ನೇಪಾಳ ಮಾಜಿ ಪ್ರಧಾನಿ ಕೆ.ಪಿ. ಓಲಿ ಬಂಧನ: ಪ್ರಧಾನಿಯಾಗಿ ಬಾಲೇಂದ್ರ ಶಾ ಪದಗ್ರಹಣದ ಮರುದಿನವೇ ಕ್ರಮ

ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಶನಿವಾರ ಬೆಳಗ್ಗೆ ಭಾರಿ ಸಂಚಲನ ಉಂಟಾಗಿದ್ದು, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ನಡೆದ ‘ಜೆನ್-ಜಿ’ (Gen Z) ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಮತ್ತು ಆ ಸಂದರ್ಭದಲ್ಲಿ ನಡೆದ ಸಾವು-ನೋವುಗಳಿಗೆ ಕಾರಣರಾದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಗಾಯಕ-ರಾಜಕಾರಣಿ ಬಾಲೇಂದ್ರ ಶಾ ಅವರು … Continued

ಎಸ್‌ಎಸ್‌ಎಲ್‌ಸಿ ; ಮಹತ್ವದ ಬದಲಾವಣೆ : ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್‌ ನೀಡಲು ನಿರ್ಧಾರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ (SSLC Exam) ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ವರ್ಷದಿಂದ ಮೂರನೇ ಭಾಷೆಯ (ಹಿಂದಿ) ವಿಷಯಗಳಿಗೆ ಅಂಕಗಳನ್ನು ಕೈಬಿಟ್ಟು ಗ್ರೇಡ್‌ ನೀಡಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. 625 ಅಂಕಗಳ ಬದಲು 525 ಅಂಕಗಳು ಮಾತ್ರ ಇರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ … Continued

ವೀಡಿಯೊ | ಶ್ರೀನಗರ : ಜೋಜಿಲಾ ಪಾಸ್‌ನಲ್ಲಿ ಭೀಕರ ಹಿಮಪಾತ ; ಸಿಲುಕಿಕೊಂಡ ವಾಹನಗಳು, 7 ಮಂದಿ ಸಾವು, ಐವರಿಗೆ ಗಂಭೀರ ಗಾಯ

ಶ್ರೀನಗರ : ಶ್ರೀನಗರ-ಲೇಹ್ ಹೆದ್ದಾರಿಯ ಜೋಜಿಲಾ ಪಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ಹಿಮಪಾತಕ್ಕೆ (Avalanche) ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.  ಹಿಮದ ರಾಶಿಯ ಅಡಿಯಲ್ಲಿ ಹಲವು ಪ್ರಯಾಣಿಕ ವಾಹನಗಳು ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಲಡಾಖ್ ಭಾಗದ ಜೋಜಿಲಾ ಪಾಸ್‌ನಲ್ಲಿ ಹಠಾತ್ ಹಿಮ ಕುಸಿತ … Continued

ವೀಡಿಯೊ | ‘ಥ್ಯಾಂಕ್‌ ಯು ಪೀಪಲ್‌ ಆಫ್‌ ಇಂಡಿಯಾ’ ಎಂದು ಬರೆದು ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದ ಇರಾನ್‌…!

ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಹಾಗೂ ಇರಾನ್‌ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ಇರಾನ್ ತನ್ನ ಕ್ಷಿಪಣಿ ದಾಳಿಯ ನಡುವೆ ಭಾರತ ಸೇರಿದಂತೆ ಕೆಲವು ದೇಶಗಳಿಗೆ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ. ಇಸ್ರೇಲ್ ಗುರಿಯಾಗಿಸಿ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ “ಭಾರತದ ಜನತೆಗೆ ಧನ್ಯವಾದಗಳು” ಎಂದು ಬರೆಯುವ ಮೂಲಕ ಇರಾನ್ ತನ್ನ ಬೆಂಬಲಕ್ಕೆ ನಿಂತ ದೇಶಗಳನ್ನು … Continued

ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

ರಾಯಚೂರು : ಆಂಧ್ರ ಪ್ರದೇಶದ ಕೊಸಗಿ ಮಂಡಲ ಕಂದಕೂರು ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಮುಳುಗಿ ನೀರುಪಾಲಾದ ಘಟನೆ ಶುಕ್ರವಾರ(ಮಾ.28) ನಡೆದಿದೆ ಎಂದು ವರದಿಯಾಗಿದೆ. ಕರ್ನೂಲು ಜಿಲ್ಲೆಯ ರಾಜೊಳ್ಳಿಬಂಡಾ ಅಣೆಕಟ್ಟಿನ ಹೊಂದಿಕೊಂಡಿರುವ ಕಂದಕೂರು ಬಳಿ ಈ ದುರ್ಘಟನೆ ನಡೆದಿದ್ದು, ಮೃತರನ್ನುರಾಯಚೂರು ​ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ … Continued

ಮಂಗಳೂರು : ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಕೊಲೆ

ಮಂಗಳೂರು: ನಗರದ ಹೊರವಲಯದ‌ ತೊಕ್ಕೊಟ್ಟು ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರನನ್ನು ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳ್ಳಬೆಳಿಗ್ಗೆ ನಡೆದಿದ್ದು, ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮೃತನನ್ನು 46 ವರ್ಷದ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ ಎಂದು ಗುರುತಿಸಲಾಗಿದೆ. ಆರಿಫ್ ಯಾನೆ ಟಾಬ್ಲೆಟ್ ಆರಿಫ್, ಮುಳ್ಳುಗುಡ್ಡೆ … Continued

ಇರಾನ್‌ ಯುದ್ಧದ ಮಧ್ಯೆ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಯುದ್ಧಪೂರ್ವ ಬೇಡಿಕೆಯ ಶೇ.70ರಷ್ಟಕ್ಕೆ ಹೆಚ್ಚಿಸಿದ ಕೇಂದ್ರ

ನವದೆಹಲಿ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯ ಭೀತಿಯ ನಡುವೆ ಕೇಂದ್ರ ಸರ್ಕಾರವು ದೇಶದ ಜನತೆಗೆ ಮತ್ತು ಕೈಗಾರಿಕಾ ವಲಯಕ್ಕೆ ಸಮಾಧಾನಕರ ಸುದ್ದಿ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸುವುದಾಗಿ ಶುಕ್ರವಾರ ಘೋಷಿಸಿದೆ. ಜೊತೆಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಪೂರೈಕೆಯನ್ನು ಶೇ. … Continued

ಇಂಧನ ಬಿಕ್ಕಟ್ಟಿನಲ್ಲಿರುವ ಭಾರತಕ್ಕೆ 20,000 ಕಿಮೀ ದೂರದ ಸ್ನೇಹಿತನಿಂದ ಸಹಾಯ ಹಸ್ತ…!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಇರಾನ್‌ ಯುದ್ಧವು ಭಾರತದ ಇಂಧನ ವಲಯದ ಮೇಲೆ ಪರಿಣಾಮ ಬೀರಿದೆ. ದೇಶದಲ್ಲಿ ಅಡುಗೆ ಅನಿಲದ (LPG) ಸಮಸ್ಯೆ ಸೃಷ್ಟಿಯಾಗಿರುವ ಈ ಸಂಕಷ್ಟದ ಸಮಯದಲ್ಲಿ, ಸುಮಾರು 20,000 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಅಮೆರಿಕಾದ ರಾಷ್ಟ್ರ ಅರ್ಜೆಂಟೀನಾ ಭಾರತದ ನೆರವಿಗೆ ಧಾವಿಸಿದೆ. ಭಾರತವು ತನ್ನ ಒಟ್ಟು ಎಲ್‌ಪಿಜಿ ಆಮದಿನ ಸುಮಾರು ಶೇಕಡಾ 60 … Continued

ಅಮೆರಿಕದಿಂದ ಭೂದಾಳಿಯ ಭೀತಿ : 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಜ್ಜುಗೊಳಿಸಿದ ಇರಾನ್….!

ತೆಹ್ರಾನ್: ಅಮೆರಿಕವು ತನ್ನ ದೇಶದ ಮೇಲೆ ಭೂಸೇನೆಯ ಮೂಲಕ ದಾಳಿ ಮಾಡಬಹುದೆಂಬ ಭೀತಿಯ ನಡುವೆ, ಇರಾನ್ ತನ್ನ ರಕ್ಷಣಾ ಪಡೆಯನ್ನು ಬೃಹತ್ ಮಟ್ಟದಲ್ಲಿ ಸಜ್ಜುಗೊಳಿಸಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಸೈನಿಕರು ಮತ್ತು ಹೋರಾಟಗಾರರು ಅಮೆರಿಕದ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಇರಾನ್ ಹೇಳಿದೆ. ಅಮೆರಿಕವು ಭೂದಾಳಿ ನಡೆಸಲು ಮುಂದಾಗಬಹುದು ಎಂಬುದು ಇರಾನ್ ಜನರಲ್ಲಿ … Continued

ಗುಡ್‌ ನ್ಯೂಸ್‌ ನೀಡಿದ ಕೇಂದ್ರ ಸರ್ಕಾರ ; ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ

ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ಆತಂಕದಲ್ಲಿದ್ದ ದೇಶದ ಜನತೆಗೆ ದೊಡ್ಡ ರಿಲೀಫ್‌ ನೀಡಿದೆ. ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ ತಲಾ 10 ರೂಪಾಯಿಗಳಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ, ಪೆಟ್ರೋಲ್ ಮೇಲಿನ ಸುಂಕ ಲೀಟರ್‌ಗೆ 3 … Continued