ಮಳೆ ಆರ್ಭಟಕ್ಕೆ ಹೊರಬಂತು ಇತಿಹಾಸದ ರಹಸ್ಯ…! ತಮಿಳುನಾಡಿನಲ್ಲಿ 12,000 ವರ್ಷಗಳಷ್ಟು ಹಿಂದಿನ ಪಳೆಯುಳಿಕೆ ಪತ್ತೆ..!!

ನವದೆಹಲಿ : ಪ್ರಕೃತಿಯ ವಿಕೋಪವೊಂದು ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಲು ದಾರಿಕಲ್ಪಿಸಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆಯಿಂದಾಗಿ, ಸುಮಾರು 12,000 ವರ್ಷಗಳಷ್ಟು ಹಳೆಯದಾದ ಅಪರೂಪದ ಪಳೆಯುಳಿಕೆಗಳು ಪತ್ತೆಯಾಗಿವೆ. ಈ ಆಕಸ್ಮಿಕ ಸಂಶೋಧನೆಯು ಭಾರತದ ಇತಿಹಾಸಪೂರ್ವ ಕಾಲದ ಮೇಲೆ ಹೊಸ ಬೆಳಕು ಚೆಲ್ಲಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ ಯಾದವ್ ಅವರು … Continued

ಬಿರಿಯಾನಿ ಊಟ, ನಂತರ ಕಲ್ಲಂಗಡಿ ಸೇವನೆ : 12 ತಾಸುಗಳ ಅಂತರದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು…!

ಮುಂಬೈ: 13 ವರ್ಷದ ಝೈನಾಬ್, ಆಕೆಯ ಅಕ್ಕ ಮತ್ತು ತಾಯಿ ಶನಿವಾರ ರಾತ್ರಿ ಬಿರಿಯಾನಿ ಔತಣವನ್ನು ಸವಿದಿದ್ದರು. ಮಧ್ಯರಾತ್ರಿಯ ನಂತರ, ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಆದರೆ ಭಾನುವಾರ ಮುಂಜಾನೆ ತೀವ್ರ ಅನಾರೋಗ್ಯ ಕಾಣಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೆ ಕುಟುಂಬದ ನಾಲ್ವರೂ ಒಬ್ಬರಾದ ಮೇಲೆ ಒಬ್ಬರಂತೆ ಮೃತಪಟ್ಟ ಬೆಚ್ಚಿಬೀಳಿಸುವಂತಹ ಘಟನೆ ಮುಂಬೈನಲ್ಲಿ ನಡೆದಿದೆ. ಈ ನಾಲ್ವರ ಸಾವು ಆಹಾರ … Continued

ಮಾಂಸಾಹಾರದ ಅಡುಗೆ ವಿಚಾರಕ್ಕೆ ಜಗಳ; ಪತಿಯನ್ನೇ ಕಡಿದು ಕೊಂದ ಪತ್ನಿ

ಕಾಮರೆಡ್ಡಿ (ತೆಲಂಗಾಣ): ಮಾಂಸಾಹಾರಿ ಅಡುಗೆ ಮಾಡುವ ವಿಚಾರವಾಗಿ ತಡರಾತ್ರಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯೇ ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಭೀಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕೊಡಂಡ ಶಿವಾಜಿ ಮತ್ತು ಲಕ್ಷ್ಮೀ ದಂಪತಿ ನಡುವೆ ನಡೆದ ಜಗಳದಲ್ಲಿ ಘಟನೆ … Continued

ಪತಿಯ ಸಹೋದರಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ವಿಚ್ಛೇದನ ಪಡೆದ ಮಹಿಳೆ…!

ಸಾಮಾನ್ಯವಾಗಿ ದಂಪತಿಗಳು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದಾಗ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಅಥವಾ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣ ನೀಡುತ್ತಾರೆ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬಳು ವಿಚ್ಛೇದನ ಪಡೆಯಲು ತನ್ನ ಪತಿಯ ಸ್ವಂತ ಅಕ್ಕನನ್ನೇ ಆತನ ಎರಡನೇ ಪತ್ನಿ ಎಂದು ಬಿಂಬಿಸಿ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಿರುವ ವಿದ್ಯಮಾನ ನಡೆದಿದೆ ಎಂದು ವರದಿಯಾಗಿದೆ. ಈ ವಿಚಿತ್ರ ಪ್ರಕರಣವು ಈಗ ಮಧ್ಯಪ್ರದೇಶ … Continued

ಕ್ಷುಲ್ಲಕ ಜಗಳಕ್ಕೆ ಪೊಲೀಸನಿಂದ ಗುಂಡಿನ ದಾಳಿ: ಫುಡ್ ಡೆಲಿವರಿ ಬಾಯ್ ಎದೆ ಸೀಳಿದ ಬುಲೆಟ್, ಮತ್ತೊಬ್ಬನಿಗೆ ಗಂಭೀರ ಗಾಯ

ನವದೆಹಲಿ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ದೆಹಲಿ ಪೊಲೀಸ್ ಪೇದೆಯೊಬ್ಬ ಫುಡ್ ಡೆಲಿವರಿ ಏಜೆಂಟ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಭಾನುವಾರ ದ್ವಾರಕಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೃತನ ಸ್ನೇಹಿತನಿಗೂ ಗಂಭೀರ ಗಾಯಗಳಾಗಿವೆ. ದ್ವಾರಕಾದ ಜಾಫರ್ಪುರ ಕಲನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಕಾರ್ಮಿಕರಾದ ರೂಪೇಶ … Continued

ಕುದಿಯುತ್ತಿದೆ ಭಾರತ : ಜಗತ್ತಿನ ಅತಿ ಹೆಚ್ಚು ತಾಪಮಾನವಿರುವ 100 ನಗರಗಳಲ್ಲಿ ಭಾರತದಲ್ಲೇ ಇವೆ 95 ನಗರಗಳು..!

ನವದೆಹಲಿ: ಪ್ರಸ್ತುತ ಭಾರತದಾದ್ಯಂತ ಹಲವು ಪ್ರದೇಶಗಳಲ್ಲಿ ತೀವ್ರವಾದ ಬಿಸಿಗಾಳಿ (Heatwave) ಆವರಿಸಿದೆ. ರಿಯಲ್-ಟೈಮ್ ಜಾಗತಿಕ ತಾಪಮಾನ ಶ್ರೇಯಾಂಕದ ಪ್ರಕಾರ, ಭಾರತವು ಪ್ರಸ್ತುತ ಜಾಗತಿಕ ತಾಪಮಾನ ಏರಿಕೆಯ ಕೇಂದ್ರಬಿಂದುವಾಗಿದೆ. ವಿಶ್ವದ 100 ಅತ್ಯಂತ ಹೆಚ್ಚು ತಾಪಮಾನ ಇರುವ ನಗರಗಳ ಪಟ್ಟಿಯಲ್ಲಿ ಬರೋಬ್ಬರಿ 95 ನಗರಗಳು ಭಾರತದ್ದೇ ಆಗಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ನಗರ ಮತ್ತು … Continued

ಪಶ್ಚಿಮ ಬಂಗಾಳ: 2ನೇ ಹಂತದ ಮತದಾನಕ್ಕೂ ಮುನ್ನ ʼಟಿಎಂಸಿ ಕಾರ್ಯಕರ್ತʼನ ಮನೆಯಲ್ಲಿ 100 ಕಚ್ಚಾ ಬಾಂಬ್‌ಗಳು ವಶಕ್ಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ಇಲ್ಲಿನ ಭಾಂಗರ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತನೆನ್ನಲಾದ ರಫಿಕುಲ್ ಇಸ್ಲಾಂ ಎಂಬುವವರ ಮನೆಯಿಂದ ಪೊಲೀಸರು ಸುಮಾರು 100 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟ ಮಾಹಿತಿ ಮೆರೆಗೆ … Continued

ಅಶೋಕಕುಮಾರ ಲಾಹಿರಿ ನೀತಿ ಆಯೋಗದ ನೂತನ ಉಪಾಧ್ಯಕ್ಷ

ನವದೆಹಲಿ : ಕೇಂದ್ರ ಸರ್ಕಾರದ ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ಅಶೋಕಕುಮಾರ ಲಾಹಿರಿ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಉಪಾಧ್ಯಕ್ಷರಾಗಿದ್ದ ಸುಮನ್ ಬೆರಿ ಅವರ ಸ್ಥಾನಕ್ಕೆ ಲಾಹಿರಿ ಅವರನ್ನು ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ನೀತಿ ಆಯೋಗದಲ್ಲಿ ಉಪಾಧ್ಯಕ್ಷರ ಹುದ್ದೆ ಅತ್ಯಂತ ಮಹತ್ವದ್ದಾಗಿದೆ. ಸಂಸ್ಥೆಯ ನೀತಿ ರೂಪಣೆ, ಚಿಂತನೆ ಮತ್ತು … Continued

ವಿಡಿಯೋ | ಆಸ್ಪತ್ರೆ ತಲುಪುವ ಮೊದಲೇ ಪ್ರಸವ ವೇದನೆ ; ರಸ್ತೆಯೇ ಹೆರಿಗೆ ಕೋಣೆ : ಮರದ ಕೆಳಗೆ ಹೆರಿಗೆ ಮಾಡಿಸಿದ ವೈದ್ಯೆ !

ಪುಣೆ : ಪುಣೆಯ ಶಿರೂರು ತಾಲ್ಲೂಕಿನ ಜೋಶಿವಾಡಿಯಲ್ಲಿ ನಡೆದ ಘಟನೆಯೊಂದು ಮನುಷ್ಯನ ಅಸಹಾಯಕತೆ ಮತ್ತು ಅಷ್ಟೇ ವೇಗವಾಗಿ ಸ್ಪಂದಿಸುವ ಮಾನವೀಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರ ನೆರವಿಗೆ ಧಾವಿಸಿದ ವೈದ್ಯೆ ಹಾಗೂ ಸಾರ್ವಜನಿಕರು ಈ ಮಹಿಳೆಗೆ ನಡುರಸ್ತೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಗರ್ಭಿಣಿಯೊಬ್ಬರಿಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಶಿರೂರು … Continued

ವಿಶ್ವದ ಸ್ಮಾರ್ಟ್ ನಗರಗಳನ್ನೂ ಮೀರಿಸುವ ತಂತ್ರಜ್ಞಾನ ಹೊಂದಿರುವ ಭಾರತದ ಗ್ರಾಮಗಳು…!

ಸಾಮಾನ್ಯವಾಗಿ ‘ಹಳ್ಳಿ’ ಎಂದರೆ ನಮಗೆ ನೆನಪಾಗುವುದು ನಿಧಾನಗತಿಯ ಜೀವನ ಮತ್ತು ಆಧುನಿಕ ಸಂಪರ್ಕದ ಕೊರತೆ. ಅದೇ ರೀತಿ ‘ಸ್ಮಾರ್ಟ್ ಸಿಟಿ’ ಎಂದರೆ ಡಿಜಿಟಲ್ ತಂತ್ರಜ್ಞಾನದಿಂದ ಸಜ್ಜಾದ ಭವಿಷ್ಯದ ಕೇಂದ್ರಗಳು ಎಂಬ ಭಾವನೆ ನಮ್ಮಲ್ಲಿದೆ. ಆದರೆ, ಭಾರತದ ಕೆಲವು ಹಳ್ಳಿಗಳು ಈ ಕಲ್ಪನೆಯನ್ನು ಸಂಪೂರ್ಣವಾಗಿ ಸುಳ್ಳು ಮಾಡಿವೆ. ಜಾಗತಿಕ ಮಟ್ಟದ ಸ್ಮಾರ್ಟ್ ನಗರಗಳಿಗಿಂತಲೂ ಹೆಚ್ಚು ಪ್ರಾಯೋಗಿಕವಾಗಿ ಈ … Continued