ವರನ ಪಾದರಕ್ಷೆ ಕದಿಯುವ ವಿನೋದದ ಸಂಪ್ರದಾಯದಲ್ಲಿ ಅನಿರೀಕ್ಷಿತ ತಿರುವು ; ಮಂಟಪದಲ್ಲೇ ಮದುವೆ ಮುರಿದುಬಿತ್ತು…!

ಮಥುರಾ/ಹಾಥ್ರಸ್ : ಭಾರತೀಯ ವಿವಾಹ ಸಂಪ್ರದಾಯದ ಭಾಗವಾದ ವರನ ಪಾದರಕ್ಷೆ ಕದಿಯುವ (ಶೂ ಸ್ಟೀಲಿಂಗ್) ವಿನೋದಮಯ ಸಂಪ್ರದಾಯವು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿ, ಇಡೀ ನಡೆಯುತ್ತಿದ್ದ ಮದುವೆಯೇ ಮುರಿದುಬಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯಲ್ಲಿ ನವೆಂಬರ್ 7ರಂದು ನಡೆದಿದೆ ಎಂದು ವರದಿಯಾಗಿದೆ. ಹಾಥ್ರಸ್ ಜಿಲ್ಲೆಯ ಸಹಪಾವು ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಾಡಾಗಿತ್ತು. ಅಮೆರಿಕದಲ್ಲಿ … Continued

ಬಿಹಾರದಲ್ಲಿ ಕಾಂಗ್ರೆಸ್ಸಿಗೆ ಆಘಾತ ; ಹಿರಿಯ ನಾಯಕ ಶಕೀಲ್ ಅಹ್ಮದ್ ಪಕ್ಷಕ್ಕೆ ರಾಜೀನಾಮೆ

 ನವದೆಹಲಿ: ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಕೀಲ್ ಅಹ್ಮದ್ ಅವರು ಮಂಗಳವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಹಾರದಲ್ಲಿನ ಕಾಂಗ್ರೆಸ್ ನಾಯಕತ್ವದೊಂದಿಗೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಅಹ್ಮದ್ ಅವರು, ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದಿಂದಲೂ ದೂರ ಉಳಿದಿದ್ದರು. ಕಾಂಗ್ರೆಸ್ ಪಕ್ಷವು ಪಂಜಾಬ್ ಮತ್ತು ಹರಿಯಾಣ … Continued

ನಿಧಾನ ಚಲಿಸುತ್ತಿದ್ದ ನೂರಾರು ವಾಹನಗಳು, ನಂತರ ದೊಡ್ಡ ಸ್ಫೋಟ ; ದೆಹಲಿ ಕಾರ್ ಸ್ಫೋಟದ ಕ್ಷಣದ ವೀಡಿಯೊ ವೈರಲ್‌

ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪುಕೋಟೆ (Red Fort) ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಬುಧವಾರ ಬಹಿರಂಗಗೊಂಡಿವೆ. ಈ ಭಯೋತ್ಪಾದಕ ದಾಳಿಯಲ್ಲಿ ಇದುವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ಆರಂಭಿಸಿದೆ. ಸಿಸಿಟಿವಿಯಲ್ಲಿ ಸೆರೆಯಾದ 15-ಸೆಕೆಂಡುಗಳ ವೀಡಿಯೊ ತುಣುಕಿನಲ್ಲಿ, ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ವಾಹನ … Continued

ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಬಾಲಿವುಡ್‌ ನಟ ಗೋವಿಂದ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್‌ನ ಹಿರಿಯ ನಟ ಗೋವಿಂದ ಅವರು ಮಂಗಳವಾರ ರಾತ್ರಿ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನಂತರ, ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 61 ವರ್ಷದ ನಟ ಗೋವಿಂದ ಅವರು ಗೊಂದಲ (disorientation)ದಿಂದಾಗಿ ತಡರಾತ್ರಿ ತಮ್ಮ ಮನೆಯಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಅವರು ಎನ್‌ಡಿಟಿವಿಗೆ … Continued

ಸೇನೆಯ ಬಲ ಉಪಯೋಗಿಸದೇ ಪಾಕಿಸ್ತಾನದಲ್ಲಿ ಅಸಿಮ್ ಮುನೀರ್ ʼಸೇನಾ ದಂಗೆʼ ; ಇದರಿಂದ ಭಾರತದ ಮೇಲೆ ಪರಿಣಾಮ ಏನು..?

ಪಾಕಿಸ್ತಾನದಲ್ಲಿ ನಾಲ್ಕನೇ ಸೇನಾ ‘ದಂಗೆ’ (Coup) ತೆರೆಮರೆಯಲ್ಲಿ ನಡೆಯುತ್ತಿದೆ. ಇದು ಹಿಂದಿನ ದಂಗೆಗಳಂತೆ ಮಧ್ಯರಾತ್ರಿ ಅಥವಾ ಬಂದೂಕುಗಳ ಬಲದಿಂದ ನಡೆಯುವ ಬದಲಾಗಿ, ಇದು ಕೈಗೊಂಬೆ ಸರ್ಕಾರದ ಮೂಲಕ ನಡೆಯುತ್ತಿರುವ ‘ಸಂವಿಧಾನ’ದ ಅಡಿಯಲ್ಲಿ ಸರ್ಕಾರದ ಸಾಂವಿಧಾನಾತ್ಮಕ ಅಧಿಕಾರ ಕಿತ್ತುಕೊಳ್ಳುವ ದಂಗೆ ಎನ್ನಲಾಗಿದೆ. ಈ ‘ಶಸ್ತ್ರ ರಹಿತ ದಂಗೆ’ಯು ಪಾಕಿಸ್ತಾನವನ್ನು ಆಂತರಿಕವಾಗಿ ಮತ್ತಷ್ಟು ದುರ್ಬಲಗೊಳಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಸೋಮವಾರ … Continued

ವೀಡಿಯೊ…| ಶಿರಸಿ : ಶಾಸಕರ ತೋಟದ ಮನೆಗೆ ಬಂದು ನಾಯಿ ಮರಿ ಹೊತ್ತೊಯ್ದ ಚಿರತೆ

ಶಿರಸಿ :ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಶಿರಸಿ ತಾಲೂಕಿನ ಮಳಲಗಾಂವದ ತೋಟದ ಮನೆಗೆ ಚಿರತೆಯೊಂದು ಒಳಗೆ ಬಂದು ನಾಯಿ ಮರಿಯನ್ನು ಹೊತ್ತೊಯ್ದಿದೆ ಎಂದು ವರದಿಯಾಗಿದೆ. ಮಂಗಳವಾರ ಬೆಳಗಿನ ಜಾವ 1ರಿಂದ 1:30ರ ಸುಮಾರಿಗೆ ಚಿರತೆ  ಮನೆಯ ಆವರಣದೊಳಗೆ ಪ್ರವೇಶಿಸಿದೆ.  ಚಿರತೆ ಒಳಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ … Continued

ದೆಹಲಿ ಕೆಂಪು ಕೋಟೆ ಸ್ಫೋಟದಲ್ಲಿ ಭಾಗಿಯಾಗಿರುವ ವೈದ್ಯನಿಂದ ಶಂಕಿತ ಆತ್ಮಹತ್ಯಾ ಬಾಂಬರ್ ಆಗಿ ಬದಲಾದ ಡಾ. ಉಮರ್ ನಬಿ ಯಾರು…?

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ವೈದ್ಯಕೀಯ ವೃತ್ತಿಯಿಂದ ಭಯೋತ್ಪಾದಕನಾಗಿ ಬದಲಾದ ಡಾ. ಉಮರ್ ಯು ನಬಿ ಎಂಬ ವ್ಯಕ್ತಿಯೇ ಸ್ಫೋಟಿಸಿರುವ ಸಾಧ್ಯತೆ ಇದೆ ಎಂದು ಸಂಕಿಸಲಾಗಿದೆ. ಮಂಗಳವಾರ ಬೆಳಗ್ಗೆ, ದೆಹಲಿ ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾದ ಡಾ. ಉಮರ್ ಮೊದಲ ಫೋಟೋ ಹೊರಬಿದ್ದಿದೆ. ಸೋಮವಾರ ಸಂಜೆ … Continued

ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಅಧಿಕಾರಕ್ಕೆ ; ಭವಿಷ್ಯ ನುಡಿದ 8 ಎಕ್ಸಿಟ್ ಪೋಲ್‌ ಗಳು

ಬಿಹಾರದಲ್ಲಿ ಮತದಾನ ಮುಗಿದಿದ್ದು, ಇದರ ಬೆನ್ನಿಗೇ ಮತತಗಟ್ಟೆ ಸಮೀಕ್ಷೆಗಳು ರಾಜಕೀಯ ಪಕ್ಷಗಳ ಭವಿಷ್ಯ ಏನಾಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಬಾರಿಯೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಎಂಟು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಎನ್‌ಡಿಎ 145 ರಿಂದ 160 … Continued

ದೆಹಲಿ ಕೆಂಪು ಕೋಟೆ ಕಾರು ಸ್ಫೋಟ : ಫರಿದಾಬಾದ್‌ ಬಂಧನದ ನಂತರ ಭಯಭೀತನಾದ ಶಂಕಿತ ಉಗ್ರ ಸ್ಫೋಟಿಸಿಕೊಂಡನೇ…?

ನವದೆಹಲಿ: ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆಯ ಹೊರಗೆ ನಡೆದ ಕಾರು ಸ್ಫೋಟವು ಬಹುಶಃ ಫಿದಾಯಿನ್ ಶೈಲಿಯ ಭಯೋತ್ಪಾದಕ ದಾಳಿಯಾಗಿರಬಹುದು, ಇದನ್ನು ಫರಿದಾಬಾದ್ ಮೂಲದ ಭಯೋತ್ಪಾದಕ ಘಟಕದ ಪ್ರಮುಖ ಸದಸ್ಯ ಡಾ. ಮೊಹಮ್ಮದ್ ಉಮರ್ ನಡೆಸಿದ್ದಾನೆ ಎಂದು ಉನ್ನತ ಗುಪ್ತಚರ ಮೂಲಗಳು ಭಾವಿಸಿವೆ. ಫರಿದಾಬಾದ್ ಘಟಕದ ಪ್ರಮುಖ ಆರೋಪಿ ಡಾ. ಮುಜಮ್ಮಿಲ್ ಶಕೀಲ್ ಬಂಧನದ ನಂತರ … Continued

ದೆಹಲಿ ಸ್ಫೋಟ: ಶಂಕಿತ ಆತ್ಮಹತ್ಯಾ ಬಾಂಬರ್ ಸ್ಫೋಟಕ್ಕೂ ಮುನ್ನ 3 ತಾಸು ನಿಲ್ಲಿಸಿದ್ದ ಕಾರಿನೊಳಗಿದ್ದ, ಒಮ್ಮೆಯೂ ಕೆಳಗೆ ಇಳಿದಿರಲಿಲ್ಲ : ಮೂಲಗಳು

ನವದೆಹಲಿ: ದೆಹಲಿಯ ಕೆಂಪುಕೋಟೆ (Red Fort) ಬಳಿ ಸೋಮವಾರ ಸಂಜೆ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ. ಈ ಸ್ಫೋಟದಲ್ಲಿ ಒಂಭತ್ತು ಜನರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಸ್ಫೋಟಗೊಂಡ ಹ್ಯುಂಡೈ ಐ20 (Hyundai i20) ಕಾರು ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು, ಐತಿಹಾಸಿಕ ಸುನೆಹ್ರಿ ಮಸೀದಿ (Sunehri Masjid) ಬಳಿ ಮೂರು … Continued