ಅಂತಾರಾಷ್ಟ್ರೀಯ-ದೇಶೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಬ್ಯಾಟರ್‌ ಶಿಖರ್ ಧವನ್

ನವದೆಹಲಿ: ಭಾರತದ ಅತ್ಯುತ್ತಮ ವೈಟ್ ಬಾಲ್ ಆರಂಭಿಕ ಬ್ಯಾಟರ್‌ ಗಳಲ್ಲಿ ಒಬ್ಬರಾದ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಧವನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದರೂ ಲೀಗ್ ಕ್ರಿಕೆಟ್‌ನಲ್ಲಿ – ಪ್ರಮುಖವಾಗಿ ಐಪಿಎಲ್‌ನಲ್ಲಿ ಮುಂದುವರಿಯುವ ಸುಳಿವು ನೀಡಿದ್ದಾರೆ. 2022 ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನದ ಪಂದ್ಯದಲ್ಲಿ ಭಾರತಕ್ಕಾಗಿ ಕೊನೆಯದಾಗಿ … Continued

ಹೈದರಾಬಾದ್‌ : ಕೆರೆ ಒತ್ತುವರಿ ಮಾಡಿದ್ದಕ್ಕಾಗಿ ತೆಲುಗು ನಟ ನಾಗಾರ್ಜುನಗೆ ಸೇರಿದ ʼಎನ್-ಕನ್ವೆನ್ಷನ್ ಸೆಂಟರ್ʼ ನೆಲಸಮ

ಹೈದರಾಬಾದ್‌ : ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್ (Hyderabad Disaster Response and Assets Monitoring and Protection (HYDRAA)) ಸಂಸ್ಥೆ ಶುಕ್ರವಾರ ನಟ ಅಕ್ಕಿನೇನಿ ನಾಗಾರ್ಜುನ ಅವರ ಆಸ್ತಿ ‘ಎನ್ ಕನ್ವೆನ್ಷನ್’ ಅನ್ನು ನೆಲಸಮಗೊಳಿಸಿದೆ. ಈ ಕ್ರಮವು ಜಲಾನಯನ ಪ್ರದೇಶಗಳು ಮತ್ತು ಸಾರ್ವಜನಿಕ ಜಮೀನುಗಳನ್ನು ಅತಿಕ್ರಮಿಸಿಕೊಂಡಿರುವ ಅಕ್ರಮ ನಿರ್ಮಾಣಗಳನ್ನು … Continued

ಕೋಲ್ಕತ್ತಾ ಟ್ರೇನಿ ವೈದ್ಯೆಯ ಅತ್ಯಾಚಾರ-ಕೊಲೆ ಆರೋಪಿ ಇಯರ್‌ಫೋನ್‌ ಜೊತೆ ಆಸ್ಪತ್ರೆ ಪ್ರವೇಶಿಸಿದ್ದು ಸಿಸಿಟಿವಿಯಲ್ಲಿ ಪತ್ತೆ

ಕೋಲ್ಕತ್ತಾ : ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾಧಿಕಾರಿಗಳು ಮಧ್ಯರಾತ್ರಿಯ ನಂತರ ಒಂದು ಗಂಟೆಯ ನಂತರ ಆರೋಪಿ ಆಸ್ಪತ್ರೆಗೆ ಪ್ರವೇಶಿಸಿದ ಸಿಸಿಟಿವಿ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿಯ ಕುತ್ತಿಗೆಗೆ ಬ್ಲೂಟೂತ್ ಇಯರ್‌ಫೋನ್ ಸುತ್ತಿಕೊಂಡಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ … Continued

ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳು ಯಾರು..? ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು..?

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಲೋಕಸಭೆ ಚುನಾವಣೆಯ ಸೋಲಿನ ಹೊರತಾಗಿಯೂ, ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, 30 ರಾಜ್ಯಗಳ ಬಹುಪಾಲು ಜನರು ಯೋಗಿ ಆದಿತ್ಯನಾಥ ಅವರನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮುಖ್ಯಮಂತ್ರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹಿಮ್ಮುಖವಾಗಿ ರಾಜ್ಯ ಘಟಕದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ಊಹಾಪೋಹದ ನಡುವೆ ಬಿಜೆಪಿ ನಾಯಕ ಯೋಗಿ … Continued

ವೀಡಿಯೊ..| ಅಮೆರಿಕದ ಟೆಕ್ಸಾಸ್‌ ನಲ್ಲಿ 90 ಅಡಿ ಎತ್ತರದ ಹನುಮಂತನ ಕಂಚಿನ ಪ್ರತಿಮೆ ಅನಾವರಣ

ಟೆಕ್ಸಾಸ್‌ : ಅಮೆರಿಕದ ಟೆಕ್ಸಾಸ್‌ನಲ್ಲಿ ಆಗಸ್ಟ್ 15 ರಿಂದ 18 ರವರೆಗೆ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಭಗವಾನ್ ಹನುಮಾನ್ 90 ಅಡಿ ಎತ್ತರದ ಕಂಚಿನ ದೈತ್ಯ ಪ್ರತಿಮೆ ಅನಾವರಣಗೊಳಿಸಲಾಗಿದೆ. ಸ್ಥಳೀಯ ಹಿಂದೂ ಸಮುದಾಯದಿಂದ ಇದನ್ನು ‘ಯೂನಿಯನ್ ಪ್ರತಿಮೆ’ ಎಂದು ಹೆಸರಿಸಲಾಗಿದೆ. 90 ಅಡಿ ಎತ್ತರದ ಭಗವಾನ್ ಹನುಮಾನ್ ಕಂಚಿನ ಪ್ರತಿಮೆಯು ಲಿಬರ್ಟಿ ಪ್ರತಿಮೆ, … Continued

ಜಾಗತಿಕ ಸಂಶೋಧಕರಿಗಾಗಿ ಚಂದ್ರಯಾನ-3 ವೈಜ್ಞಾನಿಕ ಡೇಟಾ ಬಿಡುಗಡೆ ಮಾಡಿದ ಇಸ್ರೋ

ನವದೆಹಲಿ : ಭಾರತವು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ವರ್ಷಾಚರಣೆ ಅಂಗವಾಗಿ ಇಸ್ರೋ ವಿಶ್ವಾದ್ಯಂತದ ಸಂಶೋಧಕರಿಗೆ ಚಂದ್ರಯಾನ-3 ಮಿಷನ್‌ನಿಂದ ಸಂಗ್ರಹಿಸಲಾದ ತನ್ನ ವೈಜ್ಞಾನಿಕ ಡೇಟಾವನ್ನು ವಿಶ್ಲೇಷಣೆಗಾ ಶುಕ್ರವಾರ ಬಿಡುಗಡೆ ಮಾಡಿದೆ. ಕಳೆದ ವರ್ಷ ಆಗಸ್ಟ್ 23 ರಂದು ಇದುವರೆಗೆ ಯಾರೂ ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡುವ … Continued

ಜಮ್ಮು- ಕಾಶ್ಮೀರ ಚುನಾವಣೆ: ಎನ್‌ಸಿ-ಕಾಂಗ್ರೆಸ್ ಸೀಟು ಹಂಚಿಕೆ ಬಹುತೇಕ ಫೈನಲ್

ನವದೆಹಲಿ : ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಬಬಣಗಳಾದ ಕಾಂಗ್ರೆಸ್‌ ಹಾಗೂ ನ್ಯಾಶನಲ್‌ ಕಾನ್ಫರೆನ್ಸ್‌ ಸಂಭಾವ್ಯ ಸೀಟು ಹಂಚಿಕೆ ಸೂತ್ರಕ್ಕೆ ಒಮ್ಮತಕ್ಕೆ ಬಂದಿವೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಸರಿಸುಮಾರು 40 ಸ್ಥಾನಗಳಲ್ಲಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (NC) ಸುಮಾರು 50 ಸ್ಥಾನಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಈ ಪಕ್ಷಗಳು ಮೈತ್ರಿಯ … Continued

ಆರ್‌.ಜಿ. ಕರ್ ಆಸ್ಪತ್ರೆಯ ಹಣಕಾಸು ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ ಕಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ : ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪಾದಿತ ಹಣಕಾಸು ಅಕ್ರಮಗಳ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದೆ. ಅಲ್ಲಿ ಟ್ರೇನಿ ವೈದ್ಯರೊಬ್ಬರ ಭೀಕರ ಅತ್ಯಾಚಾರ-ಕೊಲೆ ನಡೆದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಈಗಾಗಲೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ … Continued

ಅನಿಲ ಅಂಬಾನಿ, ಇತರ 24 ವ್ಯಕ್ತಿ-ಕಂಪನಿಗಳಿಗೆ ಷೇರುಪೇಟೆಯಿಂದ 5 ವರ್ಷ ನಿಷೇಧ

ಮುಂಬೈ: ಉದ್ಯಮಿ ಅನಿಲ ಅಂಬಾನಿ ಸಹಿತ 24 ವ್ಯಕ್ತಿ, ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳ ಕಾಲ ಷೇರುಪೇಟೆಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಷೇರುಪೇಟೆ ನಿಯಂತ್ರಕ ಮಂಡಳಿ ಸೆಬಿ ನಿಷೇಧ ಹೇರಿದೆ. ರಿಲಯನ್ಸ್‌ ಹೋಮ್‌ ಫೈನಾನ್ಸ್‌ನಿಂದ (ಆರ್‌ಎಚ್‌ಎಫ್‌ಎಲ್‌) ವಂಚನೆಯ ಮಾರ್ಗದ ಮೂಲಕ ಹಣವನ್ನು ಬೇರೆಡೆಗೆ ತಿರುಗಿಸಿದ ಗುರುತರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಸೆಬಿ ಹೇಳಿದೆ. ಆರು … Continued

ವೀಡಿಯೊ…| ಮೈಮೇಲೆ 25 ಕೆಜಿ ಚಿನ್ನಾಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬ…!

ತಿರುಪತಿ: ಪುಣೆಯ ಭಕ್ತರು ಬುಧವಾರ (August 23) ಮುಂಜಾನೆ ಸುಮಾರು 25 ಕೆಜಿ ಚಿನ್ನವನ್ನು ಧರಿಸಿ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಒಬ್ಬ ಬಾಲಕ ದೇವಸ್ಥಾನಕ್ಕೆ ಭೇಟಿ ನೀಡುವಾಗ ಹಲವಾರು ಚಿನ್ನದ ಸರಗಳು, ಚಿನ್ನದ ಸನ್‌ ಗ್ಲಾಸುಗಳು, ಬಳೆಗಳು, ನೆಕ್ಲೇಸುಗಳು, ‘7’ ಸಂಖ್ಯೆಯ ಚಿನ್ನದ … Continued