ಅಕ್ರಮ ಹಣ ವರ್ಗಾವಣೆ ಪ್ರಕರಣ : ₹ 538 ಕೋಟಿ ಮೌಲ್ಯದ ಜೆಟ್ ಏರ್‌ವೇಸ್‌ನ ಆಸ್ತಿ ವಶ

ನವದೆಹಲಿ: ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್‌ಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ₹ 500 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ. ಜೆಟ್ ಏರ್‌ವೇಸ್‌ನ ಸಂಸ್ಥಾಪಕ ನರೇಶ ಗೋಯಲ್, ಪತ್ನಿ ಅನಿತಾ ಗೋಯಲ್ ಮತ್ತು ಪುತ್ರ ನಿವಾನ್ ಗೋಯಲ್ ಸೇರಿದಂತೆ ಲಂಡನ್, ದುಬೈ ಮತ್ತು ಭಾರತದ ಕೆಲವು ರಾಜ್ಯಗಳಲ್ಲಿ … Continued

ಭಾರತಕ್ಕೂ ಬಂತು ಇ-ಸಿಮ್‌ (eSIM) : ಯಾವುದೇ ದೇಶಕ್ಕೆ ಹೋದರೂ ಸಿಮ್‌ ಬದಲಿಸಬೇಕಿಲ್ಲ, ರೋಮಿಂಗ್‌ ಸಮಸ್ಯೆ-ಶುಲ್ಕ ಇಲ್ಲ…! ಇ-ಸಿಮ್‌ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ

ಭಾರತದಲ್ಲಿ ಮೊದಲ ಬಾರಿಗೆ, ಎಂ2ಎಂ (M2M) ಸೇವಾ ಪೂರೈಕೆದಾರ ಕಂಪನಿಯಾದ ಸೆನ್ಸರೈಸ್ ಜಾಗತಿಕ ಸಂಪರ್ಕಕ್ಕಾಗಿ ಗ್ರಾಹಕ ರೋಮಿಂಗ್‌ ಇ ಸಿಮ್‌ (eSIM) ಅನ್ನು ಬಿಡುಗಡೆ ಮಾಡಿದೆ. ಕಾರ್ಪೊರೇಟ್ ಪ್ರಯಾಣಿಕರು, ರೋಮಿಂಗ್‌ ಪ್ರಯಾಣಿಕರು, ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರುವ ಸೆನ್ಸರೈಸ್ (Sensorise) ಇ ಸಿಮ್‌ (eSIM) ಅನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಇದೊಂದು ಸಿಮ್​ ಇದ್ದರೆ ಸಾಕು, … Continued

ಕ್ರಿಕೆಟ್ ವಿಶ್ವಕಪ್ 2023 : ನಿರ್ಣಾಯಕ ಘಟ್ಟದಲ್ಲಿ 10 ತಂಡಗಳಿಗೆ ಸೆಮಿಫೈನಲ್ ಪ್ರವೇಶಕ್ಕೆ ಇರುವ ಅವಕಾಶಗಳು….ಯಾವುದೆಲ್ಲ ನೆಚ್ಚಿನ ತಂಡಗಳು..?

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ನಿರ್ಣಾಯಕ ಘಟ್ಟವನ್ನು ತಲುಪಿದೆ, ತಂಡಗಳಿಗೆ ಸೆಮಿ-ಫೈನಲ್‌ನಲ್ಲಿ ಸ್ಥಾನ ಪಡೆಯಲು ಗರಿಷ್ಠ ಮೂರು ಪಂದ್ಯಗಳು ಉಳಿದಿವೆ. ಒಟ್ಟು 9 ತಂಡಗಳು ಸೆಮಿಫೈನಲ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ, ಬಾಂಗ್ಲಾದೇಶ ಮಾತ್ರ ನಾಕ್ಔಟ್ ಆಗಿದೆ. ಉಳಿದ ಯಾವುದೇ ತಂಡ, ಸೆಮಿ ಫೈನಲ್‌ ರೇಸ್‌ ನಿಂದ ಹೊರಬಿದ್ದಿಲ್ಲ. ಆತಿಥೇಯ ರಾಷ್ಟ್ರವಾದ ಭಾರತವು ವಿಶ್ವಕಪ್ 2023 … Continued

ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

ನವದೆಹಲಿ : ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಇಂದು ಬುಧವಾರ (ನವಂಬರ್‌ 1) 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 103 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ 1833 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ 1943.00 ರೂ., ಮುಂಬೈನಲ್ಲಿ 1785.50 ರೂ., ಚೆನ್ನೈನಲ್ಲಿ 1999.50 ರೂ.ಗಳಾಗಿದೆ. … Continued

ಮಡಿಕೇರಿ : ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವು

ಮಡಿಕೇರಿ: ಮಣ್ಣಿನ ದಿಬ್ಬ ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮಂಗಳವಾರ ನಡೆದಿದೆ. ಮಡಿಕೇರಿಯ ರೆಡ್ ಕ್ರಾಸ್ ಬಳಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಬರೆ ಕುಸಿತದಿಂದ ಒಟ್ಟು ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಅವರಲ್ಲಿ ಮೂವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ … Continued

ವಿಚ್ಛೇದನ ಪಡೆದ ಸಾರಾ ಅಬ್ದುಲ್ಲಾ-ಸಚಿನ್ ಪೈಲಟ್ : ಚುನಾವಣಾ ಅಫಿಡವಿಟ್ ನಲ್ಲಿ ಬಹಿರಂಗ

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಅವರ ಪತ್ನಿ ಸಾರಾ ಅಬ್ದುಲ್ಲಾ ಅವರು ಸುಮಾರು ಎರಡು ದಶಕಗಳ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ ಎಂದು ಅವರ ಚುನಾವಣಾ ಅಫಿಡವಿಟ್ ಬಹಿರಂಗಪಡಿಸಿದೆ. 46 ವರ್ಷದ ಸಚಿನ್‌ ಪೈಲಟ್ ಮಂಗಳವಾರ ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಫಿಡವಿಟ್‌ ನಲ್ಲಿ ಸಂಗಾತಿಯ ವಿವರಗಳನ್ನು … Continued

50 ರಾಷ್ಟ್ರಗಳಲ್ಲಿ ಆಪಲ್ ಅಡ್ವೈಸರಿ : ಪ್ರತಿಪಕ್ಷಗಳ ನಾಯಕರ ಐ ಫೋನ್‌ ಹ್ಯಾಕಿಂಗ್ ಯತ್ನ ಆರೋಪ ತಳ್ಳಿಹಾಕಿದ ಕೇಂದ್ರ ; ತನಿಖೆಗೆ ಆದೇಶ

ನವದೆಹಲಿ : “ಸರ್ಕಾರಿ ಪ್ರಾಯೋಜಿತ” ಹ್ಯಾಕರ್‌ಗಳು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಎಚ್ಚರಿಕೆಯ ಸಂದೇಶಗಳನ್ನು ಆಪಲ್‌ ಹಂಚಿಕೊಂಡ ನಂತರ ವಿರೋಧ ಪಕ್ಷದ ಸಂಸದರು ಸರ್ಕಾರ ತಮ್ಮ ಮೇಲೆ “ಕಣ್ಗಾವಲು” ಮಾಡುತ್ತಿದೆ ಎಂಬ ಆರೋಪಗಳನ್ನು ಸರ್ಕಾರವು ತಳ್ಳಿಹಾಕಿದೆ. ಐಟಿ ಸಚಿವ ಅಶ್ವಿನಿ ವೈಷ್ಣವ ಅವರು, ಆಪಲ್ 150 ದೇಶಗಳಲ್ಲಿ ಇಂತಹ ಅಧಿಸೂಚನೆಗಳನ್ನು ಹೊರಡಿಸಿದೆ, ಇವುಗಳು … Continued

ಇಸ್ರೇಲ್‌ ‘ಐರನ್ ಡೋಮ್’ ಮಾದರಿಯಲ್ಲಿ ಕ್ಷಿಪಣಿ ನಾಶಕ ‘ವಾಯು ರಕ್ಷಣಾ ವ್ಯವಸ್ಥೆʼ ಅಭಿವೃದ್ಧಿಪಡಿಸುತ್ತಿದೆ ಭಾರತ : ಹೇಗೆ ರಕ್ಷಣೆ ಮಾಡುತ್ತದೆ..? ಇಲ್ಲಿದೆ…

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧವು ಇಸ್ರೇಲ್‌ನ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆ ಗಮನಾರ್ಹ ಗಮನ ಸೆಳೆದಿದೆ. ಆರಂಭದಲ್ಲಿ ಈ ಅತ್ಯಾಧುನಿಕ ರಾಕೆಟ್ ರಕ್ಷಣಾ ವ್ಯವಸ್ಥೆಯನ್ನು ಬಹುತೇಕ ಭೇದಿಸಿ ರಾಕೆಟ್‌ ಒಳ ಹೋಗಲಾರದು ಎಂದು ನಂಬಲಾಗಿತ್ತು, ಆದರೆ ಅಕ್ಟೋಬರ್ 7 ರಂದು ಪ್ಯಾಲೇಸ್ತಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಕೇವಲ 20 ನಿಮಿಷಗಳಲ್ಲಿ ಸುಮಾರು 5,000 ರಾಕೆಟ್‌ಗಳನ್ನು ಹಾರಿಸುವ … Continued

ಬಾಂಬ್ ತಯಾರಿಸಲು ಕೇವಲ ₹ 3,000 ರೂ. ಖರ್ಚು ಮಾಡಿದ್ದ ಕೇರಳ ಸರಣಿ ಸ್ಫೋಟದ ಆರೋಪಿ : ವರದಿ

ಕೊಚ್ಚಿ : ಭಾನುವಾರ ನಡೆದ ಕೇರಳದ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆ ಕಲಿತಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಎಲೆಕ್ಟ್ರಿಕ್ ಸರ್ಕ್ಯೂಟ್‌ನಲ್ಲಿ ಪರಿಣಿತ ಎಂದು ಹೇಳಲಾದ 48 ವರ್ಷದ ಡೊಮಿನಿಕ್ ಮಾರ್ಟಿನ್ ಬಾಂಬ್ ತಯಾರಿಸಲು ಸುಮಾರು ₹ 3,000 ಖರ್ಚು ಮಾಡಿದ್ದಾಗಿ ಹೇಳಿದ್ದಾನೆ.ಮಾರ್ಟಿನ್ ಕುಟುಂಬವು ಕೊಚ್ಚಿ … Continued

ವೀಡಿಯೊ…| ಲಿಫ್ಟ್‌ ನಲ್ಲಿ ನಾಯಿ ಕರೆದೊಯ್ಯುವ ವಿಚಾರವಾಗಿ ಮಹಿಳೆ-ಮಾಜಿ ಐಎಎಸ್ ಅಧಿಕಾರಿ ನಡುವೆ ಹೊಡೆದಾಟ

ಲಿಫ್ಟ್‌ನಲ್ಲಿ ನಾಯಿಯನ್ನು ಕರೆದೊಯ್ಯುವ ವಿಚಾರವಾಗಿ ಸೋಮವಾರ ನೋಯ್ಡಾ ಅಪಾರ್ಟ್‌ಮೆಂಟ್‌ನಲ್ಲಿ ನಿವಾಸಿಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಸೆಕ್ಟರ್ 108 ರಲ್ಲಿನ ಪಾರ್ಕ್ ಲಾರೆಟ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ತನ್ನ ನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯಲು ನಿವೃತ್ತ ಅಧಿಕಾರಿಯೊಬ್ಬರು ಆಕ್ಷೇಪ ಮಾಡಿದ ನಂತರ ಹೊಡೆದಾಟ ನಡೆಯಿತು ಮತ್ತು ನಂತರ ಕಪಾಳಮೋಕ್ಷವನ್ನೂ ಮಾಡಿಕೊಂಡರು. ನಿವೃತ್ತ ಅಧಿಕಾರಿ ಮತ್ತು ನಾಯಿ ಮಾಲೀಕರು ಇಬ್ಬರೂ ತಮ್ಮ … Continued