ಕೇರಳ ಸ್ಫೋಟದ ಕುರಿತು ಹೇಳಿಕೆ: ಕೇಂದ್ರ ಸಚಿವರ ವಿರುದ್ಧ ಪ್ರಕರಣ ದಾಖಲು

ಕೇರಳದಲ್ಲಿ ಭಾನುವಾರ ನಡೆದ ಸರಣಿ ಸ್ಫೋಟದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ದ್ವೇಷವನ್ನು ಹರಡಿದ ಆರೋಪದಡಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. “ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು … Continued

ಅತಿದೊಡ್ಡ ಡೇಟಾ ಸೋರಿಕೆ | ಡಾರ್ಕ್ ವೆಬ್‌ನಲ್ಲಿ 81.5 ಕೋಟಿ ಭಾರತೀಯ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆ : ವರದಿ

 ದೇಶದ ಅತಿದೊಡ್ಡ ಡೇಟಾ ಸೋರಿಕೆಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಲ್ಲಿರುವ 81.5 ಕೋಟಿ ಭಾರತೀಯರ ಹೆಸರುಗಳು, ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿ, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳು ಸೇರಿದಂತೆ ಕೋವಿಡ್‌-19 ಪರೀಕ್ಷಾ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ ಜಾಹೀರಾತು ಮಾಡಲಾಗಿದೆ. ನ್ಯೂಸ್ 18 ರ ವಿಶೇಷ ವರದಿಯ ಪ್ರಕಾರ, ಅಮೇರಿಕನ್ ಸೈಬರ್ ಸೆಕ್ಯುರಿಟಿ … Continued

ಮಹಾರಾಷ್ಟ್ರ ಶಾಸಕರ ಅನರ್ಹತೆ ಪ್ರಕರಣ: ತೀರ್ಪು ನೀಡಲು ವಿಧಾನಸಭಾ ಸ್ಪೀಕರ್‌ ಗೆ ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಈ ಹಿಂದಿನ ಶಿವಸೇನೆ ಪಕ್ಷದ ಬಂಡಾಯ ಸದಸ್ಯರ ವಿರುದ್ಧದ ಅನರ್ಹತೆ ಪ್ರಕರಣದ ಕುರಿತಾದ ತೀರ್ಪನ್ನು ಈ ವರ್ಷದ ಡಿಸೆಂಬರ್ 31ರ ಒಳಗೆ ಮತ್ತು ಎನ್‌ಸಿಪಿ ಶಾಸಕರ ವಿರುದ್ಧ ಅನರ್ಹತೆಯನ್ನು 2024ರ ಜನವರಿ 24ರ ಒಳಗೆ ನೀಡುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ … Continued

ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಭಾರತದ ಅಟಾರ್ನಿ ಜನರಲ್ (ಎಜಿ) ಆರ್.ವೆಂಕಟರಮಣಿ ಅವರು ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಎಜಿ ಅವರ ಈ ವಾದವು ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಲಿಖಿತ … Continued

ದೀಪಾವಳಿಗೆ ಜಿಯೊದಿಂದ ಭರ್ಜರಿ ಗಿಫ್ಟ್ ; ವಾಟ್ಸಾಪ್, ಯೂಟ್ಯೂಬ್ ಸೌಲಭ್ಯ ಇರುವ ಅತಿ ಕಡಿಮೆ ಬೆಲೆಯ ʼಜಿಯೋ ಫೋನ್‌ ಪ್ರೈಮಾ 4ಜಿʼ ಮೊಬೈಲ್ ಬಿಡುಗಡೆ

ಮುಖೇಶ ಅಂಬಾನಿ ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಆ ಮಾರ್ಗವನ್ನು ಅನುಸರಿಸಿ, ಅವರು ಈಗ ಭಾರತದಲ್ಲಿ ಕೈಗೆಟುಕುವ ಬೆಲೆಯ ಜಿಯೋ ಫೋನ್‌ ಪ್ರೈಮಾ 4ಜಿ (JioPhone Prima 4G) ಅನ್ನು ಬಿಡುಗಡೆ ಮಾಡಿದ್ದಾರೆ. ಕೇವಲ 2,599 ರೂ.ಗಳ ಬೆಲೆಯ, ಜಿಯೋ ಫೋನ್‌ ಪ್ರೈಮಾ 4ಜಿ  … Continued

ಕೇರಳದ ತ್ರಿವಳಿ ಸ್ಫೋಟ ಘಟನೆ : ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ಶರಣಾದ ವ್ಯಕ್ತಿಯ ಬಂಧನ

ತಿರುವನಂತಪುರಂ : ಕೇರಳದ ಎರ್ನಾಕುಲಂ ಜಿಲ್ಲೆಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಹೊಣೆ ಹೊತ್ತಿದ್ದ ವ್ಯಕ್ತಿ ಡೊಮಿನಿಕ್ ಮಾರ್ಟಿನ್ ಎಂಬಾತನನ್ನು ಬಂಧಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕಗಳ ಕಾಯ್ದೆ ಮತ್ತು ಕೊಲೆ ಆರೋಪದಡಿ ಸೋಮವಾರ ಆತನನ್ನು ಬಂಧಿಸಲಾಗಿದೆ. ಕನ್ವೆನ್ಷನ್ ಸೆಂಟರ್‌ನಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಮಾರ್ಟಿನ್ ಹೇಳಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ … Continued

ನೇಣು ಬಿಗಿದ ಸ್ಥಿತಿಯಲ್ಲಿ ನಟಿ ರೆಂಜುಶಾ ಮೆನನ್ ಮೃತದೇಹ ಪತ್ತೆ

ಕೊಚ್ಚಿ:ಮಾಲಿವುಡ್‌ ಸಿನಿಮಾರಂಗದ ನಟಿಯೊಬ್ಬರು ಸೋಮವಾರ(ಅಕ್ಟೋಬರ್‌ 30 ರಂದು) ತನ್ನ ಫ್ಲ್ಯಾಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ನಟಿ ರೆಂಜೂಷಾ ಮೆನನ್ (35) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. .ಕಳೆದ ಕೆಲ ಸಮಯದಿಂದ ನಟಿ ರೆಂಜೂಷಾ ಮೆನನ್ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ರೆಂಜುಶಾ ಈ ಫ್ಲ್ಯಾಟ್‌ನಲ್ಲಿ … Continued

ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 8 ಭಾರತದ ನೌಕಾಪಡೆ ಮಾಜಿ ಅಧಿಕಾರಿಗಳ ಕುಟುಂಬದವರನ್ನು ಭೇಟಿಯಾದ ಜೈಶಂಕರ

ನವದೆಹಲಿ: ಕತಾರ್‌ನ ನ್ಯಾಯಾಲಯವು ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳಿಗೆ ಮರಣದಂಡನೆಯನ್ನು ಪ್ರಕಟಿಸಿದ ಕೆಲವು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರು ಸೋಮವಾರ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ ಹಾಗೂ ಈ ಪ್ರಕರಣವು ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ. ಭಾರತೀಯರ ಬಿಡುಗಡೆಗೆ ಸರ್ಕಾರ ಎಲ್ಲ ಪ್ರಯತ್ನವನ್ನೂ ಮಾಡಲಿದೆ ಎಂದು … Continued

ವೀಡಿಯೊ..| ಎನ್‌ಸಿಪಿ ಶಾಸಕರ ಮನೆಗೆ ಬೆಂಕಿ ಹಚ್ಚಿದ ಮರಾಠಾ ಮೀಸಲಾತಿ ಪ್ರತಿಭಟನಾಕಾರರು

ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ಪ್ರಕಾಶ ಸೋಲಂಕೆ ಅವರ ಮನೆಯನ್ನು ಮರಾಠಾ ಮೀಸಲಾತಿ ಚಳವಳಿಗಾರರು ಸೋಮವಾರ ಧ್ವಂಸಗೊಳಿಸಿದ್ದಾರೆ ಮತ್ತು ಬೆಂಕಿ ಹಚ್ಚಿದ್ದಾರೆ. ಅವರ ಮನೆಯಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳು ಅವರ ಬಂಗಲೆಯಲ್ಲಿ ಭಾರಿ ಬೆಂಕಿ ಮತ್ತು ಅದರ … Continued

ತೆಲಂಗಾಣ ಚುನಾವಣೆ : ಪ್ರಚಾರದ ವೇಳೆ ಮೇದಕ್ ಸಂಸದರಿಗೆ ಚಾಕು ಇರಿತ | ವೀಡಿಯೊ

ಹೈದರಾಬಾದ್: ತೆಲಂಗಾಣ ಸಿದ್ದಿಪೇಟ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಇಂದು ಸೋಮವಾರ ಬಿಆರ್‌ಎಸ್‌ ಸಂಸದ ಕೋಥಾ ಪ್ರಭಾಕರ ರೆಡ್ಡಿ ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ಸಂಸದರು ಪಾದ್ರಿಯೊಬ್ಬರ ಮನೆಗೆ ತೆರಳುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆದಿದೆ. ಒಬ್ಬ ಅಪರಿಚಿತ ವ್ಯಕ್ತಿ ಸಂಸದರ ಬಳಿಗೆ ಬಳಿಗೆ ಹೋದ ಮತ್ತು ಸಂಸದರೊಂದಿಗೆ ಕೈಕುಲುಕಲು ಬಯಸಿದ್ದಾನೆ, ಆದರೆ ಆತ ಇದ್ದಕ್ಕಿದ್ದಂತೆ … Continued