ಜೂನ್‌ 1ರಿಂದ ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ; ಪ್ರವೇಶ ಶುಲ್ಕ ನಿಗದಿ

ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ (vidhana soudha tour) ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ (Guided tour) ಚಾಲನೆ ನೀಡಲಾಗಿದ್ದು, ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಳಗ್ಗೆ 8ರಿಂದ … Continued

18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವೆ ; ಸ್ಪೀಕರ್‌

ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾನುವಾರ ಹೇಳಿದ್ದಾರೆ. 18 ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಭಾನುವಾರ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ … Continued

“ಅಮೆರಿಕಕ್ಕೆ ಬಾಂಗ್ಲಾದೇಶವನ್ನೇ ಮಾರಾಟ ಮಾಡಿದ…”: ಮುಹಮ್ಮದ್ ಯೂನಸ್ ವಿರುದ್ಧ ಶೇಖ್ ಹಸೀನಾ ಗಂಭೀರ ಆರೋಪ

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ “ಅಮೆರಿಕಕ್ಕೆ ದೇಶವನ್ನು ಮಾರಾಟ ಮಾಡಿದ್ದಾರೆ” ಎಂದು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ. ಇತ್ತೀಚೆಗೆ ತಮ್ಮ ಅವಾಮಿ ಲೀಗ್ ಪಕ್ಷದ ಮೇಲೆ ನಿಷೇಧ ಹೇರಿದ್ದನ್ನು ಖಂಡಿಸಿದ ಅವರು, ಅದನ್ನು ಸಂವಿಧಾನಬಾಹಿರ ಎಂದು ಕರೆದಿದ್ದಾರೆ. ತಮ್ಮ ಪಕ್ಷದ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಧ್ವನಿ ಸಂದೇಶದಲ್ಲಿ, … Continued

ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ…!

ಮದುವೆಯೊಂದರಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗೆಂದು ಕರೆಸಿದ್ದ ನೃತ್ಯ ತಂಡವು ವರನನ್ನು ಮಂಟಪದಿಂದಲೇ ಅಪಹರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿದ್ದ ಜನರ ಪ್ರಕಾರ, “ಲೌಂಡಾ ನಾಚ್ ಪಾರ್ಟಿ” – ಸಾಮಾನ್ಯವಾಗಿ ಮದುವೆಗಳಿಗೆ ನೇಮಿಸಿಕೊಳ್ಳುವ ಸಾಂಪ್ರದಾಯಿಕ ನೃತ್ಯ ತಂಡವಾಗಿದ್ದು, ಈ ನೃತ್ಯ … Continued

ಲಾಲು ಕುಟುಂಬದಲ್ಲಿ ಬಿರುಗಾಳಿ ; ಹಿರಿಯ ಮಗನನ್ನು ಆರ್‌ ಜೆಡಿ ಪಕ್ಷ, ಕುಟುಂಬದಿಂದ ಹೊರಹಾಕಿದ ಲಾಲು ಪ್ರಸಾದ ಯಾದವ್‌…!

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಹಾಗೂ ವರಿಷ್ಠ ನೇತಾರ ಲಾಲು ಪ್ರಸಾದ ಯಾದವ್ ಭಾನುವಾರ ತಮ್ಮ ಹಿರಿಯ ಪುತ್ರ ತೇಜಪ್ರತಾಪ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಲ್ಲದೆ, ತೇಜಪ್ರತಾಪ ಅವರನ್ನು ಕುಟುಂಬದಿಂದಲೂ ಹೊರಹಾಕಿದ್ದಾರೆ. ತೇಜಪ್ರತಾಪ ಅವರ “ಬೇಜವಾಬ್ದಾರಿಯುತ ನಡವಳಿಕೆ” ಮತ್ತು ಅವರು ಕುಟುಂಬದ ಮೌಲ್ಯಗಳು ಮತ್ತು ಸಾರ್ವಜನಿಕ ಸಭ್ಯತೆಯಿಂದ … Continued

ಪಹಲ್ಗಾಮ್ ದಾಳಿ : ಪ್ರವಾಸಿಗರು ಹೋರಾಡಬೇಕಿತ್ತು, ಮಹಿಳೆಯರು ‘ವೀರತ್ವʼ ತೋರಬೇಕಿತ್ತು ; ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಚಂಡೀಗಢ : ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂದು ರಾಜ್ಯಸಭಾ ಸಂಸದ ರಾಮಚಂದರ ಜಂಗ್ರಾ ಶನಿವಾರ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಲ್ಲಿ “ಸ್ಫೂರ್ತಿಯ ಕೊರತೆ ಇತ್ತು” ಮತ್ತು ಅವರು ‘ವೀರಾಂಗನೆ'(ಯೋಧ ಮಹಿಳೆಯರು)ಯರಂತೆ ವರ್ತಿಸಬೇಕಾಗಿತ್ತು ಎಂದು ಅವರು … Continued

4 ರಾಜ್ಯಗಳ ವಿಧಾನಸಭಾ ಉಪಚುನಾವಣೆ ಘೋಷಣೆ

ನವದೆಹಲಿ: ಗುಜರಾತ್, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. ಐದು ಕ್ಷೇತ್ರಗಳಿಗೆ ಜೂನ್ 19 ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂನ್ 23 ರಂದು ನಡೆಯಲಿದೆ. ಗುಜರಾತಿನ ಕಾಡಿ (ಮೀಸಲು ಸ್ಥಾನ) ಮತ್ತು ವಿಸಾವದರ್ ಕ್ಷೇತ್ರಗಳು , ಕೇರಳದ ನಿಲಂಬೂರ್ … Continued

ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ

ನವದೆಹಲಿ: ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಭಾರತವು ಒಂದು ಸ್ಥಾನ ಮೇಲೇರಿದೆ. ಭಾರತ ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ. ದೇಶದ ಜಿಡಿಪಿ $4 ಟ್ರಿಲಿಯನ್ ಗಡಿಯನ್ನು ತಲುಪಿದೆ, ಈಗ ಭಾರತವು ಅಮೆರಿಕ, ಚೀನಾ ಮತ್ತು ಜರ್ಮನಿಗಿಂತ ಹಿಂದಿದೆ. ನೀತಿ ಚಿಂತಕರ … Continued

ಬೆಂಗಳೂರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಕೋವಿಡ್‌ ಸೋಂಕಿತ ವ್ಯಕ್ತಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ತೀವ್ರ ಕೊಮೊರ್ಬಿಡಿಟಿಯಿಂದ ಬಳಲುತ್ತಿದ್ದ 84 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಅವರ ಕೋವಿಡ್ -19 ಪರೀಕ್ಷೆಯ ಫಲಿತಾಂಶಗಳು ಶನಿವಾರ ಪಾಸಿಟಿವ್ ಬಂದಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಕೊಮೊರ್ಬಿಡಿಟಿಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮೇ 13 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಅವರು ಮೇ 17 ರಂದು ನಿಧನರಾದರು. … Continued

ಸೊಳ್ಳೆಗಳು ಕೆಲವು ವ್ಯಕ್ತಿಗಳತ್ತ ಮಾತ್ರ ಹೆಚ್ಚು ಆಕರ್ಷಿತವಾಗುತ್ತವೆ ಯಾಕೆ ? ಅಧ್ಯಯನ ಹೇಳುವುದು ಏನೆಂದರೆ…

ಸೊಳ್ಳೆಗಳು ಎಲ್ಲರಿಗೂ ತೊಂದರೆ ಕೊಡುತ್ತವೆ, ಆದರೆ ಕೆಲವು ಜನರತ್ತ ಇತರರಿಗಿಂತ ಹೆಚ್ಚಾಗಿ ಅವುಗಳು ಆಕರ್ಷಣೆಗೆ ಒಳಗಾಗುತ್ತವೆ. ಈ ಸೊಳ್ಳೆಗಳು ಯಾವುದೇ ಚರ್ಮದಲ್ಲಿನ ರಕ್ತವನ್ನು ಹೀರಲು ತಮ್ಮ ಸೂಜಿಯಂತಹ ಪ್ರೋಬೊಸೈಸ್‌ಗಳನ್ನು ಬಳಸುತ್ತವೆ. ಆದರೆ ಕೆಲವರತ್ತ ಸೊಳ್ಳೆಗಳಿಗೆ ಹೆಚ್ಚು ಬರುವುದೇಕೆ..? ಇದರ ಹಿಂದಿನ ವಿಜ್ಞಾನವೇನು? ಅದು ವಾಸನೆಯೊಂದಿಗೆ ಏನಾದರೂ ಸಂಬಂಧ ಹೊಂದಿರಬಹುದೇ ಎಂಬ ಪ್ರಶ್ನೆಗೆ ಸಂಶೋಧನೆಯೊಂದು ಉತ್ತರ ಕಂಡುಕೊಳ್ಳಲು … Continued