ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಚೆನ್ನಾಗಿದೆಯೇ? ರೋಹಿತ್ ಶರ್ಮಾ ಬದಲಿಗೆ ಫ್ರಾಂಚೈಸಿಯ ನಾಯಕರಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಕ ಮಾಡಲಾಗಿದ್ದು, ಅದನ್ನು ಎಲ್ಲರೂ ಉತ್ತಮ ರೀತಿಯಲ್ಲಿ ಸ್ವೀಕರಿಸಲಿಲ್ಲ ಎಂದು ವರದಿಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಅಭಿಯಾನದ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈ ಸತತ ಎರಡು ಸೋಲುಗಳನ್ನು ಅನುಭವಿಸಿದ ನಂತರ, ಪರಿಸ್ಥಿತಿಯು ಹದಗೆಟ್ಟಿದೆ. … Continued

ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

ನವದೆಹಲಿ: ತೆರಿಗೆ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಕಾಂಗ್ರೆಸ್ ಪಕ್ಷವು ಆದಾಯ ತೆರಿಗೆ ಇಲಾಖೆಯಿಂದ ₹ 1,700 ಕೋಟಿ ನೋಟಿಸ್ ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಸೂಚನೆಯು 2017-18 ರಿಂದ 2020-21 ರ ಮೌಲ್ಯಮಾಪನ ವರ್ಷಗಳಿಗೆ ಮತ್ತು ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ ಎಂದು ಮೂಲಗಳು … Continued

ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ…!

ಮುಂಬೈ : ಮಹಾರಾಷ್ಟ್ರದ ಕಲ್ಯಾಣದಲ್ಲಿ ರೈಲು ಪ್ರಯಾಣಿಕರೊಬ್ಬರ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಳ್ಳ ಸೆರೆಯಾದ ನಂತರ ವ್ಯಕ್ತಿಯ ಸಾವಿನ ಹಿಂದಿನ ನಿಗೂಢ ಕಾರಣ ಹೊರಬಂದಿದೆ. ಚಲಿಸುತ್ತಿರುವ ರೈಲಿನಲ್ಲಿ ಸೆಲ್ಫಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅದರಲ್ಲಿ ಸೆರೆಯಾಗಿದ್ದ ಕಳ್ಳನನ್ನು ಆಕಾಶ ಜಾಧವ ಎಂದು ಗುರುತಿಸಲಾಗಿದ್ದು, ಸೋಮವಾರ ಪ್ರಯಾಣಿಕನ ಕೈಯಿಂದ ಫೋನ್‌ ಕಸಿದುಕೊಳ್ಳಲು ಆತ ಯತ್ನಿಸಿದ್ದಾನೆ. ಕಳ್ಳ ಪ್ರಯಾಣಿಕನ … Continued

ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಹೈದರಾಬಾದ್: ಖ್ಯಾತ ನಟ ಸಿದ್ಧಾರ್ಥ ಮತ್ತು ನಟಿ ಅದಿತಿ ರಾವ್ ಹೈದರಿ ಗೌಪ್ಯವಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಆದರೆ ಇದೀಗ ಅವರು ತಾವಿಬ್ಬರು ಮದುವೆಯಾಗಿಲ್ಲ, ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಾವಿಬ್ಬರು ಮದುವೆಯಾಗಿಲ್ಲ, ಎಂಗೇಜ್‌ ಮೆಂಟ್‌ ಆಗಿದ್ದೇವೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು ಫೋಟೋ ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥದ ರಿಂಗ್‌ … Continued

ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ಚೆನ್ನೈ: ಕೆಲವು ದಿನಗಳ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಸಂಸದ ಎ ಗಣೇಶಮೂರ್ತಿ ಅವರು ಗುರುವಾರ ಮುಂಜಾನೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಬೆಳಗ್ಗೆ 5 ಗಂಟೆ ಸುಮಾರಿಗೆ 76 ವರ್ಷದ ಸಂಸದರು ಮೃತಪಟ್ಟಿದ್ದಾರೆ. ಅವರು ಓರ್ವ ಪುತ್ರ … Continued

ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ನವದೆಹಲಿ: ಅನಾರೋಗ್ಯ ಪೀಡಿತ ಗ್ಯಾಂಗ್‌ಸ್ಟರ್‌-ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾನೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಮೌದಿಂದ ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ 2005 ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದ. ಉತ್ತರ ಪ್ರದೇಶದ ಬಂಡಾದಲ್ಲಿರುವ ಜೈಲಿನಲ್ಲಿದ್ದ 63 ವರ್ಷದ ಮುಖ್ತಾರ್ ಅನ್ಸಾರಿ ರಾತ್ರಿ 8:25 ರ ಸುಮಾರಿಗೆ … Continued

ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಮುಂಬೈ: ಲೋಕಸಭೆ ಚುನಾವಣೆಗೆ ಮುನ್ನ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸಮ್ಮುಖದಲ್ಲಿ ಬಾಲಿವುಡ್‌ ಜನಪ್ರಿಯ ನಟ ಗೋವಿಂದ ಅವರು ಶಿವಸೇನೆ (ಶಿಂಧೆ ಬಣ) ಸೇರಿದ್ದಾರೆ. ಹಿಂದಿನ ದಿನ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಗೋವಿಂದ ಅವರು ಇಂದು, ಗುರುವಾರ (ಮಾರ್ಚ್‌ ೨೮) ಬಾಳಾಸಾಹೇಬ ಭವನದಲ್ಲಿ ಶಿವಸೇನೆಗೆ ಸೇರಿದರು. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಮುಂಬೈ ವಾಯವ್ಯ ಲೋಕಸಭಾ … Continued

ನಿಮ್ಮವನಾಗಿದ್ದೆ…ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಪಿಲಿಭಿತ್‌ನಿಂದ ಸ್ಪರ್ಧಿಸಲು ಬಿಜೆಪಿ ತಮಗೆ ಟಿಕೆಟ್ ನಿರಾಕರಿಸಿದ ಕೆಲವೇ ದಿನಗಳಲ್ಲಿ ಪಿಲಿಭಿತ್‌ ಹಾಲಿ ಸಂಸದ ವರುಣ ಗಾಂಧಿ ಅವರು ತಮ್ಮ ಕ್ಷೇತ್ರದ ಜನರಿಗೆ ಭಾವನಾತ್ಮಕ ಬರೆದಿದ್ದಾರೆ. “ನನ್ನ ಅಧಿಕಾರಾವಧಿ ಕೊನೆಗೊಳ್ಳುತ್ತಿದ್ದರೂ … ನನ್ನ ಸಂಬಂಧ (ನಿಮ್ಮೊಂದಿಗೆ) ನನ್ನ ಕೊನೆಯ ಉಸಿರು ಇರುವವರೆಗೂ ಕೊನೆಗೊಳ್ಳುವುದಿಲ್ಲ. ನಾನು ನಿಮ್ಮವನಾಗಿದ್ದೆ…ಯಾವಾಗಲೂ ನಿಮ್ಮವನಾಗಿಯೇ ಇರುತ್ತೇನೆ … Continued

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಗತ್ಯವಿರುವ ‘ನಿಧಿ’ ನನ್ನ ಬಳಿ ಇಲ್ಲ ಎಂದು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ನೀಡಿದ್ದ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವಂತೆ ನನಗೆ ಆಯ್ಕೆ ನೀಡಿದ್ದರು ಎಂದು ಅವರು ಹೇಳಿದರು. “ಒಂದು … Continued

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

ದಕ್ಷಿಣದ ಜನಪ್ರಿಯ ನಟ ಸಿದ್ಧಾರ್ಥ ಅವರು ನಟಿ ಅದಿತಿ ರಾವ್ ಹೈದರಿ ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಮಂಗಳವಾರ ಪ್ರಣಯ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ ಅವರು ಮಾರ್ಚ್ 26, ಮಂಗಳವಾರದಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅವರ ವಿವಾಹ ಸಮಾರಂಭವು ತೆಲಂಗಾಣದ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ … Continued