ವೀಡಿಯೊ..| ಬೆಂಗಳೂರು : ವೇಗವಾಗಿ ಚಾಲನೆ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕೆ ಮಹಿಳೆ ಕೆನ್ನೆಗೆ ಬಲವಾಗಿ ಹೊಡೆದ ರ‍್ಯಾಪಿಡೋ ಚಾಲಕ ; ಕೆಳಕ್ಕೆ ಬಿದ್ದ ಮಹಿಳೆ

ಬೆಂಗಳೂರು : ಮೂರು ದಿನಗಳ ಹಿಂದೆ ನಡೆದ ಘಟನೆಯಲ್ಲಿ ಬೆಂಗಳೂರಿನ ಜಯನಗರ ಪ್ರದೇಶದ ಪಾದರಕ್ಷೆಗಳ ಶೋರೂಂ ಬಳಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಚಾಲಕ ಅತಿವೇಗದ ಚಾಲನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ ನಂತರ ವಾಗ್ವಾದ ಪ್ರಾರಂಭವಾಯಿತು ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, … Continued

ಅಹಮದಾಬಾದ್ ವಿಮಾನ ದರಂತ | ವಿಮಾನ ಬಿದ್ದು ಹೊತ್ತಿ ಉರಿಯುತ್ತಿದ್ದ ಸ್ಥಳದಿಂದ ಬದುಕುಳಿದ ಏಕೈಕ ವ್ಯಕ್ತಿ ನಡೆದು ಬರುವ ಹೊಸ ವೀಡಿಯೊ ವೈರಲ್‌

ಗಾಂಧಿನಗರ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 ವಿಮಾನ (Air India) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ ರಮೇಶ ಅವರು, ವಿಮಾನ ಅಪಘಾತವಾದ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ಹೊರಬಿದ್ದಿದೆ. ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ ಪಾರಾಗಿ ಬಂದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದ ಕ್ಯಾಂಪಸ್‌ನಿಂದ ಅವರು ಹೊರಗೆ ಹೋಗುತ್ತಿದ್ದಾಗ, ಬೆಂಕಿ … Continued

ಶಿರಸಿ-ಕುಮಟಾ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಗುಡ್ಡ ಕುಸಿತ ಉಂಟಾಗಿದೆ. ಬಹುತೇಕ ರಾತ್ರಿ ವೇಳೆಯೇ ಗುಡ್ಡ ಕುಸಿತ ಆಗುವುದನ್ನು ಪರಿಗಣಿಸಿ ಈ ಮಾರ್ಗವಾಗಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹಾಗೂ ಮತ್ತೆ ಕುಸಿಯುವ ಆತಂಕವಿರುವುದರಿಂದ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ 3 ದಿನ ಮಳೆ ಅಬ್ಬರ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್‌ 16 ರಿಂದ 18 ರವರೆಗೆ  ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್‌ 16 ರಂದು ಕರಾವಳಿಯ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ. ಜೂನ್‌ 17, 18ರಂದು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಜೂ.16 ರಂದು ಆರೆಂಜ್‌ … Continued

ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭಾನುವಾರ ದೆಹಲಿಯಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅವರನ್ನು ಆಸ್ಪತ್ರೆಯ ಗ್ಯಾಸ್ಟ್ರೋ ವಿಭಾಗದಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ದೃಢಪಡಿಸಿದೆ. ಈ ತಿಂಗಳಲ್ಲಿ 78 ವರ್ಷದ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು ಎರಡನೇ ಬಾರಿ. ಅಧಿಕೃತ ಹೇಳಿಕೆಯ ಪ್ರಕಾರ, … Continued

ಭಾರಿ ಮಳೆ ಮುನ್ಸೂಚನೆ : ಜೂನ್ 16 ರಂದು ದ.ಕ. ಜಿಲ್ಲೆಯ 5 ತಾಲೂಕುಗಳೂ, ಉಡುಪಿ ಜಿಲ್ಲೆ ಎಲ್ಲ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು/ಉಡುಪಿ : ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳು ಮತ್ತು ಉಡುಪಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ಜೂನ್ 16ರಂದು ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಉಳ್ಳಾಲ, ಮೂಡುಬಿದಿರೆ ಮತ್ತು ಮೂಲ್ಕಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್ 16ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಉಡುಪಿ ಜಿಲ್ಲೆಯ … Continued

ವೀಡಿಯೊಗಳು…| ಪುಣೆ : ಇಂದ್ರಯಾಣಿ ನದಿ ಪ್ರವಾಸಿ ಸೇತುವೆ ಕುಸಿತ ; ಹಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

ಪುಣೆ: ಭಾನುವಾರ ಮಧ್ಯಾಹ್ನ ಪುಣೆ ಜಿಲ್ಲೆಯ ದೇಹುವಿನ ಕುಂಡ್ಮಲ ಪ್ರದೇಶದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪಾದಾಚಾರಿ ಸೇತುವೆ ಕುಸಿದು ಹಲವಾರು ಜನರು ನದಿಯ ರಭಸದ ಪ್ರವಾಹಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 3:30 ರ ಸುಮಾರಿಗೆ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವಿಗೀಡಾಗಿರುವುದು ಎಂದು ದೃಢಪಟ್ಟಿದೆ, ಆದರೆ ಇನ್ನೂ ಅನೇಕರು ಕಾಣೆಯಾಗಿದ್ದಾರೆ. … Continued

ಭಾರಿ ಮಳೆಗೆ ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ರಸ್ತೆ ಸಂಚಾರ ಬಂದ್

ಚಿಕ್ಕಮಗಳೂರು : ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂ ಕುಸಿತಗಳು ಸಂಭವಿಸುತ್ತಿವೆ. ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರ ಒಂದೇ ಸ್ಥಳದಲ್ಲಿ ಪದೇಪದೇ ಗುಡ್ಡ ಕುಸಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಶೃಂಗೇರಿ-ಮಂಗಳೂರು ಮಾರ್ಗದ ರಸ್ತೆ ಸಂಚಾರವನ್ನು  ಬಂದ್ ಮಾಡಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೆಮ್ಮಾರು ಗ್ರಾಮದ ಬಳಿ ಗುಡ್ಡ … Continued

ವೀಡಿಯೊ..| ಜಿಪ್‌ಲೈನ್ ಅಪಘಾತ: 30 ಅಡಿ ಆಳದ ಕಮರಿಗೆ ಬಿದ್ದ 12 ವರ್ಷದ ಬಾಲಕಿ

ಮನಾಲಿಯಲ್ಲಿ ಜಿಪ್‌ಲೈನ್ ಹಗ್ಗ ತುಂಡಾಗಿ 30 ಅಡಿ ಆಳದ ಕಂದಕಕ್ಕೆ ಬಿದ್ದ ನಾಗ್ಪುರದ 12 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ಆಕೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕುಟುಂಬದ ಮೂಲಗಳ ಪ್ರಕಾರ, ತ್ರಿಶಾ ಬಿಜ್ವೆ ಎಂಬ ಬಾಲಕಿ ಮನಾಲಿಯಲ್ಲಿ ತನ್ನ ಕುಟುಂಬದೊಂದಿಗೆ ರಜೆ ಕಳೆಯುತ್ತಿದ್ದಳು. ಜಿಪ್‌ಲೈನ್ ಸವಾರಿ ಮಾಡುವಾಗ … Continued

ದಾಂಡೇಲಿ | ವೃದ್ಧೆ ಮೇಲೆ ಅತ್ಯಾಚಾರ ಪ್ರಕರಣ ; ಪರಾರಿಯಾಗಿದ್ದ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ವ್ಯಾಪ್ತಿಯಲ್ಲಿ 60 ವರ್ಷದ ವೃದ್ಧೆಯ ಮೇಲೆ ನಡೆದ ಅತ್ಯಾಚಾರ ಹಾಗೂ ದರೋಡೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಾತನನ್ನು ಬಂಧಿಸಲಾಗಿದೆ ಎಂದು … Continued