ಕಾರವಾರ : ನೌಕಾಪಡೆಯ ಸಬ್‌ಮರಿನ್‌ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಚಾರ

ಕಾರವಾರ: ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದಲ್ಲಿ ನೌಕಾಪಡೆಯ ‘ಐಎನ್ಎಸ್ ವಾಗ್ಶೀರ್’ (INS Vaghsheer) ಸಬ್‌ಮರಿನ್‌ನಲ್ಲಿ (ಜಲಾಂತರ್ಗಾಮಿ) ಸಮುದ್ರದ ಆಳಕ್ಕೆ ಇಳಿಯುವ ಮೂಲಕ ಐತಿಹಾಸಿಕ ಸಾಹಸ ಮೆರೆದಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಂತರ ಸಬ್‌ಮರಿನ್‌ನಲ್ಲಿ ಪಯಣಿಸಿದ ಎರಡನೇ ರಾಷ್ಟ್ರಪತಿ ಎಂಬ … Continued

ಭಾರತದ ʼಆಪರೇಶನ್‌ ಸಿಂಧೂರʼ ; ಪಾಕಿಸ್ತಾನದ ವಾಯುನೆಲೆ-ಸೈನಿಕರಿಗೆ ಹಾನಿಯಾಗಿದ್ದನ್ನು ಒಪ್ಪಿಕೊಂಡ ಪಾಕ್‌ ವಿದೇಶಾಂಗ ಸಚಿವ…!

ಇಸ್ಲಾಮಾಬಾದ್/ನವದೆಹಲಿ: ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗಕ್ಕೀಡಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಭಾರತ ನಡೆಸಿದ ʼಆಪರೇಶನ್‌ ಸಿಂಧೂರʼ ಕಾರ್ಯಾಚರಣೆಯ ‘ನಿಖರ ವೈಮಾನಿಕ ದಾಳಿ’ಯಿಂದ (Precision Strikes) ತನ್ನ ಸೇನಾ ನೆಲೆಗಳಿಗೆ ಭಾರಿ ಹಾನಿಯಾಗಿರುವುದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ. ಶನಿವಾರ ನಡೆದ ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿ ಇಶಾಕ್ … Continued

ಬೆಂಗಳೂರಲ್ಲಿ ʼವರದಯೋಗಿ ಶ್ರೀಧರʼ ನಾಟಕ ಪ್ರದರ್ಶನ

ಬೆಂಗಳೂರು : ಭಗವಾನ್‌ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಜೀವನಾಧಾರಿತ ʼವರದಯೋಗಿʼ ಶ್ರೀಧರ ಎಂಬ ಭಕ್ತಿ ಪ್ರಧಾನ ನಾಟಕವನ್ನು ಗುರುವಾರ (ಡಿಸೆಂಬರ್‌ 25 ) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ಪ್ರದರ್ಶಗೊಂಡಿತು. ಮೂರೂವರೆ ತಾಸುಗಳ ಕಾಲ ನಡೆದ ಈ ಪ್ರದರ್ಶನವು ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಮಣ್ಣಿಗೆ, ಹೊನ್ನಾವರ (ಉತ್ತರ ಕನ್ನಡ) … Continued

ಬೆಂಗಳೂರು : ಮೂರು ಕಡೆ ದಾಳಿ, 55.88 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಕ್ಕೆ

ಬೆಂಗಳೂರು/ ಮುಂಬೈ : ಮಹಾರಾಷ್ಟ್ರದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ, ಅಂತಾರಾಜ್ಯ ಎಂಡಿ (MD) ಡ್ರಗ್ಸ್ ಉತ್ಪಾದನಾ ಜಾಲವನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ. ಬೆಂಗಳೂರು ನಗರದ ಮೂರು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಘಟಕಗಳ ಮೇಲೆ ದಾಳಿ ಮಾಡಿರುವ ಪೊಲೀಸರು, ಸುಮಾರು 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. … Continued

ಪಾಕಿಸ್ತಾನದಲ್ಲಿ ತೀವ್ರಗೊಂಡ ಪ್ರತಿಭೆಗಳ ಪಲಾಯನ: ಪಾಕ್‌ ಸೇನಾ ಮುಖ್ಯಸ್ಥನ ಹೇಳಿಕೆಗೆ ಜನರಿಂದಲೇ ಅಪಹಾಸ್ಯ…

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈಗ ‘ಪ್ರತಿಭೆಗಳ ಪಲಾಯನ’ (Brain Drain)ದ ಭೀತಿ ಎದುರಾಗಿದೆ.  ಕೇವಲ ಎರಡು ವರ್ಷಗಳಲ್ಲಿ ಸಾವಿರಾರು ವೈದ್ಯರು, ಇಂಜಿನಿಯರ್‌ಗಳು ಮತ್ತು ಅಕೌಂಟೆಂಟ್‌ಗಳು ದೇಶ ತೊರೆದಿದ್ದಾರೆ ಎಂದು ಸರ್ಕಾರದ ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ. ಇದು ಪಾಕಿಸ್ತಾನಿಗಳು ತಮ್ಮ ಸರ್ಕಾರವನ್ನು  ಹಾಗೂ ಅದರ ಸೇನಾ ಮುಖ್ಯಸ್ಥ ಅಸಿಮ್ … Continued

ಹಂಪಿ: ಬೆಟ್ಟ ಹತ್ತುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಫ್ರೆಂಚ್ ಪ್ರವಾಸಿಗ ಎರಡು ದಿನಗಳ ಬಳಿಕ ಪತ್ತೆ

ಹೊಸಪೇಟೆ: ವಿಶ್ವವಿಖ್ಯಾತ ಯುನೆಸ್ಕೋ ಪರಂಪರೆ ತಾಣವಾದ ಹಂಪಿಯಲ್ಲಿ ಬೆಟ್ಟ ಹತ್ತಲು ಪ್ರಯತ್ನಿಸುತ್ತಿದ್ದ ಫ್ರೆಂಚ್ ಪ್ರವಾಸಿಗರೊಬ್ಬರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸುಮಾರು ಎರಡು ದಿನಗಳ ಕಾಲ ಜನರಿಲ್ಲದ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 52 ವರ್ಷದ ಪ್ರವಾಸಿಗನನ್ನು ಸ್ಥಳೀಯ ರೈತರು ಮತ್ತು ಅಧಿಕಾರಿಗಳು ರಕ್ಷಿಸಿದ್ದಾರೆ. ಗಾಯಾಳು ಪ್ರವಾಸಿಗ ಪ್ರಸ್ತುತ ಕೊಪ್ಪಳ ಜಿಲ್ಲಾ … Continued

2 ವರ್ಷಗಳಿಂದ ಪ್ರೀತಿಸಿ ವಿವಾಹವಾದರು… ಆದ್ರೆ ಮದುವೆಯಾದ 24 ಗಂಟೆಗಳಲ್ಲೇ ಡೈವೋರ್ಸ್…!

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಅತ್ಯಂತ ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣವೊಂದು ವರದಿಯಾಗಿದೆ. ಎರಡು-ಮೂರು ವರ್ಷಗಳಿಂದ ಪ್ರೀತಿಸಿ, ಸಂಭ್ರಮದಿಂದ ಮದುವೆಯಾಗಿದ್ದ ಜೋಡಿಯೊಂದು ಹಸೆಮಣೆ ಏರಿದ ಕೇವಲ 24 ಗಂಟೆಗಳಲ್ಲಿ ವಿಚ್ಛೇದನ ಪಡೆದು ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ….! ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿ ಹಾಗೂ ಇಂಜಿನಿಯರ್ ಆಗಿರುವ ಯುವಕ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಇತ್ತೀಚೆಗೆ … Continued

ವೀಡಿಯೊ..| ಕೇವಲ 2 ಸೆಕೆಂಡುಗಳಲ್ಲಿ 700 ಕಿಮೀ ಸ್ಪೀಡ್‌ ತಲುಪಿದ ವಿಶ್ವದ ಅತ್ಯಂತ ವೇಗದ ರೈಲು..! ಚೀನಾದಿಂದ ದಾಖಲೆ

ಶಾಂಘೈ: ಸಾರಿಗೆ ಕ್ಷೇತ್ರದಲ್ಲಿ ಚೀನಾ ಮತ್ತೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸಿದೆ. ಚೀನಾದ ಸಂಶೋಧಕರು ವಿಶ್ವದ ಅತ್ಯಂತ ವೇಗದ ಮ್ಯಾಗ್ಲೆವ್ (Maglev) ರೈಲನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಇದು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗವನ್ನು ತಲುಪುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ. ಈ ರೈಲು ಎಷ್ಟು ವೇಗವಾಗಿ ಚಲಿಸುತ್ತದೆ ಎಂದರೆ … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 6 ತಿಂಗಳಲ್ಲಿ 71 ಧರ್ಮನಿಂದನೆ ಪ್ರಕರಣ ದಾಖಲು

ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ವ್ಯವಸ್ಥಿತ ದಾಳಿಗಳು ಮುಂದುವರಿದಿವೆ. 2025ರ ಜೂನ್‌ನಿಂದ ಡಿಸೆಂಬರ್ ನಡುವಿನ ಕೇವಲ ಆರು ತಿಂಗಳ ಅವಧಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕನಿಷ್ಠ 71 ಧರ್ಮ ನಿಂದನೆ(Blasphemy) ಪ್ರಕರಣಗಳು ವರದಿಯಾಗಿವೆ ಎಂದು ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ (HRCBM) ತನ್ನ ಇತ್ತೀಚಿನ ವರದಿಯಲ್ಲಿ ಆಘಾತಕಾರಿ ಮಾಹಿತಿ ನೀಡಿದೆ. ರಂಗಪುರ, … Continued

ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಕೆರೆಗದ್ದೆ ಆಯ್ಕೆ

ಶಿರಸಿ: ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ 3 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ವಿಜಯ ಕರ್ನಾಟಕ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಕೆರೆಗದ್ದೆ 23 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ವಿಶ್ವವಾಣಿ ಜಿಲ್ಲಾ ವರದಿಗಾರ್ತಿ ವಿನುತಾ ಹೆಗಡೆ 6 ಮತಗಳನ್ನು ಪಡೆದರು. … Continued