ಬೆಳಗಾವಿ | ಬಸ್ಸಿನಲ್ಲಿ ಕಿಟಕಿ ಬದಿ ಸೀಟಿಗಾಗಿ ಗಲಾಟಿ ; ವಿದ್ಯಾರ್ಥಿಗೆ ಚಾಕು ಇರಿತ

ಬೆಳಗಾವಿ: ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರದಂದು ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ಗುಂಪು ಮತ್ತು ವಿದ್ಯಾರ್ಥಿ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿ ತಾಲೂಕು ಪಂತಬಾಳೇಕುಂದ್ರಿ ಗ್ರಾಮದ 19 ವರ್ಷದ ವಿದ್ಯಾರ್ಥಿಗೆ ಚಾಕು ಇರಿಲಾಗಿದೆ. ಪಂತಬಾಳೆಕುಂದಿಯಿಂದ ಬರುವಾಗ ಬಸ್ಸಿನ ಕಿಟಕಿಯಬಳಿಯ ಸೀಟಿಗಾಗಿ ನಡೆದ ಈ ಗಲಾಟೆಯಲ್ಲಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದ್ದು, … Continued

ಆಪರೇಶನ್‌ ಸಿಂಧೂರ ವೇಳೆ ಭಾರತ ಅಮೆರಿಕದ ಮಧ್ಯಸ್ಥಿಕೆ ಕೋರಿಲ್ಲ : ದೂರವಾಣಿ ಕರೆ ವೇಳೆ ಟ್ರಂಪ್‌ ಗೆ ಪ್ರಧಾನಿ ಮೋದಿ

ನವದೆಹಲಿ: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದಾಗ, ಭಾರತವು ಇತ್ತೀಚೆಗೆ ನಡೆಸಿದ ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಅಮೆರಿಕದ ಮಧ್ಯಸ್ಥಿಕೆ ಕೋರಿಲ್ಲ ಅಥವಾ ವ್ಯಾಪಾರದ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷವನ್ನು ವ್ಯಾಪಾರವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಕೊನೆಗೊಳಿಸಿದೆ … Continued

ಭಾರತ-ಕೆನಡಾ ಸಂಬಂಧ ಪುನರುಜ್ಜೀವನಕ್ಕೆ ಪ್ರಧಾನಿ ಮೋದಿ-ಕಾರ್ನಿ ನಿರ್ಧಾರ ; ಹೈಕಮಿಷನರ್‌ಗಳ ಮರುಸ್ಥಾಪನೆಗೆ ತೀರ್ಮಾನ

ನವದೆಹಲಿ: ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಭಾರತ ಮತ್ತು ಕೆನಡಾ ಬುಧವಾರ ಪರಸ್ಪರ ದೇಶಗಳ ರಾಜಧಾನಿಗಳಲ್ಲಿ ಹೈಕಮಿಷನರ್‌ಗಳನ್ನು ಪುನಃಸ್ಥಾಪಿಸಲು ನಿರ್ಧರಿಸಿವೆ. ಇದು ಜಸ್ಟಿನ್ ಟ್ರುಡೊ ನೇತೃತ್ವದ ಹಿಂದಿನ ಆಡಳಿತದಲ್ಲಿ ಹದಗೆಟ್ಟಿದ್ದ ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸದಾಗಿ ಆಯ್ಕೆಯಾದ ಕೆನಡಾದ ಪ್ರಧಾನಿ … Continued

ಮುಂದಿನ ಮೂರು ವಾರಗಳಲ್ಲಿ ದೊಡ್ಡ ವಿಪತ್ತು ಸಂಭವ ; ಭವಿಷ್ಯ ನುಡಿದ ‘ನ್ಯೂ ​​ಬಾಬಾ ವಂಗಾ’

“ನ್ಯೂ ಬಾಬಾ ವಂಗಾ” ಎಂದು ವ್ಯಾಪಕವಾಗಿ ಕರೆಯಲ್ಪಡುವ ಜಪಾನಿನ ಮಂಗಾ ಕಲಾವಿದೆಯಾದ ರಿಯೋ ತತ್ಸುಕಿ ಅವರ ಭವಿಷ್ಯವಾಣಿಯು ಜಪಾನ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಇದು ಜೂನ್ ಅಂತ್ಯ ಮತ್ತು ಜುಲೈ ಆರಂಭದ ನಡುವೆ ಹಾಂಗ್ ಕಾಂಗ್‌ನಿಂದ ಜಪಾನಿಗೆ ವಿಮಾನ ಬುಕಿಂಗ್‌ನಲ್ಲಿ ಶೇಕಡಾ 83 ರಷ್ಟು ಕುಸಿತಕ್ಕೆ ಕಾರಣವಾಗಿದೆ. 1999 ರ … Continued

ಇರಾನ್‌ ಪರಮೋಚ್ಚ ನಾಯಕ ಖಮೇನಿ ಎಲ್ಲಿ ಅಡಗಿದ್ದಾರೆಂದು ಅಮೆರಿಕಕ್ಕೆ ಗೊತ್ತಿದೆ : ಬೇಷರತ್ತಾಗಿ ಶರಣಾಗಿ ; ಇರಾನಿಗೆ ಟ್ರಂಪ್ ಕರೆ

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದು, ಅಮೆರಿಕಕ್ಕೆ ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಎಲ್ಲಿ ಅಡಗಿದ್ದಾರೆ ಎಂಬುದು ನಮಗೆ ನಿಖರವಾಗಿ ತಿಳಿದಿದೆ ಮತ್ತು ಅವರನ್ನು ಅಲ್ಲಿಂದ “ಹೊರಗೆ ಬರುವಂತೆ ಮಾಡಬಹುದು”, ಆದರೆ ಅಮೆರಿಕ ಈಗ ಅದನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಟ್ರಂಪ್ ಇರಾನ್‌ನ … Continued

ವೀಡಿಯೊ | ಉಕ್ರೇನ್‌ ಯುದ್ಧದಲ್ಲಿ ಮೃತ ರಷ್ಯಾದ ಸೈನಿಕನ ಅಂತಿಮ ಸಂಸ್ಕಾರವನ್ನು ಹಿಂದೂ ಧರ್ಮದ ಪದ್ಧತಿಯಂತೆ ಆನ್‌ಲೈನ್‌ಲ್ಲಿ ನೆರವೇರಿಸಿದ ಗೋಕರ್ಣ ಅರ್ಚಕರು…!

ಕಾರವಾರ : ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸರ್ಗೇಯ ಗಾಬ್ಲೇವ್ ಅವರ ಕೊನೆಯ ಆಸೆಯಂತೆ ಆನ್ಲೈನ್ ಮೂಲಕ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಿಂದೂ ಪದ್ಧತಿಯಂತೆ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ವರದಿಯಾಗಿದೆ. ದೂರದ ರಷ್ಯಾದ ಸರ್ಗೇಯ ಗಾಬ್ಲೇವ್ ಎಂಬವರು ಯುದ್ಧದಲ್ಲಿ ಮಡಿದ ನಂತರ ಅವರ ಕೊನೆಯ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ಗೋಕರ್ಣದಲ್ಲಿ … Continued

ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು

ಮಂಗಳೂರು: ಅರ್ಧ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಹತ್ತು ತಿಂಗಳ ಮಗವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವರದಿಯಾಗಿದೆ. ಅಡ್ಯಾರ್‌ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಅನೀಶಕುಮಾರ ಎಂಬ ಮಗು ಬೀಡಿ ಮೋಟು ನುಂಗಿತ್ತು ಎಂದು ಹೇಳಲಾಗಿದೆ. ಶನಿವಾರ ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ಮಗು ನುಂಗಿ … Continued

ವೀಡಿಯೊಗಳು | ‘ನಿಮಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ’: ವಾಷಿಂಗ್ಟನ್‌ನಲ್ಲಿ ಅಸಿಮ್ ಮುನೀರ್ ಗೆ ಪ್ರತಿಭಟನೆಯ ಬಿಸಿ-ವೀಕ್ಷಿಸಿ

ಪಾಕಿಸ್ತಾನಿ ಜನರಲ್ ಸೈಯದ್ ಅಸಿಮ್ ಮುನೀರ್ ವಾಷಿಂಗ್ಟನ್‌ನಲ್ಲಿದ್ದಾಗ ಅವರನ್ನು ನಿಂದಿಸಲಾಯಿತು. ಕೆಲವು ಪಾಕಿಸ್ತಾನಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನಿ ಮೂಲದ ಜನರು ಮುನೀರ್ ಅವರ ಹೋಟೆಲ್ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನೀರ್ ಹೋಟೆಲ್‌ನಿಂದ ಹೊರಬರುವಾಗ ಪ್ರತಿಭಟನಾಕಾರರು – “ಪಾಕಿಸ್ತಾನಿಯೋಂ ಕೆ ಕಾತಿಲ್,” “ನೀವು ಹೇಡಿ,” ಮತ್ತು “ನಿಮಗೆ ನಾಚಿಕೆಯಾಗಬೇಕು” – ಎಂಬ ಘೋಷಣೆಗಳನ್ನು … Continued

ಕರ್ನಾಟಕದಲ್ಲಿ ಜೂನ್ 23ರವರೆಗೂ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು : ರಾಜ್ಯದಾದ್ಯಂತ ಜೂನ್ 23ರ ವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬೀ ಸಮುದ್ರದ ಕೊಂಕಣ ಕರಾವಳಿಯಲ್ಲಿ ಹರಿವು ಇರುವುದರಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್‌ 20 ರವರೆಗೂ ಭಾರೀ ಮಳೆಯಾಗಲಿದೆ. ಅಲ್ಲದೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೂ ರೆಡ್ ಅಲರ್ಟ್​ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ … Continued

ವೀಡಿಯೊ..| ಕೊಡೈಕೆನಾಲ್​​​ನಲ್ಲಿ ಕರ್ನಾಟಕದ ಪ್ರವಾಸಿಗರ ₹500 ನೋಟುಗಳ ಬಂಡಲ್ ಗಳನ್ನೇ ಕದ್ದೊಯ್ದ ಕೋತಿ ಮುಂದೆ ಮಾಡಿದ್ದೇನು ಗೊತ್ತೆ..?

ಕೊಡೈಕೆನಾಲ್: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡೈಕೆನಾಲ್‌ನ ಗುಣ ಗುಹೆಗಳ ಬಳಿ ವ್ಯಕ್ತಿಯೊಬ್ಬರಿಂದ 500 ರೂಪಾಯಿ ನೋಟುಗಳ ಬಂಡಲ್ ಅನ್ನು ಕೋತಿಯೊಂದು ಕದ್ದೊಯ್ದಿದೆ. ನಂತರ ಮರದ ಮೇಲೆ ಏರಿದ ಕೋತಿ ಅಲ್ಲಿಂದ ನೋಟುಗಳನ್ನು ಕೆಳಕ್ಕೆ ಎಸೆದಿದೆ. 500 ರೂಪಾಯಿ ನೋಟುಗಳ ಅನೇಕ ಬಂಡಲ್‌ಗಳನ್ನು ಒಯ್ದಿದ್ದ ಕರ್ನಾಟಕದ ಪ್ರವಾಸಿಗರಿಂದ ಮಂಗ ಹಣವನ್ನು ಕಸಿದುಕೊಂಡಿದೆ. ಮಂಗ ಅನಿರೀಕ್ಷಿತವಾಗಿ ಪ್ರತ್ಯಕ್ಷವಾಯಿತು. … Continued