ವೀಡಿಯೊ…| ಹೋಂ ವರ್ಕ್‌ ಮಾಡದ್ದಕ್ಕೆ ಶಾಲೆಯಲ್ಲಿ 7 ವರ್ಷದ ಬಾಲಕನ ತಲೆ ಕೆಳಗಾಗಿ ನೇತುಹಾಕಿ ಥಳಿತ…!

ಹರಿಯಾಣದ ಪಾಣಿಪತ್‌ನ (Panipat) ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಹೋಮ್ ವರ್ಕ್ (Home Work) ಮಾಡದ ಕಾರಣಕ್ಕೆ ಶಿಕ್ಷಕಿಯೊಬ್ಬಳು ಎರಡನೇ ತರಗತಿಯ ವಿದ್ಯಾರ್ಥಿಯನ್ನು ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತುಹಾಕಿ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗಸ್ಟ್ 13 ರಂದು … Continued

ಶಾಲೆಯಲ್ಲೇ ಡ್ರಗ್ಸ್‌ ತಯಾರಿಸುತ್ತಿದ್ದ ನಿರ್ದೇಶಕ…! 7 ಕೆಜಿ ಆಲ್ಪ್ರಜೋಲಂ, 21 ಲಕ್ಷ ರೂ. ಹಣ ಪತ್ತೆ

ಹೈದರಾಬಾದ್: ಹೈದರಾಬಾದ್‌ನ ಖಾಸಗಿ ಶಾಲೆಯ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಜಾಲವನ್ನು ಪೊಲೀಸರು ಭೇದಿಸಿದ್ದು, ಅದರ ನಿರ್ದೇಶಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮೇಧಾ ಶಾಲೆಯ ನಿರ್ದೇಶರಾದ ಮಲೇಲಾ ಜಯಪ್ರಕಾಶ ಗೌಡ್ ಎಂಬಾತ ತರಗತಿ ಕೊಠಡಿಗಳು ಮತ್ತು ನಿರ್ಬಂಧಿತ ಪ್ರದೇಶಗಳನ್ನು ರಹಸ್ಯವಾಗಿ ಆಲ್‌ಪ್ರಜೋಲಮ್ ಡ್ರಗ್ಸ್‌ ಉತ್ಪಾದನೆ ಮಾಡುವ ಘಟಕವಾಗಿ ಪರಿವರ್ತಿಸಿದ್ದಾನೆ, ಇದು ನಿಷೇಧಿತ ಡ್ರಗ್ಸ್‌ ಆಗಿದೆ. ತೆಲಂಗಾಣ … Continued

ವೀಡಿಯೊಗಳು..| ಢಾಕಾ ಶಾಲೆಯ ಮೇಲೆ ಬಿದ್ದ ಬಾಂಗ್ಲಾದೇಶ ವಾಯುಪಡೆ ಯುದ್ಧ ವಿಮಾನ ; 20 ಜನರು ಸಾವು, 170ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ : ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವೊಂದು ಸೋಮವಾರ ಢಾಕಾದ ಶಾಲಾ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಹಾಗೂ 171 ಜನರು ಗಾಯಗೊಂಡಿದ್ದಾರೆ. ಚೀನಾ ನಿರ್ಮಿತ ಎಫ್-7 ಜೆಟ್ ವಿಮಾನ ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿದೆ. ಶಿಕ್ಷಣ ಸಂಸ್ಥೆಯಲ್ಲಿ ತರಗತಿಗಳು ನಡೆಯುತ್ತಿರುವಾಗ ಈ ಅಪಘಾತ … Continued

ಶಾಲೆಯ ಟಾಯ್ಲೆಟ್ಟಿನಲ್ಲಿ ರಕ್ತದ ಕಲೆ ಕಂಡುಬಂದಿದ್ದಕ್ಕೆ ಮುಟ್ಟಾದ ಹುಡುಗಿಯ ಪತ್ತೆಗೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದರು…!!

ಥಾಣೆ : ಋತುಮತಿಯಾದ (Periods) ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚುವ ಸಲುವಾಗಿ ಶಿಕ್ಷಕರು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ, ಒಳಉಡುಪುಗಳನ್ನು ಬಿಚ್ಚಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharastra) ಥಾಣೆಯ ಶಹಪೂರದ ಶಾಲೆಯೊಂದರಲ್ಲಿ ನಡೆದಿದೆ. ಈ ಸಂಬಂಧ ಥಾಣೆಯಲ್ಲಿರುವ ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ (ಜುಲೈ 10) … Continued

ಇದೆಂಥ ಪವಾಡ…| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ…! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಸಕಂಡಿ: ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಗಣಿತ ಮತ್ತು ಮಾನವಶಕ್ತಿಯ ಪವಾಡವೇ ನಡೆದಿದೆ ಎಂದು ವರದಿಯಾಗಿದೆ. ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಒಂದು ಗೋಡೆಗೆ ನಾಲ್ಕು ಲೀಟರ್ ಬಣ್ಣವನ್ನು ಹಚ್ಚಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಇದರ ಬಿಲ್‌ ಈಗ ಆನ್ಲೈನ್‌ನಲ್ಲಿ ವೈರಲ್‌ ಆದ ನಂತರ ವ್ಯಾಪಕ ಟೀಕೆಗೆ ಗುರಿಯಾಗಿದೆ. … Continued

ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಬಂದ್ ; ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾಗಿರುವ ಬಗ್ಗೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿನ ಶಿಕ್ಷಣ ಇಲಾಖೆ ಅಪರ ಆಯುಕ್ತರು ಇಲಾಖೆಗೆ ದೂರು ನೀಡಿದ್ದರು. … Continued

ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದುರಂತ ಘಟನೆಯೊಂದರಲ್ಲಿ, ತಮಿಳುನಾಡಿನ ರಾಣಿಪೇಟ್‌ನಲ್ಲಿ 9 ನೇ ತರಗತಿಯ ವಿದ್ಯಾರ್ಥಿ ತರಗತಿಯ ಸಮಯದಲ್ಲಿ ಪಾಠ ಕೇಳುತ್ತಿರುವಾಗ ಕುಳಿತಲ್ಲೇ ಕುಸಿದು ಸಾವಿಗೀಡಾಗಿದ್ದಾರೆ. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಡಿಸೆಂಬರ್ 10ರಂದು ಬೆಳಿಗ್ಗೆ 11:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 14 ವರ್ಷದ ಮೃತ ವಿದ್ಯಾರ್ಥಿನಿ ಅದ್ವಿತಾ … Continued

ಎಸ್‌.ಎಂ. ಕೃಷ್ಣ ನಿಧನ ; ನಾಳೆ (ಡಿ.11) ರಾಜ್ಯದಲ್ಲಿ ರಜೆ ಘೊಷಣೆ : 3 ದಿನ ಶೋಕಾಚರಣೆ

ಬೆಂಗಳೂರು: ಇಂದು, ಮಂಗಳವಾರ ಮುಂಜಾನೆ ಮೃತರಾದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರ ಗೌರವಾರ್ಥ ರಾಜ್ಯ ಸರ್ಕಾರ (Karnataka Government) ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಹಾಗೂ ನಾಳೆ ಬುಧವಾರ (ಡಿಸೆಂಬರ್ 11) ರಜೆ (Government Holiday) ಘೋಷಣೆ ಮಾಡಿದೆ. ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಬುಧವಾರ … Continued

2025ನೇ ಸಾಲಿನ ಕರ್ನಾಟಕದ ಶಾಲೆಗಳ ರಜಾ ದಿನಗಳ ಪಟ್ಟಿ ಬಿಡುಗಡೆ

ಬೆಂಗಳೂರು : ಕರ್ನಾಟಕ ಸರ್ಕಾರವು 2025-26ನೇ ಸಾಲಿನ ರಾಜ್ಯ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಘೋಷಿಸಲಿದೆ. ಇದರಲ್ಲಿ ಬೇಸಿಗೆ ರಜೆ, ದಸರಾ ರಜೆಗಳು ಸೇರಿವೆ. ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ … Continued

ಭಾರಿ ಮಳೆ ; ಚೆನ್ನೈ, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಚೆನ್ನೈ: ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು, ಮಂಗಳವಾರ (ನವೆಂಬರ್‌ 12) ಚೆನ್ನೈನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪಕ್ಕದ ತಿರುವಳ್ಳೂರು ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಶಾಲೆಗಳಿಗೆ ಮಳೆ ರಜೆ ಘೋಷಿಸಲಾಗಿದೆ. ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರ್, ತಂಜಾವೂರು ಮತ್ತು ವಿಲ್ಲುಪುರಂ ಸೇರಿದಂತೆ ಆರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ … Continued