ಮೂಲೆಗುಂಪು-ಹತಾಶ ; ʼಸಿಂಧೂ ಜಲ ಒಪ್ಪಂದ ಸಸ್ಪೆಂಡ್‌ʼ ನಿರ್ಧಾರ ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತಕ್ಕೆ ಪತ್ರ ಬರೆದ ಪಾಕಿಸ್ತಾನ

ನವದೆಹಲಿ: ಪಾಕಿಸ್ತಾನದ ಭೈಒತ್ಪಾದಕ ನೆಲೆಗಳ ವಿರುದ್ಧ ಭಾರತದ ಆಪರೇಶನ್‌ ಸಿಂಧೂರ ಕಾರ್ಯಾಚರಣೆಯ ನಂತರ ಕದನ ವಿರಾಮಕ್ಕೆ ಒಪ್ಪಿದ ಕೆಲವೇ ದಿನಗಳಲ್ಲಿ, ಪಾಕಿಸ್ತಾನವು ಈಗ ಭಾರತಕ್ಕೆ ಪತ್ರ ಬರೆದಿದೆ. ಹಾಗೂ ಭಾರತವು ಸ್ಥಗಿತಗೊಳಿಸಿರುವ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ತನ್ನ ಪ್ರದೇಶಕ್ಕೆ ನದಿಗಳ ನೀರಿನ ಹರಿವನ್ನು ಪುನರಾರಂಭಿಸುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತವು … Continued

ಪಾಕಿಸ್ತಾನ ತುಂಡಾಗುತ್ತಾ..? ಪಾಕ್‌ ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚ್ ನಾಯಕರು…! ಮಾನ್ಯತೆ ನೀಡಲು ಭಾರತ, ವಿಶ್ವಸಂಸ್ಥೆಗೆ ಒತ್ತಾಯ

ಕ್ವೆಟ್ಟಾ: ದಶಕಗಳ ಕಾಲದ ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಉಲ್ಲೇಖಿಸಿ, ಬಲೂಚಿಸ್ತಾನ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಿದೆ ಎಂದು ಬಲೂಚಿಸ್ತಾನ ನಾಯಕ ಮೀರ್ ಯಾರ್ ಬಲೂಚ್ ಘೋಷಿಸಿದ್ದಾರೆ. ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್‌ಗಳು ಮತ್ತು ಬುದ್ಧಿಜೀವಿಗಳು ಬಲೂಚಿಸ್ತಾನದವರನ್ನು “ಪಾಕಿಸ್ತಾನಿಗಳು” ಎಂದು ಕರೆಯುವುದು ಬೇಡ ಎಂದು ಒತ್ತಾಯಿಸಿದ್ದಾರೆ. ನಾವು ಪಾಕಿಸ್ತಾನದವರಲ್ಲ … Continued

ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ನಿಂದ 6,000 ಉದ್ಯೋಗಿಗಳ ವಜಾ : ಎಐ (AI) ನಿರ್ದೇಶಕರಿಗೂ ಉದ್ಯೋಗ ನಷ್ಟ

ಇತ್ತೀಚಿನ ವಜಾಗೊಳಿಸುವಿಕೆಯಲ್ಲಿ, ಟೆಕ್‌ ದೈತ್ಯ ಮೈಕ್ರೋಸಾಫ್ಟ್ ಕಂಪನಿ ಸುಮಾರು 6,000 ಉದ್ಯೋಗಿಗಳನ್ನು ಅಥವಾ ಅದರ ಒಟ್ಟು ಉದ್ಯೋಗಿಗಳಲ್ಲಿ 3% ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದೆ. ಅನೇಕ ಉದ್ಯೋಗಿಗಳನ್ನು ತಕ್ಷಣವೇ ಹೊರಹೋಗುವಂತೆ ಸೂಚಿಸಲಾಗಿದೆ. “ನಮ್ಮನ್ನು ತಕ್ಷಣ ಕೆಲಸ ನಿಲ್ಲಿಸಲು ಮತ್ತು ಕಚೇರಿಯಿಂದ ಹೊರಗೆ ಹೋಗಲು (ಅಧಿಸೂಚನೆ) ಸೂಚಿಸಲಾಯಿತು. ಆದರೆ ನಾನು ಸ್ವಲ್ಪ ಸಮಯ ಇರಲು ನಿರ್ಧರಿಸಿದೆ – … Continued

ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

ಭೋಪಾಲ್‌ : ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರʼದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ನೀಡಿದ ವಿವಾದಾತ್ಮಕ ಹೇಳಿಕೆ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ. ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು … Continued

ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ…!

ನವದೆಹಲಿ: ನವದೆಹಲಿ: ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದ ನಂತರ, PL-15 ಕ್ಷಿಪಣಿಯನ್ನು ತಯಾರಿಸುವ ಚೀನಾದ ರಕ್ಷಣಾ ಕಂಪನಿಯಾದ ಝುಝೌ ಹಾಂಗ್ಡಾ ಎಲೆಕ್ಟ್ರಾನಿಕ್ಸ್ ಕಾರ್ಪ್ ಲಿಮಿಟೆಡ್‌ನ ಷೇರುಗಳು ಮಂಗಳವಾರ ಶೇ. 6.42 ರಷ್ಟು ಕುಸಿದು 37.33 ಯುವಾನ್‌ಗೆ ತಲುಪಿದೆ. ಟರ್ಕಿಯ ಕಂಪನಿಗಳ ಷೇರುಗಳಲ್ಲಿ ಕುಸಿತ ಕಂಡಿದೆ ಎಂದು … Continued

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ : ಶೇ.95.6 ಅಂಕ ಗಳಿಸಿ ಅದ್ಭುತ ಸಾಧನೆ ಮಾಡಿದ ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿ..

ಚಂಡೀಗಢ : ದೃಢನಿಶ್ಚಯದ ಅದ್ಭುತ ಸ್ಪೂರ್ತಿದಾಯಕ ಸಾಧನೆಯಲ್ಲಿ, ಆಸಿಡ್ ದಾಳಿಯಿಂದ ಬದುಕುಳಿದ ಮತ್ತು ಆದರೆ ದೃಷ್ಟಿ ಕಳೆದುಕೊಂಡ ಚಂಡೀಗಢದ 17 ವರ್ಷದ ಕಾಫಿ ಎಂಬ ವಿದ್ಯಾರ್ಥಿನಿ ಸಿಬಿಎಸ್‌ಇ (CBSE) 12ನೇ ತರಗತಿಯ ಪರೀಕ್ಷೆಯಲ್ಲಿ ತನ್ನ ಶಾಲೆಗೆ ಅಗ್ರಸ್ಥಾನ ಪಡೆದಿದ್ದಾಳೆ, ಮಾನವಿಕ ವಿಭಾಗದಲ್ಲಿ ಶೇ. 95.6 ಅಂಕಗಳನ್ನು ಗಳಿಸಿದ್ದಾಳೆ…! ಕಾಫಿಯ ಜೀವನವು ಗಮನಾರ್ಹ ಧೈರ್ಯದಿಂದ ಕೂಡಿದ್ದು, ಅವರು … Continued

ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕಾರವಾರ: ಉತ್ತರ ಜಿಲ್ಲೆಯ ಭಟ್ಕಳ ತಾಲೂನಿಲ್ಲಿ ನಡೆದ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯೊಬ್ಬನಿಗೆ ಮರಣ ದಂಡನೆ, ಇನ್ನೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಭಟ್ಕಳ ತಾಲೂಕಿನ ಹಾಡವಳ್ಳಿಯ ಗ್ರಾಮದ ವಿನಯ ಶ್ರೀಧರ ಭಟ್ಟನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆತನ ತಂದೆ ಶ್ರೀಧರ ಭಟ್ಟನಿಗೆ … Continued

ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

ನವದೆಹಲಿ: ಕಳೆದ ತಿಂಗಳು ಭಾರತ-ಪಾಕಿಸ್ತಾನದ ಮಧ್ಯದ ಅಂತಾರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ ಪಾಕಿಸ್ತಾನ ರೇಂಜರ್‌ಗಳಿಂದ ಬಂಧಿಸಲ್ಪಟ್ಟ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಯೋಧ ಪೂರ್ಣಂಕುಮಾರ ಶಾ ಅವರನ್ನು ಇಂದು, ಬುಧವಾರ ಅಟ್ಟಾರಿಯ ಚೆಕ್ ಪೋಸ್ಟ್‌ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಏಪ್ರಿಲ್ 23, 2025 ರಿಂದ ಪಾಕಿಸ್ತಾನ ರೇಂಜರ್‌ಗಳ ವಶದಲ್ಲಿದ್ದ ಬಿಎಸ್‌ಎಫ್ ಜವಾನ್ ಪೂರ್ಣಂಕುಮಾರ ಶಾ … Continued

ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ…?

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಲವಾರು ವಾಯುನೆಲೆಗಳು ಮತ್ತು ಇತರ ಮಿಲಿಟಿರಿ ನೆಲೆಗಳು ಹಾನಿಗೊಳಗಾದವು. ಅದರ ನಂತರ ಪಾಕಿಸ್ತಾನ ಅಮೆರಿಕಕ್ಕೆ ಮಧ್ಯಪ್ರವೇಶಿಸುವಂತೆ ದುಂಬಾಲು ಬಿದ್ದ ನಂತರ ಕದನ ವಿರಾಮ ಘೋಷಣೆಯಾಯಿತು. ಅಮೆರಿಕ ಈ ಕದನ ವಿರಾಮದ ಕ್ರೆಡಿಟ್‌ … Continued

ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

ನವದೆಹಲಿ: ವಾಡಿಕೆಗಿಂತ ಮುಂಚಿತವಾಗಿ ನೈಋತ್ಯ ಮಾನ್ಸೂನ್ ಆಗಮಿಸುತ್ತಿದ್ದು ಈಗಾಗಲೇ ಮಾನ್ಸೂನ್ ಮಾರುತಗಳು ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪ ತಲುಪಿವೆ ಎಂದು ಕೇಂದ್ರ ಹವಾಮಾನ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ. ಮಂಗಳವಾರ ನೈಋತ್ಯ ಮಾನ್ಸೂನ್ ಮಾರುತಗಳು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಉತ್ತರ ಅಂಡಮಾನ್ ಸಮುದ್ರದ … Continued