ವೀಡಿಯೊ..| ಜಾಗ್ರೆಬ್‌ : ಭಾರತೀಯ ಉಡುಗೆ ತೊಟ್ಟು ಗಾಯತ್ರಿ ಮಂತ್ರ-ಸಂಸ್ಕೃತ ಶ್ಲೋಕದ ಮೂಲಕ ಮೋದಿಗೆ ಸ್ವಾಗತಕೋರಿದ ಕ್ರೊಯೇಷಿಯನ್ನರು…!

ಜಾಗ್ರೆಬ್‌: ಕೆನಡಾದ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಕ್ರೊಯೇಷಿಯಾದ ಜಾಗ್ರೆಬ್‌ಗೆ ಭೇಟಿ ನೀಡಿದ್ದಾರೆ. nIwiಬೆಳಸಿದ್ದಾರೆ. ಪ್ರಧಾನಿ ಮೋದಿಗೆ ಅಲ್ಲಿ ಆತ್ಮೀಯ ಸ್ವಾಗತ ದೊರೆಯಿತು. ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅವರು ಹೊಟೇಲಿಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರನ್ನು ವಂದೇ ಮಾತರಂ ” ಮತ್ತು ” … Continued

ವೀಡಿಯೊ | ಪರೀಕ್ಷೆ ಸಮಯದಲ್ಲಿ ಸ್ಫೋಟಗೊಂಡು ಬೆಂಕಿ ಉಂಡೆಯಾದ ಸ್ಪೇಸ್‌ ಎಕ್ಸ್ ನ ಸ್ಟಾರ್‌ ಶಿಪ್ ಬಾಹ್ಯಾಕಾಶ ನೌಕೆ-ವೀಕ್ಷಿಸಿ

ಗುರುವಾರ ಟೆಕ್ಸಾಸ್‌ನ ಮ್ಯಾಸ್ಸೆಯಲ್ಲಿರುವ ಎಲೋನ್ ಮಸ್ಕ್‌ ಅವರರ ಸ್ಪೇಸ್‌ಎಕ್ಸ್ ಪರೀಕ್ಷಾ ಸ್ಥಳದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಹೀಗಾಗಿ ಕಂಪನಿಯ ಮುಂದಿನ ಸ್ಟಾರ್‌ಶಿಪ್ ಉಡಾವಣೆಗೆ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ ಪ್ರಕಾರ, ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಸ್ಥಿರ ಅಗ್ನಿ ಪರೀಕ್ಷೆಯ ಸಮಯದಲ್ಲಿ ಬೃಹತ್‌ ಸ್ಫೋಟದಲ್ಲಿ ಕೊನೆಗೊಂಡಿದೆ. ಬಾಹ್ಯಾಕಾಶ ನೌಕೆಯು ಸ್ಥಿರವಾಗಿದ್ದಾಗ … Continued

ಇರಾನ್ ಮೇಲಿನ ದಾಳಿ ಯೋಜನೆಗೆ ಖಾಸಗಿಯಾಗಿ ಅನುಮೋದಿಸಿದ ಟ್ರಂಪ್ ; ಅಂತಿಮ ಆದೇಶಕ್ಕೆ ತಡೆ : ವರದಿ

ವಾಷಿಂಗ್ಟನ್‌ : ಇರಾನ್ ಮೇಲಿನ ದಾಳಿ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ್ದಾರೆ, ಆದರೆ ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡುತ್ತದೆಯೇ ಎಂದು ನೋಡಲು ಅಂತಿಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇರಾನ್ ತನ್ನ … Continued

ಟೋಲ್ ಶುಲ್ಕ | ಖಾಸಗಿ ವಾಹನಗಳಿಗೆ ₹3000ಕ್ಕೆ ಫಾಸ್ಟ್‌ ಟ್ಯಾಗ್ ವಾರ್ಷಿಕ ಪಾಸ್‌ ಪ್ರಕಟಿಸಿದ ಕೇಂದ್ರ ಸರ್ಕಾರ ; ಆಗಸ್ಟ್‌ 15ರಿಂದ ಜಾರಿ

ನವದೆಹಲಿ: ಟೋಲ್ ಶುಲ್ಕ ಪಾವತಿಸುವುದನ್ನು ಸರಳಗೊಳಿಸುವ ಮತ್ತು ರಸ್ತೆ ಪ್ರಯಾಣವನ್ನು ಸುಧಾರಿಸುವ ಉದ್ದೇಶದ ಒಂದು ಮಹತ್ವದ ಕ್ರಮದಲ್ಲಿ, ಕೇಂದ್ರ ಸರ್ಕಾರವು 3,000 ರೂ.ಗಳಿಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆಯನ್ನು ಆಗಸ್ಟ್‌ 15ರಿಂದ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಬುಧವಾರ ಪ್ರಕಟಿಸಿದ್ದಾರೆ. ಈ ಹೊಸ … Continued

ಇರಾನ್ ವಿರುದ್ಧ ದಾಳಿ: “ನಾನು ಅದನ್ನು ಮಾಡಬಹುದು, ಮಾಡದೆಯೂ ಇರಬಹುದು ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಮತ್ತು ಅದರ ಅಧ್ಯಕ್ಷರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಭರಿಸಲಾಗದ ಹಾನಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದಿರಬಹುದು ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, … Continued

ಸೌದಿ ಅರೇಬಿಯಾದ ʼಸ್ಲೀಪಿಂಗ್ ಪ್ರಿನ್ಸ್ʼ 20 ವರ್ಷಗಳಿಂದ ಕೋಮಾದಲ್ಲಿ

“ಸ್ಲೀಪಿಂಗ್ ಪ್ರಿನ್ಸ್” ಎಂದು ಕರೆಯಲ್ಪಡುವ ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅವರು ಏಪ್ರಿಲ್ 2025 ರಲ್ಲಿ 36 ವರ್ಷ ವಯಸ್ಸಿನವರಾಗಿದ್ದಾರೆ. ಆಘಾತಕಾರಿ ಮಿದುಳಿನ ಗಾಯದ ನಂತರ ಅವರು ಸುಮಾರು 20 ವರ್ಷಗಳಿಂದ ಕೋಮಾದಲ್ಲಿದ್ದಾರೆ. ಆದರೆ ಇತ್ತೀಚೆಗೆ, ರಾಜಕುಮಾರ ಎಚ್ಚರಗೊಂಡು ತನ್ನ ಕುಟುಂಬದೊಂದಿಗೆ ಮತ್ತೆ ಒಂದಾದರು ಎಂದು ಹೇಳುವ ವೀಡಿಯೊ ಸಾಮಾಜಿಕ … Continued

ಮದ್ಯ ಹಗರಣ ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಆಪ್ತನ ಬಂಧನ

ಬೆಂಗಳೂರು: ಬಹುಕೋಟಿ ಮೌಲ್ಯದ ಮದ್ಯ ಹಗರಣದಲ್ಲಿ ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಸಹಾಯಕ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಚೆವಿರೆಡ್ಡಿ ಭಾಸ್ಕರ ರೆಡ್ಡಿ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದರಿಂದ ಮಂಗಳವಾರ ರಾತ್ರಿ … Continued

‘ನೀವು ಅತ್ಯುತ್ತಮ, ನಾನು ನಿಮ್ಮಂತಾಗಲು ಪ್ರಯತ್ನಿಸುತ್ತಿದ್ದೇನೆ’ : ಜಿ7ನಲ್ಲಿ ಪ್ರಧಾನಿ ಮೋದಿಗೆ ಹೇಳಿದ ಇಟಲಿ ಪ್ರಧಾನಿ ಮೆಲೋನಿ-ವೀಡಿಯೊ ವೈರಲ್‌

ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾದರು. ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿದ ನಂತರ ಪ್ರಧಾನಿ ಮೋದಿ ಅವರು “ಇಟಲಿಯೊಂದಿಗಿನ ಭಾರತದ ಸ್ನೇಹವು ಮತ್ತಷ್ಟು ಬಲಗೊಳ್ಳುತ್ತದೆ” ಎಂದು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ನಾಯಕರು ಭೇಟಿಯಾಗಿ ಪರಸ್ಪರ ಕೈಕುಲುಕುತ್ತ … Continued

ಸಂಡೂರಿನಲ್ಲಿ ಸಿಕ್ಕಿಬಿದ್ದ ʼಬ್ಲ್ಯಾಕ್ ಮೇಲ್ʼ ಕಾಮುಕ ; ಈತನ ಮೊಬೈಲ್‌ ನಲ್ಲಿತ್ತು 13500ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋ, ವೀಡಿಯೊಗಳು !

ಮುಂಬೈ ಪೊಲೀಸರು ಎರಡು ವರ್ಷಗಳ ಕಾಲ ಹುಡುಕಾಟ ನಡೆಸಿದ ನಂತರ ಸೈಬರ್ ಲೈಂಗಿಕ ಅಪರಾಧಗಳಿಗೆ ಬೇಕಾಗಿದ್ದ 25 ವರ್ಷದ ವ್ಯಕ್ತಿಯನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಶುಭಂ ಕುಮಾರ ಮನೋಜಪ್ರಸಾದ ಸಿಂಗ್ ಎಂಬಾತನನ್ನು ಸಂಡೂರು ಪಟ್ಟಣದಲ್ಲಿ ಪತ್ತೆಹಚ್ಚಲಾಗಿದ್ದು, ಅಲ್ಲಿ ಈತ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಮುಂಬೈನ ವಿದ್ಯಾರ್ಥಿನಿಯೊಬ್ಬರು ನೀಡಿದ … Continued

ಮದುವೆಯಾಗಲು ಗೋವಾಕ್ಕೆ ಹೋಗಿದ್ದ ಬೆಂಗಳೂರಿನ ಜೋಡಿ ; ಆದ್ರೆ ಕನಸಿನ ಪ್ರವಾಸ ಪ್ರೇಯಸಿ ಕೊಲೆಯಲ್ಲಿ ಅಂತ್ಯ

ಪಣಜಿ : ಮನಕಲಕುವ ಘಟನೆಯೊಂದರಲ್ಲಿ, ಮದುವೆಯಲ್ಲಿ ಕೊನೆಗೊಳ್ಳಬೇಕಿದ್ದ ಗೋವಾ ಪ್ರವಾಸವು ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಗೋವಾಕ್ಕೆ ಮದುವೆಯಾಗಬೇಕೆಂದು ಬಂದಿದ್ದ ಯುವತಿಯ ಬದುಕು ದುರಂತದಲ್ಲಿ ಕೊನೆಗೊಂಡಿತು. ಉತ್ತರ ಬೆಂಗಳೂರಿನ ನಿವಾಸಿ … Continued