ಒಣ ಹಾಕಿದ್ದ ಬಟ್ಟೆ ತೆಗೆಯಲು ಹೋದ ದಂಪತಿಗೆ ವಿದ್ಯುತ್‌ ತಗುಲಿ ಸಾವು

ಶಿವಮೊಗ್ಗ: ಒಣ ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ತಗುಲಿ ದಂಪತಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕೃಷ್ಣಪ್ಪ (53) ವಿನೋದಾ (43) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಮನೆಯ ಬಳಿಯ ತಂತಿಯ ಮೇಲೆ ಒಣಗಿಸಿದ್ದ ಬಟ್ಟೆಯನ್ನು ತೆಗೆಯಲು ಹೋದ ಸಮಯದಲ್ಲಿ … Continued

ಪರಾರಿಯಾಗುತ್ತಿದ್ದ ಕೊಲೆ ಆರೋಪಿ ಹಿಡಿಯಲು ಕಾರಿನ ಬಾಗಿಲಿಗೆ ನೇತಾಡಿ ತಡೆಯಲು ಯತ್ನಿಸಿದ ಪೊಲೀಸ್‌ ಅಧಿಕಾರಿ; ವೀಡಿಯೊ ವೈರಲ್‌

ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ತಿರುಪತಿ ಹೆದ್ದಾರಿಯಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯನ್ನು ಬಂಧಿಸಲು ಪೊಲೀಸ್‌ ಅಧಿಕಾರಿಯೊಬ್ಬರು ಚಲಿಸುತ್ತಿದ್ದ ಕಾರಿನ ಬಾಗಿಲೆಗೆ ಜೋತುಬಿದ್ದು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಸಾಹಸದ ವೀಡಿಯೊ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಈ ವೀಡಿಯೊ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಆರೋಪಿ ವ್ಯಕ್ತಿ ಅಲಗುರಾಜ ಎಂಬಾತ … Continued

ರತನ್ ಟಾಟಾಗೆ ಹೆಮ್ಮೆ ತಂದ ತಮ್ಮ…! ಭಾರತದ ನಂ.1 ಮೌಲ್ಯಯುತ ಬ್ರ್ಯಾಂಡ್ ಆದ ಟಾಟಾ ಗ್ರುಪ್‌ ; ಬ್ರ್ಯಾಂಡ್ ಮೌಲ್ಯ ಎಷ್ಟು ಗೊತ್ತೆ…?

ನವದೆಹಲಿ; 2025ರ ಬ್ರಾಂಡ್ ಫೈನಾನ್ಸ್ ಇಂಡಿಯಾ 100 ವರದಿಯ ಪ್ರಕಾರ, ಟಾಟಾ ಗ್ರೂಪ್ ಬ್ರ್ಯಾಂಡ್ ಮೌಲ್ಯಮಾಪನದಲ್ಲಿ $30 ಬಿಲಿಯನ್ ಗಡಿಯನ್ನು ದಾಟಿದ ಮೊದಲ ಭಾರತೀಯ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಶೇ.10 ರಷ್ಟು ಏರಿಕೆಯೊಂದಿಗೆ, ಗುಂಪಿನ ಬ್ರಾಂಡ್ ಮೌಲ್ಯವು ಈಗ $31.60 ಬಿಲಿಯನ್ ಆಗಿದೆ. ಈ ಮೈಲಿಗಲ್ಲು ಭಾರತೀಯ ಬ್ರ್ಯಾಂಡ್‌ಗಳ ಬೆಳೆಯುತ್ತಿರುವ ಜಾಗತಿಕ … Continued

ಕಾರಿನಲ್ಲಿ ಕುಳಿತಿದ್ದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಜಗ್ಗು ತಾಯಿ, ಮತ್ತೊಬ್ಬನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಂಜಾಬ್‌ನ ಬಟಾಲಾದಲ್ಲಿ ಗುರುವಾರ ಸಂಜೆ ನಡೆದ ಘಟನೆಯಲ್ಲಿ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಜಗ್ಗು ಭಗವಾನಪುರಿಯಾ ಅವರ ತಾಯಿ ಹರ್ಜಿತ್ ಕೌರ್ ಮತ್ತು ಅವರ ಜೊತೆಗಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬಟಾಲಾದ ಸಿವಿಲ್ ಲೈನ್ಸ್ ಪ್ರದೇಶದ ಅಡಿಯಲ್ಲಿ ಬರುವ ಖಾಡಿಯನ್ ರಸ್ತೆಯಲ್ಲಿ ಗುರುವಾರ ರಾತ್ರಿ 9:30 ರ … Continued

ವಿದ್ಯುತ್ ಇಲ್ಲ ಎಂದು ಹೇಳಲು ಹೋದ ವಸತಿ ಸಮುಚ್ಚಯದ ನಿವಾಸಿಗಳಿಗೆ ದೊಣ್ಣೆಯಿಂದ ಹೊಡೆದ ಕಾವಲುಗಾರರು, ಸಿಬ್ಬಂದಿ ; ವೀಡಿಯೊ ವೈರಲ್‌

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಬಹುಮಹಡಿ ವಸತಿ ಸಮುಚ್ಚಯದಲ್ಲಿ ವಾಸಿಸುವ ನಿವಾಸಿಗಳು ವಿದ್ಯುತ್ ಕಡಿತದ ಬಗ್ಗೆ ದೂರು ನೀಡಿದ ನಂತರ ಅವರನ್ನು ಒದ್ದು, ದೊಣ್ಣೆಯಿಂದ ಹೊಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ ಇಕೋವಿಲೇಜ್-1 ಸೊಸೈಟಿಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಾಚ್‌ಮೆನ್‌ಗಳು ಮತ್ತು ಇತರ … Continued

ಕಾನೂನು ಕಾಲೇಜ್‌ ಆವರಣದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ; ತೃಣಮೂಲ ನಾಯಕ, ಇಬ್ಬರು ವಿದ್ಯಾರ್ಥಿಗಳ ಬಂಧನ

ಕೋಲ್ಕತಾ : ಕೋಲ್ಕತಾದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಇದೇ ರೀತಿಯ ಅಪರಾಧವು ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾದ ಆರು ತಿಂಗಳ ನಂತರ ಈ ಘಟನೆ ನಡೆದಿದೆ. ಬಂಧಿತ ಮೂವರು … Continued

ವೀಡಿಯೊ..| ಜಗನ್ನಾಥ ರಥಯಾತ್ರೆಯ ವೇಳೆ ಹುಚ್ಚೆದ್ದು ಓಡಿದ ಆನೆಗಳು ; ಭಯಭೀತರಾಗಿ ಓಡಿದ ಭಕ್ತರು

ಅಹಮದಾಬಾದ್‌ನಲ್ಲಿ ನಡೆದ ಜಗನ್ನಾಥ ರಥಯಾತ್ರೆ ಮೆರವಣಿಗೆಗೆ ಕರೆತರಲಾದ ಆನೆಗಳ ಗುಂಪು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ್ದರಿಂದ ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಅನಿರೀಕ್ಷಿತ ಘಟನೆಯಿಂದಾಗಿ ಹಲವಾರು ಭಕ್ತರು ಮತ್ತು ಪಕ್ಕದಲ್ಲಿದ್ದವರು ಹೆದರಿಕೊಂಡು ಅಲ್ಲಿಂದ ಓಡಿಹೋದರು. ಆನೆಗಳು ಜನರಿಂದ ತುಂಬಿಹೋಗಿದ್ದ ರಸ್ತೆಗಳಿಗೆ ನುಗ್ಗಿತ್ತು. ಜನರು ಸುರಕ್ಷತೆಗಾಗಿ ಅಲ್ಲಿಂದ ಓಡುತ್ತಿದ್ದರು. ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ಭಯಾನಕ ಕ್ಷಣದ ವೀಡಿಯೊ ಅವ್ಯವಸ್ಥೆ … Continued

ಮನಗೂಳಿ ಕೆನರಾ ಬ್ಯಾಂಕ್​ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : ಅದೇ ಬ್ಯಾಂಕಿನಲ್ಲಿ ಮ್ಯಾನೇಜರ್​ ಆಗಿದ್ದವನೇ ಮಾಸ್ಟರ್‌ ಮೈಂಡ್‌; ಮೂವರ ಬಂಧನ

ವಿಜಯಪುರ: ಕಳೆದ ತಿಂಗಳು ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​ನಲ್ಲಿ ನಡೆದಿದ್ದ 53.26 ಕೋಟಿ ರೂ. ಮೌಲ್ಯದ ಬಂಗಾರ ಹಾಗೂ ನಗದು ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಮೇ 25 ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​ನ ಲಾಕರ್​ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿಬಂಗಾರದ ಆಭರಣಗಳು ಹಾಗೂ … Continued

ಮಲೆ ಮಹದೇಶ್ವರ ಬೆಟ್ಟದ ಒಂದೇ ಸ್ಥಳದಲ್ಲಿ ತಾಯಿ, 4 ಮರಿ ಹುಲಿಗಳು ಸಾವು ; ವಿಷ ಪ್ರಾಶನದ ಶಂಕೆ…!

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯದ ಮೀಣ್ಯಂನಲ್ಲಿ ಒಂದು ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಒಂದೇ ಸ್ಥಳದಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಐದು ಹುಲಿಗಳ ಮೃತದೇಹಗಳು ಕೇವಲ 50 ಅಡಿಗಳಷ್ಟು ಅಂತರಲ್ಲಿ ಪತ್ತೆಯಾಗಿದೆ. ಒಂದು ತಾಯಿ ಹುಲಿ ಮತ್ತು 4 ಮರಿ ಸೇರಿ ಐದು ಹುಲಿಗಳು … Continued

ಶುಭಾಂಶು ಶುಕ್ಲಾರಿಂದ ಇತಿಹಾಸ ಸೃಷ್ಟಿ ; 424 ಕಿಮೀ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯ-ವೀಕ್ಷಿಸಿ

ನವದೆಹಲಿ: ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ 28 ಗಂಟೆಗಳ ನಂತರ, ಗ್ರೂಪ್ ಕ್ಯಾಪ್ಟನ್ ಭಾರತದ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದ್ದಾರೆ. ಗುರುವಾರ ಆಕ್ಸಿಯಮ್ -4 (ಆಕ್ಸ್ -4) ಮಿಷನ್ ಕಕ್ಷೆಯಲ್ಲಿರುವ ಪ್ರಯೋಗಾಲಯದ ಜೊತೆ ಯಶಸ್ವಿಯಾಗಿ ಡಾಕ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. … Continued