವರು ಶುಕ್ರವಾರ ಲಾಹೋರ್ ಹೈಕೋರ್ಟ್‌ಗೆ (ಎಲ್‌ಎಚ್‌ಸಿ) … Continued

ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗಲ್ಲ ಎಂದ ಭಾರತ : ಪಿಸಿಬಿಗೆ ಮಾಹಿತಿ ನೀಡಿದ ಐಸಿಸಿ

ನವದೆಹಲಿ: ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಭಾರತದ ಕ್ರಿಕೆಟ್‌ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ ಎಂಬುದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ದೃಢಪಡಿಸಿದೆ. “ಐಸಿಸಿ 2025 ರ ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎಂದು … Continued