ಜಪಾನಿನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ

ಓಸ್ಲೋ : ಜಪಾನ್‌ನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪರಮಾಣು ಶಸ್ತ್ರಾಸ್ತ್ರ ಮುಕ್ತ ಜಗತ್ತನ್ನು ನಿರ್ಮಿಸಲು ದಣಿವರಿಯದ ಪ್ರಯತ್ನಗಳಿಗಾಗಿ ಈ ಬಹುಮಾನವನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್ ವಾಟ್ನೆ ಫ್ರೈಡ್ನೆಸ್ ತಿಳಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಕ್ಕಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ … Continued

ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಕಿರೀಟ ಕಳವು

ಢಾಕಾ : ಬಾಂಗ್ಲಾದೇಶದ ಸತ್ಖಿರಾದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಕೆ ನೀಡಿದ್ದ ಕಾಳಿ ದೇವಿಯ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಗುರುವಾರ ಮಧ್ಯಾಹ್ನ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಬೆಳ್ಳಿ, ಚಿನ್ನ ಲೇಪಿತ ಕಿರೀಟದ ಕಳ್ಳತನವಾಗಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ದಿನಪತ್ರಿಕೆ ದಿ ಡೈಲಿ ಸ್ಟಾರ್ … Continued

ದಕ್ಷಿಣ ಕೊರಿಯಾದ ಬರಹಗಾರ್ತಿ ಹ್ಯಾನ್‌ ಕಾಂಗ್‌ ಗೆ ಈ ವರ್ಷದ ನೊಬೆಲ್ ​ಸಾಹಿತ್ಯ ಪುರಸ್ಕಾರ

ಸ್ಟಾಕ್‌ಹೋಮ್: ದಕ್ಷಿಣ ಕೊರಿಯಾದ ಬರಹಗಾರ್ತಿ ಹ್ಯಾನ್‌ ಕಾಂಗ್​​ ಅವರಿಗೆ 2024ನೇ ಸಾಲಿನ ಸಾಹಿತ್ಯ ನೊಬೆಲ್​ ಪುರಸ್ಕಾರ ಘೋಷಣೆ ಮಾಡಲಾಗಿದೆ. ಸಣ್ಣ ಕಥೆಗಳು, ಕಾದಂಬರಿ ಮತ್ತು ಕಾವ್ಯ ರಚನೆಯಲ್ಲಿ ಸಕ್ರಿಯರಾಗಿರುವ ಹನ್ ಕಾಂಗ್​​ ಅವರಿಗೆ ಈ ವರ್ಷದ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ರಾಯಲ್‌ ಸ್ವೀಡಿಷ್‌ ಅಕಾಡೆಮಿ ಗುರುವಾರ ಪ್ರಕಟಿಸಿದೆ. ‘ಮನುಷ್ಯನ ಜೀವನದ ಸೂಕ್ಷ್ಮತೆಗಳು … Continued

ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಮುಖ್ಯಸ್ಥನನ್ನು ಹೊಡೆದುರುಳಿಸಿದ್ದೇವೆ ಎಂದ ಇಸ್ರೇಲ್‌ ಸೇನೆ

ಜೆರುಸಲೇಂ: ಆಕ್ರಮಿತ ಪಶ್ಚಿಮ ದಂಡೆ (West Bank)ಯಲ್ಲಿರುವ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇರಾನ್ ಬೆಂಬಲಿತ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಜಿಹಾದ್‌(Islamic Jihad)ನ ಉನ್ನತ ಕಮಾಂಡರ್ ನನ್ನು ನಿರ್ಮೂಲನೆ ಮಾಡಿರುವುದಾಗಿ ಇಸ್ರೇಲ್ ಸೇನೆ ಶುಕ್ರವಾರ ಪ್ರಕಟಿಸಿದೆ. ಗುರುವಾರ (ಅಕ್ಟೋಬರ್ 10) ನಡೆದ ವೈಮಾನಿಕ ದಾಳಿಯ ಸಮಯದಲ್ಲಿ ನೂರ್ ಶಾಮ್ಸ್‌ನಲ್ಲಿನ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ (ಪಿಐಎಲ್) ಭಯೋತ್ಪಾದಕ … Continued

ಮೈಕ್ರೊ ಆರ್‌ ಎನ್‌ ಎ (microRNA) ಆವಿಷ್ಕಾರಕ್ಕಾಗಿ ವಿಕ್ಟರ್ ಆಂಬ್ರೋಸ್, ಗ್ಯಾರಿ ರುವ್ಕುನ್​​ ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆ

ವಿಜ್ಞಾನಿಗಳಾದ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ಮೈಕ್ರೊ ಆರ್‌ ಎನ್‌ ಎ (microRNA) ಆವಿಷ್ಕಾರ ಮತ್ತು ಜೀನ್ ನಿಯಂತ್ರಣದಲ್ಲಿ ಅದರ ಪಾತ್ರಕ್ಕಾಗಿ 2024 ರ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರಶಸ್ತಿ ನೀಡುವ ಸಂಸ್ಥೆ ಸೋಮವಾರ ತಿಳಿಸಿದೆ. ವಿಜೇತರನ್ನು ಸ್ವೀಡನ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ … Continued

ಅರ್ಜಿ ಸಲ್ಲಿಸಿದ 48 ವರ್ಷಗಳ ನಂತರ ಉದ್ಯೋಗ ಪತ್ರ ಸ್ವೀಕರಿಸಿದ 70 ವರ್ಷದ ಮಹಿಳೆ…!

ಕೆಲಸಕ್ಕೆ ಅರ್ಜಿ ಸಲ್ಲಿಸಿದ ನಂತರ ಉತ್ತರಕ್ಕಾಗಿ ಕಾಯುವುದು ನಿಜವಾಗಿಯೂ ಹಿಂಸೆಯ ಕೆಲಸವಾಗಿದೆ. ಆದರೆ ಯುನೈಟೆಡ್‌ ಕಿಂಗ್ಡಂನಲ್ಲಿ 70 ವರ್ಷ ವಯಸ್ಸಿನ ಮಹಿಳೆಗೆ ಅವರ ಉದ್ಯೋಗ ಅರ್ಜಿಗೆ ಉತ್ತರ ಮಾತ್ರ ಅವರು ಅರ್ಜಿ ಸಲ್ಲಿಸಿದ ಸುಮಾರು 50 ವರ್ಷಗಳ ನಂತರ ಬಂದಿದೆ…! ಲಿಂಕನ್‌ಶೈರ್‌ನ ನಿವಾಸಿ ಟಿಝಿ ಹಡ್ಸನ್ ಎಂಬ ಮಹಿಳೆ ಮೋಟಾರ್‌ಸೈಕಲ್ ಸ್ಟಂಟ್ ರೈಡರ್ ಆಗಬೇಕೆಂದು ಕನಸು … Continued

ಆಹಾರದಲ್ಲಿ ವಿಷ ಬೆರೆಸಿ ತನ್ನ ಮನೆಯ 13 ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ 18 ​​ವರ್ಷದ ಹುಡುಗಿ…!

ಹೈದರಾಬಾದ್: ಆಗಸ್ಟ್‌ನಲ್ಲಿ ಖೈರ್‌ಪುರ ಜಿಲ್ಲೆಯಲ್ಲಿ ಕುಟುಂಬದ 13 ಜನರಿಗೆ ವಿಷ ಉಣಿಸಿ ಸಾಯಿಸಿದ ಭೀಕರ ಪ್ರಕರಣ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ಖೈರ್​ಪುರ್​ ಜಿಲ್ಲೆಯಲ್ಲಿ ನಡೆದಿದೆ. ವಿಷ ಪ್ರಾಷನದಿಂದ ಹತ್ಯೆಗೀಡಾದ ದಂಪತಿಯ ಪುತ್ರಿಯಿಂದಲೇ ಈ ಭೀಕರ ಸಾಮೂಹಿಕ ಹತ್ಯಕಾಂಡ ನಡೆದಿದೆ. ಹತ್ಯೆಗೀಡಾದ ದಂಪತಿಯ 18 ​​ವರ್ಷದ ಮಗಳು ಮತ್ತು ಆಕೆಯ ಸೋದರ ಸಂಬಂಧಿಯನ್ನು ಈ ಸಂಬಂಧ ಬಂಧಿಸಲಾಗಿದೆ … Continued

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ನೂತನ ಮುಖ್ಯಸ್ಥ ಸಫೀದ್ದೀನ್ ಸಾವು : ವರದಿ

ದಕ್ಷಿಣ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಿಜ್ಬೊಲ್ಲಾದ ಸೆಕ್ರೆಟರಿ ಜನರಲ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾದ ಹಶೆಮ್ ಸಫಿದ್ದೀನ್ ಕೂಡ ಇಸ್ರೇಲಿ ದಾಳಿಯಲ್ಲಿ ತಮ್ಮ ಸಹಚರರೊಂದಿಗೆ ಕೊಲ್ಲಲ್ಪಟ್ಟರು ಎಂದು ಸೌದಿ ಸುದ್ದಿ ಮಾಧ್ಯಮ ಅಲ್ ಹದತ್ ಶನಿವಾರ ವರದಿ ಮಾಡಿದೆ. ಇಸ್ರೇಲಿ ವಾಯುದಾಳಿಯಲ್ಲಿ ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ … Continued

ವೀಡಿಯೊ..| ಆಘಾತಕಾರಿ ಕಾರಣಕ್ಕೆ ಪಾಕಿಸ್ತಾನದಲ್ಲಿ ಅನಾಥ ಹುಡುಗಿಯರ ಜತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿ ಹೊರನಡೆದ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್

ನವದೆಹಲಿ: ತೀವ್ರಗಾಮಿ ಇಸ್ಲಾಮಿಕ್ ಪ್ರಚಾರಕ ಝಾಕಿರ್ ನಾಯ್ಕ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅನಾಥಾಶ್ರಮದಲ್ಲಿ ನಡೆದ ಅವರ ಆಘಾತಕಾರಿ ವರ್ತನೆಯ ವೀಡಿಯೊ ವೈರಲ್ ಆಗಿದೆ. ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಪಾಕಿಸ್ತಾನದ ಯುವ ಅನಾಥ ಬಾಲಕಿಯರಿಗೆ ಪ್ರಶಸ್ತಿ ನೀಡಲು ನಿರಾಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ್ ಸ್ವೀಟ್ ಹೋಮ್ ಫೌಂಡೇಶನ್ ಆಯೋಜಿಸಿದ್ದ … Continued

ಇಸ್ರೇಲ್‌-ಹಮಾಸ್‌ ಯುದ್ಧ: ಹಮಾಸ್ ಸರ್ಕಾರದ ಮುಖ್ಯಸ್ಥ, ಇಬ್ಬರು ಉನ್ನತ ನಾಯಕರು ಸಾವು ; ಇಸ್ರೇಲ್ ಮಿಲಿಟರಿ

ಜೆರುಸಲೇಮ್: ಮೂರು ತಿಂಗಳ ಹಿಂದೆ ನಡೆದ ದಾಳಿಯಲ್ಲಿ ಗಾಜಾದಲ್ಲಿ ಮೂವರು ಹಿರಿಯ ಹಮಾಸ್ ನಾಯಕರು ಸಾವಿಗೀಡಾದ್ದಾರೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ. ಅಲ್ಲಿ ಸೇನೆಯು ಸುಮಾರು ಒಂದು ವರ್ಷದಿಂದ ಹಮಾಸ್‌ ಗುಂಪಿನೊಂದಿಗೆ ಹೋರಾಡುತ್ತಿದೆ. ಇಸ್ರೇಲಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾವಿ ಮುಶ್ತಾಹಾ ಮತ್ತು ಹಮಾಸ್‌ನ ರಾಜಕೀಯ ಬ್ಯೂರೋದ ಭದ್ರತಾ ಖಾತೆ … Continued