ದಾಳಿ ಮಾಡಿದ್ದಕ್ಕೆ ನೆರೆಯ ರಾಷ್ಟ್ರಗಳ ಕ್ಷಮೆ ಕೇಳಿದ ಇರಾನ್ ಅಧ್ಯಕ್ಷ ; ಆದರೆ ಒಂದು ಷರತ್ತು….

ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಸಮಯದಲ್ಲಿ ನಡೆಸಲಾದ ದಾಳಿಗಳಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಮ್ಮ ನೆರೆಹೊರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ. “ಅವರು ಮೊದಲು ದಾಳಿ ಮಾಡದ ಹೊರತು ಅಥವಾ ಅವರ ನೆಲದಿಂದ ದಾಳಿ ನಡೆಯದ ಹೊರತು ಇರಾನ್‌ ಯಾವುದೇ ದಾಳಿ ನಡೆಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ಸರ್ಕಾರಿ ಸ್ವಾಮ್ಯದ ಟಿವಿಯಲ್ಲಿ ಮಾತನಾಡಿದ … Continued

ವೀಡಿಯೊ | ಭಾರತದಿಂದ ವಾಪಸಾಗುತ್ತಿದ್ದ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ಜಲಾಂತರ್ಗಾಮಿ ದಾಳಿ : 87 ಸಿಬ್ಬಂದಿ ಸಾವು

ವಾಷಿಂಗ್ಟನ್/ಗಾಲೆ: ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುತ್ತಿದ್ದ ಇರಾನ್‌ನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆಯು ಟಾರ್ಪಿಡೊ (Torpedo) ಬಳಸಿ ಹೊಡೆದುರುಳಿಸಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, “ಎರಡನೇ ಮಹಾಯುದ್ಧದ ನಂತರ ಶತ್ರು ದೇಶದ ಹಡಗನ್ನು ಟಾರ್ಪಿಡೊ ಮೂಲಕ ಮುಳುಗಿಸಿದ … Continued

ಇರಾನ್‌ ಯುದ್ಧ : ಅಮೆರಿಕನ್ ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ ದಾಖಲೆಯ ಕುಸಿತ

ನವದೆಹಲಿ: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಭಾರಿ ಏರಿಕೆಯಿಂದಾಗಿ ಬುಧವಾರ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಭಾರಿ ಕುಸಿತ ಕಂಡಿದೆ. ಮೊದಲ ಬಾರಿಗೆ ರೂಪಾಯಿ ಮೌಲ್ಯವು ₹92 ರ ಗಡಿ ದಾಟಿದ್ದು, ಬೆಳಿಗ್ಗೆ 10:40ರ ಸುಮಾರಿಗೆ ₹92.17 ಕ್ಕೆ ತಲುಪಿತ್ತು. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ … Continued

ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕಕ್ಕೆ ಎಷ್ಟು ವೆಚ್ಚವಾಗುತ್ತದೆ ಗೊತ್ತೆ..? ಯುದ್ಧದಿಂದಾಗುವ ಖರ್ಚು ಸುಮಾರು ₹18,87,00,00,00,000…!

ಅಮೆರಿಕ ಇರಾನ್‌ ಜೊತೆ ಯುದ್ಧದಲ್ಲಿ ತೊಡಗಿದೆ ಜೀವಹಾನಿ ಸೇರಿದಂತೆ ಸಂಭವಿಸುತ್ತಿರುವ ಮಾನವೀಯ ನಷ್ಟಗಳ ಹೊರತಾಗಿ, ಈ ಯುದ್ಧವು ಅಮೆರಿಕಕ್ಕೆ ಭಾರಿ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತಿದೆ. ವರದಿಗಳ ಪ್ರಕಾರ, ಇರಾನ್ ಮೇಲಿನ ದಾಳಿಯ ಮೊದಲ 24 ಗಂಟೆಗಳಲ್ಲೇ ಅಮೆರಿಕಕ್ಕೆ 779 ಮಿಲಿಯನ್ ಡಾಲರ್ (ಸುಮಾರು 6,900 ಕೋಟಿ ರೂಪಾಯಿ) ಖರ್ಚಾಗಿದೆ. ಇದು 2026ರ ಇಡೀ ಅಮೆರಿಕದ ರಕ್ಷಣಾ … Continued

165 ವಿದ್ಯಾರ್ಥಿನಿಯರ ನಿಧನಕ್ಕೆ ಇರಾನ್ ಶೋಕ: ಸಾಮೂಹಿಕ ಸಮಾಧಿಗಳ ಚಿತ್ರ ಹಂಚಿಕೊಂಡು ಟ್ರಂಪ್ “ರಕ್ಷಣೆʼ ಹೇಳಿಕೆಗೆ ಲೇವಡಿ

ತೆಹ್ರಾನ್‌ : ಇರಾನಿನ ದಕ್ಷಿಣದ ನಗರವಾದ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ವೈಮಾನಿಕ ದಾಳಿ ನಡೆಸಿವೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ ಮೃತಪಟ್ಟ 165 ಶಾಲಾ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳಿಗೆ ಮಂಗಳವಾರ ಇರಾನ್‌ನಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಘಟನೆಯು ಈ ಪ್ರಾಂತ್ಯದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಇರಾನ್ … Continued

ವರ್ಷದ ಮೊದಲೇ ತೆಹ್ರಾನಿನ ಟ್ರಾಫಿಕ್ ಕ್ಯಾಮೆರಾ ಸಿಸ್ಟಂ ಹ್ಯಾಕ್‌ ಮಾಡಿದ್ದ ಇಸ್ರೇಲ್‌ ! ಖಮೇನಿ ಹತ್ಯೆಗೆ ಇಸ್ರೇಲ್-ಅಮೆರಿಕ ಹೆಣೆದಿದ್ದವು ‘ಮಹಾ ಸ್ಕೆಚ್‌’ !!

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಹಿಂದೆ ವರ್ಷಗಳ ಕಾಲ ನಡೆದ ಸುದೀರ್ಘ ಗುಪ್ತಚರ ಕಾರ್ಯಾಚರಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕೈವಾಡವಿದೆ ಎಂಬ ಅಂಶ ‘ಫೈನಾನ್ಷಿಯಲ್ ಟೈಮ್ಸ್’ ವರದಿಯಿಂದ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಇಸ್ರೇಲ್ ಕಳೆದ ಹಲವು ವರ್ಷಗಳಿಂದ ಇರಾನ್ ರಾಜಧಾನಿ ತೆಹ್ರಾನ್‌ನ ಬಹುತೇಕ ಎಲ್ಲಾ ಸಂಚಾರ ನಿಯಂತ್ರಣ (Traffic) … Continued

ಅಮೆರಿಕ ಜೊತೆಗಿನ ಯುದ್ಧದ ಮಧ್ಯೆ ಬೃಹತ್‌ ಕ್ಷಿಪಣಿ-ಡ್ರೋನ್ ಸಂಗ್ರಹದ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿರುವ ಇರಾನ್ ತನ್ನ ಬೃಹತ್ ಭೂಗತ ಶಸ್ತ್ರಾಸ್ತ್ರ ಸಂಗ್ರಹದ ಸುರಂಗವನ್ನು ಜಗತ್ತಿಗೆ ಪರಿಚಯಿಸಿದೆ. ಸೋಮವಾರ (ಮಾರ್ಚ್ 2), ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸರ್ಕಾರಿ ಮಾಧ್ಯಮಗಳ ಮೂಲಕ ಸುದೀರ್ಘ ಸುರಂಗದ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲು ಸಾಲಾಗಿ … Continued

ಇರಾನ್-ಅಮೆರಿಕ ಯುದ್ಧ ; ನಿಜವಾಗಲಿದೆಯೇ 2026ರ ಬಾಬಾ ವಂಗಾ, ನಾಸ್ಟ್ರಾಡಾಮಸ್ ಭವಿಷ್ಯವಾಣಿ..?

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯ (Middle East) ಸಂಘರ್ಷದ ಜ್ವಾಲೆಯಲ್ಲಿ ಬೇಯುತ್ತಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್, ಯುಎಇ (UAE), ಬಹ್ರೇನ್, ಸೌದಿ ಅರೇಬಿಯಾ ಮತ್ತು ಕತಾರ್‌ಗಳ ಮೇಲೆ ದಾಳಿ ನಡೆಸಿದೆ. ಈ ಇತ್ತೀಚಿನ ಸಂಘರ್ಷವು ಮೂರನೇ ಮಹಾಯುದ್ಧದ ಆರಂಭವಾಗಬಹುದೇ ಎಂಬ ಆತಂಕಕ್ಕೆ ಕಾರಣವಾಗಿದೆ. ಬಲ್ಗೇರಿಯಾದ ಅತೀಂದ್ರಿಯ ಶಕ್ತಿ … Continued

ದಾಳಿಗೆ ಪ್ರತಿದಾಳಿ ; ಬಹ್ರೇನ್, ಕುವೈತ್, ಯುಎಇಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತಿ ದಾಳಿ ನಡೆಸಿದ ಇರಾನ್‌

ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ (ಟೆಲ್ ಅವಿವ್), ಇರಾನಿನ ತೆಹ್ರಾನ್ ಮೇಲೆ ಶನಿವಾರ ಬೆಳಿಗ್ಗೆ  ಮುನ್ನೆಚ್ಚರಿಕಾ ದಾಳಿ (preemptive attack) ನಡೆಸಿದ ನಂತರಈ ದಾಳಿಗೆ ಪ್ರತಿಯಾಗಿ ಇರಾನ್ ಇಸ್ರೇಲ್ ಕಡೆಗೆ “ಕ್ಷಿಪಣಿಗಳ ಸುರಿಮಳೆ” ಗರೆದಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಅಮೆರಿಕದ ನೇತೃತ್ವದ ದಾಳಿಗಳಿಗೆ “ಪ್ರತ್ಯುತ್ತರವಾಗಿ ಇರಾನ್‌,  ಯುಎಇ, ಬಹ್ರೇನ್, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ನೆಲೆಗಳ … Continued

ತಕ್ಷಣವೇ ಇರಾನ್‌ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ನವದೆಹಲಿ: ಮುಂದಿನ ದಿನಗಳಲ್ಲಿ ಅಮೆರಿಕವು ಇರಾನ್‌ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣವೇ ಇರಾನ್‌ ತೊರೆಯುವಂತೆ ಸೂಚಿಸಲಾಗಿದೆ. ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಇತ್ತೀಚಿನ ಮಾರ್ಗಸೂಚಿಯಲ್ಲಿ (Advisory), ಲಭ್ಯವಿರುವ ವಾಣಿಜ್ಯ ವಿಮಾನಗಳು ಅಥವಾ ಇತರೆ ಸಾರಿಗೆ ವ್ಯವಸ್ಥೆಗಳ ಮೂಲಕ ಭಾರತೀಯರು ಇರಾನ್‌ನಿಂದ ನಿರ್ಗಮಿಸುವಂತೆ ತಿಳಿಸಿದೆ. ಈ ಸೂಚನೆಯು ಇರಾನ್‌ನಲ್ಲಿರುವ … Continued