‘ಪ್ರತಿಸ್ಪರ್ಧಿಗಳಲ್ಲ..ಪಾಲುದಾರರು’: ಬ್ರಿಕ್ಸ್‌ ಶೃಂಗಸಭೆಯಲ್ಲಿ ಮಹತ್ವದ ಒಮ್ಮತಕ್ಕೆ ಬಂದ ಮೋದಿ-ಜಿನ್‌ಪಿಂಗ್‌ ; ವಾಂಗ್ ಯಿ

ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯ ಅಂಗವಾಗಿ ನಡೆದ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭಾರತ ಹಾಗೂ ಚೀನಾ ದೇಶಗಳು ಪ್ರತಿಸ್ಪರ್ಧಿಗಳಾಗದೆ ಪರಸ್ಪರ ಪಾಲುದಾರರಾಗಿರಬೇಕು ಎಂಬ ಅತ್ಯಂತ ಮಹತ್ವದ ಒಮ್ಮತಕ್ಕೆ ಬಂದಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ತಿಳಿಸಿದ್ದಾರೆ. ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ … Continued

ದಿಶಾ ಸಾಲಿಯಾನ್‌ ಸಾವಿನ ಪ್ರಕರಣ : ಸಿಬಿಐ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿ ಹಲವರ ಹೆಸರು

ಮುಂಬೈ :ದಿವಂಗತ ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್‌ ಅವರ ಸಾವಿನ ಪ್ರಕರಣಕ್ಕೆ ಆರು ವರ್ಷಗಳ ಬಳಿಕ ಮಹತ್ವದ ತಿರುವು ಸಿಕ್ಕಿದ್ದು, ಸಿಬಿಐ ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿದೆ. ಈ ಎಫ್‌ಐಆರ್‌ನಲ್ಲಿ ಶಿವಸೇನೆ (ಉದ್ಧವ್‌ ಬಾಳಾಸಾಹೇಬ್ ಠಾಕ್ರೆ) ನಾಯಕ ಹಾಗೂ ಶಾಸಕ ಆದಿತ್ಯ ಠಾಕ್ರೆ, ನಟ ಡಿನೋ … Continued

ಹೊಸಪೇಟೆ : ಗಣೇಶ ಮೂರ್ತಿ ಒಯ್ಯುವ ವೇಳೆ ವಿದ್ಯುತ್ ಸ್ಪರ್ಷ ; ಇಬ್ಬರಿಗೆ ಗಾಯ

ವಿಜಯನಗರ: ಗಣೇಶ ಮೂರ್ತಿ ಕೊಂಡೊಯ್ಯುತ್ತಿದ್ದ ವೇಳೆ ವಿದ್ಯುತ್‌ ತಂತಿ ತಗುಲಿ ಇಬ್ಬರು ಗಾಯಗೊಂಡ ಘಟನೆ ಹೊಸಪೇಟೆ ನಗರದ ಅನಂತಶಯನಗುಡಿ ಹೊರವಲಯದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಕಮಲಾಪುರ ಮೂಲದ ಹುಲುಗಪ್ಪ ಮತ್ತು ದೀಪಕ ಎಂಬವರು ಗಾಯಗೊಂಡಿದಿದ್ದಾರೆ ಎಂದು ವರದಿಯಗಿದ್ದು, ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದಾಗ ಮೂರ್ತಿಗೆ ಅಳವಡಿಸಿದ್ದ ಬಿದಿರು ವಿದ್ಯುತ್‌ ಕಂಬದ ತಂತಿಗೆ ತಗುಲಿದೆ. ಪರಿಣಾಮ … Continued

ಭಯೋತ್ಪಾದಕ ಮಸೂದ್‌ ಅಜರ್‌ ತಲೆಗೆ ₹24 ಲಕ್ಷ ಬಹುಮಾನ ಘೋಷಿಸಿದ ಪಾಕ್‌ : ಎಫ್‌ಎಟಿಎಫ್‌ನಿಂದ ಪಾರಾಗಲು ಡ್ರಾಮಾ

ಜೈಷ್‌-ಎ-ಮೊಹಮ್ಮದ್‌ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಪಾಕಿಸ್ತಾನ ಸರ್ಕಾರ ₹70 ಲಕ್ಷ ಪಾಕಿಸ್ತಾನಿ ರೂಪಾಯಿ (ಸುಮಾರು ₹24.09 ಲಕ್ಷ ಭಾರತೀಯ ಕರೆನ್ಸಿ) ಬಹುಮಾನ ನೀಡುವುದಾಗಿ ಘೋಷಿಸಿದೆ. ಅಜರ್ ಮೇಲಿನ ಬಹುಮಾನದ ಮೊತ್ತವನ್ನು 20 ಲಕ್ಷ ಪಾಕಿಸ್ತಾನ ರೂಪಾಯಿಯಿಂದ ಪಿಕೆಆರ್ ₹70 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆದಾಗ್ಯೂ, ಮೂಲಗಳು ಈ … Continued

ಮುಂಬೈ ರಸ್ತೆಗಳಲ್ಲಿ ಭಿಕ್ಷೆ ಬೇಡಿದ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕ ; ₹3,383 ಕೋಟಿ ಒಡೆಯ ಭಿಕ್ಷಕನಾಗಿದ್ದು ಹೇಗೆ?

ಮುಂಬೈ: ಸುಮಾರು ₹3,400 ಕೋಟಿ ಆಸ್ತಿ ಹೊಂದಿರುವ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕ ಎಂದೇ ಗುರುತಿಸಿಕೊಂಡಿರುವ ಪರಾಗ್ ಶಾ ಅವರು ಮುಂಬೈನ ಘಾಟ್ಕೋಪರ್‌ ಬೀದಿಗಳಲ್ಲಿ ಭಿಕ್ಷೆ ಬೇಡಿರುವ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಭಿಕ್ಷುಕನಾಗಿ ರಸ್ತೆಯಲ್ಲಿ ಅಲೆದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಂಬೈನ ಘಾಟ್ಕೋಪರ್ ಈಸ್ಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಪರಾಗ್ … Continued

ಪಶ್ಚಿಮ ಘಟ್ಟದಲ್ಲಿ ನೆಲದಡಿ ವಾಸಿಸುವ ಕಾಲುಗಳಿಲ್ಲದ ಹೊಸ ಉಬಯಚರ ಜೀವಿ ಪತ್ತೆ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಜ್ಞಾನಿಗಳು ಹೊಸ ಉಭಯಚರ ಜೀವಿಯೊಂದನ್ನು ಪತ್ತೆಹಚ್ಚಿದ್ದಾರೆ. ನೆಲದಡಿಯಲ್ಲೇ ವಾಸಿಸುವ ಈ ಕಾಲಿಲ್ಲದ ಜೀವಿಯನ್ನು ಸಾಮಾನ್ಯವಾಗಿ ‘ಸಿಸಿಲಿಯನ್’ (Caecilian) ಎಂದು ಕರೆಯಲಾಗುತ್ತದೆ. ಹೊಸದಾಗಿ ಪತ್ತೆಯಾದ ಈ ಪ್ರಭೇದಕ್ಕೆ ‘ಗೆಗೆನಿಯೋಫಿಸ್ ಚಾಂದ್‌ಗಡಿ’ (Gegeneophis chandgadi) ಎಂದು ಹೆಸರಿಡಲಾಗಿದೆ. ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ (ಝೆಡ್‌ಎಸ್‌ಐ), ಪುಣೆ ಮತ್ತು ಗೋವಾದ ವಿವಿಧ ಶಿಕ್ಷಣ ಹಾಗೂ ಸಂಶೋಧನಾ … Continued

ಕಾರು ಚಲಾಯಿಸಲಿಕ್ಕೂ ಹೆಲ್ಮೆಟ್ ಕಡ್ಡಾಯವೇ? ‘ಹೆಲ್ಮೆಟ್ ಹಾಕಿಲ್ಲ’ವೆಂದು ಕಾರು ಮಾಲೀಕನಿಗೆ ₹500 ದಂಡ….!

ಬೆಳಗಾವಿ : ಅಸಾಮಾನ್ಯ ವಿದ್ಯಮಾನವೊಂದರಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ‘ಹೆಲ್ಮೆಟ್ ಧರಿಸಿಲ್ಲ’ ಎಂಬ ಕಾರಣ ನೀಡಿ ₹500 ದಂಡದ ಚಲನ್ (Challan) ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಥಣಿ ನಿವಾಸಿ ಸುಭಾಷ ಬೋಜಾನೆ ಎಮಬವರಿಗೆ ಈ ದಂಡದ ನೋಟಿಸ್ ಬಂದಿದ್ದು, … Continued

ಮಹಿಳಾ ಏಷ್ಯಾಕಪ್ ಗೆದ್ರೂ ಟ್ರೋಫಿ ಪಡೆಯಲು ನಿರಾಕರಿಸಿದ ಭಾರತದ ತಂಡ ; ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥಗೆ ಮತ್ತೊಮ್ಮೆ ಮುಖಭಂಗ

ದುಬೈ : ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮಹ್ಸಿನ್ ನಖ್ವಿ ಅವರಿಂದ ಮಹಿಳಾ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲು ಭಾರತ ಮಹಿಳಾ ಕ್ರಿಕೆಟ್ ತಂಡ ನಿರಾಕರಿಸಿದ ಘಟನೆ ಭಾನುವಾರ ರಾತ್ರಿ ದುಬೈನಲ್ಲಿ ನಡೆದ ಫೈನಲ್ ಪಂದ್ಯದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿ … Continued

ಪ್ರಧಾನಿ ಮೋದಿ ಭೇಟಿಯಾದ ಶಾಲಾ ಸಹಪಾಠಿ ; ಭೂ ವಿವಾದ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಮನವಿ

ಮುಂಬೈ: ದಶಕಗಳ ಹಿಂದಿನ ಭೂ ವಿವಾದದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ 81 ವರ್ಷದ ಮುಂಬೈ ಮೀರಾ ರೋಡ್ ನಿವಾಸಿ ಹಾಗೂ ಅವರ ಶಾಲಾ ಸಹಪಾಠಿ ಅಸ್ಗರಲಿ ವೋಹ್ರಾ ಅವರು ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ … Continued

6.65 ಕೋಟಿ ವರ್ಷಗಳ ಹಿಂದಿದ್ದ ದೈತ್ಯ ಡೈನೊಸಾರ್‌ ʼಟಿ. ರೆಕ್ಸ್ʼ ಹೆಜ್ಜೆ ಗುರುತುಗಳ ದಾರಿ ಪತ್ತೆ ; ಅದು ನಡೆಯುತ್ತಿದ್ದ ವೇಗ ಎಷ್ಟು ಗೊತ್ತೆ?

ಉತ್ತರ ಅಮೆರಿಕದ ನೈಋತ್ಯ ಭಾಗದಲ್ಲಿರುವ ನಾರ್ತ್ ಡಕೊಟಾದ ಬಯಲು ಪ್ರದೇಶಗಳಲ್ಲಿ (Badlands) ವಿಜ್ಞಾನಿಗಳು ಪೂರ್ಣವಯಸ್ಕ ಟೈರಾನೊಸಾರಸ್ ರೆಕ್ಸ್ (Tyrannosaurus rex – ಟಿ. ರೆಕ್ಸ್) ಬಿಟ್ಟಿರಬಹುದಾದ ಮೊದಲ ಹೆಜ್ಜೆಗುರುತುಗಳು ಇರುವ ದಾರಿಯನ್ನು (Trackway) ಪತ್ತೆಹಚ್ಚಿದ್ದಾರೆ. ಮೊಂಟಾನಾ ರಾಜ್ಯದ ಗಡಿ ಸಮೀಪದ ಈ ಪ್ರದೇಶದಲ್ಲಿ ನಾಲ್ಕು ಪರಸ್ಪರ ಸಂಪರ್ಕ ಹೊಂದಿರುವ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ಟಿ. ರೆಕ್ಸ್ ಹೇಗೆ … Continued