ವಾಯವ್ಯ ಪಾಕಿಸ್ತಾನದಲ್ಲಿ ಎರಡು ಬುಡಕಟ್ಟುಗಳ ನಡುವೆ ಸಶಸ್ತ್ರ ಘರ್ಷಣೆ ; 36 ಸಾವು, 162 ಮಂದಿಗೆ ಗಾಯ

ಇಸ್ಲಾಮಾಬಾದ್‌ : ವಾಯುವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಜಿಲ್ಲೆಯಲ್ಲಿ ಒಂದು ತುಂಡು ಭೂಮಿಗಾಗಿ ಹೋರಾಡುತ್ತಿರುವ ಎರಡು ಬುಡಕಟ್ಟುಗಳ ನಡುವೆ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಮತ್ತು 162 ಇತರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಪ್ಪರ್ ಕುರ್ರಂ ಜಿಲ್ಲೆಯ ಬೊಶೆರಾ ಗ್ರಾಮದಲ್ಲಿ ಐದು ದಿನಗಳ ಹಿಂದೆ ಭಾರಿ ಘರ್ಷಣೆಗಳು ಪ್ರಾರಂಭವಾದವು … Continued

ವೀಡಿಯೊ..| ಭಾರತೀಯ ಎಂದು ಭಾವಿಸಿ ಅಭಿಮಾನಿ ಮೇಲೆ ಹಲ್ಲೆ ಮಾಡಲು ಮುಂದಾದ ಪಾಕ್‌ ಬೌಲರ್ ರೌಫ್‌ : ನಂತರ ಆಗಿದ್ದು….

ವಾಷಿಂಗ್ಟನ್: ಅಮೆರಿಕದಲ್ಲಿರುವ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್‌ ರೌಫ್‌, ಕ್ರಿಕೆಟ್‌ ಅಭಿಮಾನಿಯೊಬ್ಬರ ಮೇಲೆ ಹಲ್ಲೆ ಮಾಡಲು ಹೋದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ನಂತರ ಆ ತಂಡದ ಕೆಲ ಆಟಗಾರರು ಅಮೆರಿಕದಲ್ಲಿ ಸಮಯ ಕಳೆಯುತ್ತಿದ್ದು, ರೌಫ್‌ ಕೂಡ ತಮ್ಮ ಕುಟುಂಬದೊಂದಿಗೆ ಫ್ಲೊರಿಡಾದಲ್ಲಿ ತಂಗಿದ್ದಾರೆ. ಪತ್ನಿಯೊಂದಿಗೆ ವಿಹಾರಕ್ಕೆ ಹೋದ ವೇಳೆ … Continued

ಅಮೆರಿಕ v/s ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು ; ಲೀಗ್‌ ಹಂತದಲ್ಲೇ T20 ವಿಶ್ವಕಪ್‌ನಿಂದ ಹೊರಬಿದ್ದ ಪಾಕಿಸ್ತಾನ…!

ನ್ಯೂಯಾರ್ಕ್‌ : ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಎಡಬಿಡದೆ ಮಳೆಯಿಂದಾಗಿ ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಗುಂಪು ಪಂದ್ಯವ ರದ್ದಾದ ನಂತರ ಪಾಕಿಸ್ತಾನವು 2024 ರ ಐಸಿಸಿ (ICC) ಪುರುಷರ T20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಶುಕ್ರವಾರದ ಪಂದ್ಯ ರದ್ದಾಗಿದ್ದರಿಂದ ಅಮೆರಿಕ ಹಾಗೂ ಐರ್ಲಂಡ್‌ ತಂಡಗಳು ತಲಾ ಒಂದು ಪಾಯಿಂಟ್‌ … Continued

ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಹೆಚ್ಚಳ ; ಆದರೆ ದೇಶದ ಜಿಡಿಪಿ ಬೆಳವಣಿಗೆ ಕುಂಠಿತ : ಆರ್ಥಿಕ ಸಮೀಕ್ಷೆ

ಇತ್ತೀಚಿನ 2023-24ರ ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯು ದೇಶದ ಕತ್ತೆಗಳ ಸಂಖ್ಯೆಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಬಹಿರಂಗಪಡಿಸಿದೆ, ಅದು ಈಗ 59 ಲಕ್ಷ ತಲುಪಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 1.72 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಕತ್ತೆಗಳ ಸಂಖ್ಯೆ ಹೆಚ್ಚಾದರೂ ಪಾಕಿಸ್ತಾನದ ಒಟ್ಟಾರೆ ಆರ್ಥಿಕ ಸಾಧನೆ ನಿರೀಕ್ಷೆಗೂ ಮೀರಿ ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು … Continued

T20 ವಿಶ್ವಕಪ್ 2024 : ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಭಾರತದ ಸಹಾಯ ಬೇಕೇ ಬೇಕು…ಅದು ಹೇಗೆ..?

2024 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಮುಂದಿನ ದಾರಿ ದುರ್ಗಮವಾಗಿ ಕಾಣುತ್ತಿದೆ. ಕಾರನ ಬಾಬರ್ ಅಜಮ್ ನೇತೃತ್ವದ ಪಅಕಿಸ್ತಾನದ ತಂಡವು ತಮ್ಮ ಗ್ರೂಪ್ ಎ ಅಭಿಯಾನದಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ನಂತರ ಮುಂದಿನ ಹಂತಕ್ಕೆ ಹೋಗುವುದು ಕಷ್ಟಸಾಧ್ಯವಾಗಿ ಪಂದ್ಯಾವಳಿಯಿಂದ ಹೊರಬೀಳುವ ಅಂಚಿನಲ್ಲಿದೆ. ಸಹ-ಆತಿಥೇಯ ತಂಡವಾದ ಅಮೆರಿಕದ ವಿರುದ್ಧ ಆಘಾತಕಾರಿ ಸೋಲಿನ ನಂತರ, ನ್ಯೂಯಾರ್ಕ್‌ನಲ್ಲಿ … Continued

T20 ವಿಶ್ವಕಪ್ 2024 : ಜೂನ್‌ 2ರಿಂದ ಆರಂಭ ; ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

ಭಾರತವು ತನ್ನ ಮೊದಲ 2024ರ ಐಸಿಸಿ ಪುರುಷರ T20 ವಿಶ್ವಕಪ್ (T20 World Cup 2024) ಆರಂಭಕ್ಕೆ ಒಂದು ದಿನ ಮಾತ್ರ ಉಳಿದಿದ್ದು, ಜೂನ್‌ 2ರಿಂದ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದೆ. 2024ರ ಜೂನ್ 2ರ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡದ ವಿಶ್ವಕಪ್ ಅಭಿಯಾನ … Continued

ಟಿ20 ವಿಶ್ವಕಪ್ 2024 : ಭಾರತ -ಪಾಕಿಸ್ತಾನ ಪಂದ್ಯದ ವೇಳೆ ‘ಒಂಟಿ ತೋಳ’ ದಾಳಿಯ ಬೆದರಿಕೆ ಹಾಕಿದ ಐಸಿಸ್‌-ಕೆ ಭಯೋತ್ಪಾದಕ ಸಂಘಟನೆ…!

ನ್ಯೂಯಾರ್ಕ್: ಮುಂದಿನ ತಿಂಗಳು ಅಮೆರಿಕದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಐಸಿಸ್-ಕೆ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿಗೆ ಕರೆ ನೀಡಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭದ್ರತಾ ಎಚ್ಚರಿಕೆ ನೀಡಿದ್ದಾರೆ. ನಸ್ಸೌ ಕೌಂಟಿಯ ಕಾರ್ಯನಿರ್ವಾಹಕ ಬ್ರೂಸ್ ಬ್ಲೇಕ್‌ಮ್ಯಾನ್ ಮತ್ತು ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಅವರು, ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ … Continued

ಪಾಕಿಸ್ತಾನದ ತಪ್ಪಿನಿಂದಲೇ ಕಾರ್ಗಿಲ್‌ ಯುದ್ಧ ; ಭಾರತದ ಜತೆಗಿನ ಶಾಂತಿ ಒಪ್ಪಂದ ಉಲ್ಲಂಘಿಸಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ಮಾಜಿ ಪ್ರಧಾನಿ

ಲಾಹೋರ್: ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತದೊಂದಿಗೆ ನಾವು ಮಾಡಿಕೊಂಡಿದ್ದ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂಬುದನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಒಪ್ಪಿಕೊಂಡಿದ್ದಾರೆ. ಜನರಲ್ ಪರ್ವೇಜ್ ಮುಷರಫ್ ಅವರ ಕಾರ್ಗಿಲ್ ದುಸ್ಸಾಹಸವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ನವಾಜ್‌ ಷರೀಫ್ ಈ ಹೇಳಿಕೆ ನೀಡಿದ್ದಾರೆ. “ಮೇ 28, 1998 ರಂದು ಪಾಕಿಸ್ತಾನವು ಐದು ಪರಮಾಣು ಪರೀಕ್ಷೆಗಳನ್ನು … Continued

ವೀಡಿಯೊ…| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ…ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್…!

ನವದೆಹಲಿ : ಪಾಕಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸಬೇಕು, ಇಲ್ಲವಾದಲ್ಲಿ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ ನಂತರ ಟೀಕೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನವು ಅಣುಬಾಂಬ್‌ಗಳನ್ನು ಹೊಂದಿದ್ದು, ನಮ್ಮ ಸರ್ಕಾರಗಳು ಅವರನ್ನು ಕೆರಳಿಸಿದರೆ ಅವರು ಭಾರತದ ಮೇಲೆ ಅಣುಬಾಂಬ್‌ ಎಸೆಯಬಹುದು ಎಂದು ಅಯ್ಯರ್ ಹೇಳಿದ್ದಾರೆ. “ನೀವು ಅವರೊಂದಿಗೆ (ಪಾಕಿಸ್ತಾನದೊಂದಿಗೆ) ಮಾತನಾಡಬೇಕು. … Continued

ವೀಡಿಯೊ…| ಒಂದೇ ದಿನ ಸ್ವತಂತ್ರವಾದೆವು ; ನಾವೀಗ ಭಿಕ್ಷೆ ಬೇಡುತ್ತಿದ್ದೇವೆ…ಆದರೆ ಭಾರತ…: ಪಾಕಿಸ್ತಾನ ನಾಯಕನ ಹೇಳಿಕೆ ವೈರಲ್‌…

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನಗಳೆರಡೂ ಒಂದೇ ದಿನ ಸ್ವತಂತ್ರವಾದವು. ಆದರೆ ಇಂದು ಭಾರತ ಸೂಪರ್‌ ಪವರ್‌ ಆಗಲು ಕನಸು ಕಾಣುತ್ತಿರುವ ಹೊತ್ತಲ್ಲಿ ಪಾಕಿಸ್ತಾನವು ದಿವಾಳಿತನದಿಂದ ಹೊರಬರಲು ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ಥಾನದ ಧರ್ಮ ಗುರು, ಜೆಯುಐ-ಎಫ್ ಸಂಸದ ಮೌಲಾನಾ ಫ‌ಜ್ಲುರ್‌ ರೆಹಮಾನ್‌ ಹೇಳಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. … Continued