ವಿಡಿಯೊ..| ಪ್ರಧಾನಿ ಮೋದಿ ಒಬ್ಬ ‘ಭಯೋತ್ಪಾದಕ’ : ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ; ನಂತರ ಸ್ಪಷ್ಟೀಕರಣ

ಚೆನ್ನೈ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆಯನ್ನು (AIADMK) ಪ್ರಶ್ನಿಸುವ ಸಂದರ್ಭದಲ್ಲಿ ಖರ್ಗೆ ಈ ಹೇಳಿಕೆ ನೀಡಿದ್ದಾರೆ. “ಅಣ್ಣಾದೊರೈ ಅವರ ಫೋಟೋ ಹಾಕಿಕೊಳ್ಳುವ ಎಐಎಡಿಎಂಕೆ … Continued

₹2,500 ಕೋಟಿ ಸೈಬರ್‌ ವಂಚನೆ ಜಾಲ ಪತ್ತೆ ; ಖಾಸಗಿ ಬ್ಯಾಂಕ್ ಅಧಿಕಾರಿಗಳು ಶಾಮೀಲು, 20 ಆರೋಪಿಗಳ ಬಂಧನ

ರಾಜಕೋಟ್: ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ವಿರುದ್ಧ ಸಮರ ಸಾರಿರುವ ಗುಜರಾತ್‌ನ ರಾಜ್‌ಕೋಟ್ ಗ್ರಾಮಾಂತರ ಪೊಲೀಸರು, ಇತಿಹಾಸದಲ್ಲೇ ಅತಿದೊಡ್ಡ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಜಾಲವು ಆನ್‌ಲೈನ್ ಗೇಮಿಂಗ್ ಮತ್ತು ಜಿಎಸ್‌ಟಿ ಕಳ್ಳತನದ ಮೂಲಕ ಸಂಗ್ರಹವಾದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸುತ್ತಿತ್ತು. ಇದುವರೆಗೆ 20 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಯೆಸ್ ಬ್ಯಾಂಕ್ (Yes … Continued

ರಾಹುಲ್ ಗಾಂಧಿ ಪೌರತ್ವ ವಿವಾದ: ಅರ್ಜಿದಾರರ ನಡವಳಿಕೆಗೆ ಅಲಹಾಬಾದ್ ಹೈಕೋರ್ಟ್ ತರಾಟೆ; ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿಗಳು

ಲಕ್ನೋ: ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬ್ರಿಟಿಷ್ ಪೌರತ್ವದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿಜೆಪಿ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ, ಅಲಹಾಬಾದ್ ಹೈಕೋರ್ಟ್ ಸೋಮವಾರ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ನ್ಯಾಯಾಲಯದ ಘನತೆಗೆ ಚ್ಯುತಿ ತರಲಾಗಿದೆ … Continued

ನ್ಯಾಯವು ಒತ್ತಡಕ್ಕೆ ಮಣಿಯದು : ದೆಹಲಿ ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯಲ್ಲ ಎಂದ ಹೈಕೋರ್ಟ್ ನ್ಯಾಯಮೂರ್ತಿ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಸೋಮವಾರ ತಿರಸ್ಕರಿಸಿದರು. ಕೇಜ್ರಿವಾಲ್ ಅವರ ಆರೋಪವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು, ಈ ಪ್ರಕರಣದ ವಿಚಾರಣೆಯಿಂದ … Continued

ಆರ್ಥಿಕ ಮುಗ್ಗಟ್ಟು: ಹಿಮಾಚಲದಲ್ಲಿ ಹಿರಿಯ ಶ್ರೇಣಿ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ ; ಶೇ. 30ರಷ್ಟು ವೇತನ ತಡೆ ಹಿಡಿದ ಸರ್ಕಾರ…!

ಶಿಮ್ಲಾ: ರಾಜ್ಯದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ಉದ್ದೇಶದಿಂದ ಹಿಮಾಚಲ ಪ್ರದೇಶ ಸರ್ಕಾರವು ಹಿರಿಯ ಶ್ರೇಣಿ ಸರ್ಕಾರಿ ಅಧಿಕಾರಿಗಳ ವೇತನದ ಶೇಕಡಾ 30ರಷ್ಟನ್ನು ಸದ್ಯಕ್ಕೆ ಕಡಿತ ಮಾಡಲು ನಿರ್ಧರಿಸಿದೆ. ಏಪ್ರಿಲ್ ತಿಂಗಳಿಂದ 6 ತಿಂಗಳವರೆಗೆ ಕೇವಲ ಶೇ. 70ರಷ್ಟು ಸಂಬಳವನ್ನು ಮಾತ್ರ ಹಿರಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ರಾಜ್ಯದ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರುವ ಪ್ರಯತ್ನವಾಗಿ ಮುಂದಿನ ಆರು ತಿಂಗಳ … Continued

ವಿಡಿಯೋ : ಕೈಯಲ್ಲಿ ಪಿಸ್ತೂಲ್, ರೀಲ್ಸ್‌ಗಾಗಿ ಹೈವೇಯಲ್ಲಿ ಒಂದೇ ಬೈಕಿನಲ್ಲಿ ಮೂವರ ಹುಚ್ಚಾಟ ; ಒಂದೇ ಕುಟುಂಬದ ಮೂವರು ಸಾವು

ಭೋಪಾಲ್: ಕೆಲವೇ ಸೆಕೆಂಡುಗಳ ರೋಮಾಂಚನಕ್ಕಾಗಿ ಮಾಡಿದ ಸಾಹಸವೊಂದು ಒಂದು ಕುಟುಂಬದ ಮೂವರನ್ನು ಬಲಿಪಡೆದಿದೆ. ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದ ಈ ಭೀಕರ ರಸ್ತೆ ಅಪಘಾತದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ. ಒಂದೇ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ಯುವಕರು ಅತಿ ವೇಗವಾಗಿ ಚಲಿಸುತ್ತಾ, ರಸ್ತೆಯಲ್ಲಿ ಸರ್ಕಸ್ ಮಾಡಲು ಮುಂದಾಗಿದ್ದಾರೆ. ಇವರ ಈ … Continued

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಸಾಧನ ಹೊಂದಿದ್ದ ಅಮೆರಿಕ ಪ್ರಜೆ ವಶಕ್ಕೆ

ನವದೆಹಲಿ: ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಡಿಕೆಯ ತಪಾಸಣೆಯ ವೇಳೆ, ನಿಷೇಧಿತ ಸ್ಯಾಟಲೈಟ್ ಟ್ರ್ಯಾಕಿಂಗ್ ಸಾಧನವನ್ನು (Satellite tracking device) ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ನಡೆದ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದವರಲ್ಲಿ ಒಬ್ಬರನ್ನು ಅಮೆರಿಕದ … Continued

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 16 ಕಾರ್ಮಿಕರು ಸಾವು

ವಿರುದುನಗರ : ತಮಿಳುನಾಡಿನ ವಿರುದುನಗರ ಜಿಲ್ಲೆಯ ಕಟ್ಟಾನಾರಪಟ್ಟಿ ಗ್ರಾಮದ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಭಾನುವಾರ (ಏಪ್ರಿಲ್ 19) ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 16 ಜನರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ. ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಸುಮಾರು 30 ಕಾರ್ಮಿಕರು ‘ಫ್ಯಾನ್ಸಿ’ ಪಟಾಕಿಗಳನ್ನು ತಯಾರಿಸುವ … Continued

“ನೀವೇ ಅನುಮತಿ ನೀಡಿದ್ದೀರಿ, ಈಗ ಗುಂಡು ಹಾರಿಸುತ್ತಿದ್ದೀರಿ?”: ಇರಾನ್ ದಾಳಿ ವೇಳೆ ಭಾರತೀಯ ಹಡಗಿನ ಸಂಭಾಷಣೆಯ ಆಡಿಯೋ ಬಹಿರಂಗ !

ನವದೆಹಲಿ/ದುಬೈ: ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಐದನೇ ಒಂದು ಭಾಗದಷ್ಟು ಸಂಚಾರ ನಡೆಸುವ ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಶನಿವಾರ ಇರಾನ್‌ನ ಸಣ್ಣ ಯುದ್ಧನೌಕೆಗಳು (Gunboats) ಭಾರತದ ಧ್ವಜ ಹೊಂದಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಈ ಘಟನೆಯ ಬೆನ್ನಲ್ಲೇ ಭಾರತೀಯ ಹಡಗುಗಳು ಅಲ್ಲಿಂದ ಹಿಂದೆ ಸರಿದಿವೆ. ಅದೃಷ್ಟವಶಾತ್, … Continued

ವಿಡಿಯೋ | ಮ್ಯಾರಥಾನ್‌ ಓಟದ ಸ್ಪರ್ಧೆಯಲ್ಲಿ ಮಾನವ ಕ್ರೀಡಾಪಟುಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ರೋಬೋಟ್‌ಗಳು…!

ಬೀಜಿಂಗ್: ತಂತ್ರಜ್ಞಾನ ಲೋಕದಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾನುವಾರ ನಡೆದ ‘ಬೀಜಿಂಗ್ ಇ-ಟೌನ್ ಹ್ಯೂಮನಾಯ್ಡ್ ರೋಬೋಟ್ ಹಾಫ್ ಮ್ಯಾರಥಾನ್’ನಲ್ಲಿ ಮಾನವರೂಪಿ ರೋಬೋಟ್‌ಗಳು ಮಾನವ ಅಥ್ಲೀಟ್‌ಗಳನ್ನು ಹಿಂದಿಕ್ಕುವ ಮೂಲಕ ಹೊಸ ಇತಿಹಾಸ ಬರೆದಿವೆ. ಇದೇ ಮೊದಲ ಬಾರಿಗೆ ಮ್ಯಾರಥಾನ್‌ ಓಟದ ಸ್ಪರ್ಧೆಯಲ್ಲಿ ಮಾನವರೂಪಿ ರೋಬೋಟ್‌ಗಳು ಮನುಷ್ಯರಿಗಿಂತ ವೇಗವಾಗಿ ಓಡಿ ಗುರಿ ತಲುಪಿ ಬೆರಗುಗೊಳಿಸಿವೆ. ಚೀನಾದ ಪ್ರಖ್ಯಾತ ಟೆಕ್ … Continued