ತೆಲಂಗಾಣ ವಿಧಾನಸಭಾ ಚುನಾವಣೆ : ಬಿಆರ್‌ ಎಸ್‌-ಕಾಂಗ್ರೆಸ್‌ ಜಿದ್ದಾಜಿದ್ದಿಯಲ್ಲಿ ಯಾರು ಗೆಲ್ತಾರೆ..? ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ತೆಲಂಗಾಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲು ಕಂಡುಬಂದಿದೆ. 119 ಅಸೆಂಬ್ಲಿ ಸ್ಥಾನಗಳ ವಿಧಾನಸಭೆಯಲ್ಲಿ ಭಾರತ ರಾಷ್ಟ್ರ ಸಮಿತಿ (BRS ) ಕಳೆದ ಚುನಾವಣೆಯಲ್ಲಿ ಗೆದ್ದಿದ್ದ 88 ಸ್ಥಾನಗಳಿಗೆ ಹೋಲಿಸಿದರೆ 70 … Continued

ಚಹಾ ಮಾರುವ ಸೂಪರ್‌ ಸ್ಟಾರ್‌ ರಜನಿಕಾಂತ : ದಂಗಾದ ಅಭಿಮಾನಿಗಳು ; ನಿಜವಾದ ವಿಷ್ಯ ಏನಂದ್ರೆ… | ವೀಡಿಯೊ ವೀಕ್ಷಿಸಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್‌ ಆಗಿತ್ತು. ಎಲ್ಲಿಯವರೆಗೆ ಅಂದರೆ ಅನೇಕರು ಇದು ರಜನಿಕಾಂತ್ ಅವರ ಚಿತ್ರೀಕರಣದ ವೇಳೆಗಿನ ವೀಡಿಯೊ ಎಂದುಕೊಂಡಿದ್ದರು. ಮುಖ, ಕೂದಲು, ನೋಟ, ಹಾವಭಾವ ಎಲ್ಲವೂ ರಜಿನಿಕಾಂತ ರಂತೆಯೇ ಇತ್ತು. ಹಾಗಾಗಿ ಇದು ರಜನಿಕಾಂತ್‌ ಎಂದೇ ಬಹುತೇಕರು ಭಾವಿಸಿದ್ದರು. ನಂತರ ಅವರು ಕೇರಳದ ಕೊಚ್ಚಿನ್‌ನಲ್ಲಿರುವ ವೆಂಕಟೇಶ್ವರ ಹೋಟೆಲ್‌ ಮಾಲೀಕ ಸುಧಾಕರ ಪ್ರಭು ಎಂದು … Continued

ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಗಡಿಪಾರಾದವರಿಗೆ ʼಪಂದ್ಯ ಆಟಗಾರʼ ಪ್ರಶಸ್ತಿ ಅರ್ಪಣೆ : ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಜದ್ರಾನ್ ಬಹುದೊಡ್ಡ ಹೇಳಿಕೆ

ಚೆನ್ನೈ: ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ಬ್ಯಾಟಿಂಗ್‌ ಮಾಡಿದ ನಂತರ, ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಝದ್ರಾನ್ 87 ರನ್‌ಗಳ ಭರ್ಜರಿ ಬ್ಯಾಟಿಂಗ್‌ಗಾಗಿ ಪಂದ್ಯ ಪುರುಷ (POTM) ಪ್ರಶಸ್ತಿಗೆ ಭಾಜನರಾದ ನಂತರ ಬಹುದೊಡ್ಡ ಹೇಳಿಕೆ ನೀಡಿದ್ದಾರೆ. ಝದ್ರಾನ್ ತಮ್ಮ ಪಂದ್ಯ ಪುರುಷ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಿದ ಆಫ್ಘನ್ನರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. … Continued

” ಅಫಿಡವಿಟ್ ಗೆ ನಾನೇ ಸಹಿ ಮಾಡಿದ್ದು ” : ಮಹುವಾ ಮೊಯಿತ್ರಾ ಆರೋಪ ನಿರಾಕರಿಸಿದ ಉದ್ಯಮಿ ದರ್ಶನ್ ಹಿರಾನಂದಾನಿ

ನವದೆಹಲಿ: ಉದ್ಯಮಿ ದರ್ಶನ್ ಹಿರಾನಂದಾನಿ ಅವರು ತಮ್ಮ ಸ್ಫೋಟಕ ಅಫಿಡವಿಟ್ ಕುರಿತು ಸೋಮವಾರ ಮೌನ ಮುರಿದಿದ್ದಾರೆ ಹಾಗೂ ತಾವು ಅದನ್ನು ಯಾವುದೇ ಒತ್ತಡದಲ್ಲಿ ಅದನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ” ಪ್ರಶ್ನೆ ಕೇಳಿದ್ದಕ್ಕಾಗಿ ಹಣ” ಪಡೆದ ಆರೋಪಗಳ ವಿರುದ್ಧ ಹೋರಾಡುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ದರ್ಶನ್‌ ಹಿರಾನಂದಾನಿ ಒತ್ತಡದಲ್ಲಿ ಸಹಿ … Continued

ಸತತ ಮೂರನೇ ಸೋಲು : ಪಾಕಿಸ್ತಾನ ವಿಶ್ವಕಪ್ 2023ರ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದೇ ? ಪಾಕಿಸ್ತಾನಕ್ಕಿರುವ ಸವಾಲುಗಳು…

ಚೆನ್ನೈ : ಸೋಮವಾರ ಚೆನ್ನೈನಲ್ಲಿ ನಡೆದ ಮೂರನೇ ಸತತ ಸೋಲುಂಡು ಪಾಕಿಸ್ತಾನವು ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರೀ ಆಘಾತ ಅನುಭವಿಸಿತು. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧದ ಸೋಲಿನ ನಂತರ ಈಗ ಬಾಲಂಗೋಚಿ ತಂಡ ಎಂದು ಪರಿಗಣಿಸಲ್ಪಟ್ಟಿದ್ದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿತು. ಸೆಮಿಫೈನಲ್ಲಿಗೆ ಹೋಗುವ ತಮ್ಮ ಅವಕಾಶಗಳನ್ನು ಹೆಚ್ಚಿಸಲು ಅಫ್ಘಾನಿಸ್ತಾನದ ವಿರುದ್ಧ … Continued

ಕ್ರಿಕೆಟ್‌ ವಿಶ್ವಕಪ್ 2023: ರೋಚಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಆಘಾತ ; ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ

ಚೆನ್ನೈ: ಸೋಮವಾರ (ಅಕ್ಟೋಬರ್ 23) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ತಮ್ಮ ಲೀಗ್ ಮುಖಾಮುಖಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನವು ವಿಶ್ವಕಪ್‌ನಲ್ಲಿ ತಮ್ಮ ಬಲಾಢ್ಯ ತಂಡ ಮಣಿಸುವ ಅಭಿಯಾನವನ್ನು ಮುಂದುವರೆಸಿದೆ. 283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್‌ಗಳು ರಹಮತ್ ಶಾ (77*) ಮತ್ತು ಹಶ್ಮತುಲ್ಲಾ ಶಾಹಿದಿ (48*)ಅವರೊಂದಿಗೆ ರಹಮಾನುಲ್ಲಾ ಗುರ್ಬಾಜ್ (65) ಮತ್ತು … Continued

ʼ ನಾವು ಗೌತಮಿ ಪರವಾಗಿ ಇದ್ದೇವೆ ‘: ನಟಿಯ ರಾಜೀನಾಮೆ ನಂತರ ತಮಿಳುನಾಡು ಬಿಜೆಪಿ ಮುಖ್ಯಸ್ಥರ ಹೇಳಿಕೆ

ಚೆನ್ನೈ: ʼಬೆಂಬಲದ ಕೊರತೆʼಯನ್ನು ಉಲ್ಲೇಖಿಸಿ ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ತಪ್ಪು ತಿಳುವಳಿಕೆಯಿಂದಾಗಿ ಹೀಗಾಗಿದೆ ಮತ್ತು ಪಕ್ಷವು ನಿಜವಾಗಿ ನಟಿ ಗೌತಮಿ ಅವರ ಪರವಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ, ಗೌತಮಿ ಅವರು ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ … Continued

ಭಾರತೀಯ ಕ್ರಿಕೆಟ್ ದಿಗ್ಗಜ ಬಿಶನ್ ಸಿಂಗ್ ಬೇಡಿ ನಿಧನ

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಂತ್ರಿಕ ಎಡಗೈ ಸ್ಪಿನ್ನರ್‌ ಬಿಶೆನ್ ಸಿಂಗ್ ಬೇಡಿ (77) ಅವರು ಇಂದು, ಸೋಮವಾರ ನಿಧನರಾಗಿದ್ದಾರೆ. ಬಿಶನ್ ಸಿಂಗ್ ಬೇಡಿ 22 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು. ಬೇಡಿ ಅವರು 1967 ರಿಂದ 1979 ರವರೆಗೆ ಭಾರತದ ಪರವಾಗಿ ಆಡಿದ್ದರು. ಅವರು 67 ಟೆಸ್ಟ್‌ಗಳಲ್ಲಿ 266 … Continued

ಬೀದಿ ನಾಯಿಗಳ ದಾಳಿಯಿಂದ ಗಾಯ : ವಾಘ್ ಬಕ್ರಿ ಕಂಪನಿ ನಿರ್ದೇಶಕ ಪರಾಗ ದೇಸಾಯಿ ಸಾವು

ಅಹಮದಾಬಾದ್‌ : ವಾಘ್ ಬಕ್ರಿ ಟೀ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ ದೇಸಾಯಿ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅವರಿಗೆ ಅವರಿಗೆ 49 ವರ್ಷವಾಗಿತ್ತು. ಅಕ್ಟೋಬರ್ 15 ರಂದು ಬೀದಿ ನಾಯಿಗಳ ದಾಳಿಯ ನಂತರ ದೇಸಾಯಿ ಅವರು ತಮ್ಮ ನಿವಾಸದ ಬಳಿ ಬಿದ್ದು ಅವರ ತಲೆಗೆ ಏಟು ಬಿದ್ದಿತ್ತು ಎಂದು … Continued

ಛತ್ತೀಸ್‌ಗಢ ವಿಧಾನಸಭಾ ಚುನಾವಣೆ : ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ, ಗೆಲ್ಲುವ ಸಾಧ್ಯತೆ ಕಾಂಗ್ರೆಸ್ಸಿಗೋ..? ಬಿಜೆಪಿಗೋ..?

ಮುಂದಿನ ತಿಂಗಳು ನಡೆಯಲಿರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಕಂಡುಬಂದಿದೆ. ಛತ್ತೀಸ್‌ಗಢ ವಿಧಾನಸಭೆಯ 90 ವಿಧಾನಸಭಾ ಕ್ಷೇತ್ರಗಳಲ್ಲಿ ಐದು ವರ್ಷಗಳ ಹಿಂದೆ ಗೆದ್ದಿದ್ದ 68 ಸ್ಥಾನಗಳಿಗೆ ಹೋಲಿಸಿದರೆ ಕಾಂಗ್ರೆಸ್ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಪ್ರಕ್ಷೇಪಗಳು ತೋರಿಸಿವೆ. ಪ್ರಮುಖ ವಿರೋಧ … Continued