ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ…!

ಗರಿಯಾಬಂದ್ : ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಸಂಖ್ಯೆ 3 ರಲ್ಲಿರುವ ಸರ್ಕಾರಿ ಪಡಿತರ ಅಂಗಡಿಯಲ್ಲಿ ಭಾನುವಾರ ಅವ್ಯವಸ್ಥೆ ಭುಗಿಲೆದ್ದಿತು, ದೀರ್ಘ ಸಮಯದ ವರೆಗೆ ಕಾಯುವಿಕೆ ಮತ್ತು ಹೆಚ್ಚುತ್ತಿರುವ ಹತಾಶೆ ಕೋಪಕ್ಕೆ ತಿರುಗಿತು. ತಮ್ಮ ಮಾಸಿಕ ಆಹಾರ ಪಡಿತರಕ್ಕಾಗಿ ಗಂಟೆಗಟ್ಟಲೆ ಕಾಯುತ್ತಿದ್ದ ಜನಸಮೂಹ ಅಂಗಡಿಯ ಮುಖ್ಯ ದ್ವಾರವನ್ನು ಒಡೆದು ಒಳಗೆ ನುಗ್ಗಿದ್ದು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು. ಮೂರು … Continued

ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

ಅಮೆರಿಕವು ಇರಾನಿನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಬಿ -2 ಬಾಂಬರ್‌ಗಳು ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಗೆ ಹಿಂತಿರುಗುತ್ತಿರುವ ವೀಡಿಯೊವನ್ನು ಸೋಮವಾರ ಅಮೆರಿಕದ ಶ್ವೇತಭವನ ಹಂಚಿಕೊಂಡಿದೆ. ಒಂದು ನಿಮಿಷದ ದೃಶ್ಯಾವಳಿಯು ಅಮೆರಿಕದ ಅತ್ಯಂತ ಮುಂದುವರಿದ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಒಂದಾದ ಬಿ -2 ಬಾಂಬರ್ … Continued

ಬುಡಕಟ್ಟು ಜನಾಂಗದವರ ಬಗ್ಗೆ ಹೇಳಿಕೆ : ನಟ ವಿಜಯ ದೇವರಕೊಂಡ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ : ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ತಿಂಗಳ ನಂತರ, ನಟ ವಿಜಯ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸೈಬರಾಬಾದ್‌ನ ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈದಾಬಾದ್ ನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ನೆನವತ್ ಅಶೋಕಕುಮಾಕ ನಾಯಕ್ … Continued

ಇರಾನ್‌ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಂತರ ಇರಾನ್ ಅಧ್ಯಕ್ಷರ ಜೊತೆ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು, ಭಾನುವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ, ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಇತ್ತೀಚೆಗೆ ಉಂಟಾಗಿರುವ ಉಲ್ಬಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಮೂರು ಸ್ಥಳಗಳಾದ ನಟಾಂಜ್, ಇಸ್ಫಹಾನ್ ಮತ್ತು ಪರ್ವತಗಳಿಂದ ಕೂಡಿದ ಫೋರ್ಡೊ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಇಂದು ಸಂಘರ್ಷಕ್ಕೆ ಪ್ರವೇಶಿಸಿದೆ. ಇರಾನ್‌ ತನ್ನ ಪರಮಾಣು … Continued

ಪಹಲ್ಗಾಮ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ | ದಾಳಿಯಲ್ಲಿ ಭಾಗಿಯಾಗಿದ್ದ ಪಾಕ್ ಎಲ್‌ಇಟಿ ಭಯೋತ್ಪಾದಕರಿಗೆ ಆಶ್ರಯ : ಇಬ್ಬರ ಬಂಧನ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು 26 ಪ್ರವಾಸಿಗರನ್ನು ಕೊಂದುಹಾಕಿದ ಮತ್ತು 16 ಜನರನ್ನು ತೀವ್ರವಾಗಿ ಗಾಯಗೊಳಿಸಿದ ಕ್ರೂರ ಪಹಲ್ಗಾಮ್‌ ದಾಳಿಗೆ ಕಾರಣರಾದ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕ ಭಾರತೀಯರ … Continued

ವೀಡಿಯೊ…| ಯೋಗ ದಿನಾಚರಣೆ : 51 ಪುಶ್‌-ಅಪ್‌ ಮಾಡಿ ಜನಸಮೂಹ ಬೆರಗುಗೊಳಿಸಿದ 73 ವರ್ಷದ ತಮಿಳುನಾಡು ರಾಜ್ಯಪಾಲರು…!

ಮಧುರೈ : ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ 73 ವರ್ಷದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ 10,000ಕ್ಕೂ ಹೆಚ್ಚು ಯೋಗಾಸಕ್ತರಿಗೆ ಅಚ್ಚರಿ ಮೂಡಿಸಿದರು. ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಥೀಮ್‌ನೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯ … Continued

‘ಟ್ರಂಪ್ ನನ್ನನ್ನು ಭೋಜನಕ್ಕೆ ಆಹ್ವಾನಿಸಿದರು, ಆದರೆ…’: ಒಡಿಶಾದಲ್ಲಿ, ಅಮೆರಿಕಕ್ಕೆ ಭೇಟಿ ನೀಡದಿರುವುದಕ್ಕೆ ಕಾರಣ ನೀಡಿದ ಪ್ರಧಾನಿ ಮೋದಿ

ಭುವನೇಶ್ವರ: “ಜಗನ್ನಾಥ ಮಹಾಪ್ರಭುಗಳ ಭೂಮಿಗೆ ಬರಲು” ಬಯಸಿದ್ದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಭೇಟಿ ನೀಡುವ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರದ ಒಂದು ವರ್ಷದ ಸ್ಮರಣಾರ್ಥ ಭುವನೇಶ್ವರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಕೇವಲ ಎರಡು ದಿನಗಳ ಹಿಂದೆ, ನಾನು ಜಿ … Continued

ರಾಷ್ಟ್ರಪತಿ ಮುರ್ಮು ಜನ್ಮದಿನ | ಅವರ ಮುಂದೆಯೇ ಹಾಡು ಹಾಡಿದ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ; ರಾಷ್ಟ್ರಪತಿಗಳ ಕಣ್ಣಲ್ಲಿ ನೀರು-ವೀಕ್ಷಿಸಿ

ಡೆಹ್ರಾಡೂನ್: ಪ್ರಸ್ತುತ ಉತ್ತರಾಖಂಡಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 67 ನೇ ಜನ್ಮದಿನಾಚರಣೆಗೆ ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ದೃಷ್ಟಿ ವಿಕಲಚೇತನರ ಸಬಲೀಕರಣ ಸಂಸ್ಥೆಯ (NIEPVD) ವಿದ್ಯಾರ್ಥಿಗಳು ವಿಶೇಷ ಜನ್ಮದಿನದ ಹಾಡನ್ನು ಪ್ರದರ್ಶಿಸಿದಾಗ ಅವರು ಭಾವುಕರಾದರು. ವಿದ್ಯಾರ್ಥಿಗಳ ಹೃದಯಸ್ಪರ್ಶಿ ಪ್ರದರ್ಶನ ನೋಡುತ್ತ ತಮ್ಮ ಭಾವನೆಗಳನ್ನು ತಡೆದುಕೊಳ್ಳಲು ಕಷ್ಟಪಡುತ್ತಿದ್ದ ರಾಷ್ಟ್ರಪತಿಯವರ ಈ ಭಾವನಾತ್ಮಕ ಗೌರವವು ಅವರ … Continued

ರಣಥಂಬೋರ್‌ ‘ಮೊಸಳೆ ಬೇಟೆಗಾರ’ ಹೆಣ್ಣು ಹುಲಿ ಸಾವು ; ಅನಾರೋಗ್ಯದಲ್ಲೂ ಸಾಯುವ 3 ದಿನಗಳ ಹಿಂದೆ ಅದು ಮೊಸಳೆ ಬೇಟೆಯಾಡಿದ್ದ ವೀಡಿಯೊ ವೀಕ್ಷಿಸಿ

‘ರಣಥಂಬೋರ್ ರಾಣಿ’ ಎಂದು ಪ್ರಶಂಸಿಸಲ್ಪಟ್ಟ ಮತ್ತು ಮೊಸಳೆ ಬೇಟೆಯಾಡುವ ಪರಾಕ್ರಮಕ್ಕೆ ಹೆಸರುವಾಸಿಯಾದ ‘ಆರೋಹೆಡ್’ ಎಂಬ ಪ್ರಸಿದ್ಧ ಹೆಣ್ಣು ಹುಲಿ 14 ನೇ ವಯಸ್ಸಿನಲ್ಲಿ ಮೆದುಳಿನ ಗೆಡ್ಡೆಯಿಂದ ಸಾವಿಗೀಡಾಗಿದೆ ಎಂದು ಅರಣ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ದಂತಕಥೆ ‘ಮಚ್ಲಿ’ ಎಂಬ ಹೆಣ್ಣು ಹುಲಿಯ ಮೊಮ್ಮಗಳಾದ ಪ್ರಸಿದ್ಧ ಹುಲಿ ‘ಆರೋ ಹೆಡ್’ (T-84) ಮತ್ತು … Continued

ವೀಡಿಯೊ…| ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ … Continued