ವೀಡಿಯೊಗಳು | ಮದುವೆಯಲ್ಲಿ ಶಾಕಿಂಗ್‌ ಘಟನೆ : ವೇದಿಕೆಯಲ್ಲೇ ವರನಿಗೆ ಇರಿತ ; ದಾಳಿಕೋರನನ್ನು 2 ಕಿಮೀ ಬೆನ್ನತ್ತಿದ ಡ್ರೋನ್..!

ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಸೋಮವಾರ ನಡೆದ ಒಂದು ವಿವಾಹ ಸಮಾರಂಭವು ಕ್ಷಣಾರ್ಧದಲ್ಲಿ ಹಿಂಸಾತ್ಮಕ ಸ್ಥಳವಾಗಿ ಮಾರ್ಪಟ್ಟಿತು. ವೇದಿಕೆಯ ಮೇಲೆ ನಿಂತಿದ್ದ ವರನಿಗೆ ಚಾಕುವಿನಿಂದ ಇರಿಯಲಾಗಿದ್ದು, ಈ ಇಡೀ ದಾಳಿಯ ದೃಶ್ಯವನ್ನು ವೀಡಿಯೊ ಚಿತ್ರೀಕರಣಕ್ಕಾಗಿ ಬಳಸಲಾಗಿದ್ದ ಡ್ರೋನ್ ಕ್ಯಾಮೆರಾ ಸೆರೆ ಹಿಡಿದಿದೆ. ಅಷ್ಟೇ ಅಲ್ಲದೆ, ಡ್ರೋನ್ ಅಪರಾಧಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ … Continued

ಡಿಸೆಂಬರ್ 6 ರಂದು ದೆಹಲಿಯಲ್ಲಿ 6 ಕಡೆ ಸ್ಫೋಟಕ್ಕೆ ಯೋಜನೆ : ‘ಡಾಕ್ಟರ್ ಮಾಡ್ಯೂಲ್’ ನ ಆತಂಕಕಾರಿ ಸಂಚು ಬಯಲು….!

ನವದೆಹಲಿ: ದೆಹಲಿಯ ಪ್ರಸಿದ್ಧ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಒಂದು ಆತಂಕಕಾರಿ ಯೋಜನೆಯನ್ನು ಬಯಲು ಮಾಡಿದ್ದಾರೆ. ಜೈಶ್-ಎ-ಮೊಹಮ್ಮದ್‌ಗೆ (Jaish-e-Mohammad) ಸಂಬಂಧ ಹೊಂದಿದೆಯೆಂದು ಶಂಕಿಸಲಾದ ವೈದ್ಯರನ್ನು ಒಳಗೊಂಡ ಭಯೋತ್ಪಾದಕ ತಂಡವು ಡಿಸೆಂಬರ್ 6 ರಂದು ದೆಹಲಿಯ (NCR) ಆರು ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿತ್ತು ಎಂಬುದು ಬಯಲಾಗಿದೆ ಎಂದು ಎಂದು … Continued

ದೆಹಲಿ ಸ್ಫೋಟ | ಡಾ. ಉಮರ್ ನಬಿಯೇ ಐ20 ಕಾರು ಚಾಲನೆ ಮಾಡುತ್ತಿದ್ದ ; ಡಿಎನ್ಎ ಪರೀಕ್ಷೆಯಲ್ಲಿ ದೃಢ

ನವದೆಹಲಿ : ದೆಹಲಿಯ ಕೆಂಪುಕೋಟೆಯ ಹೊರಗೆ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಕೃತ್ಯ ಎಸಗಿದ ವ್ಯಕ್ತಿ ಕಾಶ್ಮೀರದ ವೈದ್ಯ ಡಾ. ಉಮರ್ ಉನ್ ನಬಿ ಎಂದು ಡಿಎನ್‌ಎ (DNA) ಪರೀಕ್ಷೆಗಳು ದೃಢಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಆತನ ದೇಹವು ಛಿದ್ರವಾಗಿದ್ದ ಕಾರಣ, ಹೀಗಾಗಿ ಇದುವರೆಗೂ ಆತನ ಗುರುತು ದೃಢಪಟ್ಟಿರಲಿಲ್ಲ. ನವೆಂಬರ್ … Continued

ದೆಹಲಿ ಸ್ಫೋಟ “ಘೋರ ಭಯೋತ್ಪಾದಕ ದಾಳಿ”: ಪ್ರಮುಖ ಭದ್ರತಾ ಸಭೆಯ ನಂತರ ಕೇಂದ್ರದ ಹೇಳಿಕೆ

ನವದೆಹಲಿ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭಯೋತ್ಪಾದಕ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವವರ ಬಗ್ಗೆ ಕೇಂದ್ರ ಸಂಪುಟವು ಬುಧವಾರ ತೀವ್ರ ದುಃಖ ವ್ಯಕ್ತಪಡಿಸಿದೆ. ಈ ಘಟನೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 (Hyundai i20) ಕಾರಿನಲ್ಲಿ ಪ್ರಬಲ ಸ್ಫೋಟ ಸಂಭವಿಸಿ 12 ಜನರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು. ಈ ಸ್ಫೋಟವು … Continued

ದೆಹಲಿ ಸ್ಫೋಟ | ಹೊರಬಿದ್ದ ಮತ್ತೊಂದು ವೀಡಿಯೊ ; ಜನದಟ್ಟಣೆ ರಸ್ತೆಯಲ್ಲಿ ಕಾರು ಸ್ಫೋಟಗೊಂಡ ಕ್ಷಣ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಕೆಂಪು ಕೋಟೆ (Red Fort) ಬಳಿ ನಡೆದ ಭೀಕರ ಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ, ಹೊಸದಾಗಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳು ವೈಟ್ ಹ್ಯುಂಡೈ ಐ20 (White Hyundai i20) ಕಾರು ರಶ್-ಅವರ್ ಸಂಚಾರದ ಮಧ್ಯೆ ಸ್ಫೋಟಗೊಂಡ ಕ್ಷಣವನ್ನು ಸೆರೆಹಿಡಿದಿವೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ … Continued

ದೆಹಲಿ ಸ್ಫೋಟ ; ಆರೋಪಿ ಖರೀದಿಸಿದ ಇಕೋಸ್ಪೋರ್ಟ್ ಕಾರು ಭಾರೀ ಹುಡುಕಾಟದ ನಂತರ ಹರಿಯಾಣದ ಹಳ್ಳಿಯಲ್ಲಿ ಪತ್ತೆ…!

ನವದೆಹಲಿ: ತೀವ್ರ ಎಚ್ಚರಿಕೆಯನ್ನು (ಹೈ ಅಲರ್ಟ್) ನೀಡಿದ ಕೆಲವೇ ಗಂಟೆಗಳಲ್ಲಿ, ದೆಹಲಿ ಪೊಲೀಸರು ಕೆಂಪು ಕೋಟೆ ಸ್ಫೋಟಕ್ಕೆ ಸಂಬಂಧಿಸಿದೆ ಎಂದು ಶಂಕಿಸಲಾದ ಕೆಂಪು ಬಣ್ಣದ ಇಕೋಸ್ಪೋರ್ಟ್ ಕಾರನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಪ್ರಕಾರ, DL10CK0458 ಸಂಖ್ಯೆಯ ಈ ಕಾರು ಹರಿಯಾಣದ ಬುಧವಾರ ಖಂಡಾವಲಿ ಗ್ರಾಮದಲ್ಲಿನ ಒಂದು ಫಾರ್ಮ್‌ಹೌಸ್‌ನಲ್ಲಿ ಕೈಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಮರ್ ನಕಲಿ ವಿಳಾಸವನ್ನು … Continued

ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಪ್ರಕರಣದ (Dharmasthala case) ಬಗ್ಗೆ ಎಸ್‌ಐಟಿ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಧರ್ಮಸ್ಥಳದಲ್ಲಿ ಅಸಹಜ ಸಾವುಗಳಿಗೆ ಸಂಬಂಧಿಸಿದ ಹಲವಾರು ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ … Continued

ಮಹಿಳಾ ನೌಕರರಿಗೆ ಮುಟ್ಟಿನ ರಜೆ ; ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು : ಮಹಿಳಾ ನೌಕರರಿಗೆ ಮುಟ್ಟಿನ ರಜೆ (ಋತುಚಕ್ರ) ರಜೆ ನೀಡಲು ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರಿ, ಅನುದಾನಿತ, ಖಾಸಗಿ ಎಲ್ಲಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ತಿಂಗಳಲ್ಲಿ ಒಂದು ದಿನಮುಟ್ಟಿನ ರಜೆ ನೀಡಬೇಕು. ತಿಂಗಳಲ್ಲಿ ಒಂದು ದಿನ ವರ್ಷಕ್ಕೆ 12 ದಿನ ವೇತನ ಸಹಿತ ರಜೆ ನೀಡುವಂತೆ ಸರ್ಕಾರ ಆದೇಶಿಸಿದೆ. ಇತ್ತೀಚೆಗಷ್ಟೇ ಋತುಚಕ್ರ ರಜೆ ನೀಡಲು … Continued

ಕಾಂಗ್ರೆಸ್ಸಿನಲ್ಲಿ ಮಹತ್ವದ ಸಂಘಟನಾತ್ಮಕ ನೇಮಕಾತಿ : ಕರ್ನಾಟಕದ ನಿವೇದಿತ್‌ ಆಳ್ವ, ಬಿ.ವಿ ಶ್ರೀನಿವಾಸ ಸೇರಿ 9 ನೂತನ ಕಾರ್ಯದರ್ಶಿಗಳ ನೇಮಕ

ನವದೆಹಲಿ: ಮಹತ್ವದ ಸಂಘಟನಾತ್ಮಕ ಬದಲಾವಣೆಯಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಒಂಬತ್ತು ನೂತನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ ಮತ್ತು ಐದು ಹಾಲಿ ಕಾರ್ಯದರ್ಶಿಗಳ ಜವಾಬ್ದಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮರುಹಂಚಿಕೆ ಮಾಡಲು ಅನುಮೋದನೆ ನೀಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಪತ್ರಿಕಾ ಹೇಳಿಕೆಯ … Continued

ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ; ₹1.5 ಲಕ್ಷ ದೋಚಿದ್ದ ಬಿಹಾರದ ಸೈಬರ್ ವಂಚಕನ ಬಂಧನ

ಬೆಂಗಳೂರು : ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಹಾರ ಮೂಲದ ವಿಕಾಸಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಬೆಂಗಳೂರಿನ ಸದಾಶಿವನಗರ ಪೊಲೀಸರು ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ. ಆರೋಪಿ ವಿಕಾಸಕುಮಾರ ಮತ್ತು ಆತನ ಸಹಚರರು ದೊಡ್ಡ ಮಟ್ಟದ … Continued