ಚುನಾವಣೆ : ತಮಿಳುನಾಡು, ಕೇರಳ, ಅಸ್ಸಾಂನಲ್ಲಿ ಗೆಲ್ಲುವುದು ಯಾರು..? ಎಕ್ಸಿಟ್‌ ಪೋಲ್‌ ಹೇಳುವುದೇನು..?

ನವದೆಹಲಿ: ತಮಿಳುನಾಡು, ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳ ಮಹಾ ಸಮರ ಮುಕ್ತಾಯಗೊಂಡಿದೆ. ಮತಯಂತ್ರಗಳಲ್ಲಿ ಭದ್ರವಾಗಿದ್ದ ಅಭ್ಯರ್ಥಿಗಳ ಭವಿಷ್ಯದ ಸುಳಿವು ನೀಡುವ ‘ಎಕ್ಸಿಟ್ ಪೋಲ್’ಗಳು (ಮತಗಟ್ಟೆ ಸಮೀಕ್ಷೆ) ಇದೀಗ ಹೊರಬಿದ್ದಿದೆ. ತಮಿಳುನಾಡಿನಲ್ಲಿ ಡಿಎಂಕೆಯ ಭದ್ರಕೋಟೆಗೆ ನಟ ವಿಜಯ ಸವಾಲಾಗಲಿದ್ದಾರೆಯೇ? ಕೇರಳದಲ್ಲಿ ದಶಕಗಳ ಕಾಲ ನಡೆದಿದ್ದ ಅಧಿಕಾರ ಬದಲಾವಣೆಯ ಸಂಪ್ರದಾಯ ಮರಳಿ ಬರಲಿದೆಯೇ?  ಅಸ್ಸಾಂನಲ್ಲಿ ಬಿಜೆಪಿಯ ಅಶ್ವಮೇಧ … Continued

ಪಶ್ಚಿಮ ಬಂಗಾಳ ಚುನಾವಣೆ : ಈ ಬಾರಿ ಬಿಜೆಪಿ ಎಂದ 4 ಎಕ್ಸಿಟ್ ಪೋಲ್ ; ಮಮತಾಗೆ ಮತ್ತೆ ಅಧಿಕಾರ ಎಂದ 2 ಎಕ್ಸಿಟ್ ಪೋಲ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಮತಗಟ್ಟೆ ಸಮೀಕ್ಷೆಗಳು (Exit Polls) ಹೊರಬಂದಿದ್ದು ನಾಲ್ಕು ಪ್ರಮುಖ ಸಮೀಕ್ಷೆಗಳು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಭೇದಿಸಲಿದೆ ಎಂದು ಭವಿಷ್ಯ ನುಡಿದಿದ್ದರೆ, ಎರಡು ಸಮೀಕ್ಷೆಗಳು ತೃಣಮೂಲ ಕಾಂಗ್ರೆಸ್ (TMC) ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಒಟ್ಟಾರೆಯಾಗಿ, ಬಂಗಾಳದಲ್ಲಿ ಈ ಬಾರಿ … Continued

ಟಿಎಂಸಿ ಅಭ್ಯರ್ಥಿಯ ಭದ್ರಕೋಟೆಯಲ್ಲಿ ಇವಿಎಂ ಮೇಲಿನ ಬಿಜೆಪಿ ಬಟನ್​​ಗೆ ಟೇಪ್ ಅಂಟಿಸಿದ ಆರೋಪ; ಮತದಾನ ಸ್ಥಗಿತ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನದ ವೇಳೆ ಹೈವೋಲ್ಟೇಜ್ ಕ್ಷೇತ್ರವಾದ ಡೈಮಂಡ್ ಹಾರ್ಬರ್ ವ್ಯಾಪ್ತಿಯ ಫಾಲ್ತಾ ವಿಧಾನಸಭಾ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎವಿಎಂ ಯಂತ್ರದ ಬಿಜೆಪಿಗೆ ಮತ ಒತ್ತುವ ಬಟನ್ ಮೇಲೆ ಟೇಪ್ ಹಚ್ಚಿ ಮತದಾನಕ್ಕೆ ಅಡ್ಡಿಪಡಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಕೆಲವು ಬೂತ್‌ಗಳಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ … Continued

ಗೋದ್ರಾದಲ್ಲಿ ಐತಿಹಾಸಿಕ ದಾಖಲೆ : ಶೇ.100ರಷ್ಟು ಮುಸ್ಲಿಂ ಮತದಾರರಿರುವ ವಾರ್ಡ್‌ನಲ್ಲಿ ಹಿಂದೂ ಪಕ್ಷೇತರ ಅಭ್ಯರ್ಥಿಗೆ ಭರ್ಜರಿ ಜಯ !

ಸಾಮಾನ್ಯವಾಗಿ ಚುನಾವಣೆ ಎಂದರೆ ಅಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ, ಮಂಗಳವಾರ ಪ್ರಕಟವಾದ ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಕೋಮು ಸೌಹಾರ್ದತೆ ಮತ್ತು ಅಂತರ್ಗತ ರಾಜಕಾರಣಕ್ಕೆ ಒಂದು ಮೈಲಿಗಲ್ಲಾಗಿ ನಿಂತಿದೆ. ಗೋದ್ರಾ ನಗರಸಭೆಯ 7ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದೂ ಮಹಿಳೆ ಅಪೇಕ್ಷಾಬೆನ್ ನೈನೇಷ್‌ಭಾಯಿ ಸೋನಿ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ವಿಶೇಷವೆಂದರೆ, … Continued

ಮರ ಕಡಿಯುವುದನ್ನು ತಡೆಯಲು ಜೆಸಿಬಿ ಯಂತ್ರವನ್ನೇ ತಡೆದು ನಿಲ್ಲಿಸಿದ ಆನೆ ; ವಿಡಿಯೋ ವೈರಲ್ !

ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ಹಿಡಿದ ಕನ್ನಡಿಯಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮರಗಳನ್ನು ಕಡಿಯಲು ಬಂದ ಜೆಸಿಬಿ ಯಂತ್ರದ ಮುಂದೆ ಒಂಟಿ ಆನೆಯೊಂದು ದಿಟ್ಟವಾಗಿ ನಿಂತು ಪ್ರತಿರೋಧ ತೋರುತ್ತಿರುವ ದೃಶ್ಯ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಕಾಡಿನ ನಡುವೆ ಮರಗಳನ್ನು … Continued

ಭಾರತದ ಬತ್ತಳಿಕೆಗೆ ಮತ್ತೊಂದು ‘ಬ್ರಹ್ಮಾಸ್ತ್ರ’: ಮೇ ವೇಳೆಗೆ ಬರಲಿದೆ ರಷ್ಯಾದ 4ನೇ S-400 ಕ್ಷಿಪಣಿ ವ್ಯವಸ್ಥೆ

ನವದೆಹಲಿ: ‘ಆಪರೇಷನ್ ಸಿಂಧೂರʼದ ವರ್ಷಾಚರಣೆ ಭಾರತದ ರಕ್ಷಣಾ ವಲಯಕ್ಕೆ ದೊಡ್ಡ ಬಲ ಸಿಕ್ಕಿದೆ. ರಷ್ಯಾದ ಅತ್ಯಾಧುನಿಕ S-400 ವಾಯು ರಕ್ಷಣಾ ವ್ಯವಸ್ಥೆಯ ನಾಲ್ಕನೇ ಘಟಕವು ಭಾರತಕ್ಕೆ ಪ್ರಯಾಣ ಬೆಳೆಸಿದ್ದು, ಮೇ ಮಧ್ಯಭಾಗದ ವೇಳೆಗೆ ಭಾರತದ ಬಂದರು ತಲುಪುವ ನಿರೀಕ್ಷೆಯಿದೆ. ಅಲ್ಲದೆ, ‘ಆಪರೇಷನ್ ಸಿಂಧೂರʼದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಐದನೇ S-400 ವ್ಯವಸ್ಥೆಯು ಇದೇ ವರ್ಷದ ನವೆಂಬರ್‌ನಲ್ಲಿ … Continued

31 ವರ್ಷ ಜೈಲಿನಲ್ಲಿದ್ದ ರಾಜೀವ ಗಾಂಧಿ ಹತ್ಯೆಯ ಅಪರಾಧಿ ಈಗ ಹೈಕೋರ್ಟ್‌ ವಕೀಲ…!

ಚೆನ್ನೈ: ಸ್ವಾತಂತ್ರ್ಯ ಎನ್ನುವುದು ಕೇವಲ ಜೈಲಿನಿಂದ ಹೊರಬರುವುದಷ್ಟೇ ಅಲ್ಲ, ಅದು ಹೊಸ ಬದುಕಿನ ಆರಂಭವೂ ಹೌದು. ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಎ.ಜಿ. ಪೆರಾರಿವಾಲನ್ ಈಗ ವಕೀಲರ ಗೌನ್ ಧರಿಸಿ ಕಟಕಟೆಯ ಆಚೆ ನಿಂತು ವಾದ ಮಂಡಿಸಲಿದ್ದಾರೆ. ಮಾಜಿ ಪ್ರಧಾನಿ ರಾಜೀವ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ … Continued

ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಮೃತ ಅಕ್ಕನ ಅಸ್ಥಿಪಂಜರವನ್ನೇ ಹೊತ್ತು 3 ಕಿಮೀ ನಡೆದು ಬ್ಯಾಂಕಿಗೆ ಬಂದ ಅಸಹಾಯಕ ತಮ್ಮ…!

ಕಿಯೋಂಜರ್ (ಒಡಿಶಾ): ಹಸಿವು ಮತ್ತು ಬಡತನ ಮನುಷ್ಯನನ್ನು ಎಂತಹ ಪರಿಸ್ಥಿತಿಗೆ ತಳ್ಳುತ್ತದೆ ಎನ್ನುವುದಕ್ಕೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮೃತಪಟ್ಟ ತನ್ನ ಅಕ್ಕನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ವ್ಯಕ್ತಿಯೊಬ್ಬ ಅಕ್ಕನ ಅಸ್ಥಿಪಂಜರವನ್ನೇ ಹೆಗಲ ಮೇಲೆ ಹೊತ್ತು ಸುಡುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದುಕೊಂಡು ಬ್ಯಾಂಕ್‌ಗೆ ಬಂದಿರುವ ಘಟನೆ ನಾಗರಿಕ ಸಮಾಜವನ್ನು … Continued

ವಿಡಿಯೊ | ಸುಡುವ ಬಿಸಿಲಿನಿಂದ ಬಚಾವಾಗಲು ಹಾಲಿನ ಕ್ಯಾನ್ ತಲೆಗೆ ಹಾಕಿಕೊಂಡ ವ್ಯಕ್ತಿ; ಕ್ಯಾನ್‌ ಒಳಗೆ ಸಿಲುಕಿಕೊಂಡ ತಲೆ…!

ಉತ್ತರ ಭಾರತದಲ್ಲಿ ಬಿಸಿ ಗಾಳಿ ಜೋರಾಗಿದ್ದು, ಜನ ಬಿಸಿಲಿನಿಂದ ಬಚಾವಾಗಲು ವಿಚಿತ್ರ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ರಾಜಸ್ಥಾನದ ಗ್ರಾಮೀಣ ಭಾಗದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಲಿನ ಪಾತ್ರೆಯನ್ನೇ (Milk Can) ತಲೆಗೆ ಹೆಲ್ಮೆಟ್‌ನಂತೆ ಧರಿಸಲು ಹೋಗಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continued

ಕಲ್ಮಾ’ ಪಠಿಸಲು ನಿರಾಕರಿಸಿದ ಇಬ್ಬರು ಭದ್ರತಾ ಸಿಬ್ಬಂದಿಗೆ ಚಾಕುವಿನಿಂದ ಇರಿದ ವ್ಯಕ್ತಿ…!

ಮುಂಬೈ: ಮುಂಬೈನ ನಯಾ ನಗರ ಪ್ರದೇಶದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯ ಧರ್ಮವನ್ನು ಕೇಳಿ, ನಂತರ ಅವರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಈ ಸಂಬಂಧ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ವೊಕಾರ್ಡ್ ಆಸ್ಪತ್ರೆಯ ಹಿಂಭಾಗದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಈ … Continued