ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಷಕಾರಿ ಹಾವು ಎರಡು ಬಾರಿ ಕಚ್ಚಿದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಒಬ್ಬರಿಗೆ ತುರ್ತು ಸಂದರ್ಭದಲ್ಲಿ ಎಐ (AI) ಉಪಕರಣದಿಂದ ಪಡೆದ ಮಾಹಿತಿಯು ಚಿಕಿತ್ಸೆಗೆ ನೆರವಾದ ಘಟನೆ ವರದಿಯಾಗಿದೆ. ಹಾವಿನ ಚಿತ್ರವನ್ನು ಎಐ (AI) ಟೂಲ್‌ ಮೂಲಕ ವಿಶ್ಲೇಷಿಸಿ, ಅದರ ಜಾತಿ ಹಾಗೂ ವಿಷದ ಪರಿಣಾಮಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಈ … Continued

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ : 21 ಕಡೆ ಇ.ಡಿ. ದಾಳಿ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ  ವಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಎಸ್.ಸಾಹುಕಾರ ಅವರ ಮನೆ ಸೇರಿದಂತೆ 21 ಕಡೆಗಳಲ್ಲಿ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಇಂದು, ಮಂಗಳವಾರ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. .ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಂಡಿರುವ … Continued

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್ ರೈಗೆ ಕ್ಲೀನ್ ಚಿಟ್

ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆ ಕಳವು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಕ್ಲೀನ್‌ಚಿಟ್ ನೀಡಿದೆ ಹಾಗೂ ಟ್ರಸ್ಟ್‌ನ ಮಾಜಿ ಸದಸ್ಯ ಅನಿಲ ಮಿಶ್ರಾ ಅವರ ಮೇಲಿದ್ದ ಆರೋಪಗಳಿಗೂ ಎಸ್‌ಐಟಿ ತನಿಖೆಯಲ್ಲಿ … Continued

ಕುಮಟಾ : ತದಡಿ ಅಳಿವೆಯಲ್ಲಿ ಎರಡೇ ದಿನದಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್‌ ಮುಳುಗಡೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಬಂದರಿನ ಅಳಿವೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಮುಳುಗಿದೆ ಎಂದು ವರದಿಯಾಗಿದೆ. ಅದರಲ್ಲಿದ್ದ ನಾಲ್ವರು ಮೀನುಗಾರರು ಪಾರಾಗಿದ್ದಾರೆ. ಎರಡ್ಮೂರು ದಿನಗಳ ಹಿಂದಷ್ಟೇ ಇದೇ ತದಡಿ ಬಂದರಿನ ಅಳಿವೆಯಲ್ಲಿ ಮೀನುಗಾರಿಕಾ ಬೋಟ್‌ ಮುಳುಗಿತ್ತು. ‘ಲಕ್ಷ್ಮೀ ಕೃಪ’ ಹೆಸರಿನ ಮೀನುಗಾರಿಕಾ ಬೋಟ್‌ ತದಡಿ ಅಳಿವೆಯಲ್ಲಿ ಸಾಗುತ್ತಿದ್ದ ವೇಳೆ ಬಿರುಸಿನ ಅಲೆಗಳಿಗೆ … Continued

ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್‌ ; ಅಮೆರಿಕದಲ್ಲೂ ಕಡ್ಡಾಯ ʼವೋಟರ್‌ ಐಡಿ ಕಾರ್ಡ್‌ʼ ವ್ಯವಸ್ಥೆ ಜಾರಿಗೆ ಒತ್ತಾಯ

ವಾಷಿಂಗ್ಟನ್ : ಅಮೆರಿಕದ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಪೌರತ್ವದ ದೃಢೀಕರಣವನ್ನು ಕಡ್ಡಾಯಗೊಳಿಸುವ ಉದ್ದೇಶದ ‘ಸೇವ್ ಅಮೆರಿಕಾ ಆಕ್ಟ್’ (SAVE America Act) ಜಾರಿಗೆ ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಒತ್ತಾಯಿಸಿದ್ದಾರೆ. ತಮ್ಮ ವಾದಕ್ಕೆ ಭಾರತದ ಚುನಾವಣಾ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿರುವ ಟ್ರಂಪ್, ಅಮೆರಿಕದ ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯ ಫೋಟೋ ಗುರುತಿನ … Continued

ವಿಡಿಯೋ | ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಯುವತಿಯರಿಬ್ಬರ ಹೊಡೆದಾಟ ; ರೀಲ್ಸ್‌ಗಾಗಿ ನಡೆಯಿತೇ ಜಗಳ ?

ಬೆಂಗಳೂರು: ನಗರದ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿ ಭಾನುವಾರ ಇಬ್ಬರು ಯುವತಿಯರ ನಡುವೆ ನಡೆದ ಜಗಳ ಸಾರ್ವಜನಿಕರ ಗಮನ ಸೆಳೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕಬ್ಬನ್ ಪಾರ್ಕ್‌ನಲ್ಲಿ ರೀಲ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅದು ಕೈಕೈ … Continued

ಬೆಂಗಳೂರು : 500 ವಿದ್ಯಾರ್ಥಿಗಳು, 21 ಸಿಬ್ಬಂದಿಗೆ ತೀವ್ರ ಜ್ವರ ; ಶಾಲೆ ಬಂದ್‌

ಬೆಂಗಳೂರು: ಬೆಂಗಳೂರು ನಗರದ ರಿಚರ್ಡ್ಸ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಋತುಮಾನೀಯ ಜ್ವರದಂತಹ ಕಾಯಿಲೆಯ ತೀವ್ರ ಹಾವಳಿ ಕಾಣಿಸಿಕೊಂಡಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 21 ಸಿಬ್ಬಂದಿ ಜ್ವರ, ಶೀತ, ಕೆಮ್ಮು ಮತ್ತು ಮೈಕೈ ನೋವಿನಿಂದ ಬಳಲುತ್ತಿದ್ದಾರೆ ಎಂದು ಶಾಲಾ ಆಡಳಿತ ತಿಳಿಸಿದೆ.  ಕನಿಷ್ಠ ಇಬ್ಬರು ವಿದ್ಯಾರ್ಥಿಗಳಲ್ಲಿ ಎಚ್‌1ಎನ್‌1 (H1N1) ಸೋಂಕು ದೃಢಪಟ್ಟಿದೆ ಎಂದು ತಿಳಿಸಲಾಗಿದೆ. ಅಲ್ಲದೆ, … Continued

ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ತಂಡದ ಪುನರ್ರಚನೆ : ಇದು ಮೋದಿ ಸಂಪುಟದ ಪುನರ್ರಚನೆಗೆ ಮುನ್ನುಡಿಯೇ ?

ನವದೆಹಲಿ: ಭಾರತೀಯ ಜನತಾ ಪಕ್ಷ(BJP)ದ ರಾಷ್ಟ್ರೀಯ ಪದಾಧಿಕಾರಿಗಳ ತಂಡಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಸೋಮವಾರ ಪಕ್ಷದ ನೂತನ ರಾಷ್ಟ್ರೀಯ ಸಂಘಟನಾ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ … Continued

ವಿಮಲ್ ಎಲೈಚಿ ಜಾಹೀರಾತು : ಅಜಯ ದೇವಗನ್, ಶಾರುಖ್ ಖಾನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ಮುಂಬೈ: ವಿಮಲ್ ಎಲೈಚಿ ಜಾಹೀರಾತಿನಲ್ಲಿ ಬ್ರ್ಯಾಂಡ್ ಅನುಮೋದಕರಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟರಾದ ಅಜಯ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ‘ವಿಮಲ್ ಎಲೈಚಿ’ ಹೆಸರಿನಲ್ಲಿ ಪ್ರಸಾರವಾಗಿರುವ ಈ ಜಾಹೀರಾತು ನಿಷೇಧಿತ ಅಥವಾ ನಿರ್ಬಂಧಿತ ಉತ್ಪನ್ನದ ಪರೋಕ್ಷ, ಪರ್ಯಾಯ … Continued

ಇನ್ಮುಂದೆ ಕರ್ನಾಟಕದ ಹೋಟೆಲ್‌, ಮೆಡಿಕಲ್‌ ಸ್ಟೋರ್‌ಗಳಲ್ಲಿ ಕ್ಯೂಆರ್‌ (QR) ಕೋಡ್ ಅಳವಡಿಕೆ, ಸ್ಕ್ಯಾನ್ ಮಾಡಿ ದೂರು ನೀಡಬಹುದು

ಬೆಂಗಳೂರು: ಕರ್ನಾಟಕದಾದ್ಯಂತ ಹೋಟೆಲ್‌ಗಳು ಹಾಗೂ ಫಾರ್ಮಸಿಗಳ ಹೊರಭಾಗದಲ್ಲಿ ಕ್ಯೂಆರ್‌ (QR) ಕೋಡ್‌ಗಳನ್ನು ಅಳವಡಿಸಿ, ಸಾರ್ವಜನಿಕರು ಸ್ಥಳದಲ್ಲೇ ಅದನ್ನು ಸ್ಕ್ಯಾನ್‌ ಮಾಡುವ ಮೂಲಕ ಆಹಾರ ಸುರಕ್ಷತೆಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ದೇಶದಲ್ಲೇ ಇಂತಹ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದು … Continued