ಪಾಕಿಸ್ತಾನ: ಹಿಂದೂ ದೇಗುಲ ಪುನರ್‌ನಿರ್ಮಾಣಕ್ಕೆಸರ್ಕಾರದಿಂದ 3.48 ಕೋಟಿ ರೂ. ಬಿಡುಗಡೆ

ಪೇಶಾವರ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲವು ಸ್ಥಳೀಯ ಮೌಲ್ವಿಗಳು ಮತ್ತು ಇಸ್ಲಾಮಿಸ್ಟ್ ಪಕ್ಷದ ಜಮಿಯತ್ ಉಲೆಮಾ-ಇ-ಇಸ್ಲಾಂ ಸದಸ್ಯರ ನೇತೃತ್ವದ ಗುಂಪಿನಿಂದ ಹಾನಿಗೊಳಗಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕಿಸ್ತಾನದ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ 3.48 ಕೋಟಿ ರೂ. ಬಿಡುಗಡೆ ಮಾಡಿದೆ. ಶತಮಾನ ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ ‘ಸಮಾಧಿ’ ಮೇಲೆ ನಡೆದ ದಾಳಿಯನ್ನು … Continued

ಕೋವಿಡ್ -19 ನಿಗ್ರಹಕ್ಕೆ ಪಾಕಿಸ್ತಾನ, ಬಾಂಗ್ಲಾದೇಶವನ್ನೂ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಿದ ಬ್ರಿಟನ್‌

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಇಂಗ್ಲೆಂಡ್‌ಗೆ ಮತ್ತು ಅಲ್ಲಿಂದ ಪ್ರಯಾಣ ನಿಷೇಧಿಸಲಾಗಿರುವ ರಾಷ್ಟ್ರಗಳ “ಕೆಂಪು ಪಟ್ಟಿಗೆ” ಸೇರ್ಪಡೆಗೊಂಡ ನಾಲ್ಕು ಹೆಚ್ಚುವರಿ ದೇಶಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ. ಶುಕ್ರವಾರ ಘೋಷಿಸಲಾದ ನಿಷೇಧವು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ ಮತ್ತು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದಂತೆ ಆ ಪ್ರದೇಶಗಳಲ್ಲಿ ಕೋವಿಡ್ -19 ರ ಹೊಸ ರೂಪಾಂತರಗಳ … Continued

ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ … Continued

ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಹತ್ಯೆ

ಕರಾಚಿ: ಪಾಕಿಸ್ತಾನದ ಸಿಂಧ್‌ ಪ್ರಾಂತದಲ್ಲಿ ಹಿಂದೂ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಸ್ಥಳಿಯ ಸುದ್ದಿವಾಹಿನಿ ಹಾಗೂ ಉರ್ದು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜಯ್‌ ಲಾಲವಾನಿ ಎಂಬ ಪತ್ರಕರ್ತರನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಅವರು ಕ್ಷೌರದಂಗಡಿಯಲ್ಲಿ ಕುಳಿತ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. ಕೈ, ಹೊಟ್ಟೆ ಹಾಗೂ ಮೊಣಕಾಲಿಗೆ ಗುಂಡು … Continued

ಪಾಕ್‌ ಪ್ರಧಾನಿ ಇಮ್ರಾನ್‌ಗೆ ಕೊರೊನಾ ದೃಢ

ಇಸ್ಲಾಮಾಬಾದ್:‌ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಕೊವಿಡ್‌ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್‌ ಪರೀಕ್ಷೆಗೆ ಒಳಪಟ್ಟಿದ್ದು, ಈ ಕುರಿತಾದಂತೆ ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅವರು ಅವರು ಚೀನಾ ಲಸಿಕೆ ಪಡೆದಿದ್ದರು.ಎಂದು ಮಾಧ್ಯಮಗಳು ವರದಿ ಮಾಡಿವೆ.ಸದ್ಯ ಪಾಕಿಸ್ತಾನದಲ್ಲಿ ಇದೊಂದೆ ಲಸಿಕೆ ಲಭ್ಯವಿದೆ ಪಾಕಿಸ್ತಾನದ ಆರೋಗ್ಯ ಸಚಿವ ಫೈಸಲ್‌ ಸುಲ್ತಾನ್‌ ಈ ಕುರಿತಾದಂತೆ ಟ್ವೀಟ್‌ ಮಾಡಿದ್ದು, … Continued

ವಿಶ್ವದ ಸಂತಸವಾಗಿರುವ ದೇಶಗಳ ಪಟ್ಟಿ ಬಿಡುಗಡೆ : ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ಸಂತೋಷವಾಗಿದೆ..!

ವಿಶ್ವದಲ್ಲಿ ಅತ್ಯಂತ ಸಂತಸವಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ವಿಶ್ವಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿದ ವಿಶ್ವ ಸಂತೋಷ ವರದಿ 2021ರ ಪಟ್ಟಿಯಲ್ಲಿ ಫಿನ್ಲೆಂಡ್ ಅಗ್ರಸ್ಥಾನದಲ್ಲಿದ್ದು, 149 ರಾಷ್ಟ್ರಗಳ ಪೈಕಿ ಭಾರತ 139ನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಪಾಕಿಸ್ತಾನವು ಭಾರಕ್ಕಿಂತ ಹೆಚ್ಚು ಸಂತೋಷ ಇರುವ ರಾಷ್ಟ್ರವಾಗಿದೆ. ಯಾಕೆಂದರೆ ಅದು 105ನೇ ಸ್ಥಾನದಲ್ಲಿದೆ. ವಿಶ್ವದ 149 ದೇಶಗಳ ನಾಗರಿಕರು … Continued

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್‌ ಮಹಿಳೆಯರ ಮದುವೆಯಾಗುವವರಿಗೆ ಸೌದಿಯಲ್ಲಿ ಬಿಗಿ ನಿಯಮ: ವರದಿ

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ ಮಹಿಳೆಯರನ್ನು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದಲ್ಲಿ ವರದಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ. ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ … Continued

ಪಾಕಿಸ್ತಾನದಲ್ಲಿ ಅಹ್ಮದಿ ಮಸೀದಿ ಉರುಳಿಸಿದ ಮುಲ್ಲಾಗಳು..!

ಪಾಕಿಸ್ತಾನದ ಗುಜ್ರಾನ್‌ವಾಲಾ ಜಿಲ್ಲೆಯ ಗಾರ್ಮೋಲಾ ವಿರ್ಕನ್‌ ಗ್ರಾಮದಲ್ಲಿ ಉಗ್ರ ಮುಲ್ಲಾಗಳು ಅಹ್ಮದಿ ಮಸೀದಿಯನ್ನು ಹೊಡೆದುರುಳಿಸಿದ್ದಾರೆ. ಈ ವಿಧ್ವಂಸಕ ಕೃತ್ಯಕ್ಕೆ ಸ್ಥಳಿಯ ಪೊಲೀಸರು ಬೆಂಬಲ ನೀಡಿರುವುದು ವಿಶೇಷ. ಮಸೀದಿಯ ಗುಮ್ಮಟ ಹಾಗೂ ಮಿನಾರ್‌ಗಳನ್ನು ಜನಸಮೂಹ ನೆಲಸಮ ಮಾಡಿ ಸಂಭ್ರಮಾಚರಣೆ ಮಾಡಿದ ವಿಡಿಯೋ ಪಾಕಿಸ್ತಾನದಲ್ಲಿ ವೈರಲ್‌ ಆಗಿದೆ. ಈ ಕೃತ್ಯವನ್ನು ಹಲವು ಮುಖಂಡರು ಹಾಗೂ ಪತ್ರಕರ್ತರ ಖಂಡಿಸಿದ್ದಾರೆ. ಪಾಕಿಸ್ತಾನದ … Continued

ಎಫ್‌ಎಟಿಎಫ್‌ ಬೂದುಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

ಪಾಕಿಸ್ತಾನವನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನ “ಬೂದು ಪಟ್ಟಿ” ಯಲ್ಲಿ ಉಳಿಸಿಕೊಳ್ಳಲಾಗಿದೆ, ಗುರುವಾರ ನಡೆದ ಬಹುಪಕ್ಷೀಯ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನವು ತನ್ನ ಕಾರ್ಯತಂತ್ರದ ಪ್ರಮುಖ ನ್ಯೂನತೆಗಳನ್ನು ಪರಿಹರಿಸಲು ತನ್ನ ಕ್ರಿಯಾ ಯೋಜನೆಯಲ್ಲಿ ಉಳಿದಿರುವ ಮೂರು ವಿಷುಗಳನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮುಂದುವರಿಸಬೇಕು, ಅವುಗಳೆಂದರೆ: ಟಿಎಫ್ ತನಿಖೆಗಳು ಮತ್ತು ಕಾನೂನು ಕ್ರಮಗಳು, … Continued

ಪಾಕಿಸ್ತಾನ ಪ್ರಧಾನಿ ವಿಮಾನಕ್ಕೆ ತನ್ನ ವಾಯು ಪ್ರದೇಶ ಬಳಸಲು ಅವಕಾಶ ನೀಡಿದ ಭಾರತ

  ಶ್ರೀಲಂಕಾಕ್ಕೆ ಭೇಟಿ ನೀಡಲಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿಮಾನಕ್ಕೆ ಭಾರತೀಯ ವಾಯುಪ್ರದೇಶವನ್ನು ಬಳಸಲು ಭಾರತ ಅನುಮತಿ ನೀಡಿದೆ. ಮಂಗಳವಾರ (ಫೆ.೨೩ರಂದು) ಇಮ್ರಾನ್‌ ಖಾನ್ ಶ್ರೀಲಂಕಾಕ್ಕೆ ತಮ್ಮ ಮೊದಲ ಭೇಟಿ ನೀಡಲಿದ್ದಾರೆ. ಭಾರತದೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಲು.ಶ್ರೀಲಂಕಾವು ಸಂಸತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿಗದಿತ ಭಾಷಣವನ್ನು ರದ್ದುಗೊಳಿಸಿತ್ತು, ಕಾಶ್ಮೀರದಲ್ಲಿ ನಡೆದ ಮಾನವ … Continued