ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೆ ಸೈಬರ್ ವಂಚನೆಗೆ ಯತ್ನ ; ದೂರು ದಾಖಲು

ಬೆಂಗಳೂರು : ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚನೆಗೆ ಯತ್ನಿಸಿದ್ದು, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ 5 ರಂದು ಸುಧಾಮೂರ್ತಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ ಹಾಗೂ ನಿಮ್ಮ … Continued

ಬಿಜೆಪಿ ಸಂಸದ ಡಾ ಕೆ ಸುಧಾಕರ ಪತ್ನಿಗೆ ಡಿಜಿಟಲ್ ಅರೆಸ್ಟ್ : 14 ಲಕ್ಷ ರೂ. ದೋಚಿದ್ದ ಸೈಬರ್ ವಂಚಕರು…!

ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ ಅವರ ಪತ್ನಿಯೂ ಡಿಜಿಟಲ್‌ ವಂಚನೆ ಮಾಡಿದ್ದು, 14 ಲಕ್ಷ ರೂ.ಗಳನ್ನು ಅವರಿಗೆ ಸೈಬರ್‌ ವಂಚಕರು ವಂಚಿಸಿದ್ದರು. ಆದರೆ ಅವರು ಸಕಾಲಕ್ಕೆ ಈ ಬಗ್ಗೆ ದೂರು ನೀಡಿದ ನಂತರ ಪೊಲೀಸರು ಕಾರ್ಯಪ್ರವೃತ್ತರಾದ ನಂತರ ಹಣವನ್ನು ವಶಕ್ಕೆ ಪಡೆದು ಈಗ ಹಿಂದಿರುಗಿಸಲಾಗಿದೆ. ಮಾಹಿತಿಯ ಪ್ರಕಾರ, ಸಂಸದ ಡಾ.ಕೆ.ಸುಧಾಕರ ಅವರ ಪತ್ನಿ ಡಾ.ಪ್ರೀತಿ … Continued

ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂ. ಕಳೆದುಕೊಂಡ 80ರ ವೃದ್ಧ…2 ವರ್ಷದಲ್ಲಿ 734 ಬಾರಿ ಹಣ ವರ್ಗಾವಣೆ…!! ವಂಚನೆ ಮಾಡಿದ್ದು ಹೇಗೆ ಗೊತ್ತಾ ?

ಮುಂಬೈ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ 80 ವೃದ್ಧರೊಬ್ಬರು ಬರೋಬ್ಬರಿ 9 ಕೋಟಿ ರೂ. ಹಣ ಕಳೆದುಕೊಂಡ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ವಂಚನೆಯ ಹಗರಣದಲ್ಲಿ, ವೃದ್ಧರು ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ 734 ಬಾರಿ ಹಣ ವರ್ಗಾವಣೆ ಮಾಡಿ, 9 ಕೋಟಿ … Continued

ಶಿರಸಿಯಲ್ಲಿ ಬೃಹತ್ ಸೈಬರ್ ವಂಚನೆ : ಮುಂಬೈ ಪೊಲೀಸರ ಸೋಗಿನಲ್ಲಿ ವ್ಯಕ್ತಿಯಿಂದ 89.90 ಲಕ್ಷ ರೂ. ಲಪಟಾಯಿಸಿದ ವಂಚಕರು…!

ಶಿರಸಿ: ಸೈಬರ್ ವಂಚಕರ ಜಾಲಕ್ಕೆ ಸಿಕ್ಕಿಹಾಕಿಕೊಂಡು ವ್ಯಕ್ತಿಯೊಬ್ಬರು ಬರೋಬ್ಬರಿ 89.90 ಲಕ್ಷ ರೂ. ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಸಂಬಂಧ ಶಿರಸಿಯ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರಸಿಯ ಪ್ರಗತಿ ನಗರದ ರವೀಂದ್ರ ಕೃಷ್ಣ ಹೆಗಡೆ ಎಂಬವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಅವರಿಗೆ ಅಪರಿಚಿತ … Continued

ಕರ್ನಾಟಕದಲ್ಲಿ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಆರಂಭ

ಬೆಂಗಳೂರು : ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಆ ಮೂಲಕ ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕಮಾಂಡ್ ಸೆಂಟರ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ತನಿಖಾ ಘಟಕವು ಕಾರ್ಯಾಚರಣೆ ನಡೆಸಲಿದ್ದು, ಸೈಬರ್ ಭದ್ರತೆ, ಸೈಬರ್ … Continued

‘ಮಕ್ಕಳಿಲ್ಲದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿ….10 ಲಕ್ಷ ರೂ. ಗಳಿಸಿ’: ಹೀಗೊಂದು ವಂಚನೆ ಜಾಲ ಭೇದಿಸಿದ ಪೊಲೀಸರು…!

ಪಾಟ್ನಾ :  ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭ ಧರಿಸುವಂತೆ ಮಾಡಿದರೆ 10 ಲಕ್ಷ ರೂ.ಗಳನ್ನು ನೀಡುವುದಾಗಿ ನಂಬಿಸಿ ಮೋಸ ಮಾಡುವ ಒಂದು ವಿಶಿಷ್ಟ ಹಗರಣವೊಂದನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಶುಕ್ರವಾರ, ಪೊಲೀಸರು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಬಂಧಿತರನ್ನು ನವಾಡ ಜಿಲ್ಲೆಯ ಪ್ರಿನ್ಸ್ ರಾಜ, ಭೋಲಾಕುಮಾರ ಮತ್ತು ರಾಹುಲ್ ಕುಮಾರ ಎಂದು ಗುರುತಿಸಲಾಗಿದೆ. ಪೊಲೀಸರು ಅದನ್ನು ಭೇದಿಸಿ ಮೂವರನ್ನು … Continued

ನಟಿ ಸನ್ನಿ ಲಿಯೋನ್‌ ಹೆಸರಿನಲ್ಲಿ ಸರ್ಕಾರಿ ಯೋಜನೆಯಿಂದ ಪ್ರತಿ ತಿಂಗಳು 1000 ರೂ. ಪಡೆಯುತ್ತಿದ್ದ ವ್ಯಕ್ತಿ…!

ರಾಯಪುರ: ಛತ್ತೀಸ್‌ಗಢದಲ್ಲಿ ವಂಚಕನೊಬ್ಬ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಆನ್‌ಲೈನ್ ಖಾತೆ ತೆರೆದು ಸರ್ಕಾರದ ಯೋಜನೆಯಡಿ ಪ್ರತಿ ತಿಂಗಳು 1,000 ರೂ. ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಛತ್ತೀಸ್‌ಗಢ ಸರ್ಕಾರವು ಮಹತಾರಿ ವಂದನ್ ಯೋಜನೆಯಡಿಯಲ್ಲಿ ರಾಜ್ಯದ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ಸಹಾಯಧನ ನೀಡುತ್ತದೆ. ಇದನ್ನು ನಟಿ ಸನ್ನಿಲಿಯೋನ್‌ ಹೆಸರಿನಲ್ಲಿ ನಕಲಿ ಖಾತೆ ತೆರದು … Continued

ಕಾಂಬೋಡಿಯಾದಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಕ್ಕಿಬಿದ್ದಿರುವ 5000ಕ್ಕೂ ಹೆಚ್ಚು ಭಾರತೀಯರು…! ಸೈಬರ್‌ ವಂಚನೆ ಕೃತ್ಯಗಳಿಗೆ ಇವರ ಬಳಕೆ…!!

ನವದೆಹಲಿ: 5,000 ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಒತ್ತೆಯಾಳಾಗಿ ಬಂಧನದಲ್ಲಿ ಇಡಲಾಗಿದೆ ಮತ್ತು ಅವರನ್ನು ಸೈಬರ್ ವಂಚನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಂಚಕರು ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ … Continued

ಹೊಸ ಪ್ರವೃತ್ತಿಯ ಸೈಬರ್ ವಂಚನೆ : ನಕಲಿ ವಿಚಾರಣೆ, ಡೀಪ್‌ಫೇಕ್ ಬಳಕೆ, ಸ್ಕೈಪ್ ಕರೆ, ಡಿಜಿಟಲ್ ಅರೆಸ್ಟ್ ; ವಂಚಕರಿಂದ ಮಹಿಳೆಗೆ 11 ಲಕ್ಷ ರೂ. ಮೋಸ

ನೋಯ್ಡಾ ನಿವಾಸಿಯೊಬ್ಬರು ಹೊಸ ಪ್ರವೃತ್ತಿಯ ಸೈಬರ್ ವಂಚನೆಗೆ ಒಳಗಾದ ಬಗ್ಗೆ ದೂರು ನೀಡಿದ ನಂತರ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಅವರು ₹ 11 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಒಂದು ದಿನದವರೆಗೆ “ಡಿಜಿಟಲ್ ಬಂಧನ” ದಲ್ಲಿ ಅವರನ್ನು ಇರಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. .. ನೋಯ್ಡಾದ ಸೈಬರ್ … Continued