ಗೌತಮ ಅದಾನಿಗೆ ಸಂಕಷ್ಟ; ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ನ್ಯೂಯಾರ್ಕ್‌ : ಬಹು-ಶತಕೋಟಿ-ಡಾಲರ್ ಲಂಚ ಮತ್ತು ವಂಚನೆ ಯೋಜನೆ ಪ್ರಕರಣದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ನ್ಯೂಯಾರ್ಕ್‌ನಲ್ಲಿರುವ ಅಮೆರಿಕ ಜಿಲ್ಲಾ ನ್ಯಾಯಾಲಯ ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಉದ್ಯಮ ಕಾರ್ಯನಿರ್ವಾಹಕರ ಮೇಲೆ ದೋಷಾರೋಪಣೆ ಮಾಡಲಾಗಿದೆ ಎಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಬುಧವಾರ ತಿಳಿಸಿದ್ದಾರೆ. ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ಎನಿಸಿರುವ ಅದಾನಿ ಅವರಿಗೆ … Continued

6,600 ಕೋಟಿ ರೂ. ಮೊತ್ತದ ಮಹಾರಾಷ್ಟ್ರ ‘ಬಿಟ್‌ಕಾಯಿನ್ ಹಗರಣ’ದ ತನಿಖೆ ಆರಂಭಿಸಿದ ಸಿಬಿಐ ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಮುಂಬೈ: 6,600 ಕೋಟಿ ಮೊತ್ತದ ಮಹಾರಾಷ್ಟ್ರ ‘ಬಿಟ್‌ಕಾಯಿನ್ ಹಗರಣ’ ಪ್ರಕರಣದ ತನಿಖೆಯನ್ನು ಸಿಬಿಐ ಬುಧವಾರ ಆರಂಭಿಸಿದೆ ಮತ್ತು ಇಬ್ಬರು ಮಾಸ್ಟರ್‌ಮೈಂಡ್‌ಗಳ ವಿರುದ್ಧ ಪ್ರಕರಣ ದಾಖಲಿಸಿದೆ ಮತ್ತು ಇನ್ನೊಬ್ಬನನ್ನು ವಿಚಾರಣೆಗೆ ಕರೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಕರಣದ ಮಾಸ್ಟರ್‌ಮೈಂಡ್‌ಗಳಾದ ಅಮಿತ್ ಭಾರದ್ವಾಜ್ ಮತ್ತು ಅಜಯ ಭಾರದ್ವಾಜ್ ಎಂಬ ಇಬ್ಬರು ಶಂಕಿತರನ್ನು ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಈ ಪ್ರಕರಣದಲ್ಲಿ … Continued

ಎಕ್ಸಿಟ್‌ ಪೋಲ್‌ ಗಳ ಭವಿಷ್ಯವಾಣಿ | ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಬಹುಮತ ; ಜಾರ್ಖಂಡದಲ್ಲಿ ಎನ್‌ಡಿಎಗೆ ಮುನ್ನಡೆ

ನವದೆಹಲಿ: ಮೂರು ಎಕ್ಸಿಟ್ ಪೋಲ್‌ಗಳ ಭವಿಷ್ಯವಾಣಿಯಂತೆ ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ)ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಕೂಟವಾದ ಮಹಾಯುತಿ ಮತ್ತೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಜಾರ್ಖಂಡ್‌ನಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಜೆಎಂಎಂ-ಕಾಂಗ್ರೆಸ್ ಮೈತ್ರಿಯೊಂದಿಗೆ ನಿಕಟ ಪೈಪೋಟಿ ನಡೆಸಲಿದ್ದು, ಬಿಜೆಪಿಗೆ ಅಧಿಕಾರಕ್ಕೆ ಮರಳಲು ಹೆಚ್ಚೊ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಮೂರು ಎಕ್ಸಿಟ್ ಪೋಲ್‌ಗಳ … Continued

ಗೋಣಿಚೀಲದಲ್ಲಿ ದಲಿತ ಮಹಿಳೆಯ ಶವ ಪತ್ತೆ ; ಬಿಜೆಪಿ ಬೆಂಬಲಿಸಿದ್ದಕ್ಕಾಗಿ ಆಕೆ ಕೊಲೆ : ಕುಟುಂಬದ ಆರೋಪ

ಲಕ್ನೋ: ಉತ್ತರ ಪ್ರದೇಶದ ಕರ್ಹಾಲ್‌ನ ಕಂಜಾರಾ ನದಿಯ ಸೇತುವೆಯ ಬಳಿ ದಲಿತ ಯುವತಿಯೊಬ್ಬಳ ಬೆತ್ತಲೆ ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಕುಟುಂಬವು ಪ್ರಶಾಂತ ಯಾದವ ಎಂಬ ವ್ಯಕ್ತಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದು, ಅಪರಾಧದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಹೇಳಿದ್ದಾರೆ. ಪ್ರಶಾಂತ ಯಾದವ್‌ ಹಾಗೂ ಮತ್ತೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ಸಾವರ್ಕರ್ ಕುರಿತ ಮಾನಹಾನಿ ಹೇಳಿಕೆ ಪ್ರಕರಣ: : ಖುದ್ದು ಹಾಜರಾಗಲು ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯ ಸೂಚನೆ

ಪುಣೆ : ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (ವೀರ್‌ ಸಾವರ್ಕರ್‌) ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಡಿಸೆಂಬರ್‌ 2ರಂದು ಖುದ್ದು ಹಾಜರಾಗುವಂತೆ ಪುಣೆ ನ್ಯಾಯಾಲಯ ಸೋಮವಾರ ಸಮನ್ಸ್‌ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಮೋಲ್ ಶಿಂಧೆ ಅವರು ಈ ಆದೇಶ … Continued

ವೀಡಿಯೊ…| ಮದುವೆಯ ಮೆರವಣಿಗೆ ಮೇಲೆ ₹ 20 ಲಕ್ಷ ಮೌಲ್ಯದ ನೋಟುಗಳ ಸುರಿಮಳೆ ಗೈದರು…!

ನವದೆಹಲಿ : ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿನ ನಡೆದ ಮದುವೆ ಮೆರವಣಿಗೆಯ ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಮದುವೆಯ ಮೆರವಣಿಗೆ ಸಂದರ್ಭದಲ್ಲಿ ನೋಟುಗಳನ್ನು ಮೆರವಣಿಗೆ ಮೇಲೆ ಎಸೆಯಲು ₹ 20 ಲಕ್ಷವನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ವೈರಲ್ ವೀಡಿಯೊಗಳಲ್ಲಿ, ಕೆಲವರು ಮನೆಗಳ ಮೇಲೆ ನಿಂತುಕೊಂಡು ನೋಟುಗಳ ಬಂಡಲ್‌ಗಳನ್ನು ಗಾಳಿಗೆ ತೂರುತ್ತಿರುವುದು ಕಂಡುಬಂದಿದೆ. ವರದಿಯ ಪ್ರಕಾರ, ಹೀಗೆ ನೋಟುಗಳನ್ನು … Continued

ಹೆಚ್ಚಿದ ವಾಯು ಮಾಲಿನ್ಯ ; 50%ರಷ್ಟು ದೆಹಲಿ ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ

ನವದೆಹಲಿ : ‘ತೀವ್ರ’ ವಾಯುಮಾಲಿನ್ಯದಿಂದ ಬಳಲುತ್ತಿರುವ ದೆಹಲಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ದೆಹಲಿ ಸರ್ಕಾರವು ತನ್ನ 50%ರಷ್ಟು ಸಿಬ್ಬಂದಿಗೆ ಬುಧವಾರ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವುದಾಗಿ ಪ್ರಕಟಿಸಿದೆ. X ಗೆ ನಲ್ಲಿ ದೆಹಲಿಯ ಪರಿಸರ ಖಾತೆ ಸಚಿವ ಗೋಪಾಲ್ ರೈ ಅವರು, “ಮಾಲಿನ್ಯವನ್ನು ಕಡಿಮೆ ಮಾಡಲು, ದೆಹಲಿ … Continued

ಎಸ್. ಜೈಶಂಕರ-ಚೀನಾ ವಿದೇಶಾಂಗ ಸಚಿವರ ಭೇಟಿ: ಭಾರತ- ಚೀನಾ ನಡುವೆ ನೇರ ವಿಮಾನ ಸಂಚಾರ ಆರಂಭ ?

ರಿಯೋ: ರಿಯೋ ಜಿ-20 ಶೃಂಗಸಭೆಯ ಪಕ್ಕದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿದ್ದಾರೆ. ಉಭಯ ದೇಶಗಳ ವಿದೇಶಾಂಗ ಸಚಿವರು ಭೇಟಿ ಮಾಡಿ, ಗಡಿಗಳಲ್ಲಿನ ಸೇನಾ ಹಿಂತೆಗೆತದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ಭಾರತ-ಚೀನಾ ಸಂಬಂಧಗಳ ಸುಧಾರಣೆಗಳ ಬಗ್ಗೆಯೂ ಜೈಶಂಕರ್, ಚೀನಾ ವಿದೇಶಾಂಗ … Continued

ಮುರಿದುಬಿದ್ದ ಎ.ಆರ್‌. ರೆಹಮಾನ್‌ ದಾಂಪತ್ಯ ; ವಿಚ್ಛೇದನ ಘೋಷಿಸಿದ ಪತ್ನಿ ಸಾಯಿರಾ ಬಾನು

ಚೆನ್ನೈ : ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ತಾವು ಪತಿಯಿಂದ ಬೇರ್ಪಡುವುದಾಗಿ ಪ್ರಕಟಿಸಿದ್ದಾರೆ. ಸಾಯಿರಾ ಅವರ ವಕೀಲ ವಂದನಾ ಶಾ ಅವರು ದಂಪತಿ ಬೇರ್ಪಟ್ಟ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ತಮ್ಮ ಪತಿ ಎ.ಆರ್. ರೆಹಮಾನ್‌ ಅವರಿಂದ ಬೇರ್ಪಡುವ ಕಠಿಣ … Continued

ಮಹಾರಾಷ್ಟ್ರ ಚುನಾವಣೆಗೂ ಮುನ್ನ ಹೊಟೇಲಿನಲ್ಲಿ ಹೈಡ್ರಾಮಾ ; ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ : ಮಾಜಿ ಸಚಿವರಿಂದ ನಿರಾಕರಣೆ

ಮುಂಬೈ : ಬುಧವಾರ (ನವೆಂಬರ್‌ ೨೦) ವಿಧಾನಸಭೆ ಚುನಾವಣೆಯ ನಿರ್ಣಾಯಕ ಮತದಾನದ ದಿನಕ್ಕಾಗಿ ಮಹಾರಾಷ್ಟ್ರ ಸಜ್ಜಾಗುತ್ತಿರುವಾಗ, ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ  ಸಮ್ಮುಖದಲ್ಲಿ  ಹಣ ಹಂಚಲಾಗಿದೆ ಎಂಬ ಆರೋಪದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಬಹುಜನ ವಿಕಾಸ ಅಘಾಡಿ (ಬಿವಿಎ) ನಾಯಕ ಹಿತೇಂದ್ರ ಠಾಕೂರ್ ಅವರು ಈ ಆರೋಪಗಳನ್ನು ಮಾಡಿದ್ದಾರೆ. ತಾವಡೆ … Continued