ಫಲಿತಾಂಶ ಒಪ್ಪಿಕೊಳ್ತೇವೆ, ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ: ರಾಹುಲ್ ಗಾಂಧಿ

ನವದೆಹಲಿ : ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಆದ ಆಘಾತಕಾರಿ ಸೋಲಿನ ನಂತರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದು, ತನ್ನ “ಸಿದ್ಧಾಂತದ ಹೋರಾಟವು ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ. ಹಾಗೂ “ಜನತೆ ನೀಡಿದ ತೀರ್ಪನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಎಕ್ಸ್‌ನಲ್ಲಿ … Continued

ಮುಖ್ಯಮಂತ್ರಿ ಕೆಸಿಆರ್‌- ಮುಂದಿನ ಸಿಎಂ ರೇವಂತ ರೆಡ್ಡಿ ಇಬ್ಬರನ್ನೂ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ …!

ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ಅಸಾಮಾನ್ಯ ಗೆಲುವು ಸಾಧಿಸಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಮತ್ತು ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ತೆಲಂಗಾಣ ಮುಖ್ಯಸ್ಥ ರೇವಂತ ರೆಡ್ಡಿ ಅವರನ್ನು ಸೋಲಿಸಿ ಇಡೀ ದೇಶವನ್ನೇ ಅಚ್ಚರಿಗೊಳಿಸಿದ್ದಾರೆ. ಕಾಮರೆಡ್ಡಿ ವಿಧಾನಸಭೆಯಲ್ಲಿ ಬಿಜೆಪಿಯ ಕೆವಿಆರ್‌ ಎಂದೇ ಜನಪ್ರಿಯವಾಗಿರುವ ಕಾಟಿಪಲ್ಲಿ … Continued

ತೆಲಂಗಾಣ ಡಿಜಿ, ಐಜಿಪಿ ಅಮಾನತುಗೊಳಿಸಿದ ಚುನಾವಣಾ ಆಯೋಗ

ಹೈದರಾಬಾದ್‌ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ತೆಲಂಗಾಣದ ಡಿಜಿ ಮತ್ತು ಐಜಿಪಿ ಅಂಜನಿಕುಮಾರ ಅವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಪೂರ್ಣ ಪ್ರಮಾಣದ ಚುನಾವಣಾ ಫಲಿತಾಂಶ ಬರುವ ಮುನ್ನವೇ ಡಿಜಿಪಿ ಅಂಜನಿಕುಮಾರ ಮತ್ತು ಇತರ ಪೊಲೀಸ್ ಅಧಿಕಾರಿಗಳು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ … Continued

ಕಾಂಗ್ರೆಸ್‌ಗೆ ಶಾಕ್‌ ನೀಡಿದ ʼಹಿಂದಿ ಬೆಲ್ಟ್‌; ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು, ತೆಲಂಗಾಣ ಕಾಂಗ್ರೆಸ್‌ ತೆಕ್ಕೆಗೆ, ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ

 ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಆಘಾತಕಾರಿ ಫಲಿತಾಂಶವಾಗಿದೆ . 2018ರಲ್ಲಿ ಗೆಲುವು ಸಾಧಿಸಿದ್ದ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಎದುರು ಕಾಂಗ್ರೆಸ್‌ ಸೋಲನುಭವಿಸಿದೆ. ದೇಶದ ‘ಹಿಂದಿ ಬೆಲ್ಟ್‌’ನ ಪ್ರಮುಖ 3 ರಾಜ್ಯಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಆಘಾತ ನೀಡಿದ್ದಾರೆ . ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ರಾಹುಲ್ ಗಾಂಧಿ … Continued

ಮೈಚಾಂಗ್ ಚಂಡಮಾರುತ ತೀವ್ರ : ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ತೀವ್ರ ಮುನ್ನೆಚ್ಚರಿಕೆ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಮೈಚಾಂಗ್ ಚಂಡಮಾರುತವಾಗಿ ತೀವ್ರಗೊಂಡಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ಸಂಭಾವ್ಯ ಅಪಾಯವನ್ನುಂಟುಮಾಡಿದೆ. ಇದೇ ತಿಂಗಳ 5ರಂದು ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಚೆನ್ನೈ, ಕಾಂಚೀಪುರಂ ಸೇರಿದಂತೆ ತಮಿಳುನಾಡಿನ 16 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ರಾಜ್ಯ … Continued

ಡಿಸೆಂಬರ್‌ 6ಕ್ಕೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಭೆ

ನವದೆಹಲಿ: ಭಾನುವಾರದ ಮತ ಎಣಿಕೆಯ ವೇಳೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಮಧ್ಯೆಯೇ ಡಿಸೆಂಬರ್ 6 ಬುಧವಾರ ಬೆಳಿಗ್ಗೆ ನವದೆಹಲಿಯಲ್ಲಿ ಮುಂದಿನ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (INDIA) ಸಭೆಗೆ ಕಾಂಗ್ರೆಸ್ ಕರೆ ನೀಡಿದೆ. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ), ದ್ರಾವಿಡ ಮುನ್ನೇತ್ರ … Continued

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಮುನ್ನಡೆ

ಪಂಚ ರಾಜ್ಯಗಳಿಗೆ ನಡೆದ ವಿದಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಮತ ಎಣಿಕೆ ಇಂದು ಭಾನುವಾರ ಬೆಳಿಗ್ಗೆ ಆರಂಭವಾಗಿದ್ದು, ಆರಂಭದ ಮತ ಎಣಿಕೆಯ ಟ್ರೇಂಡ್‌ ಪ್ರಕಾರ ಬಿಜೆಪಿ ಮೂರು ರಾಜ್ಯಗಳಲ್ಲಿ ಹಾಗೂ ಕಾಂಗ್ರೆಸ್‌ ಒಂದು ರಾಜ್ಯದಲ್ಲಿ ಮುನ್ನಡೆ ಸಾಧಿಸಿರುವುದು ಕಂಡುಬಂದಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂಛತ್ತೀಸ್ ಗಢದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದಾರೆ ತೆಲಂಗಾಣದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಛತ್ತೀಸ್ … Continued

ಆಘಾತಕಾರಿ….: ಗುಜರಾತಿನಲ್ಲಿ 6 ತಿಂಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾದವರಲ್ಲಿ 80% ರಷ್ಟು ಮಂದಿ 11-25 ವರ್ಷದವರು…!

ಅಹಮದಾಬಾದ್: ಕಳೆದ ಆರು ತಿಂಗಳಲ್ಲಿ ಗುಜರಾತಿನಲ್ಲಿ ಒಟ್ಟು 1,052 ಜನರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಲ್ಲಿ 80% ರಷ್ಟು ಜನ 11-25 ವಯಸ್ಸಿನವರು ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ ದಿಂಡೋರ್ ಶುಕ್ರವಾರ ಹೇಳಿದ್ದಾರೆ. ಹೆಚ್ಚುತ್ತಿರುವ ಹೃದಯಾಘಾತಗಳನ್ನು ಗಮನದಲ್ಲಿಟ್ಟುಕೊಂಡು, ಸುಮಾರು ಎರಡು ಲಕ್ಷ ಶಾಲಾ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರಿಗೆ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಮಾಡುವಲ್ಲಿ ತರಬೇತಿ … Continued

ಹೊಸ ಪ್ರವೃತ್ತಿಯ ಸೈಬರ್ ವಂಚನೆ : ನಕಲಿ ವಿಚಾರಣೆ, ಡೀಪ್‌ಫೇಕ್ ಬಳಕೆ, ಸ್ಕೈಪ್ ಕರೆ, ಡಿಜಿಟಲ್ ಅರೆಸ್ಟ್ ; ವಂಚಕರಿಂದ ಮಹಿಳೆಗೆ 11 ಲಕ್ಷ ರೂ. ಮೋಸ

ನೋಯ್ಡಾ ನಿವಾಸಿಯೊಬ್ಬರು ಹೊಸ ಪ್ರವೃತ್ತಿಯ ಸೈಬರ್ ವಂಚನೆಗೆ ಒಳಗಾದ ಬಗ್ಗೆ ದೂರು ನೀಡಿದ ನಂತರ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಅವರು ₹ 11 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಒಂದು ದಿನದವರೆಗೆ “ಡಿಜಿಟಲ್ ಬಂಧನ” ದಲ್ಲಿ ಅವರನ್ನು ಇರಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. .. ನೋಯ್ಡಾದ ಸೈಬರ್ … Continued

ಕುಡಿಯುವ ನೀರು ವಿಚಾರವಾಗಿ ಆಂಧ್ರಪ್ರದೇಶ -ತೆಲಂಗಾಣ ನಡುವೆ ಜಗಳ; ಅಣೆಕಟ್ಟು ಪ್ರದೇಶಕ್ಕೆ ನುಗ್ಗಿದ ಆಂಧ್ರ ಪೊಲೀಸರು : ಕೇಂದ್ರದ ಮಧ್ಯ ಪ್ರವೇಶ

ಹೈದರಾಬಾದ್: ತೆಲಂಗಾಣ ಚುನಾವಣೆ ಫಲಿತಾಂಶ ಹೊರಬರುವ ಕೆಲವೇ ಗಂಟೆಗಳ ಮೊದಲು ಆಂಧ್ರಪ್ರದೇಶವು ನಾಗಾರ್ಜುನ ಸಾಗರ ಅಣೆಕಟ್ಟಿನ ಉಸ್ತುವಾರಿ ವಹಿಸಿಕೊಂಡು ನೀರು ಬಿಡುಗಡೆ ಮಾಡಲು ಪ್ರಾರಂಭಿಸಿತು, ಇದು ಎರಡು ರಾಜ್ಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಯಿತು. ಗುರುವಾರ (ನವೆಂಬರ್‌ 30) ಬೆಳಗಿನ ಜಾವ 2 ಗಂಟೆ ಸುಮಾರಿಗೆ ತೆಲಂಗಾಣದ ಬಹುತೇಕ ಅಧಿಕಾರಿಗಳು ಮತದಾನ ಕಾರ್ಯದಲ್ಲಿ ನಿರತರಾಗಿದ್ದಾಗ ಸುಮಾರು 700 … Continued