“ಎಲ್ಲರನ್ನೂ ಕ್ಷಮಿಸಿಬಿಡು…ಈಗ ಹೊರಡುವ ಸಮಯ ಬಂದಿದೆ, ಹೋಗಿ ಬಾ..”: ಹರೀಶ ರಾಣಾಗೆ ಕುಟುಂಬದ ಭಾವನಾತ್ಮಕ ವಿದಾಯ

ನವದೆಹಲಿ: “ಇನ್ನು ಹೊರಡುವ ಸಮಯ ಬಂದಿದೆ, ಸರಿನಾ?..” – ಗಾಜಿಯಾಬಾದ್‌ನ ಆ ನಿಶ್ಯಬ್ದ ಗಲ್ಲಿಯ ಒಂದು ಮನೆಯಲ್ಲಿ, ಚಲನೆಯಿಲ್ಲದೆ ಮಲಗಿದ್ದ ಹರೀಶ ರಾಣಾ ಸುತ್ತ ಅವರ ಕುಟುಂಬಸ್ಥರು ಜಮಾಯಿಸಿದ್ದರು. ಅದು ಹರೀಶ ರಾಣಾ ಅವರಿಗೆ ಮನಯವರು ಹಾಗೂ ಪ್ರೀತಿ ಪಾತ್ರರ ಅಂತಿಮ ವಿದಾಯದ ಕ್ಷಣಗಳು. ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಅವರು ಅಂತಿಮ … Continued

ಇಸ್ರೇಲ್-ಇರಾನ್ ಸಂಘರ್ಷದ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ : 19 ಭಾರತೀಯರು ಸೇರಿ 35 ಜನರನ್ನು ಬಂಧಿಸಿದ ಯುಎಇ

ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದಿಕ್ಕು ತಪ್ಪಿಸುವ ಮತ್ತು ನಕಲಿ ವೀಡಿಯೊಗಳನ್ನು ಪ್ರಕಟಿಸಿದ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು 19 ಭಾರತೀಯರು ಸೇರಿದಂತೆ ಒಟ್ಟು 35 ಜನರನ್ನು ಬಂಧಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆ ಇರುವ ಈ ಸೂಕ್ಷ್ಮ ಸಮಯದಲ್ಲಿ ಸಾರ್ವಜನಿಕರಲ್ಲಿ ಭಯ ಭೀತಿ ಸೃಷ್ಟಿಸುವ, … Continued

ಇರಾನ್‌ ಸರ್ವೋಚ್ಚ ನಾಯಕ ಬಳಸುತ್ತಿದ್ದ ವಿಮಾನ ಧ್ವಂಸ ಮಾಡಿದ್ದೇವೆ ಎಂದ ಇಸ್ರೇಲ್‌

ತೆಹ್ರಾನ್: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಲಿ ಹೊಸೇನಿ ಖಮೇನಿ ಅವರ ವಿಮಾನವನ್ನು ತೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ತಿಳಿಸಿದೆ. ಈ ದಾಳಿಯು ಇರಾನ್‌ನ ಪ್ರಾದೇಶಿಕ ಸಮನ್ವಯ ಸಾಮರ್ಥ್ಯಕ್ಕೆ ಬಿದ್ದ ದೊಡ್ಡ ಹೊಡೆತ ಎಂದು ಇಸ್ರೇಲ್ ಬಣ್ಣಿಸಿದೆ. ಇಸ್ರೇಲ್ ರಕ್ಷಣಾ ಪಡೆ (IDF) ಪ್ರಕಾರ, ಈ … Continued

ವೀಡಿಯೊ | ರಾಡಾರ್‌ಗಳಿಗೂ ಸಿಗದ ಇರಾನಿನ ‘ಮಾಯಾವಿ’ ಕ್ಷಿಪಣಿ; ಯುದ್ಧದಲ್ಲಿ ಮೊದಲ ಬಾರಿಗೆ ‘ಡ್ಯಾನ್ಸಿಂಗ್ ಮಿಸೈಲ್’ ಬಳಕೆ

ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಭಾನುವಾರ ಇರಾನ್ ರಾಜಧಾನಿ ತೆಹ್ರಾನ್‌ನಿಂದ ಇಸ್ರೇಲ್‌ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಧಾರಿತ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಲ್ಲಿ ಇರಾನ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಸೆಜ್ಜಿಲ್’ (Sejjil) ಕ್ಷಿಪಣಿಯೂ ಸೇರಿದೆ. ಫೆಬ್ರವರಿ 28 ರಂದು ಯುದ್ಧ ಆರಂಭವಾದ ನಂತರ ಈ ಕ್ಷಿಪಣಿಯನ್ನು ಇರಾನ್‌ … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ತಾಪಮಾನ (Karnataka Weather) ಹೆಚ್ಚಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಈ ನಡುವೆ ರಾಜ್ಯದ ಹಲವೆಡೆ ಮಳೆಯಾದ ವರದಿಯಾಗಿದೆ. ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಕೊಡಗು, ಬೀದರ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲವಡೆ ಭಾನುವಾರ ಕೆಲ ಹೊತ್ತು ಗುಡುಗು ಸಹಿತ ಮಳೆ ಸುರಿದಿದೆ. ಉತ್ತರ … Continued

ಇರಾನಿನ ದಾಳಿಯಲ್ಲಿ ತಮ್ಮ ಸಾವಿನ ವದಂತಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇರಾನಿನ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತರಾಗಿದ್ದಾರೆ ಎಂಬ ವದಂತಿಗಳ ಮಧ್ಯೆ ನೆತನ್ಯಾಹು ಅವರು ‘X’ (ಟ್ವಿಟ್ಟರ್) ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಆ ವಿಡಿಯೋದಲ್ಲಿ, ನೆತನ್ಯಾಹು ಅವರು ಕೆಫೆಯೊಂದರಲ್ಲಿ ಕಾಫಿ ಆರ್ಡರ್ ಮಾಡುತ್ತಾ ಈ ವದಂತಿಗಳ ಬಗ್ಗೆ ಹಾಸ್ಯ ಮಾಡುತ್ತಿರುವುದು ಕಂಡುಬಂದಿದೆ. “ನಾನು ಕಾಫಿಗಾಗಿ ಸತ್ತಿದ್ದೇನೆ (ಅತ್ಯಂತ … Continued

ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

ಬೆಂಗಳೂರು: ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಏಪ್ರಿಲ್ 9ರಂದು ಮತದಾನ ನಡೆಯಲಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಈ ಎರಡೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಬಾಗಲಕೋಟೆ ಕ್ಷೇತ್ರ ಎಚ್​.ವೈ.ಮೇಟಿ ನಿಧನದಿಂದ ತೆರವಾಗಿದ್ದರೆ, ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ … Continued

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಗೆ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ನವದೆಹಲಿ:  ಚುನಾವಣಾ ಆಯೋಗವು ಇಂದು, ಭಾನುವಾರ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದೆ. ಉಳಿದ ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿದ್ದರೆ, ಪಶ್ಚಿಮ ಬಂಗಾಳ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ … Continued

ಬೈಕ್ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು

ಅಮರಾವತಿ: ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯ ಪುಂಗನೂರು ಪಟ್ಟಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ  ಘಟನೆಯೊಂದರಲ್ಲಿ, ಮನೆಯೊಳಗೆ ನಿಲ್ಲಿಸಿದ್ದ ಬೈಕ್‌ನಿಂದ ಹೊರಬಂದ ಹೊಗೆಯನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯವಾಗಿ ಹೇರ್ ಸಲೂನ್ ನಡೆಸುತ್ತಿರುವ ಮುರಳಿ ಎಂಬವರು ತಮ್ಮ ಬೈಕ್ ಅನ್ನು ಶನಿವಾರ ಸರ್ವಿಸ್ ಮಾಡಿಸಿದ್ದರು. ಎಂಜಿನ್ ಸಮಸ್ಯೆಯಿದ್ದ ಕಾರಣ ಮೆಕಾನಿಕ್ ಬೋರ್ … Continued

ಚಳ್ಳಕೆರೆ ಬಳಿ ಅಪಘಾತ; ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸಾವು

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಹೆಗ್ಗರೆ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು … Continued