ಕುಮಟಾ | ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದನ್ನು ಖಂಡಿಸಿ ಪ್ರತಿಭಟನೆ ; ಇದು ಷಡ್ಯಂತ್ರ-ದಿನಕರ ಶೆಟ್ಟಿ

ಕುಮಟಾ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡದ ಕುಮಟಾದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ನಂತರ ತಪ್ಪಿತಸ್ಥರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುಮಟಾ ಶಾಸಕ ದಿನಕರ ಶೆಟ್ಟಿ ಾವರು, … Continued

ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ : ಶಿವಮೊಗ್ಗದ ನಿವಾಸಿ ಸಾವು, ಐವರು ಪ್ರವಾಸಿಗರಿಗೆ ಗಾಯ

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಪತ್ನಿ ಮತ್ತು ಮಗ ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ (47) ಅವರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಐದು ಮಂದಿಗೆ ಗಂಭೀರ ಗಾಯಗಳಾಗಿವೆ. ಇವರ ಪತ್ನಿ ಪಲ್ಲವಿ … Continued

ಬೆಂಗಳೂರು ರಸ್ತೆ ಜಗಳ ಪ್ರಕರಣಕ್ಕೆ ಟ್ವಿಸ್ಟ್ : ಐಎಎಫ್ ಅಧಿಕಾರಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲು

ಬೆಂಗಳೂರು : ಸಾಮಾಜಿಕ ಮಾಧ್ಯಮ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾನೆಂದು ಹೇಳಿಕೊಂಡಿದ್ದ ಭಾರತೀಯ ವಾಯುಪಡೆಯ ಅಧಿಕಾರಿ ಶಿಲಾದಿತ್ಯ ಬೋಸ್ ವಿರುದ್ಧ, ಬೆಂಗಳೂರಿನ ರಸ್ತೆ ಜಗಳದ ಪ್ರಕರಣದಲ್ಲಿ ‘ಕೊಲೆ ಯತ್ನ’ ಮತ್ತು ಕನ್ನಡ ಮಾತನಾಡದ ಕಾರಣ ಬೈಕ್‌ ಸವಾರ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿದ ಆರೋಪದ ಮೇಲೆ ಪ್ರಕರಣ … Continued

ಹೊರಗೆ ಸಿಗು…ಮನೆಗೆ ಹೇಗೆ ಹೋಗ್ತೀಯಾ ನೋಡ್ತೀನಿ’: ನ್ಯಾಯಾಲಯದ ಕೋಣೆಯೊಳಗೆ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ನಿವೃತ್ತ ಶಿಕ್ಷಕ…

ನವದೆಹಲಿ: ಚೆಕ್ ಬೌನ್ಸ್ (cheque bounce) ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ನಡೆಸಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯ ತೀರ್ಪು ನೀಡಿದ್ದಕ್ಕೆ ಕುಪಿತಗೊಂಡ ಶಿಕ್ಷೆಗೊಳಗಾದ ವ್ಯಕ್ತಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಏಪ್ರಿಲ್ 2 ರಂದು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ … Continued

ವೀಡಿಯೊ..| ಸಿಂಹದ ಬಾಯಿಂದ ತನ್ನ ಕರುವನ್ನು ರಕ್ಷಿಸಲು ಹೋರಾಡಿ ಸಿಂಹಗಳ ಗುಂಪನ್ನು ಸೋಲಿಸಿದ ಒಂಟಿ ಕಾಡೆಮ್ಮೆ-ವೀಕ್ಷಿಸಿ

ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಸಿಂಹ ಎಂದು ಯಾಕೆಂದರೆ ಈ ಪ್ರಾಣಿ ತನಗಿಂತ ದೊಡ್ಡ ಜೀವಿಗಳನ್ನು ಬೇಟೆಯಾಡುತ್ತದೆ. ಒಮ್ಮೆ ಅದರ ಉಗುರುಗಳಲ್ಲಿ ಸಿಕ್ಕಿಬಿದ್ದರೆ, ತಪ್ಪಿಸಿಕೊಳ್ಳುವುದು ಅಸಾಧ್ಯ. ಆದಾಗ್ಯೂ, ಸಿಂಹಗಳು ಸಹ ಕೆಲವೊಮ್ಮೆ ಸೋಲನ್ನು ಎದುರಿಸಬೇಕಾಗುತ್ತದೆ. ಸಿಂಹಗಳ ಹಿಂಡನ್ನು ಕಾಡೆಮ್ಮೆಯೊಂದು ಏಕಾಂಗಿಯಾಗಿ ಹೆದರಿಸಿದ ಘಟನೆಯ ವೀಡಿಯೊವೊಂದು ವೈರಲ್‌ ಆಗಿದೆ. ಅದು ತನ್ನ ಕರುವನ್ನು … Continued

ಇಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆ (Karnataka Rains) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಹಿನ್ನೆಲೆಯಲ್ಲಿ ತೆಲಂಗಾಣ, ತಮಿಳುನಾಡು, ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಏಪ್ರಿಲ್‌ 22ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ, ದಕ್ಷಿಣ … Continued

ಪೋಪ್‌ ಫ್ರಾನ್ಸಿಸ್‌ ನಿಧನಕ್ಕೆ ಭಾರತದಲ್ಲಿ ಮೂರು ದಿನ ಶೋಕಾಚರಣೆ

ನವದೆಹಲಿ: ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಕೇಂದ್ರ ಸರ್ಕಾರ ಸೋಮವಾರ ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ. ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ) ಶೋಕಾಚರಣೆ ಇರಲಿದೆ. ನಂತರ ಪೋಪ್‌ ಅಂತ್ಯಕ್ರಿಯೆ ನಡೆಯಲಿರುವ ದಿನದಂದು ಒಂದು ದಿನದ ಶೋಕಾಚರಣೆ ಇರಲಿದೆ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ. … Continued

ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣ : ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ :  ಡಿನೋಟಿಫಿಕೇಷನ್  ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸೆಕ್ಷನ್ 17Aಗೆ ಸಂಬಂಧಿಸಿದ ಸ್ಪಷ್ಟನೆಗಾಗಿ ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ. ನ್ಯಾ. ಜೆ.ಬಿ ಪರ್ದಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠ ವಿಸ್ತೃತ ವಿಚಾರಣೆ ನಡೆಸಿತ್ತು. ಸೋಮವಾರ ಈ ಬಗ್ಗೆ ತೀರ್ಪು ನೀಡಿದ … Continued

ಕನ್ನಡಿಗನಿಂದ ಹಲ್ಲೆ ಎಂಬ ವಿಂಗ್ ಕಮಾಂಡರ್‌ ಆರೋಪಕ್ಕೆ ಟ್ವಿಸ್ಟ್‌ ; ಬೈಕ್ ಸವಾರನ ಮೇಲೆ ಆತ ಹಲ್ಲೆ ಮಾಡಿದ್ದ ವೀಡಿಯೊ ವೈರಲ್‌…!

ಬೆಂಗಳೂರು : ಬೆಂಗಳೂರಿನಲ್ಲಿ ಐಎಎಫ್ ಅಧಿಕಾರಿ ಮೇಲೆ ಕನ್ನಡಿಗ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಬೈಕ್‌ ಸವಾರನ ಮೇಲೆ ವಿಂಗ್‌ ಕಮಾಂಡರ್‌ ಮಾರಣಾಂತಿಕ ಹಲ್ಲೆ ಮಾಡಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬೈಕ್ ಸವಾರನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದು … Continued

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ ಹತ್ಯೆ ಪ್ರಕರಣ : ಪತ್ನಿ-ಪುತ್ರಿ ವಿರುದ್ಧ ದೂರು ದಾಖಲು, ಪತ್ನಿಯ ಬಂಧನ

ಬೆಂಗಳೂರು : ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಪುತ್ರಿಯ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ನಂತರ ಪತ್ನಿ ಪಲ್ಲವಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಓಂ ಪ್ರಕಾಶ ಅವರ ಪುತ್ರ ಕಾರ್ತಿಕೇಶ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ, ಸಹೋದರಿ ಕೃತಿ ವಿರುದ್ಧ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಬಿಎನ್‌ಎಸ್‌ … Continued