16 ವರ್ಷದೊಳಗಿನ ಮಕ್ಕಳಿಗಾಗಿ ಇನ್​ಸ್ಟಾಗ್ರಾಂ​ನಲ್ಲಿ ಹೊಸ ನಿಯಮ….

ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಇದರಲ್ಲಿ ಅವಕಾಶ ಇರುವುದಿಲ್ಲ. ಮೆಟಾ ಶೀಘ್ರದಲ್ಲೇ 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ತಡೆಯಲಿದೆ. ಇದಕ್ಕೆ ಅವರ ತಂದೆ-ತಾಯಿಗಳು ಅನುಮತಿ ಬೇಕಾಗುತ್ತದೆ. ಹೊಸ ಸುರಕ್ಷತಾ ನಿಯಮವು ಆನ್‌ಲೈನ್‌ನಲ್ಲಿ 16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು … Continued

ವೀಡಿಯೊ…| ಸತ್ತ ಹೆಬ್ಬಾವನ್ನು ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ ಮಕ್ಕಳು : ತನಿಖೆಗೆ ಆದೇಶ

ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್ ಆಟವಾಡಲು ಹಗ್ಗವಾಗಿ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಂಟ್ರಲ್ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ರಾಕ್‌ಹ್ಯಾಂಪ್ಟನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದಷ್ಟು ದೂರ ಇರುವ ವೂರಬಿಂದಾದ ಈ ವೀಡಿಯೊದಲ್ಲಿ ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್‌ ಹಗ್ಗವಾಗಿ ಬಳಿಸಿಕೊಂಡು ಸ್ಕಿಪ್ಪಿಂಗ್‌ ಆಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. “ಅದನ್ನು ನನಗೆ ತೋರಿಸು, ಅದು ಏನೆಂದು ನನಗೆ … Continued

ಬೆಂಗಳೂರು | ಇಬ್ಬರು ಮಕ್ಕಳನ್ನು ಕೊಂದು ಟೆಕ್ಕಿ ದಂಪತಿ ಆತ್ಮಹತ್ಯೆ..!

ಬೆಂಗಳೂರು: ಸಾಫ್ಟ್‌ವೇರ್ ಸಲಹೆಗಾರ, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಕುಟುಂಬವು ಬೆಂಗಳೂರಿನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. ಪ್ರಕರಣವನ್ನು ಕೊಲೆ-ಆತ್ಮಹತ್ಯೆ ಎಂದು ಶಂಕಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅನೂಪಕುಮಾರ (38), ಅವರ ಪತ್ನಿ ರಾಖಿ (35), ಅವರ 5 ವರ್ಷದ ಮಗಳು ಅನುಪ್ರಿಯಾ ಮತ್ತು … Continued

“ನಾವೇಕೆ ನಮ್ಮನ್ನು ನಿರ್ಬಂಧಿಸಿಕೊಳ್ಳಬೇಕು? 16 ಮಕ್ಕಳನ್ನು ಪಡೆಯಿರಿ ಎಂದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್

ಚೆನ್ನೈ : ನವದಂಪತಿಗಳು ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ಪ್ರತಿಪಾದಿಸಿದ್ದಾರೆ. ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ವತಿಯಿಂದ ನಡೆದ 31 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಈ ಪ್ರತಿಪಾದನೆ ಮಾಡಿದ್ದಾರೆ. ತಮ್ಮ ಪ್ರಕಾರ ಈಗ ಬಹುಶಃ ದಂಪತಿಗೆ 16 ರೂಪದ ಸಂಪತ್ತಿನ ಬದಲು 16 … Continued

ಚಾಮರಾಜನಗರ : ಗುಂಡಲ್ ಜಲಾಶಯದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಚಾಮರಾಜನಗರ : ಬಟ್ಟೆ ತೊಳೆಯಲು ಹೋಗಿದ್ದ ವೇಳೆ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಗುಂಡಲ್ ಜಲಾಶಯದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೋಪಿನಾಥಂ ಗ್ರಾಮ ಪಂಚಾಯತ ವ್ಯಾಪ್ತಿಯ ಪುದೂರು ಗ್ರಾಮದ ನಿವಾಸಿ ಮೀನಾ … Continued

ಕ್ಷೀರಭಾಗ್ಯ ಹಾಲಿಗೆ ಬಿದ್ದ ಹಲ್ಲಿ : ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು

ಸಂಕೇಶ್ವರ : ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಹಲ್ಲಿ ಬಿದ್ದ ಪರಿಣಾಮ ಶಾಲಾ ಬಾಲಕರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯ ಹಾಲು ನೀಡಲಾಗಿತ್ತು. ಆದರೆ ಹಾಲಿನಲ್ಲಿ ಹಲ್ಲಿ ಬಿದ್ದಿರುವ ವಿಷಯ ಮಕ್ಕಳು … Continued

ಗಾಜಾ ಪಟ್ಟಿಯ ಹೊರಗೆ ಇಸ್ರೇಲಿ ಕಿಬ್ಬುಟ್ಜ್‌ನಲ್ಲಿ ಹಮಾಸ್‌ ನಿಂದ ಕನಿಷ್ಠ 40 ಶಿಶುಗಳು-ಮಕ್ಕಳ ಹತ್ಯೆ, ಶಿರಚ್ಛೇದ : ವರದಿ

ಟೆಲ್ ಅವಿವ್: ಹಮಾಸ್‌ನಿಂದ ಶನಿವಾರ ದಾಳಿಗೊಳಗಾದ ನಂತರ ದಕ್ಷಿಣ ಇಸ್ರೇಲಿ ಜನಸಮುದಾಯ ಹೇಳಲಾಗದ ಭೀಕರತೆಗೆ ಒಳಗಾಯಿತು ಎಂಬುದು ಇಸ್ರೇಲ್‌ನ ಮಿಲಿಟರಿಗೆ ಕಂಡುಬಂದಿದೆ. ಇದರಲ್ಲಿ ಡಜನ್ಗಟ್ಟಲೆ ಸತ್ತ ಶಿಶುಗಳು ಸೇರಿವೆ, ಕೆಲವು ಶಿಶುಗಳು ತಮ್ಮ ತಲೆಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ. ಸ್ಥಳೀಯ ಇಸ್ರೇಲಿ ಔಟ್ಲೆಟ್ i24News ಪ್ರಕಾರ, ಇಸ್ರೇಲ್ ರಕ್ಷಣಾ … Continued

ಭೀಕರ ಅಪಘಾತ: ಇಬ್ಬರು ಪುಟಾಣಿಗಳು ಸೇರು ಮೂವರ ಸಾವು

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಢಿಕ್ಕಿಯಾದ ರಭಸಕ್ಕೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ. ರಾಣೇಬೆನ್ನೂರು ನಗರದ ನಿವಾಸಿ, ಶಿಕ್ಷಕ ಜಯಪ್ರಕಾಶ್(48) ಹಾಗೂ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಶಾಲಿನಿ(8) ಮತ್ತು ಯಶೋದಾ(8) ಮೃತರು ಎಂದು ಗುರುತಿಸಲಾಗಿದೆ. … Continued

ಶ್ರೀಕೃಷ್ಣ ಜನ್ಮಾಷ್ಟಮಿ..: ಕೃಷ್ಣ-ರಾಧೆ ವೇಷ ಧರಿಸಿ ಚಿಣ್ಣರ ಸಂಭ್ರಮ

ಧಾರವಾಡ; ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಪರಂಪರೆಯ ಪರಿಚಯ ಮಾಡಿಕೊಡುವ ಸಂದರ್ಭ. ಪ್ರತಿ ಹಬ್ಬದಿಂದ ನಾವು ಒಂದು ಒಳ್ಳೆಯ ಸಂದೇಶ ಪಡೆಯುತ್ತೇವೆ. ಎಂದು ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬದ ಆಚರಣೆಯ ಮಹತ್ವ, ಸಂದೇಶಗಳ ಪರಿಚಯ ಇಂದಿನ ಮಕ್ಕಳಿಗೆ … Continued

ಕೋವಿಡ್-3ನೇ ಅಲೆ ಆತಂಕ: ಬೆಂಗಳೂರಲ್ಲಿ ಮಕ್ಕಳಲ್ಲಿ ಕಳೆದ ವರ್ಷದಷ್ಟೇ ಸೋಂಕಿನ ಪ್ರಮಾಣ

ಬೆಂಗಳೂರು:ನಗರದಲ್ಲಿ ಪತ್ತೆಯಾಗುತ್ತಿರುವ ಮಕ್ಕಳಲ್ಲಿನ ಕೋವಿಡ್ ಸೋಂಕಿನ ಪ್ರಮಾಣ ಕಳೆದ ವರ್ಷದಷ್ಟೇ ಇದೆ ಎಂದು ಬಿಬಿಎಂಬಿ ಆಯುಕ್ತ ಗೌರವ ಗುಪ್ತಾ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಗರದಲ್ಲಿ ಈವರೆಗೆ ವರದಿಯಾದ ಮಕ್ಕಳ ಪ್ರಕರಣಗಳನ್ನು ಕಳೆದ ವರ್ಷದ ದತ್ತಾಂಶಗಳೊಂದಿಗೆ ಹೋಲಿಸಲಾಗಿದೆ ಮತ್ತು ಇವೆರಡೂ ಬಹುತೇಕ ಒಂದೇ ಆಗಿರುತ್ತವೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 450 … Continued